For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್: ಚಂದ್ರಕಲಾ ಮಾಡಿದ ತಪ್ಪಿಗೆ ಮನೆ ಮಂದಿಗೆಲ್ಲಾ ಶಿಕ್ಷೆ

  |

  ಬಿಗ್‌ಬಾಸ್ ಮನೆಯಲ್ಲಿ ನಿಧಾನಕ್ಕೆ ಬಿಸಿ ಏರುತ್ತಿದೆ. ಸ್ಪರ್ಧಿಗಳ ನಡುವೆ ನಿಧಾನಕ್ಕೆ ಜಗಳಗಳು, ಭಿನ್ನಾಭಿಪ್ರಾಯಗಳು ಆರಂಭಗೊಳ್ಳುತ್ತಿದೆ.

  ಪ್ರಶಾಂತ್ ಸಂಬರ್ಗಿ ಹಾಗೂ ಬ್ರೋ ಗೌಡ ನಡುವೆ ಜಗಳದ ಬಳಿಕ ಈಗ ಚಂದ್ರಕಲಾ ಹಾಗೂ ನಿರ್ಮಲಾ ಅವರ ನಡುವೆ ಏರಿದ ಧ್ವನಿಯಲ್ಲಿ ಜಗಳ ನಡೆದಿದೆ. ಆದರೆ ಈ ಜಗಳಕ್ಕೆ ಮೂಲ ಕಾರಣ ಚಂದ್ರಕಲಾ ಅವರು ಮಾಡಿದ ತಪ್ಪು.

  ಧನುಶ್ರಿ ಅವರನ್ನು ಕಳಪೆ ಆಟಗಾರ್ತಿ ಎಂದು ಆಯ್ಕೆ ಮಾಡಿ ಅವರನ್ನು ಜೈಲಿನಲ್ಲಿ ಇರಸಲಾಗಿತ್ತು. ಮನೆಯ ಸದಸ್ಯರಿಗೆ ಅಡುಗೆ ಮಾಡಲು ಬೇಕಾದ ಎಲ್ಲ ತರಕಾರಿ ಅವರೇ ಹೆಚ್ಚಬೇಕು ಎಂದು ಹೇಳಲಾಗಿತ್ತು. ಆದರೆ ಚಂದ್ರಕಲಾ ಅವರು ಅಡುಗೆ ಮಾಡಬೇಕಾದರೆ ಅವರೇ ಕೆಲವು ತರಕಾರಿಗಳನ್ನು ಹೆಚ್ಚಿದರು. ಗೀತಾ ಸಹ ಹೆಚ್ಚಿದರು.

  ಇದು ಬಿಗ್‌ಬಾಸ್ ಹೇರಿದ್ದ ಆದೇಶದ ಉಲ್ಲಂಘನೆ ಆದ ಕಾರಣದಿಂದ ಬಿಗ್‌ಬಾಸ್, ಈರುಳ್ಳಿ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪನ್ನು ಹಿಂಪಡೆದರು. ಇದು ಒಟ್ಟಾರೆ ಮನೆ ಮಂದಿಗೆ ಸಮಸ್ಯೆ ಆಯಿತು. ಶಮಂತ್ ಅವರು ಕೊತ್ತಂಬರಿ ಸೊಪ್ಪು ಕೆಲವು ಮೆಣಸಿನಕಾಯಿ ಅನ್ನು ವಾಪಸ್ ಕೊಟ್ಟರು. ಈರುಳ್ಳಿ ಖಾಲಿಯೇ ಆಗಿತ್ತು.

  ತಮ್ಮಿಂದ ಮನೆ ಮಂದಿಗೆ ಸಮಸ್ಯೆ ಆಯಿತು ಎಂದು ಚಂದ್ರಕಲಾ ಅವರು ಅಳುತ್ತಾ ಕಣ್ಣೀರು ಹಾಕಿದರು. ಆಗ ನಿರ್ಮಲಾ ಸೇರಿದಂತೆ ಮನೆ ಮಂದಿಯೆಲ್ಲಾ ಅವರಿಗೆ ಸಮಾಧಾನ ಮಾಡಿದರು.

  ಅದಾದ ನಂತರ ನಿರ್ಮಲಾ ಅವರು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಚಂದ್ರಕಲಾ ಅವರು, 'ನಾವು ಮೂವರಿಗೆ ಅಡುಗೆ ಕೆಲಸ ವಹಿಸಿದ್ದಾರೆ. ನೀವು ಬಂದು ಅಡುಗೆ ಕೆಲಸದಲ್ಲಿ ಸಹಾಯ ಮಾಡಬೇಕು, ನೀನು ಬರುವುದಿಲ್ಲ' ಎಂದರು.

  ಆರಂಭದಲ್ಲಿ ನಿಧಾನಕ್ಕೆ ಪ್ರಾರಂಭವಾದ ಜಗಳ ಹೋಗುತ್ತಾ-ಹೋಗುತ್ತಾ ತಾರಕಕ್ಕೇರಿತು. ಆದರೆ ಜಗಳದ ಕಿಡಿ ಹೊತ್ತಿಕೊಂಡಿದ್ದು ಮಾತ್ರ ಚಂದ್ರಕಲಾ ಅವರು ಮಾಡಿದ ತಪ್ಪಿನಿಂದ ಎಂಬುದು ಎಲ್ಲರಿಗೂ ಗೊತ್ತಾಯಿತು.

  English summary
  Bigg Boss Kannada 8: Chandarakala did mistake and all contestants got punishment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X