For Quick Alerts
  ALLOW NOTIFICATIONS  
  For Daily Alerts

  Bigg Boss Kannada 8: ನಿರ್ಮಲಾ ರಾಜ್ಯ ಪ್ರಶಸ್ತಿ ಗೆದ್ದಿದ್ದು ಯಾರಿಗೂ ಗೊತ್ತಾಗಲಿಲ್ಲ ಯಾಕೆ?

  By ಫಿಲ್ಮ್ ಡೆಸ್ಕ್
  |

  ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ನಟಿ ಮತ್ತು ಡಬ್ಬಿಂಗ್ ಕಲಾವಿದೆ ನಿರ್ಮಲಾ ಚನ್ನಪ್ಪ ತಾನು ಪ್ರಶಸ್ತಿ ಗೆದ್ದ ಕ್ಷಣವನ್ನು ಬಿಗ್ ಬಾಸ್ ಮನೆಯಲ್ಲಿ ವಿವರಿಸಿದ್ದಾರೆ. ರಾಜ್ಯ ಪ್ರಶಸ್ತಿಯನ್ನು ಕೈಯಲ್ಲಿ ಹಿಡಿದು ತಾನು ರಾಜ್ಯ ಪ್ರಶಸ್ತಿ ಗೆದ್ದಿರುವುದು ಯಾರಿಗೂ ಗೊತ್ತಾಗಿಲ್ಲ ಯಾಕೆ ಎನ್ನುವುದನ್ನು ವಿವರಿಸಿದ್ದಾರೆ.

  ರಂಗಭೂಮಿ ಕಲಾವಿದೆ ನಿರ್ಮಲಾ ಸಿನಿಮಾಗಾಗಿ ಸುಮಾರು 10 ವರ್ಷಗಳು ಅಲೆದಿದ್ದಾರಂತೆ. ಸಿನಿಮಾ ಕತೆಗಳನ್ನು ಕೇಳಿ, ತಯಾರಿ ನಡೆಸಿ, ಇನ್ನೇನು ಸಿನಿಮಾ ಪ್ರಾರಂಭವಾಗುತ್ತೆ ಎನ್ನುವಷ್ಟೊತ್ತಿಗೆ ಸಿನಿಮಾನೆ ನಿಂತುಹೋಗಿರುತ್ತು. ಬಳಿಕ ಧಾರಾವಾಹಿ ಲೋಕ ತನ್ನನ್ನು ಬರಮಾಡಿಕೊಂಡಿತು ಎಂದಿದ್ದಾರೆ. ಧಾರಾವಾಹಿ ಜೊತೆಗೆ ರಂಗಭೂಮಿಯಲ್ಲೂ ನಿರ್ಮಲಾ ಸಕ್ರೀಯರಾಗಿದ್ದರು.

  ನಾಮಿನೇಟ್ ತೂಗುಕತ್ತಿಯನ್ನು ರಘು ತಲೆಗೆ ವರ್ಗಾಯಿಸಿದ ಮಂಜುನಾಮಿನೇಟ್ ತೂಗುಕತ್ತಿಯನ್ನು ರಘು ತಲೆಗೆ ವರ್ಗಾಯಿಸಿದ ಮಂಜು

  ಆಗ ಸಮಯದಲ್ಲಿ ನಿರ್ಮಲಾ ಅವರಿಗೆ ಸಿಕ್ಕ ಸಿನಿಮಾ ತಲ್ಲಣ. ಸುದರ್ಶನ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾವಿದು. ತಲ್ಲಣ ಸಿನಿಮಾ ಮಾಡುವಾಗ ನಿರ್ಮಲಾ 3 ತಿಂಗಳ ಬಾಣಂತಿಯಂತೆ. ಆ ಸಮಯದಲ್ಲಿ ಚಿತ್ರೀಕರಣ ಮಾಡಿ ಕೊನೆಗೆ ಸಿನಿಮಾ ಕೂಡ ರಿಲೀಸ್ ಆಗುತ್ತೆ. ಆ ಮೂಲಕ ನಿರ್ಮಲಾ ಅವರ ಸಿನಿಮಾ ಕನಸು ಕೂಡ ನನಸಾಗಿದೆ. ಅವರ ಶ್ರಮಕ್ಕೆ ರಾಜ್ಯ ಪ್ರಶಸ್ತಿಯ ಗರಿ ಕೂಡ ಸಿಕ್ಕಿದೆ.

  ಆ ಸಮಯದಲ್ಲಿ ಬೇರೆ ಬೇರೆ ಧಾರಾವಾಹಿಗಳಲ್ಲಿ ಕಮಿಟ್ ಆಗಿರುವುದರಿಂದ ಸಂದರ್ಶನಗಳನ್ನು ನೀಡಲು ಸಾಧ್ಯವಾಗಿರಲಿಲ್ಲ. ಹಾಗಾಗೆ ಅವಾರ್ಡ್ ಗೆದ್ದ ವಿಚಾರ ಯಾರಿಗೂ ಗೊತ್ತಾಗಲಿಲ್ಲ ಎಂದು ನಿರ್ಮಲಾ ತಾನು ಮೊದಲ ಬಾರಿಗೆ ಪ್ರಶಸ್ತಿ ಗೆದ್ದ ಸಂಭ್ರಮವನ್ನು ಬಿಚ್ಚಿಟ್ಟಿದ್ದಾರೆ.

  ತಲ್ಲಣ ಸಿನಿಮಾ 2013ರಲ್ಲಿ ತೆರೆಗೆ ಬಂದಿದೆ. ಸುದರ್ಶನ್ ನಾರಾಯಣ್ ನಿರ್ದೇಶನದ ಸಿನಿಮಾವಿದು. ಬಿಗ್ ಮನೆಯ ಉಳಿದ ಸ್ಪರ್ಧಿಗಳು ಸಹ ತಾವು ಗೆದ್ದ ಪ್ರಶಸ್ತಿ ಕೈಯಲ್ಲಿ ಹಿಡಿದು ಆ ಕ್ಷಣವನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.

  English summary
  Bigg Boss Kannada 8: Nirmala chennappa remembering state award winning moment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X