ನಾಮಿನೇಷನ್‌ನಿಂದ ಸೇಫ್ ಆದ ಪ್ರಶಾಂತ್, ಡೇಂಜರ್ ಝೋನ್‌ಗೆ ಬಂದ ವಿಶ್ವ
ಬಿಗ್ ಬಾಸ್ ಮನೆಯಿಂದ ಹೊರಹೋಗಲು ಸೋಮವಾರ ನಾಮಿನೇಟ್ ಆಗಿದ್ದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಮಂಗಳವಾರ ಸೇಫ್ ಆಗಿದ್ದಾರೆ.
ಬಿಗ್ ಬಾಸ್ ನೀಡಿದ ವಿಶೇಷ ಅವಕಾಶದಿಂದ ಪ್ರಶಾಂತ್ ಸಂಬರ್ಗಿ ಡೇಂಜರ್ ಝೋನ್‌ನಿಂದ ಹೊರಬಂದರು. ಆದರೆ, ಪ್ರಶಾಂತ್ ಜಾಗಕ್ಕೆ ಯುವ ಗಾಯಕ ವಿಶ್ವನಾಥ್ ಹಾವೇರಿ ಸಿಲುಕಿಕೊಂಡರು.
ಸೋಮವಾರ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ನಿಧಿ ಸುಬ್ಬಯ್ಯ, ಮಂಜು ಪಾವಗಡ, ಪ್ರಶಾಂತ್ ಸಂಬರ್ಗಿ, ಧನುಶ್ರೀ ಹಾಗೂ ನೇರವಾಗಿ ನಿರ್ಮಲಾ ಚೆನ್ನಪ್ಪ ನಾಮಿನೇಟ್ ಆಗಿದ್ದರು.

ಮಂಗಳವಾರ ಬಿಗ್ ಬಾಸ್ ವಿಶೇಷ ಟಾಸ್ಕ್ ನೀಡಿದರು. ನಾಮಿನೇಟ್ ಆಗಿದ್ದ ಸ್ಪರ್ಧಿಗಳು, ಸೇಫ್ ಆಗಿದ್ದ ಸ್ಪರ್ಧಿಗಳ ಜೊತೆ ಬಿಗ್ ಬಾಸ್ ನೀಡುವ ಆಟ ಆಡಬೇಕಿತ್ತು. ಇದರಲ್ಲಿ ಗೆದ್ದವರು ನಾಮಿನೇಷನ್‌ನಿಂದ ಸೇಫ್ ಆದರೆ, ಸೋತವರು ನಾಮಿನೇಟ್ ಆಗಲಿದ್ದಾರೆ ಎಂದು ಸೂಚಿಸಿದ್ದರು ಬಿಗ್ ಬಾಸ್.
ಈ ನಿಯಮದಂತೆ ನಾಮಿನೇಟ್ ಆಗಿದ್ದ ಪ್ರಶಾಂತ್ ಸಂಬರ್ಗಿ, ಸೇಫ್ ಆಗಿದ್ದ ವಿಶ್ವ ವಿರುದ್ಧ ಏರ್ ಪಂಪ್ ಮೂಲಕ ಬಲೂನ್ ಹೊಡೆಯುವ ಆಟ ಆಡಿದರು. ಈ ಆಟದಲ್ಲಿ ಪ್ರಶಾಂತ್ ಸಂಬರ್ಗಿ ಗೆಲುವು ಸಾಧಿಸಿದರು.
ಹಾಗಾಗಿ, ಪ್ರಶಾಂತ್ ಸಂಬರ್ಗಿ ನಾಮಿನೇಷನ್‌ನಿಂದ ಸೇಪ್ ಎಂದು ಬಿಗ್ ಬಾಸ್ ಘೋಷಿಸಿದರು. ಸೋಲು ಕಂಡ ವಿಶ್ವ ನಾಮಿನೇಟ್ ಆದರು.


Click it and Unblock the Notifications











