ಅಡುಗೆ ಮನೆಯಲ್ಲಿ ಹತ್ತಿದ ಬೆಂಕಿ: ಚಂದ್ರಕಲಾ ಮತ್ತು ನಿರ್ಮಲಾ ಜಗಳಕ್ಕೆ ಸ್ಪರ್ಧಿಗಳು ಗಪ್ ಚುಪ್

ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಮೊದಲೆರಡು ದಿನಗಳು ಸ್ಪರ್ಧಿಗಳು ಜಾಲಿಯಾಗಿ, ಒಬ್ಬರಿಗೊಬ್ಬರ ಜೊತೆ ಸಂತೋಷವಾಗಿ ಮಾತನಾಡಿಕೊಳ್ಳುತ್ತಾ ಟಾಸ್ಕ್ ಗಳಲ್ಲಿ ಭಾಗಿಯಾಗಿದ್ದರು. ಆದರೀಗ ಸ್ಪರ್ಧಿಗಳ ನಡುವೆ ವೈಮನಸ್ಸು, ಕಿತ್ತಾಟ, ಜಗಳು ಪ್ರಾರಂಭವಾಗಿದೆ.

ಈ ವಾರ ಬಿಗ್ ಮನೆಯಲ್ಲಿ ಮೊದಲು ಪ್ರಶಾಂತ್ ಸಂಬರ್ಗಿ ಮತ್ತು ಮನೆಯ ಕ್ಯಾಪ್ಟನ್ ಬ್ರೋ ಗೌಡ ನಡುವೆ ಜಗಳ ಶುರುವಾಗಿತ್ತು. ಇಬ್ಬರು ಸೈಲೆಂಟ್ ಆದರು ಎನ್ನುತ್ತಿದ್ದಂತೆ ಮನೆಯಲ್ಲಿ ಮತ್ತಿಬ್ಬರ ನಡುವೆ ಕಿತ್ತಾಟ, ಜಗಳ ಪ್ರಾರಂಭವಾಗಿದೆ. ಅಡುಗೆ ಮನೆ ವಿಚಾರಕ್ಕೆ ನಿರ್ಮಲಾ ಮತ್ತು ಚಂದ್ರಕಲಾ ನಡುವೆ ಜಗಳ ತಾರಕಕ್ಕೇರಿದೆ.

ಈ ವಾರದ ಪ್ರಾರಂಭದಿಂದ ಅಡುಗೆ ಮನೆ ನಿಭಾಯಿಸಿಕೊಂಡು ಬರುತ್ತಿದ್ದ ಚಂದ್ರಕಲಾ ಮೋಹನ್ ಈಗ ನಿರ್ಮಲಾ ವಿರುದ್ಧ ಸಿಡಿದೆದ್ದಿದ್ದಾರೆ. ಅಡುಗೆ ಮನೆಗೆ ಬಂದು ಏನೆನೋ ಮಾತನಾಡಿ, ಪೋಸ್ ಕೊಟ್ಟು ಹೋಗುತ್ತೀರಿ ಎಂದು ಚಂದ್ರಕಲಾ, ನಿರ್ಮಲಾ ವಿರುದ್ಧ ಸಿಡಿದ್ದಿದ್ದಾರೆ. ಚಂದ್ರಕಲಾ ಹೇಳುವುದನ್ನು ಮೊದಲ ಸಮಾಧಾನವಾಗಿಯೇ ಕೇಳಿಸಿಕೊಂಡ ನಿರ್ಮಲಾ ಬಳಿಕ ಚಂದ್ರಕಲಾ ವಿರುದ್ಧ ರೊಚ್ಚಿಗೆದ್ದರು.

Bigg Boss Kannada 8; Quarrel between Nirmala and Chandrakala for kitchen

ಇನ್ಮುಂದೆ ಅಡುಗೆ ಮನೆ ಜವಾಬ್ದಾರಿ ನಂದು, ಯಾರು ಅಡುಗೆ ಮನೆಯೊಳಗೆ ಬರಬಾರ್ದು ಎಂದು ಫುಲ್ ಗರಂ ಆದರು. ಬಿಗ್ ಮನೆಯಲ್ಲಿ ಪ್ರತಿವರ್ಷ ಸಹ ಅಡುಗೆ ಮನೆ ವಿಚಾರಕ್ಕೆ ಸದಾ ಕಿತ್ತಾಟಗಳು ನಡೆಯುತ್ತಲೇ ಇರುತ್ತೆ. ಈ ಬಾರಿ ಏನು ಹೊಸದೇನಲ್ಲ. ಅಡುಗೆ ಮನೆ ವಿಚಾರಕ್ಕೆ ಇನ್ಮುಂದೆ ಮತ್ತಷ್ಟು ಕಿತ್ತಾಟ, ಜಗಳ ನಡೆದರು ಅಚ್ಚರಿ ಇಲ್ಲ.

ಸದ್ಯ ಈ ಬಾರಿಯ ಬಿಗ್ ಬಾಸ್ ಒಂದು ವಾರ ಕಳೆದಿದೆ. ಇಂದು ವಾರದ ಕತೆ ಕಿಚ್ಚನ ಜೊತೆ ನೋಡಲು ಪ್ರೇಕ್ಷಕರು ಕುತೂಹಲರಾಗಿದ್ದಾರೆ. ಬಿಗ್ ಮನೆಯ ಸ್ಪರ್ಧಿಗಳಿಗೆ ಏನು ಹೇಳಲಿದ್ದಾರೆ ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಈ ವಾರ ಮನೆಯಿಂದ ಹೋಗುವ ಸ್ಪರ್ಧಿ ಯಾರು ಎನ್ನುವುದು ಸದ್ಯದ ಕುತೂಹಲ. ಮೂಲಗಳ ಪ್ರಕಾರ ಈ ಬಾರಿ ಮನೆಯಿಂದ ಶುಭಾ ಪೂಂಜಾ ಹೋಗ್ತಾರೆ ಎಂದು ಹೇಳಲಾಗುತ್ತಿದೆ.

More from Filmibeat

English summary
Bigg Boss Kannada 8: Quarrel between Nirmala and Chandrakala for kitchen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X