For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್: ಶುಭಾ ಪೂಂಜಾ ಬಳಿ ಕ್ಷಮೆ ಕೇಳಿದ ರಘು ಗೌಡ

  |

  ಬಿಗ್ ಬಾಸ್ ಪ್ರಾರಂಭವಾಗಿ ಕಳೆದಿರುವುದು ಎರಡೇ ದಿನ ಈ ನಡುವೆ ಕೆಲವರು ಗಮನ ಸೆಳೆದಿದ್ದಾರೆ ಅದರಲ್ಲಿ ಮೊದಲಿಗರು ಶುಭಾ ಪೂಂಜಾ. ನಟಿ ಶುಭಾ ಪೂಂಜಾ ಅವರನ್ನು ತೆರೆಯ ಮೇಲೆ ಗ್ಲಾಮರ್ ಅವತಾರದಲ್ಲಿ ನೋಡಿದ್ದ ಮಂದಿ ಬಿಗ್ ಬಾಸ್ ನಲ್ಲಿ ಅವರ ನಿಜ ವ್ಯಕ್ತಿತ್ವ ನೋಡಿ ಮರುಳಾಗಿದ್ದಾರೆ.

  ಹೀಗೆ ಶುಭಾ ಪೂಂಜಾ ಅವರ ವ್ಯಕ್ತಿತ್ವವನ್ನು ಹತ್ತಿರದಿಂದ ನೋಡಿ ಮೆಚ್ಚಿಕೊಂಡವರಲ್ಲಿ ಬಿಗ್ ಬಾಸ್ ನ ಸ್ಪರ್ಧಿಗಳೂ ಇದ್ದಾರೆ. ಶುಭಾ ಪೂಂಜಾ ಸಹ ಸ್ಪರ್ಧಿಯಾದ ರಘು ಗೌಡ ಅವರಲ್ಲಿ ಒಬ್ಬರು.

  ಶುಭಾ ಪೂಂಜಾ ಅವರ ಗ್ಲಾಮರ್ ಅವತಾರ ನೋಡಿ ಅವರ ಬಗ್ಗೆ ಪೂರ್ವಾಭಿಪ್ರಾಯ ಹೊಂದಿದ್ದರಂತೆ. ಆದರೆ ನೇರವಾಗಿ ಶುಭಾ ಅವರನ್ನು ಭೇಟಿಯಾದ ಬಳಿಕ ಅವರ ಅಭಿಪ್ರಾಯ ಬದಲಾಗಿದೆಯಂತೆ.

  ಈ ಬಗ್ಗೆ ಶುಭಾ ಬಳಿಯೇ ಮಾತನಾಡಿದ ರಘು, 'ಕೆಲವು ಸುದ್ದಿಗಳು, ಸಿನಿಮಾಗಳು ನೋಡಿ ಅವುಗಳ ಪ್ರಭಾವದಿಂದ ನಿಮ್ಮ ಬಗ್ಗೆ ಜಡ್ಜ್ ಮೆಂಟಲ್ ಆಗಿದ್ದೆ, ಆದರೆ ನಿಮ್ಮನ್ನು ನೇರವಾಗಿ ಭೇಟಿಯಾಗಿ ಮಾತನಾಡಿದ ಬಳಿಕ ನಾನು ತಪ್ಪು ಎಂಬುದು ಗೊತ್ತಾಯಿತು ಎಂದಿದ್ದಾರೆ ರಘು.

  ಅಷ್ಟೇ ಅಲ್ಲ, ಶುಭಾ ಬಳಿ ಕ್ಷಮಾಪಣೆಯನ್ನು ಕೇಳಿದ್ದಾರೆ ರಘು. ರಘುವಿನ ತಪ್ಪೊಪ್ಪಿಗೆಯನ್ನು ಅದೇ ಮುಗ್ದ ನಗುವಿನೊಂದಿಗೆ ಸ್ವಾಗತಿಸಿದರು ಶುಭಾ ಪೂಂಜಾ.

  ಬಿಗ್ ಬಾಸ್ ಆರಂಭವಾದ ಮೂರು ದಿನಗಳಲ್ಲಿ ಶುಭಾ ಯಾರೊಂದಿಗೂ ಜಗಳ ಮಾಡಿಲ್ಲ,ಯಾರ ಬಗ್ಗೆಯೂ ದೂರು ಹೇಳಿಲ್ಲ, ಅವರ ಎಲ್ಲ ವರ್ತನೆಗಳೂ ಸಹಜ ಎನ್ನಿಸುವಂತೆಯೇ ಇದೆ. ಇದು ವೀಕ್ಷಕರಿಗೆ ಇದ್ದ ಪೂರ್ವಾಭಿಪ್ರಾಯವನ್ನು ಹೊಡೆದೋಡಿಸುತ್ತಿದೆ.

  ಪ್ರಶಸ್ತಿಗಳ ಗುರುತಿಸುವಿಕೆಯ ಟಾಸ್ಕ್ ನಡೆದಾಗ ಸ್ವತಃ ಶುಭಾ ಪೂಂಜಾ ಅವರೇ ಹೇಳಿದ್ದರು, 'ಯಾರೂ ಯಾರನ್ನೂ ಜಡ್ಜ್ ಮಾಡಬೇಡಿ, ಕೇವಲ ಪ್ರೀತಿ ಕೊಡಿ, ಎಲ್ಲರ ಸಾಧನೆ ಹಿಂದೆಯೂ ಸಾಕಷ್ಟು ಶ್ರಮ ಹಾಗೂ ಬೆವರು ಹರಿದಿರುತ್ತದೆ' ಎಂದಿದ್ದರು. ಇದಾದ ಮಾರನೇಯ ದಿನವೇ ರಘು ಗೌಡ ಅವರು ಶುಭಾ ಪೂಂಜಾ ಅವರಿಗೆ ಕ್ಷಮೆ ಕೇಳಿದ್ದು, ಇಬ್ಬರ ವ್ಯಕ್ತಿತ್ವವನ್ನೂ ವೀಕ್ಷಕರಿಗೆ ಪರಿಚಯಿಸಿದೆ. ಕ್ಷಮೆ ಕೇಳಿದ ರಘು ಗೌಡ ಅವರೂ ಸಹ ಅಭಿನಂದನೆಗೆ ಅರ್ಹ.

  English summary
  Bigg Boss Kannada 8: Raghu Gowda Apologize Shubha Poonja For Being Judgmental about her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X