twitter
    For Quick Alerts
    ALLOW NOTIFICATIONS  
    For Daily Alerts

    ಅಪ್ಪ-ಅಮ್ಮನ ಆತ್ಮಹತ್ಯೆ ಬಗ್ಗೆ ರಘು ಗೌಡ ಮಾತು

    |

    ಬಿಗ್‌ಬಾಸ್ ಮನೆಯಲ್ಲಿರುವ ರಘು ಗೌಡ ಅವರು ಇತರ ಸ್ಪರ್ಧಿಗಳೊಂದಿಗೆ ಹಾಸ್ಯ ಮಾಡುತ್ತಾ ಚೆನ್ನಾಗಿ ಹೊಂದಿಕೊಂಡು ಹೋಗುತ್ತಿದ್ದಾರೆ. 'ವೈನ್ ಸ್ಟೋರ್ ರಘು' ಹೆಸರಿನ ಯೂಟ್ಯೂಬ್ ಚಾನೆಲ್ ಹೊಂದಿರುವ ಅವರು, ಹಾಸ್ಯ ವಿಡಿಯೋಗಳಿಗೆ ಖ್ಯಾತರು. ಹೀಗೆ ಎಲ್ಲರನ್ನು ನಗಿಸುವ ರಘು ಅವರ ಜೀವನದಲ್ಲಿ ಅಪಾರ ದುಖಃಕರ ಘಟನೆ ನಡೆದಿದೆ.

    ರಘು ಅವರು ಬಾಲಕರಿದ್ದಾಗಲೇ ಅವರ ತಂದೆಯವರು ಅವರದ್ದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಆ ನಂತರ ತಾಯಿಗೂ ಆತ್ಮಹತ್ಯೆ ಮನೋಪ್ರವೃತ್ತಿ ಉಂಟಾಗಿ ತಾಯಿಯನ್ನು ಒಬ್ಬರನ್ನೇ ಬಿಡದೆ ನೋಡಿಕೊಳ್ಳಬೇಕಾಯಿತು.

    ಆದರೆ ಒಂದು ದಿನ ತಾಯಿಯೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ತಂದೆ ನೇಣು ಬಿಗಿದುಕೊಂಡಿದ್ದ ಅದೇ ರೂಮಿನ ಅದೇ ಫ್ಯಾನಿಗೆ. ಅಪ್ಪ್-ಅಮ್ಮನ ಸಾವನ್ನು ಕಣ್ಣಾರೆ ಕಂಡಿದ್ದ ರಘು ತಲ್ಲಣಿಸಿಹೋಗಿದ್ದರು.

    Bigg Boss Kannada 8: Raghu Gowda Talked About His Painfull Past

    ಇದೇ ವಿಷಯವಾಗಿ ಬ್ರೋ ಗೌಡ ಅವರು ರಘು ಅನ್ನು ಪ್ರಶ್ನಿಸಿದರು, 'ಫ್ಯಾನ್ ನೋಡಿದಾಗ ನಿಮಗೆ ಅದೆಲ್ಲಾ ನೆನಪು ಬರುತ್ತದೆ ಅಲ್ಲವೇ' ಎಂದು. ಇದಕ್ಕೆ ಉತ್ತರಿಸಿದ ರಘು, 'ಹೌದು, ಸೀಲಿಂಗ್ ನೋಡಿದಾಗೆಲ್ಲಾ ಅದು ನನಗೆ ನೆನಪುಬರುತ್ತದೆ' ಎಂದರು. 'ಓಹ್ ಅದಕ್ಕೇನಾ ನೀವು ಉಲ್ಟಾ ಮಲಗುವುದು ನೀವು' ಎಂದರು ಬ್ರೋ ಗೌಡ.

    ಇದಕ್ಕೆ ಉತ್ತರಿಸಿದ ರಘು, 'ಹಾಗೇನೂ ಇಲ್ಲ. ಅಂದು ಅಮ್ಮನ ಕೊರಳಲ್ಲಿ ಸೀರೆ ಹಾಗೆಯೇ ಇತ್ತು, ನೇಣಿನ ಕುಣಿಕೆ ಬಿಚ್ಚಲು ಹೋದರೆ ನನ್ನ ಬೆರಳಲ್ಲಿ ಉಗುರು ಕಡಿಮೆ ಬಿಚ್ಚಲು ಆಗಲಿಲ್ಲ. ಕತ್ತರಿಸಲು ಪ್ರಯತ್ನ ಪಟ್ಟೆ ಚಾಕು ಮೊಂಡ. ಆಗಲೇ ಬೇಕು ಎಂತಿದ್ದರೆ ಯಾರೂ ಏನೂ ಮಾಡಲು ಆಗುವುದಿಲ್ಲ. 'ಆ ಹುಡುಗನ ಮನಸ್ಥಿತಿ ಹೇಗಿದೆ?, ಅವನ ತಲೆಯಲ್ಲಿ ಏನು ಓಡುತ್ತಿದೆ? ಅವನ ಹೆಗಲಮೇಲೆ ಕೈಹಾಕಿ ಸಮಾಧಾನ ಮಾಡಬೇಕು ಎನ್ನುವುದಕ್ಕಿಂತ ಇವನು ಏನೋ ಮಾಡಿರಬೇಕು? ಇವನಿಂದಲೇ ಹೀಗೆ ಆಗಿರಬಹುದು ಎಂದುಕೊಂಡರು ಆಗಲೇ ನನಗೆ ಜಗತ್ತು ಅರ್ಥವಾಗಿದ್ದು ಎಂದರು ರಘು ಗೌಡ.

    'ಮಾರ್ಚ್ 8 ನೇ ತಾರೀಖಿನಂದು ಮಹಿಳಾ ದಿನಾಚರಣೆ ಅಮ್ಮ ಇದ್ದಾಗ ಪ್ರತಿವರ್ಷ ಅಮ್ಮನ ಕೈಲಿ ಕೇಕ್ ಕಟ್ ಮಾಡಿಸುತ್ತಿದ್ದೆ. ಪತ್ನಿಯ ಕೈಲೂ ಕೇಕ್ ಮಾಡಿಸುತ್ತೇನೆ. ದಿನಾಂಕ ನೆನಪಿಟ್ಟುಕೊ ಮಹಿಳಾ ದಿನಾಚರಣೆಗೆ ಏನಾದರೂ ವಿಶೇಷ ಕಾರ್ಯಕ್ರಮ ಮಾಡೋಣ' ಎಂದರು ರಘು.

    ರಘು ಜೀವನದಲ್ಲಿ ಇಷ್ಟು ಕಹಿಯಾದ ನೆನಪುಗಳಿದ್ದರೂ ಅದನ್ನು ಎಲ್ಲರೆದರು ಹೇಳಿ ಸಿಂಪತಿ ಗಿಟ್ಟಿಸಿಕೊಳ್ಳುವ ಪ್ರಯತ್ನವನ್ನು ರಘು ಮಾಡಿಲ್ಲ. ಬಿಗ್‌ಬಾಸ್ ವೀಕ್ಷಕರು ಸಹ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಕೊಂಡಾಡಿದ್ದಾರೆ.

    English summary
    Bigg Boss Kannada 8: Raghu Gowda talked about his painful past. He tell how his parents commit suicide.
    Thursday, March 4, 2021, 8:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X