ಶಮಂತ್‌ಗೆ ಸಿಕ್ತು ಬಂಪರ್: ಎರಡನೇ ವಾರವೂ ಬ್ರೋ ಗೌಡ ಸೇಫ್

ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಕ್ಯಾಪ್ಟನ್ ಆದ ಕಾರಣ ಶಮಂತ್ (ಬ್ರೋ ಗೌಡ) ನಾಮಿನೇಷನ್‌ನಿಂದ ಸೇಫ್ ಆದರು. ಎಂಟನೇ ಆವೃತ್ತಿಯ ಮೊದಲ ನಾಯಕ ಎಂದು ಗುರುತಿಸಿಕೊಂಡ ಶಮಂತ್ ಯಾವುದೇ ಅಡತಡೆ ಇಲ್ಲದೇ ಎರಡನೇ ವಾರಕ್ಕೆ ಕಾಲಿಟ್ಟಿದ್ದರು.

ಆದ್ರೀಗ, ಎರಡನೇ ವಾರವೂ ಕ್ಯಾಪ್ಟನ್ ಆಗಿ ಮುಂದುವರಿಯುವ ಬಂಪರ್ ಅವಕಾಶ ಸಿಕ್ಕಿದೆ. ಹೌದು, ಶಮಂತ್ ಅವರನ್ನು ಎರಡನೇ ವಾರವೂ ಕ್ಯಾಪ್ಟನ್ ಆಗಿ ಮುಂದುವರಿಸಲು ಮನೆಯವರು ತೀರ್ಮಾನಿಸಿದ್ದಾರೆ.

ಶಮಂತ್ ಎರಡನೇ ಸಲ ಮನೆಯ ಕ್ಯಾಪ್ಟನ್ ಆಗಿ ಮುಂದುವರಿಯಬೇಕಾ ಎಂದು ಬಿಗ್ ಬಾಸ್ ಕೇಳಿದರು. ಪ್ರತಿಯೊಬ್ಬ ಸ್ಪರ್ಧಿಯೂ ಉತ್ತರಿಸಬೇಕು, ಹೆಚ್ಚು ಮತಗಳು ಬಂದರೆ ನಾಯಕನಾಗಿ ಮುಂದುವರಿಯಲಿದ್ದಾರೆ ಎಂದು ಸೂಚಿಸಲಾಯಿತು.

Bigg Boss Kannada 8: Shamant Elected As A Captain For Second Week

ಒಂದು ವೇಳೆ ಶಮಂತ್ ಎರಡನೇ ವಾರ ಕ್ಯಾಪ್ಟನ್ ಆಗಿ ಮುಂದುವರಿದರೇ ಎರಡನೇ ವಾರದ ನಾಮಿನೇಷನ್‌ನಿಂದಲೂ ಸೇಫ್ ಆಗಲಿದ್ದಾರೆ ಎಂದು ಬಿಗ್ ಬಾಸ್ ತಿಳಿಸಿದರು.

ಶಮಂತ್ ಅವರು ಎರಡನೇ ವಾರ ಕ್ಯಾಪ್ಟನ್ ಆಗಿ ಮುಂದುವರಿಯಲಿ ಎಂದು ಒಂಬತ್ತು ಮಂದಿ ವೋಟ್ ಮಾಡಿದರು. ಕ್ಯಾಪ್ಟನ್ ಆಗುವುದು ಬೇಡ ಎಂದು ಏಳು ಮಂದಿ ಮತ ಚಲಾಯಿಸಿದರು.

* ಶಮಂತ್ ಪರವಾಗಿ ಮತ ಹಾಕಿದವರು ಯಾರು?

ನಿಧಿ ಸುಬ್ಬಯ್ಯ, ಗೀತಾ ಭಟ್, ಚಂದ್ರಕಲಾ ಮೋಹನ್, ಮಂಜು ಪಾವಗಡ, ಶಂಕರ್ ಅಶ್ವಥ್, ನಿರ್ಮಲಾ ಚೆನ್ನಪ್ಪ, ವೈಷ್ಣವಿ ಗೌಡ, ಅರವಿಂದ್, ಧನುಶ್ರೀ ವೋಟ್ ಮಾಡಿದರು.

* ಶಮಂತ್ ನಾಯಕನಾಗುವುದು ಬೇಡ ಎಂದು ಹೇಳಿದವರು ಯಾರು?

ಪ್ರಶಾಂತ್ ಸಂಬರ್ಗಿ, ರಾಜೀವ್, ದಿವ್ಯಾ ಸುರೇಶ್, ಶುಭ ಪೂಂಜಾ, ದಿವ್ಯ ಉರುಡಗ, ರಘು ಗೌಡ, ವಿಶ್ವನಾಥ್ ಮತ ಹಾಕಿದರು.

More from Filmibeat

English summary
Bigg Boss Kannada 8: Shamant (Bro Gowda) elected as a captain for Second Week also.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X