For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್: ಸೇಫ್ ಆದ್ರು ಶುಭಾ ಪೂಂಜಾ, ಹೊರ ಹೋಗುವುದು ಯಾರು?

  |

  ಬಿಗ್‌ಬಾಸ್ ಸೀಸನ್ 8 ರ ಮೊದಲ ವೀಕೆಂಡ್ ಎಪಿಸೋಡ್ ಇಂದು ಪ್ರಸಾರವಾಯಿತು. 'ವಾರದ ಕತೆ ಕಿಚ್ಚನ ಜೊತೆ'ಯಲ್ಲಿ ಸುದೀಪ್ ಎಂದಿನಂತೆ ತಮ್ಮ ಚತುರ ಮಾತುಗಾರಿಕೆ, ಹಾಸ್ಯದಿಂದ ಮನೆಯ ಸದಸ್ಯರು ತಮ್ಮ ಮಾತಿಗೆ ತಲೆದೂಗುವಂತೆ ಮಾಡಿದರು.

  ಮೊದಲ ವಾರದಲ್ಲಿ ಯಾರು ಮನೆಯಿಂದ ಹೊರಗೆ ಹೋಗುತ್ತಾರೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿತ್ತು. ಇದಕ್ಕೆ ಶನಿವಾರದ ಎಪಿಸೋಡ್‌ನಲ್ಲಿ ಅರ್ಧ ಉತ್ತರ ದೊರಕಿದೆ.

  ಶನಿವಾರದ ಎಪಿಸೋಡ್‌ನಲ್ಲಿ ಸುದೀಪ್ ಅವರು ಮೊದಲನೇ ಪಂಚಾಯಿತಿ ನಡೆಸಿ. ವಾರದಲ್ಲಿ ಮನೆಯಲ್ಲಿ ನಡೆದ ಘಟನೆಗಳನ್ನು ವಿಮರ್ಶಿಸಿ ತಮ್ಮದೇ ಆದ ತೀರ್ಪುಗಳನ್ನು ನೀಡಿದರು. ಸುದೀಪ್ ಅವರ ಬಹುತೇಕ ಮಾತುಗಳಿಗೆ ಮನೆಯ ಸದಸ್ಯರು ಒಪ್ಪಿಗೆ ಸೂಚಿಸಿದರು.

  ಈ ವಾರದ ಮನೆಯಿಂದ ಹೊರಗೆ ಹೋಗಲು ಐದು ಮಂದಿ ನಾಮಿನೇಟ್ ಆಗಿದ್ದರು. ರಘು ಗೌಡ, ಧನುಶ್ರಿ, ನಿರ್ಮಲಾ, ವಿಶ್ವ ಅವರುಗಳು ನಾಮಿನೇಟ್ ಆಗಿದ್ದರು. ಇವರಲ್ಲಿ ಒಬ್ಬರು ಮನೆಯಿಂದ ಹೊರಹೋಗಬೇಕಿದೆ. ಪಂಚಾಯಿತಿಯ ಕೊನೆಯಲ್ಲಿ ಈ ವಿಷಯ ಇತ್ಯರ್ಥ ಆಗಬೇಕಿತ್ತು.

  ಅಂತೆಯೇ ಪಂಚಾಯಿತಿಯ ಕೊನೆಯಲ್ಲಿ ನಾಮಿನೇಟ್ ವಿಷಯ ಪ್ರಸ್ತಾಪಿಸಿದ ಸುದೀಪ್, ಈ ವಾರ ಸೇಫ್ ಆದ ಇಬ್ಬರ ಹೆಸರನ್ನು ಹೇಳಿದರು ಸುದೀಪ್.

  ನಟಿ ಶುಭಾ ಪೂಂಜಾ ಹಾಗೂ ಗಾಯಕ ವಿಶ್ವ ಅವರುಗಳು ಈ ಬಾರಿ ಮನೆಯಿಂದ ಹೊರಹೋಗುವುದರಿಂದ ತಪ್ಪಿಸಿಕೊಂಡಿದರು. ಟಿಕ್‌ಟಾಕ್ ಸ್ಟಾರ್ ಧನುಶ್ರಿ, ನಿರ್ಮಲಾ ಹಾಗೂ ರಘು ಗೌಡ ಮೂವರಲ್ಲಿ ಯಾರು ಇಬ್ಬರು ಸೇಫ್ ಆಗಲಿದ್ದಾರೆ ಎನ್ನುವುದು ನಾಳೆ (ಭಾನುವಾರ)ದ ಸಂಚಿಕೆಯಲ್ಲಿ ಗೊತ್ತಾಗಲಿದೆ.

  ಶುಭಾ ಪೂಂಜಾ ಅವರು ಮನೆಯಿಂದ ಹೊರಹೋಗಲಿದ್ದಾರೆ ಎಂದು ಸುದ್ದಿಗಳು ಹರಿದಾಡಿತ್ತು. ಆದರೆ ಇಂದಿನ ಸಂಚಿಕೆಯಲ್ಲಿ ಸೇಫ್ ಆದ ಮೊದಲ ವ್ಯಕ್ತಿ ಅವರೇ ಆಗಿದ್ದರು. ಅಷ್ಟೇ ಅಲ್ಲದೆ, ಶುಭಾ ಪೂಂಜಾ ಅವರು ಚೆನ್ನಾಗಿ ಆಡುತ್ತಿದ್ದಾರೆ ಎಂದು ಹೊಗಳಿದರು ಸುದೀಪ್.

  English summary
  Bigg Boss Kannada 8: Shubha Poonja and Vishwa safe for this week. Raghu Gowda, Dhanushree And Nirmala were still in danger zone.
  Saturday, March 6, 2021, 22:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X