For Quick Alerts
  ALLOW NOTIFICATIONS  
  For Daily Alerts

  ಮೊದಲ ವಾರವೇ ಹೊರಹೋಗ್ತಾರಾ ಶುಭಾ ಪೂಂಜಾ: ನಾಮಿನೇಟ್ ಆಗಿದ್ದು ಹೇಗೆ?

  |

  ಬಿಗ್‌ಬಾಸ್ ಮನೆಯಲ್ಲಿ ಮೊದಲ ಕೆಲವು ದಿನಗಳಲ್ಲಿ ಕೆಲವು ಸ್ಪರ್ಧಿಗಳು ಗಮನ ಸೆಳೆಯುತ್ತಿದ್ದಾರೆ ಅದರಲ್ಲಿ ಶುಭಾ ಪೂಂಜಾ ಸಹ ಒಬ್ಬರು. ಆದರೆ ಅವರು ಮೊದಲ ವಾರದಲ್ಲಿಯೇ ಹೊರಹೋಗುವ ಸಾಧ್ಯತೆಗಳು ಉಲ್ಬಣಿಸಿವೆ.

  ಮೊದಲ ದಿನ ಪ್ರಶಾಂತ್ ಸಂಬರ್ಗಿ, ಧನುಶ್ರಿ, ಲ್ಯಾಗ್ ಮಂಜು, ನಿಧಿ ಸುಬ್ಬಯ್ಯ ಅವರು ಇತರ ಸ್ಪರ್ಧಿಗಳಿಂದ ನಾಮಿನೇಟ್ ಆಗಿದ್ದರು. ಆದರೆ ಬಿಗ್‌ಬಾಸ್ ಕೊಟ್ಟ 'ನಾಮಿನೇಷನ್ ವರ್ಗಾವಣೆ' ಅವಕಾಶ ಬಳಸಿಕೊಂಡ ಪ್ರಶಾಂತ್ ಸಂಬರ್ಗಿ ಹಾಗೂ ಲ್ಯಾಗ್ ಮಂಜು ಅವರು, ವಿಶ್ವ ಹಾಗೂ ರಘು ಗೌಡ ಅವರುಗಳು ನಾಮಿನೇಟ್ ಆಗುವಂತೆ ಮಾಡಿದರು.

  ಬಿಗ್‌ಬಾಸ್: ಶುಭಾ ಪೂಂಜಾ ಬಳಿ ಕ್ಷಮೆ ಕೇಳಿದ ರಘು ಗೌಡಬಿಗ್‌ಬಾಸ್: ಶುಭಾ ಪೂಂಜಾ ಬಳಿ ಕ್ಷಮೆ ಕೇಳಿದ ರಘು ಗೌಡ

  ಆದರೆ ನಿಧಿ ಸುಬ್ಬಯ್ಯ ಹಾಗೂ ಧನುಶ್ರಿ ಅವರು ಆಟದಲ್ಲಿ ಸೋತು ನಾಮಿನೇಟ್ ಆಗಿ ಮುಂದುವರೆದಿದ್ದರು. ಆದರೆ ಬಿಗ್‌ಬಾಸ್ ಆಡಿಸಿದ ಆಟದಿಂದ ನಿಧಿ ಸುಬ್ಬಯ್ಯ ಅವರಿಗೆ ನಾಮಿನೇಷನ್ ನಿಂದ ಪಾರಾಗಲು ಮತ್ತೊಂದು ಅವಕಾಶ ದೊರಕಿತು.

  ಆಟವಾಡಲು ನಿಧಿ ಅವರು ಶುಭಾ ಅವರನ್ನು ಎದುರಾಳಿಯಾಗಿ ಆಯ್ಕೆ ಮಾಡಿಕೊಂಡರು. ಗುರಿ ಇಟ್ಟು ಹೊಡೆದು ಪಾಯಿಂಟ್ಸ್ ಗೆಲ್ಲುವ 'ಡಾರ್ಟ್ಸ್' ಆಟವನ್ನು ನಿಧಿ ಹಾಗೂ ಶುಭಾ ಆಡಿದರು. ಮೊದಲ ಸುತ್ತಿನಲ್ಲಿ ಶುಭಾ ಮುನ್ನಡೆ ಸಾಧಿಸಿದರಾದರೂ ಆ ನಂತರ ಕರಾರುವಕ್ಕಾದ ಎಸೆತಗಳಿಂದ ನಿಧಿ ಅವರು ದೊಡ್ಡ ಅಂತರದಿಂದಲೇ ಶುಭಾ ಅವರನ್ನು ಸೋಲಿಸಿದರು.

  ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ ಶುಭಾ ಪೂಂಜಾಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಹಾಕಿದ ಶುಭಾ ಪೂಂಜಾ

  ಆ ಮೂಲಕ ನಿಧಿ ಅವರು ನಾಮಿನೇಟ್‌ನಿಂದ ಬಚಾವಾದರು ಆದರೆ ಅವರ ಜಾಗದಲ್ಲಿ ಶುಭಾ ಪೂಂಜಾ ಅವರು ನಾಮಿನೇಟ್ ಆದರು. ಪ್ರಸ್ತುತ ಮನೆಯಲ್ಲಿ ಗಾಯಕ ವಿಶ್ವ, ರಘು ಗೌಡ, ಶುಭಾ ಪೂಂಜಾ, ಧನುಶ್ರಿ ಹಾಗೂ ನಿರ್ಮಲಾ ಅವರು ನಾಮಿನೇಟ್ ಆಗಿದ್ದಾರೆ. ಈ ವಾರಾಂತ್ಯದಲ್ಲಿ ಮನೆಯಿಂದ ಹೊರ ಹೋಗುವ ಮೊದಲ ಸ್ಪರ್ಧಿ ಯಾರಾಗುತ್ತಾರೆ ಕಾದು ನೋಡಬೇಕಿದೆ.

  English summary
  Bigg Boss Kannada 08: Shubha Poonja nominated by loosing in a game to Nidhi Subbaiah in Bigg Boss house.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X