twitter
    For Quick Alerts
    ALLOW NOTIFICATIONS  
    For Daily Alerts

    ಬಿಗ್‌ಬಾಸ್ ಮನೆಯಲ್ಲಿ 'ಚಾಯ್‌ ಪೆ ಚರ್ಚಾ': ಸುದೀಪ್ ಹೋಲಿಕೆಗೆ ಸಾಟಿಯಿಲ್ಲ

    |

    ಸುದೀಪ್ ಒಬ್ಬ ಅದ್ಭುತ ವಾಗ್ಮಿ ಎಂಬುದು ಮತ್ತೊಮ್ಮೆ-ಮಗದೊಮ್ಮೆ ಸಾಬೀತಾಗುತ್ತಲೇ ಇದೆ.

    ಬಿಗ್‌ಬಾಸ್ ಕನ್ನಡ 8 ರ ಮೊದಲ ವೀಕೆಂಡ್ ಎಪಿಸೋಡ್‌ನಲ್ಲಿ ಸುದೀಪ್ ಅವರು ಸ್ಪರ್ಧಾಳುಗಳನ್ನು ಅದ್ಭುತವಾಗಿ ನಿಭಾಯಿಸಿದರು. ಇಡೀಯ ವಾರ ನಡೆದ ಜಗಳ-ಗಲಾಟೆ ಎಲ್ಲವನ್ನೂ ಮರೆತು ವೀಕೆಂಡ್ ಎಪಿಸೋಡ್‌ನಲ್ಲಿ ಭಾನುವಾರ ಎಲ್ಲ ಸ್ಪರ್ಧಿಗಳು ಸುದೀಪ್ ಮಾತಗಳನ್ನು ಕೇಳಿ ನಕ್ಕು-ನಲಿದು ವಾರದ ಒತ್ತಡವನ್ನೆಲ್ಲವನ್ನೂ ಮರೆತರು.

    ಸುದೀಪ್ ಅವರು ಬಹಳ ಸರಳವಾದ ವಿಷಯವನ್ನು ಕೈಗೆತ್ತಿಕೊಂಡರು, ಅದುವೇ ಟೀ ಅಲಿಯಾಸ್ ಚಾಯ್. ಯಾರು ರೀತಿಯಾಗಿ ಟೀ ಮಾಡಿದರೆ ಚೆನ್ನಾಗಿರುತ್ತದೆ ಎಂಬುದನ್ನು ಸುದೀಪ್ ಕೇಳಿದರು. ಇದಕ್ಕೆ ಕಾರಣವೂ ಇತ್ತು. ಬಿಗ್‌ಬಾಸ್ ಮನೆಯಲ್ಲಿ ಟೀ ಹೇಗೆ ಮಾಡುವುದು ಎಂಬುದರ ಬಗ್ಗೆ ಕೆಲವು ಸ್ಪರ್ಧಿಗಳ ಬಗ್ಗೆ ಮಾತುಕತೆ ಆಗಿತ್ತು.

     Bigg Boss Kannada 8: Sudeep Discuss About Tea In Bigg Boss House

    ಸುದೀಪ್ ಅವರು ಕೇಳಿದ ಪ್ರಶ್ನೆಗೆ ಎಲ್ಲ ಸ್ಪರ್ಧಿಗಳು ಸಹ ತಮಗೆ ಸರಿ ಅನಿಸಿದಂತೆ ಅಥವಾ ತಮ್ಮ ಅನುಭವಕ್ಕೆ ತಕ್ಕಂತೆ ಟೀ ಮಾಡುವ ವಿಧಾನವನ್ನು ಸುದೀಪ್ ಅವರ ಮುಂದೆ ಹೇಳಿದರು.

    ಸ್ಪರ್ಧಿಗಳು ತಮಗೆ ತೋಚಿದ ಟೀ ಮಾಡುವ ವಿಧಾನವನ್ನು ಸುದೀಪ್ ಅವರು ಹಾಸ್ಯಮಯವಾಗಿ ವಿಮರ್ಶೆ ಮಾಡಿ ಸ್ಪರ್ಧಿಗಳೆಲ್ಲ ಬಿದ್ದು-ಬಿದ್ದು ನಗುವಂತೆ ಮಾಡಿದರು.

    ಎಲ್ಲ ಸ್ಪರ್ಧಿಗಳು ತಮಗೆ ಅನುಕೂಲವಾಗುವಂತಹಾ ಅಥವಾ ತಮಗೆ ಇಷ್ಟವಾಗುವಂತಹಾ ರೀತಿಯಲ್ಲಿ ಚಹಾ ತಯಾರಿಸುವುದು ಹೇಗೆ ಎಂಬುದನ್ನು ಹೇಳಿದರು ಎಲ್ಲವನ್ನೂ ತಮಾಷೆಯಾಗಿಯೇ ತೆಗೆದುಕೊಂಡ ಸುದೀಪ್ ಅಂತಿಮವಾಗಿ ಟೀ ಉಪಮೆಯನ್ನೇ ಬಳಸಿಕೊಂಡು ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ಮನಸ್ಥಿತಿಯನ್ನು ನಿರೂಪಿಸಿದರು.

    'ಟೀ ಮಾಡುವ ಬಗ್ಗೆ ನಿಮ್ಮೆಲ್ಲರಿಗೂ ನಿಮ್ಮದೇ ಆದ ಸ್ಟೈಲ್, ವಿಧಾನವಿದೆ. ಹಾಗಿದ್ದರೆ ನಿಮ್ಮೆಲ್ಲರ ಅಭಿಪ್ರಾಯ, ವರ್ತನೆ ಒಂದೇ ಇರಬೇಕು ಎಂದು ಹೇಗೆ ನಿರೀಕ್ಷಿಸುತ್ತೀರಿ

    ಒಂದು ಸರಳ ಟೀ ಎಷ್ಟು ವಿಧದದಲ್ಲಿದೆ, ಒಂದು ಮನೆಯಲ್ಲಿ ಇರುವ ಹದಿನೇಳು ಮಂದಿಯಲ್ಲಿ ಹದಿನೇಳು ಮಾದರಿ ಟೀ ಇದೆ. ಆದರೆ ಹದಿನೇಳು ಮಂದಿಗೆ ಬೇರೆ-ಬೇರೆ ಮಾದರಿಯ ಟೀ ಇಷ್ಟವಿದ್ದರೂ ಸಹ ಎಲ್ಲರೂ ಒಂದೇ ಮಾದರಿಯ ಟೀ ಅನ್ನು ಸಹಿಸಿಕೊಂಡು, ಇಷ್ಟಪಟ್ಟು ಕುಡಿಯುವುದರಲ್ಲಿ ಸಹಬಾಳ್ವೆ ಇದೆ. ಈ ಒಂದು ಟೀ ವಿಷಯ ಇಡೀಯ ಮನೆಯ ಗುಣವನ್ನು ಪ್ರತಿನಿಧಿಸುತ್ತಿದೆ' ಎಂದರು ಸುದೀಪ್.

    ಅಷ್ಟು ಹೊತ್ತು ಟೀ ಬಗ್ಗೆ ಮಾತ್ರವೇ ಮಾತನಾಡಿ, ಯೋಚನೆ ಮಾಡಿ ನಗುತ್ತಿದ್ದ ಸ್ಪರ್ಧಾಳುಗಳು. ಈ ಟೀ ನಮ್ಮ್ ಪ್ರಸ್ತುತ ಜೀವನವನ್ನು ಪ್ರತಿನಿಧಿಸುತ್ತಿದೆ ಎಂದು ಗೊತ್ತಾಗಿ ಜೋರು ಚಪ್ಪಾಳೆಯೊಂದಿಗೆ ಸುದೀಪ್ ಅವರ ಮಾತುಗಳನ್ನು ಗೌರವಿಸಿದರು.

    English summary
    Bigg Boss Kannada 8: Sudeep discuss about how to make a good tea.
    Sunday, March 7, 2021, 23:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X