ಹೊಸ ಅವತಾರದಲ್ಲಿ ಸುದೀಪ್: ಬಿಗ್ ಬಾಸ್ ಭವಿಷ್ಯ ಹೇಳಲು ಬಂದ್ರು ಕಿಚ್ಚ ಜೋಯಿಸರು

ದುಬೈನಿಂದ ಬೆಂಗಳೂರಿಗೆ ಬರ್ತಿದ್ದಂತೆ ಕಿಚ್ಚ ಸುದೀಪ್ ತಮ್ಮ ಗೆಟಪ್ ಬದಲಾಯಿಸಿಕೊಂಡಿದ್ದಾರೆ. ಸ್ವಾಮೀಜಿ ಅವತಾರ ತಾಳಿ ಭವಿಷ್ಯ ಹೇಳಲು ಕೂತಿದ್ದಾರೆ. ಯಾರ ಭವಿಷ್ಯ ಹೇಳ್ತಾರೋ ಇಲ್ವೋ ಸದ್ಯಕ್ಕೆ ಬಿಗ್ ಬಾಸ್ ಭವಿಷ್ಯ ಮಾತ್ರ ಹೇಳಲಿದ್ದಾರೆ.

ಕಲರ್ಸ್ ಕನ್ನಡ ವಾಹಿನಿ ಸುದೀಪ್ ಅವರ ಹೊಸ ಫೋಟೋ ಹಂಚಿಕೊಂಡಿದೆ. ಈ ಫೋಟೋದಲ್ಲಿ ಸುದೀಪ್ ಅವರು ಜ್ಯೋತಿಷಿಗಳಂತೆ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಭಿನಯ ಚಕ್ರವರ್ತಿಯ ಸ್ವಾಮೀಜಿ ಗೆಟಪ್‌ನ ಫೋಟೋ ಶೇರ್ ಮಾಡಿರುವ ಕಲರ್ಸ್ ಕನ್ನಡ ''ಲಾಕ್ ಡೌನ್ 8.0ಗೆ ಕಿಚ್ಚ ಜೋಯಿಸರು ಇಟ್ಟಿರೋ ಮುಹೂರ್ತ ಯಾವುದು? ಗೆಸ್ ಮಾಡಿ'' ಎಂದು ಪೋಸ್ಟ್ ಹಾಕಿದೆ.

Bigg Boss Kannada 8: Sudeep Swamiji Avatar Viral

ಅಂದ್ಹಾಗೆ, ಬಿಗ್ ಬಾಸ್ ಹೊಸ ಆವೃತ್ತಿ ಯಾವಾಗ ಆರಂಭವಾಗುತ್ತದೆ ಎಂಬುದರ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡದ ವಾಹಿನಿ, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಸದ್ಯದ ಮಾಹಿತಿ ಪ್ರಕಾರ ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಫೆಬ್ರವರಿ 28 ರಂದು ಆರಂಭವಾಗಲಿದೆ. ಈಗಾಗಲೇ ಸ್ಪರ್ಧಿಗಳ ಆಯ್ಕೆ ಸಹ ಮುಗಿದಿದೆ. ಅಂತಿಮವಾಗಿ ಆಯ್ಕೆಯಾದ ಸ್ಪರ್ಧಿಗಳನ್ನು ಕೆಲವು ದಿನ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. ಆ ಬಳಿಕ ದೊಡ್ಮನೆಗೆ ಪ್ರವೇಶ ನೀಡಲಾಗುವುದು.

More from Filmibeat

English summary
Bigg Boss Kannada 8: Kannada actor Sudeep's Swamiji avatar went viral in social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X