Just In
- 10 hrs ago
ಸೋನು ಸೂದ್ಗೆ ವಿಶೇಷ ಗೌರವ ನೀಡಿದ ಪಂಜಾಬ್ ಸರ್ಕಾರ
- 11 hrs ago
'ಮತ್ತೆ ಮನ್ವಂತರ' ತರುತ್ತಿದ್ದಾರೆ ಟಿ.ಎನ್.ಸೀತಾರಾಮ್
- 11 hrs ago
ಚೈತ್ರಾ ಕೊಟೂರು ಪತಿ ಹಾಗೂ ಕುಟುಂಬದವರು ನಾಪತ್ತೆ
- 12 hrs ago
ಪವನ್ ಕಲ್ಯಾಣ್ ಮಗಳ ಕುರಿತು ಸಹನಟಿ ಅನನ್ಯಾ ಮಾತು
Don't Miss!
- News
ಲಸಿಕೆ ಉತ್ಸವ: ಭಾರತದಲ್ಲಿ ಒಂದೇ ದಿನ 27 ಲಕ್ಷ ಜನರಿಗೆ ಕೊರೊನಾ ಲಸಿಕೆ!
- Lifestyle
ಸೋಮವಾರದ ದಿನ ಭವಿಷ್ಯ: ಈ ದಿನ ನಿಮ್ಮ ರಾಶಿಫಲ ಹೇಗಿದೆ ನೋಡಿ
- Sports
ಐಪಿಎಲ್ 2021: ಕೊಲ್ಕತ್ತಾ ವಿರುದ್ಧದ ಸೋಲಿಗೆ ಕಾರಣ ಹೇಳಿದ ಡೇವಿಡ್ ವಾರ್ನರ್
- Finance
ಟಾಪ್ 10ರಲ್ಲಿ 4 ಕಂಪನಿಗಳ ಮೌಲ್ಯ 1.14 ಲಕ್ಷ ಕೋಟಿ ರುಗೇರಿಕೆ
- Automobiles
ಹೊಸ ಫೀಚರ್ಸ್ಗಳನ್ನು ಪಡೆಯಲಿದೆ ನ್ಯೂ ಜನರೇಷನ್ ಫೋಕ್ಸ್ವ್ಯಾಗನ್ ಪೊಲೊ
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಅಣ್ಣ ಎಂದು ಕೂಗಬೇಡ': ಮಂಜು ಪಾವಗಡಗೆ ಅಣ್ಣ ಎಂದಿದ್ದು ಯಾರು?
'ಮಜಾಭಾರತ' ಖ್ಯಾತಿಯ ಲ್ಯಾಗ್ ಮಂಜು ಬಿಗ್ ಬಾಸ್ ಮನೆಯ ರೋಮಿಯೋ ಆಗುವ ಕಡೆ ಹೊರಟಿದ್ದಾರೆ. ಇಂದಿನ ಪ್ರೋಮೋ ಸಹ ಅದಕ್ಕೆ ತಕ್ಕಂತಿದೆ. ರೋಮಿಯೋ ಅಥವಾ ಲವರ್ ಬಾಯ್ ಆಗುವ ಸೂಚನೆ ಕೊಡ್ತಿರುವ ಮಂಜು ಪಾವಗಡ ಅವರನ್ನು ನಟಿಯೊಬ್ಬರು ಅಣ್ಣ ಎಂದು ಕರೆದರು.
ಅಣ್ಣ ಎಂದು ಕರೆದ ಹಿನ್ನೆಲೆ ಮಂಜು ಪಾವಗಡ ''ನನ್ನನ್ನು ಅಣ್ಣ ಎಂದು ಕೂಗಬೇಡಿ'' ಎಂದು ಹೇಳಿಬಿಟ್ಟರು. ಅಣ್ಣ ಎನ್ನುವುದು ಬೇಡ, ಮಂಜು ಎಂದು ಕರೆಯಿರಿ ಎಂದರು. ಅಷ್ಟಕ್ಕೂ, ಮಂಜು ಪಾವಗಡ ಅವರನ್ನು ಅಣ್ಣ ಎಂದಿದ್ದು ಯಾರು? ಯಾವ ಸಂದರ್ಭದಲ್ಲಿ ಅಣ್ಣ ಎಂದರು? ಮುಂದೆ ಓದಿ...

ಊಟ ಮಾಡುತ್ತಿದ್ದ ಸಮಯದಲ್ಲಿ ಮಂಜು ಎಂಟ್ರಿ
ಎಂಟನೇ ಆವೃತ್ತಿಯಲ್ಲಿ ಹತ್ತನೇ ಸ್ಪರ್ಧಿಯಾಗಿ ಮಂಜು ಪಾವಗಡ ಬಿಗ್ ಬಾಸ್ ಮನೆ ಪ್ರವೇಶ ಮಾಡಿದರು. ಇತರೆ ಸ್ಪರ್ಧಿಗಳು ಊಟ ಮಾಡುತ್ತಿದ್ದ ವೇಳೆ ಮಂಜು ಪಾವಗಡ ಎಂಟ್ರಿಯಾಗಿತ್ತು. ಮನೆಯೊಳಗೆ ಹೋದ ನಂತರ ಅದಾಗಲೇ ಅಲ್ಲಿದ್ದ ಸ್ಪರ್ಧಿಗಳ ಪರಿಚಯ ಮಾಡಿಕೊಂಡರು.
Bigg Boss Kannada 8 : ಬಿಗ್ ಮನೆ ಪ್ರವೇಶ ಮಾಡಿದ 17 ಸ್ಪರ್ಧಿಗಳ ವಿವರ

'ಊಟ ಮಾಡಿಕೊಳ್ಳಿ ಅಣ್ಣ'
ಆಗತಾನೆ ಮನೆಯೊಳಗೆ ಬಂದ ಮಂಜು ಪಾವಗಡ ಅವರನ್ನು ಟಿಕ್‌ಟಾಕ್ ಖ್ಯಾತಿಯ ಧನುಶ್ರೀ ''ನೀವು ಊಟ ಮಾಡಿಕೊಳ್ಳಿ ಅಣ್ಣ'' ಎಂದರು. ಅಣ್ಣ ಎಂದು ಕರೆದಿದ್ದಕ್ಕೆ ''ನೀವು ನನ್ನ ಅಣ್ಣ ಎಂದು ಕರೆಯಬೇಡಿ, ಮಂಜು ಎಂದು ಕೂಗಿ'' ಎಂದರು. ''ಮಂಜು ಅಂತಾನೆ ಹೇಳ್ತೇನೆ ಬಿಡಿ'' ಎಂದು ಧನುಶ್ರೀ ಉತ್ತರಿಸಿದರು.

ಲ್ಯಾಗ್ ಎಂಬ ಟ್ಯಾಗ್ ಲೈನ್ ಏಕೆ?
'ಮಜಾಭಾರತ' ಖ್ಯಾತಿಯ ಮಂಜು ಪಾವಗಡ ಅವರನ್ನು ಲ್ಯಾಗ್ ಮಂಜು ಎಂದು ಕರೆಯುತ್ತಾರೆ. ಲ್ಯಾಗ್ ಟ್ಯಾಗ್‌ಲೈನ್ ಏಕೆ ಎಂದು ಮನೆಯವರು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಮಂಜು ''ಡೈಲಾಗ್ ಪ್ರಾಕ್ಟೀಸ್ ಸಮಯದಲ್ಲಿ ನಾನು ಸ್ವಲ್ಪ ನಿಧಾನ, ಎಲ್ಲರೂ ಪ್ರಾಕ್ಟೀಸ್ ಆದ್ಮೇಲೆ ನಾನು ಮಾಡ್ತಿದ್ದೆ'' ಅದಕ್ಕೆ ಲ್ಯಾಗ್ ಮಂಜು ಅಂತಾರೆ ಎಂದು ತಿಳಿಸಿದರು.

ಬಿಗ್ ಬಾಸ್ ಮನೆಯಲ್ಲಿರುವ ಮಹಿಳಾ ಮಣಿಯರು
ಟಿಕ್‌ಟಾಕ್ ಸುಂದರಿ ಧನುಶ್ರೀ, ನಟಿ ಶುಭ ಪೂಂಜಾ, ಅಗ್ನಿಸಾಕ್ಷಿ ವೈಷ್ಣವಿ ಗೌಡ, ನಿಧಿ ಸುಬ್ಬಯ್ಯ, ಬ್ರಹ್ಮಗಂಟು ಖ್ಯಾತಿಯ ಗೀತಾ ಭಟ್, ಸೌತ್ ಇಂಡಿಯಾ ಮಿಸ್ ಖ್ಯಾತಿಯ ದಿವ್ಯ ಸುರೇಶ್, ಕಿರುತೆರೆ ಹಿರಿಯ ಕಲಾವಿದೆ ಚಂದ್ರಕಲಾ ಮೋಹನ್, ನಟಿ ದಿವ್ಯ ಉರುಡಗ ಹಾಗೂ ನಿರ್ಮಲಾ ಸತ್ಯ ಈ ಸಲ ದೊಡ್ಮನೆಯಲ್ಲಿರುವ ಮಹಿಳಾ ಮಣಿಯರು.