ಎರಡನೇ ಸಲ ನಾಮಿನೇಷನ್: ಇದರ ಹಿಂದಿದ್ಯಾ ಬೇಕಾದವರನ್ನು ಉಳಿಸಿಕೊಳ್ಳುವ ತಂತ್ರ?
ಬಿಗ್ ಬಾಸ್ ಕನ್ನಡ ಸೀಸನ್ 8ರ ಎರಡನೇ ದಿನದ ಆಟ ಕೂಡ ರೋಚಕವಾಗಿತ್ತು. ಮನೆಯಿಂದ ಹೊರಹೋಗಬೇಕಿದ್ದ ಸ್ಪರ್ಧಿಗಳು ನಾಮಿನೇಷನ್ ತೂಗುಗತ್ತಿಯನ್ನು ಬೇರೆಯವರಿಗೆ ವರ್ಗಾಯಿಸಿ ನಿರಾಳರಾದರೆ, ನಾಮಿನೇಷನ್ ಆದವರು ತಲೆಕೆಡಿಸಿಕೊಂಡಿದ್ದಾರೆ.
ನಿನ್ನೆಯ (ಮಾರ್ಚ್ 2) ಬಿಗ್ ಬಾಸ್ ಸಂಚಿಕೆಯಲ್ಲಿ ಸ್ಪರ್ಧಿಗಳು ತಾವು ಗೆದ್ದ ಅವಾರ್ಡ್ ಅನ್ನು ಕೈಯಲ್ಲಿ ಹಿಡಿದು ಸಂಭ್ರಮದ ಕ್ಷಣವನ್ನು ನೆನೆದು ಭಾವುಕರಾಗಿದ್ದಾರೆ. ಬಳಿಕ ಬಿಗ್ ಬಾಸ್ ನಾಮಿನೇಷನ್ ಆದವರಿಗೆ ಸಂತಸದ ಸುದ್ದಿಯನ್ನು ನೀಡುವ ಮೂಲಕ ಮತ್ತೊಂದು ಟಾಸ್ಕ್ ನೀಡಿದೆ.
ಮೊದಲ ದಿನ ನಾಮಿನೇಟ್ ಆದ 5 ಮಂದಿ ಸ್ಪರ್ಧಿಗಳು ಸೇಫ್ ಆಗಲು ಮತ್ತೊಂದು ಅವಕಾಶವಿದೆ ಎಂದು ಹೇಳುತ್ತಿದ್ದಂತೆ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿ ಕುಳಿತಿದ್ದ ಸ್ಪರ್ಧಿಗಳು ನಿಟ್ಟುಸಿರುಬಿಟ್ಟಿದ್ದಾರೆ. ಆದರೆ ಮತ್ತೆ ಸೇಫ್ ಆಗಬೇಕೆಂದರೆ ಉಳಿದ ಸ್ಪರ್ಧಿಗಳ ಜೊತೆ ಸೆಣಸಾಡಬೇಕು ಎನ್ನುವ ಟ್ವಿಸ್ಟ್ ಬಿಗ್ ಬಾಸ್ ನೀಡಿದೆ.

ಟ್ವಿಸ್ಟ್ ಹಿಂದಿದ್ಯಾ ಬಿಗ್ ಬಾಸ್ ತಂತ್ರ
ಈ ಟ್ವಿಸ್ಟ್ ನೀಡುತ್ತಿದ್ದಂತೆ ಈ ಪ್ರಕ್ರಿಯೆ ಹಿಂದಿದ್ಯಾ ಬಿಗ್ ಬಾಸ್ ತಂತ್ರ ಎನ್ನುವ ಮಾತುಗಳು ಕೇಳಿಬರುತ್ತಿದೆ. ಮೊದಲ ವಾರವೇ ನಾಮಿನೇಟ್ ಆಗಿದ್ದ ಸ್ಪರ್ಧಿಗಳಲ್ಲಿ ಪ್ರಶಾಂತ್ ಸಂಬರ್ಗಿ, ನಿಧಿ ಸುಬ್ಬಯ್ಯ, ಧನುಶ್ರೀ, ನಿರ್ಮಲಾ, ಮಂಜು ಪಾವಗಡ ಸೇರಿ 5 ಸ್ಪರ್ಧಿಗಳಿದ್ದರು. ಈ ಐದು ಮಂದಿ ಬಿಗ್ ಮನೆಗೆ ಅವಶ್ಯಕವಾಗಿ ಬೇಕಾದವರು.

5 ಸ್ಪರ್ಧಿಗಳನ್ನು ಸೇಫ್ ಮಾಡುವ ಪ್ಲಾನ್
ಮೊದಲ ದಿನ ಮನೆಯಿಂದ ಹೊರಹೋಗಲು ನಾಮಿನೇಟ್ ಆದ 5 ಜನ ಬಿಗ್ ಮನೆಯ ಪ್ರಬಲ ಸ್ಪರ್ಧಿಗಳಾಗಿರುವ ಜೊತೆಗೆ ಅವರಿಂದ ಹೆಚ್ಚು ಮನರಂಜನೆ ನಿರೀಕ್ಷೆ ಮಾಡಲಾಗುತ್ತಿದೆ. ಹಾಗಾಗಿ ಈ ಐವರಲ್ಲಿ ಯಾರನ್ನೂ ಸಹ ಮನೆಗೆ ಕಳುಹಿಸಲು ಬಿಗ್ ಬಾಸ್ ತಯಾರಿಲ್ಲ ಎನ್ನಲಾಗುತ್ತಿದೆ. ಈ ಕಾರಣದಿಂದ ಮತ್ತೆ ಎರಡನೇ ನಾಮಿನೇಷನ್ ತಂತ್ರ ರೂಪಿಸಿದಿಯಾ ಎನ್ನುವ ಪ್ರಶ್ನೆ ಕಾಡುತ್ತಿದೆ.

ಮೊದಲ ದಿನವೇ ತಲೆಕೆಳಗಾದ ಬಿಗ್ ಬಾಸ್ ಲೆಕ್ಕಾಚಾರ
ಬಿಗ್ ಬಾಸ್ ಶೋ ಮೊದಲೇ ಕ್ಕ್ರಿಪ್ಟ್ ಆಗಿರುತ್ತೆ. ಸ್ಕ್ರಿಪ್ಕ್ ಪ್ರಕಾರ ನಡೆಯುತ್ತೆ ಎನ್ನುವುದು ಹೊಸದೇನಲ್ಲ. ಅಂದಮೇಲೆ ಮೊದಲ ವಾರ ನಾಮಿನೇಟ್ ಆಗಿ ಯಾರು ಹೋಗಬೇಕು ಎನ್ನುವುದು ಮೊದಲೇ ನಿರ್ಧಾರವಾಗಿರುತ್ತೆ. ಬಿಗ್ ಬಾಸ್ ನಿರ್ಧಾರ ಮೊದಲ ವಾರವೇ ತಲೆಕೆಳಗಾದ ಕಾರಣ ಎರಡನೇ ನಾಮಿನೇಷನ್ ಆಟ ಆಡುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಸಂಬರ್ಗಿ ಮತ್ತು ಮಂಜು ಸೇಫ್
ಇದೀಗ ಬಿಗ್ ಬಾಸ್ ಪ್ಲಾನ್ ಪ್ರಕಾರ ಈ ಬಾರಿ ಬಿಗ್ ಮನೆಯ ಕಿರಿಕ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಸೇಫ್ ಆಗಿದ್ದಾರೆ. ಇನ್ನು ಮನೆಯಲ್ಲಿ ಸಖತ್ ಆಕ್ಟೀವ್ ಆಗಿದ್ದು, ಎಲ್ಲರನ್ನು ನಗಿಸುತ್ತಿರುವ ಮಂಜು ಪಾವಗಡ ಕೂಡ ನಾಮಿನೇಷನ್ ನಿಂದ ಬಚಾವ್ ಆಗಿದ್ದಾರೆ. ಇದೀಗ ಗಾಯಕ ವಿಶ್ವ ಮತ್ತು ರಘು ಗೌಡ ನಾಮಿನೇಟ್ ಆಗಿದ್ದಾರೆ. ಇನ್ನು ಉಳಿದ ಸ್ಪರ್ಧಿಗಳು ಯಾರು ಎನ್ನುವುದು ಇವತ್ತು ಗೊತ್ತಾಗಲಿದೆ .


Click it and Unblock the Notifications











