For Quick Alerts
  ALLOW NOTIFICATIONS  
  For Daily Alerts

  Bigg Boss Kannada Season 09: ಬಿಗ್‌ ಬಾಸ್‌ ಮನೆಯಿಂದ ಸೈಕ್‌ ನವಾಜ್‌ ಔಟ್‌

  |

  ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ಎರಡು ವಾರಗಳನ್ನು ಪೂರೈಸಿದೆ. ಇದೀಗ ಎರಡನೇ ವಾರ ಮನೆಯಿಂದ ಮತ್ತೊಬ್ಬ ಸ್ಫರ್ಧಿ ಹೊರಬಂದಿದ್ದಾರೆ. ಈ ವಾರದ ಎಲಿಮಿನೇಷನ್‌ನಲ್ಲಿ ವೈರಲ್‌ ಹುಡುಗ ನವಾಜ್‌ ಬಿಗ್‌ ಬಾಸ್‌ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗುತ್ತಿದೆ.

  ಶುಕ್ರವಾರ ಕನ್ನಡ ಸಿನಿಮಾಗಳು ಬಿಡುಗಡೆಯಾದ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಪ್ರಾಸಬದ್ದವಾಗಿ ಪಂಚಿಂಗ್‌ ಡೈಲಾಗ್‌ ಹೊಡೆಯುವ ಮೂಲಕ ವೈರಲ್‌ ಆಗಿದ್ದ ನವಾಜ್‌, ಡಾಲಿ ಧನಂಜಯ್‌ , ನವರಸ ನಾಯಕ ಜಗ್ಗೇಶ್‌ ಸೇರಿದಂತೆ ಅನೇಕ ಸಿನಿಮಾ ತಾರೆಯರಿಂದ ಶಹಬ್ಬಾಶ್ ಗಿರಿ ಪಡೆದಿದ್ದರು. ನವಾಜ್‌ ಪಂಚಿಂಗ್‌ ಡೈಲಾಗ್‌ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿತ್ತು.

  Bigg Boss Season 09: ಎಲಿಮಿನೇಶನ್‌ನಿಂದ ಪಾರಾದ ಮೊದಲ ಮೂವರು ಸ್ಪರ್ಧಿಗಳುBigg Boss Season 09: ಎಲಿಮಿನೇಶನ್‌ನಿಂದ ಪಾರಾದ ಮೊದಲ ಮೂವರು ಸ್ಪರ್ಧಿಗಳು

  ಸೈಕ್‌ ನವಾಜ್‌ ಅಂತಾನೇ ಫೇಮಸ್‌ ಆಗಿದ್ದ ನವಾಜ್‌, ಸೋಶಿಯಲ್‌ ಮೀಡಿಯಾದಲ್ಲಿ ತಮ್ಮದೇ ಆದ ಫಾಲೋವರ್ಸ್‌ಗಳನ್ನು ಹೊಂದಿದ್ದರು. ವಿಭಿನ್ನ ಮಾನರಿಸಂನಲ್ಲಿ ನವಾಜ್‌ ಹೇಳುತ್ತಿದ್ದ ಸಿನಿಮಾ ವಿಮರ್ಶೆಗಾಗಿ ಹಲವರು ಕಾಯುತ್ತಿದ್ದರೂ ಕೂಡ. ಸೋಶಿಯಲ್‌ ಮೀಡಿಯಾದಲ್ಲಿ ತನ್ನ ಹವಾ ಹುಟ್ಟುಹಾಕಿದ್ದ ನವಾಜ್‌ ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ಸ್ಫರ್ಧಿಯಾಗಿ ಮನೆಯೊಳಗೆ ಕಾಲಿಟ್ಟಿದ್ದರು.

  ತಮ್ಮ ಫಾಲೋವರ್ಸ್‌ಗಳಲ್ಲಿ ಅತಿಯಾದ ನಿರೀಕ್ಷೆ ಹುಟ್ಟುಹಾಕಿದ್ದ ನವಾಜ್‌ ಎರಡನೇ ವಾರಕ್ಕೆ ಮನೆಯಿಂದ ಆಚೆ ಬರುವಂತಾಗಿದೆ. ನವಾಜ್‌ ಹೊರಗಡೆ ಬಿಂದಾಸ್‌ ಆಗಿರುವಷ್ಟು ಬಿಗ್‌ ಬಾಸ್‌ ಮನೆಯೊಳಗೆ ಇರಲಿಲ್ಲ. ಮೊದಲ ವಾರದಲ್ಲಿ ಯಾರೊಂದಿಗೂ ಬೆರೆಯದ ನವಾಜ್‌ ಅಲ್ಲಲ್ಲಿ ಕೂತು ತೂಕಡಿಸುತ್ತಿದ್ದರು. ಜೋಡಿ ಟಾಸ್ಕ್‌ನಲ್ಲಿ ಅರುಣ್‌ ಸಾಗರ್‌ ಅವರಿಗೆ ಜೋಡಿಯಾಗಿದ್ದ ನವಾಜ್‌ ಅವರನ್ನು ಹೊರತುಪಡಿಸಿ ಯಾರೊಂದಿಗೂ ಅಷ್ಟಾಗಿ ಬೆರೆತಿರಲಿಲ್ಲ.

  ಸೈಕ್‌ ನವಾಜ್‌ ಅಂತಾನೇ ಹೆಸರು ಪಡೆದುಕೊಂಡಿರುವ ನವಾಜ್‌ ಕೆಲವೊಮ್ಮೆ ಬಿಗ್ ಬಾಸ್‌ ಮನೆಯಲ್ಲಿ ಜಗಳಕ್ಕೂ ಕಾರಣರಾಗಿದ್ದರು. ಅರುಣ್‌ ಸಾಗರ್‌ ಹೊರತು ಪಡಿಸಿ ಮೊದಲ ವಾರದಲ್ಲಿ ಐಶ್ವರ್ಯಾ ಪಿಸೆ ಜೊತೆ ಮಾತನಾಡುತ್ತಿದ್ದ ನವಾಜ್‌, ಒಂದು ಬಾರಿ ಏಕಾಏಕಿ ಬೈಕರ್‌ ಐಶ್ವರ್ಯಾ ಪಿಸೆಗೆ ಪ್ರಪೋಸ್‌ ಕೂಡ ಮಾಡಿದ್ದರು.

  Nawaz: ಇಂಡಿಯಾ ನಮ್ ಕಂಟ್ರಿ, ನವಾಜ್ ಬಿಗ್‌ಬಾಸ್‌ಗೆ ಎಂಟ್ರಿ: ಈ ವೈರಲ್ ಹುಡುಗನ ಹಿನ್ನೆಲೆ ಏನು?Nawaz: ಇಂಡಿಯಾ ನಮ್ ಕಂಟ್ರಿ, ನವಾಜ್ ಬಿಗ್‌ಬಾಸ್‌ಗೆ ಎಂಟ್ರಿ: ಈ ವೈರಲ್ ಹುಡುಗನ ಹಿನ್ನೆಲೆ ಏನು?

  ಎರಡನೇ ವಾರವೂ ಅವಕಾಶ ಪಡೆದ ನವಾಜ್‌ ಅಷ್ಟಾಗಿ ಆಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರಲಿಲ್ಲ. ದೀಪಿಕಾ ದಾಸ್‌ ತಂಡದಲ್ಲಿ ನವಾಜ್‌ ಆಟಗಳಲ್ಲಿ ಹಿಂದುಳಿದ ಕಾರಣ ಹಾಗೂ ಮನೆಯ ಸದಸ್ಯರ ಜೊತೆ ಬೆರೆಯದ ಕಾರಣ ನವಾಜ್‌ ಬಿಗ್‌ ಬಾಸ್‌ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ.

  ಎರಡನೇ ವಾರ ಮನೆಯಿಂದ ಹೊರ ಬರಲು ದರ್ಶ್‌ ಚಂದ್ರಪ್ಪ, ನವಾಜ್, ಮಯೂರಿ, ಅಮೂಲ್ಯ, ದೀಪಿಕಾ, ಪ್ರಶಾಂತ್‌ ಸಂಬರ್ಗಿ, ನೇಹಾ ಗೌಡ, ಆರ್ಯವರ್ಧನ್‌ ಹಾಗೂ ರೂಪೇಶ್‌ ರಾಜಣ್ಣ ನಾಮಿನೇಟ್‌ ಆಗಿದ್ದರು. ಈ ಪೈಕಿ ನಿನ್ನೆ ( ಅಕ್ಟೋಬರ್ 9) ರಂದು ನಡೆದ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಮೊದಲು ಅಮೂಲ್ಯ, ಬಳಿಕ ದೀಪಿಕಾ ದಾಸ್‌ ಹಾಗೂ ಸಂಚಿಕೆಯ ಕೊನೆಯದಲ್ಲಿ ಆರ್ಯವರ್ಧನ್‌ ಸೇಫ್‌ ಆಗಿದ್ದರು. ಉಳಿದವರಲ್ಲಿ ನವಾಜ್‌ ಎಲಿಮಿನೇಟ್‌ ಆಗಿದ್ದು, ಉಳಿದವರು ಈ ಬಾರಿಯ ಎಲಿಮಿನೇಷನ್‌ನಿಂದ ಪಾರಾಗಿದ್ದಾರೆ. ನವಾಜ್‌ ಎಲಿಮಿನೇಟ್‌ ಆಗಿರುವ ಸಂಚಿಕೆ ಇಂದು( ಅಕ್ಟೋಬರ್10) ಪ್ರಸಾರವಾಗಲಿದೆ.

  ಯಾವ ಬ್ಯಾಗ್ರೌಂಡ್‌ ಇಲ್ಲದೇ, ನನ್ನ ಮಾತಿನಿಂದಲೇ ತನಗೊಂದು ವೇದಿಕೆ ಕಲ್ಪಿಸಿಕೊಂಡು ಫೇಮಸ್‌ ಆಗಿದ್ದ ನವಾಜ್‌ ಬಿಗ್‌ ಬಾಸ್‌ಗೆ ಬಂದ ಬಳಿಕ ಮತ್ತಷ್ಟು ಜನರಿಗೆ ಇಷ್ಟವಾಗಿದ್ದರು. ನವಾಜ್‌ ತಮ್ಮ ಕಷ್ಟದ ದಿನಗಳನ್ನು ಬಿಗ್ ಬಾಸ್‌ನಲ್ಲಿ ಹೇಳಿಕೊಂಡಿದ್ದರು. ಹೀಗಾಗಿ ಈತ ಇನ್ನಷ್ಟು ದಿನ ಬಿಗ್‌ ಬಾಸ್‌ ಮನೆಯಲ್ಲಿ ಇರಲಿ ಎನ್ನುವುದು ಹಲವು ವೀಕ್ಷಕರ ಆಸೆಯಾಗಿತ್ತು. ಆದರೆ ನವಾಜ್‌ ಎರಡನೇ ವಾರಕ್ಕೆ ಬಿಗ್‌ ಬಾಸ್‌ನಿಂದ ಹೊರಬಂದಿದ್ದಾರೆ.

  English summary
  Nawaz eliminated from bigg boss kannada season 9.
  Monday, October 10, 2022, 10:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X