For Quick Alerts
  ALLOW NOTIFICATIONS  
  For Daily Alerts

  BB9: ಎರಡನೇ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಸದಸ್ಯರು ಇವರೇ

  |

  ಬಿಗ್‌ಬಾಸ್ ಸೀಸನ್ 9 ಮೊದಲ ವಾರ ಮುಗಿದು ಎರಡನೇ ವಾರ ಪ್ರಾರಂಭವಾಗಿದೆ. ಈಗಾಗಲೇ ಮನೆಯಿಂದ ಒಬ್ಬ ಸದಸ್ಯರು ಒಬ್ಬರು ಹೊರಗೆ ಹೋಗಿದ್ದಾರೆ.

  ಇದೀಗ ಎರಡನೇ ವಾರ ಆರಂಭವಾಗಿದೆ. ಎರಡನೇ ವಾರ ಆರಂಭವಾಗುತ್ತಿದ್ದಂತೆ ಯಥಾವತ್ತು ನಾಮಿನೇಶನ್ ಪ್ರಕ್ರಿಯೆ ಸಹ ಆರಂಭವಾಗಿದೆ. ಮೊದಲ ವಾರ ನಾಮಿನೇಟ್ ಆಗಿದ್ದ ಐಶ್ವರ್ಯಾ ಪಿಸ್ಸೆ ಹೊರ ಹೋಗಿದ್ದಾರೆ. ಅದಾದ ಬಳಿಕ ಈಗ ಎರಡೇ ವಾರಾಂತ್ಯಕ್ಕೆ ಯಾರು ಹೊರ ಹೋಗಬೇಕು ಎಂಬ ಬಗ್ಗೆ ನಾಮಿನೇಶನ್ ನಡೆದಿದೆ.

  ಬಿಗ್‌ಬಾಸ್ 16: ಸುಲಭವಿರಲ್ಲ ಟಾಸ್ಕ್‌ಗಳು, ಸ್ಪರ್ಧಿಗಳು ಯಾರ್ಯಾರು?ಬಿಗ್‌ಬಾಸ್ 16: ಸುಲಭವಿರಲ್ಲ ಟಾಸ್ಕ್‌ಗಳು, ಸ್ಪರ್ಧಿಗಳು ಯಾರ್ಯಾರು?

  ಮೊದಲ ವಾರ ಬಿಗ್‌ಬಾಸ್ ಮನೆಯಿಂದ ಹೊರಗೆ ಹೋದ ಐಶ್ವರ್ಯಾ ಪಿಸ್ಸೆ ಮುಂದಿನ ವಾರಕ್ಕೆ ಆರ್ಯವರ್ಧನ್ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ಹಾಗಾಗಿ ಅವರನ್ನು ಹಾಗೂ ಇಮ್ಯುನಿಟಿ ಪಡೆದಿರುವ ವಿನೋದ್ ಗೊಬ್ರಗಾಲ ಅವರನ್ನು ಬಿಟ್ಟು ಉಳಿದವರನ್ನು ನಾಮಿನೇಟ್ ಮಾಡುವಂತೆ ಬಿಗ್‌ಬಾಸ್ ಸೂಚಿಸಿದ್ದರು.

  ಬಿಗ್‌ಬಾಸ್ ಸೂಚನೆಯಂತೆ ಒಬ್ಬೊಬ್ಬರಾಗಿ ಕನ್‌ಫೆಶನ್ ರೂಂಗೆ ಹೋಗಿ ನಾಮಿನೇಟ್ ಮಾಡಿದರು. ಹೀಗೆ ನಾಮಿನೇಟ್ ಮಾಡಿದ ಹೆಚ್ಚು ಜನ ತೆಗೆದುಕೊಂಡಿದ್ದು ದರ್ಶ್ ಚಂದಪ್ಪ ಹೆಸರು. ಅದಾದ ಬಳಿಕ ಹೆಚ್ಚು ಜನ ಹೇಳಿದ ಹೆಸರು ನವಾಜ್. ವೈರಲ್ ಬಾಯ್ ಕೆಲಸ ಮಾಡುತ್ತಿಲ್ಲ, ಸರಿಯಾಗಿ ಎಲ್ಲರೊಟ್ಟಿಗೆ ಬೆರೆಯುತ್ತಿಲ್ಲ ಎಂಬುದು ಮುಖ್ಯ ಕಾರಣವಾಗಿ ನೀಡಿದರು.

  ಬಳಿಕ ಮಯೂರಿ ಹೆಸರು ಹೆಚ್ಚು ಜನ ತೆಗೆದುಕೊಂಡರು. ಅವರು ಹೆಚ್ಚು ಬೆರೆಯುತ್ತಿಲ್ಲ ಎಂದು ಹಲವರು ದೂರಿದರು. ನಂತರ ಕೆಲವರು ಅಮೂಲ್ಯಾ, ಪ್ರಶಾಂತ್ ಸಂಬರ್ಗಿ, ದೀಪಿಕಾ ದಾಸ್ ಹಾಗೂ ನೇಹಾ ಗೌಡ ಹೆಸರು ತೆಗೆದುಕೊಂಡರು. ಆ ಬಳಿಕ ಕ್ಯಾಪ್ಟನ್ ವಿನೋದ್ ಅವರು ನೇರವಾಗಿ ಒಬ್ಬರನ್ನು ನಾಮಿನೇಟ್ ಮಾಡುವಂತೆ ಹೇಳಿದರು. ಕ್ಯಾಪ್ಟನ್ ವಿನೋದ್, ರೂಪೇಶ್ ರಾಜಣ್ಣ ಹೆಸರು ಹೇಳಿದರು.

  ಅಲ್ಲಿಗೆ ಈ ವಾರ ಮನೆಯಿಂದ ಹೊರಗೆ ಹೋಗಲು, ದರ್ಶ್ ಚಂದಪ್ಪ, ನವಾಜ್, ಮಯೂರಿ, ಅಮೂಲ್ಯಾ, ದೀಪಿಕಾ, ಪ್ರಶಾಂತ್, ನೇಹಾ ಗೌಡ, ಆರ್ಯವರ್ಧನ್ ಹಾಗೂ ರೂಪೇಶ್ ರಾಜಣ್ಣ ಅವರುಗಳು ನಾಮಿನೇಟ್ ಆದರು. ಇಷ್ಟು ಜನರಲ್ಲಿ ಮನೆಯಿಂದ ಯಾರು ಹೊರಗೆ ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

  English summary
  Bigg Boss Kannada 9 2nd Week Nominations: Darsh Chandappa, Nawaz, Deepika Das, Mayuri, Prashant Sambargi many others has been nominated.
  Tuesday, October 4, 2022, 10:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X