ದಿವ್ಯಾ-ಸಂಬರ್ಗಿ ಮನಸ್ತಾಪದಿಂದ ನನಗೆ ಅವಕಾಶ ಸಿಗಲಿಲ್ಲ: ಐಶ್ವರ್ಯಾ ಪಿಸೆ
ಬಿಗ್ ಬಾಸ್ ಸೀಸನ್9 ರ ಮೊದಲ ವಾರ ಮುಗಿದು ಎರಡನೇ ವಾರ ಆರಂಭವಾಗಿದೆ. ಈ ಬಾರಿ ಮೊದಲನೇ ವಾರ ಎಲಿಮಿನೇಷನ್ ನಡೆದಿದ್ದು, ಬೈಕರ್ ಐಶ್ವರ್ಯಾ ಪಿಸೆ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಬೈಕ್ ರೇಸ್‌ನಲ್ಲಿ ನ್ಯಾಷನಲ್ ಚಾಂಪಿಯನ್ ಆಗಿರುವ ಐಶ್ವರ್ಯಾ ಪಿಸೆ ಬಿಗ್ ಬಾಸ್ ಮನೆಯಿಂದ ಬಹುಬೇಗ ಹೊರಬಂದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯಾ ಪಿಸೆ ಬೇರೆ ಸ್ಫರ್ಧಿಗಳಿಗೆ ಕಠಿಣ ಸ್ಫರ್ಧಿಯಾಗುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಐಶ್ವರ್ಯಾ ಪಿಸೆ ಮೊದಲ ವಾರವೇ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್‌ನಿಂದ ಹೊರಬಂದ ಬಳಿಕ ಈ ಬಗ್ಗೆ ಐಶ್ವರ್ಯಾ ಪಿಸೆ ಫಿಲ್ಮಿಬೀಟ್ ಕನ್ನಡದ ಜೊತೆ ಮಾತನಾಡಿದ್ದಾರೆ.
ತಮ್ಮ ಬಿಗ್ ಬಾಸ್ ಪಯಣದ ಬಗ್ಗೆ ಮಾತನಾಡಿದ ಐಶ್ವರ್ಯಾ ಪಿಸೆ, ಬಿಗ್ ಬಾಸ್ ಮನೆಯಲ್ಲಿ ಇತಂಹ ಕಷ್ಟದ ಸ್ಫರ್ಧೆ ಇರುತ್ತದೆ ಅಂತಹ ಗೊತ್ತಿರಲಿಲ್ಲ. ಖಂಡಿತವಾಗಿಯೂ ಇನ್ನೂ ಕೆಲ ವಾರಗಳು ಇರುತ್ತೇನೆ ಎಂದುಕೊಂಡಿದ್ದೆ. ಆದರೆ ಅಲ್ಲಿರುವ ಕಲಾವಿದರು ಹಾಗೂ ಅವರಿಗೆ ಇರುವ ಅಭಿಮಾನಿಗಳು ಮತ್ತು ಜನರ ಬೆಂಬಲ ಸಾಕಷ್ಟಿತ್ತು. ಯಾಕೆಂದರೆ ಅವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿತ್ತು. ಆದರೆ ನಾನು ಯಾರು ಎನ್ನುವುದು ಜನರಿಗೆ ಅಷ್ಟು ಗೊತ್ತಿರಲಿಲ್ಲ. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಗೊತ್ತಾಗಿದೆ. ಈಗ ಎಲ್ಲ ನೀವು ಇರಬೇಕಿತ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ ಎಂದು ಬಿಗ್ ಬಾಸ್ ಮನೆಯಿಂದ ಹೊರಬಂದ ಬೇಸರ ವ್ಯಕ್ತಪಡಿಸಿಕೊಂಡರು.

ಬಿಗ್ ಬಾಸ್ ಮನೆಯಲ್ಲಿ ನನ್ನ ಹೊರತು ಪಡಿಸಿ 17 ವಿಭಿನ್ನ ವ್ಯಕ್ತಿಗಳು, ವ್ಯಕ್ತಿತ್ವಗಳು ಇದ್ದರು. ಅವರನೆಲ್ಲಾ ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಎಲಿಮಿನೇಟ್ ಆದೆ. ಒಂದು ವಾರ ಸಮಯ ತುಂಬಾ ಕಡಿಮೆ ಅನಿಸಿತು. ಮೊದಲನೆ ವಾರದಲ್ಲಿ ನನಗೆ ಅಷ್ಟೊಂದು ಟಾಸ್ಕ್ ಆಡುವ ಅವಕಾಶ ಸಿಗಲಿಲ್ಲ. ಎರಡು ಟಾಸ್ಕ್ ಸಿಕ್ತು ನಮಗೆ ಅಷ್ಟೇ. ಪ್ರಶಾಂತ್ ಸಂಬರ್ಗಿ ಮತ್ತು ದಿವ್ಯಾ ಉರುಡುಗ ಹಳೆಯ ಸೀಸನ್ ಮನಸ್ತಾಪದಿಂದ ನಮಗೆ ಅವಕಾಶಗಳು ಕಡಿಮೆ ಸಿಕ್ತು ಎನ್ನುವ ಭಾವನೆ ನನಗಿದೆ. ಅದನ್ನು ಎಲ್ಲರೂ ನೋಡಿದರೂ ಕೂಡ. ಇನ್ನು ದಿವ್ಯಾಗೆ ಮೊದಲಿನಿಂದಲೂ ಹೆಚ್ಚು ಫ್ಯಾನ್ಸ್ ಇದ್ದರೂ ನಾನು ಅಷ್ಟಾಗಿ ಯಾರಿಗೂ ಗೊತ್ತಿರಲಿಲ್ಲ. ಅದು ನನಗೆ ತೊಂದರೆ ಆಯ್ತು ಅನಿಸುತ್ತದೆ ಎಂದರು.
ಬಿಗ್ ಬಾಸ್ ಮನೆಯಲ್ಲಿ ಅನುಭವ ಚೆನ್ನಾಗಿರುತ್ತದೆ ಅಂತಾ ಅರವಿಂದ್ ಕೆ.ಪಿ ಅವರು ಮೊದಲೇ ಹೇಳಿದ್ದರು. ನಾನು ಬಹುಶಃ ಅವರು ಕೂಡ ಬರಬಹುದು ಎಂದುಕೊಂಡಿದ್ದೆ. ಆದರೆ ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಉರುಡುಗ ನೋಡಿ ಖುಷಿ ಆಯ್ತು. ಹೊಸ ಜಾಗದಲ್ಲಿ ನಮಗೆ ಪರಿಚಯ ಇರುವವನ್ನು ಕಂಡರೆ ಸಾಮಾನ್ಯವಾಗಿ ಖುಷಿ ಆಗುತ್ತದೆ. ದಿವ್ಯಾ ಕೂಡ ನನ್ನ ಚೆನ್ನಾಗಿ ಬರಮಾಡಿಕೊಂಡು ಎಲ್ಲರಿಗೂ ಪರಿಚಯ ಮಾಡಿಕೊಟ್ಟರು. ಹೀಗಾಗಿ ಅವರ ಜೊತೆ ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿತ್ತು ಎಂದರು.
ಇನ್ನು ಈ ಹಿಂದಿನ ಬಿಗ್ ಬಾಸ್ ಸೀಸನ್‌ಗಳಲ್ಲಿ ಅರವಿಂದ್ ಕೆ.ಪಿ ಅವರಿದ್ದ ಕಾರಣ ಕಳೆದ ಸೀಸನ್‌ನ ಕೆಲವು ಎಪಿಸೋಡ್‌ಗಳನ್ನು ನೋಡಿದ್ದೆ. ಬಿಗ್ ಬಾಸ್ ಮನೆಯಲ್ಲಿ ಹೀಗೆ ಇರುತ್ತದೆ ಎಂದು ಅಂದುಕೊಂಡು ಹೋಗುವುದು ತಪ್ಪಾಗುತ್ತದೆ. ಯಾಕೆಂದರೆ ಪ್ರತಿ ಸೀಸನ್‌ನಲ್ಲೂ ಬೇರೆ ಬೇರೆ ರೀತಿಯಾಗಿರುತ್ತದೆ. ಪ್ರತಿ ಸೀಸನ್ ಕೂಡ ಹೊಸ ಅಧ್ಯಾಯ ಆಗಿರುತ್ತದೆ. ನನಗೆ ಟಾಸ್ಕ್‌ನಲ್ಲಿ ಉತ್ತಮವಾಗಿ ಮಾಡುವ ನಿರೀಕ್ಷೆ ಇತ್ತು. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ ಎಂದರು.


Click it and Unblock the Notifications











