For Quick Alerts
  ALLOW NOTIFICATIONS  
  For Daily Alerts

  ಅಪ್ಪ-ಅಮ್ಮ ದೂರಾದ್ರು..ಸೆಕೆಂಡ್‌ ಪಿಯುಸಿ ಫೈಲ್‌ ಆದೆ: ಐಶ್ವರ್ಯಾ ಪಿಸೆ ಜೀವನ ಕತೆ

  |

  ಬಿಗ್‌ ಬಾಸ್‌ ಸೀಸನ್‌ 9 ರ ಮೊದಲ ವಾರ ಮುಗಿದು ಎರಡನೇ ವಾರ ಆರಂಭವಾಗಿದೆ. ಈ ಬಾರಿ ಮೊದಲನೇ ವಾರವೆ ಎಲಿಮಿನೇಷನ್‌ ನಡೆದಿದ್ದು, ಬೈಕರ್‌ ಐಶ್ವರ್ಯಾ ಪಿಸೆ ಬಿಗ್‌ ಬಾಸ್‌ ಮನೆಯಿಂದ ಹೊರಗೆ ಬಂದಿದ್ದಾರೆ. ಮೊದಲ ವಾರದಲ್ಲಿ ಬಿಗ್‌ ಬಾಸ್‌ ಮನೆ ಸ್ಫರ್ಧಿಗಳ ಮೆಚ್ಚುಗೆ ಪಡೆದಿದ್ದರು.

  ಈ ಬಾರಿಯ ಬಿಗ್‌ ಬಾಸ್‌ನಲ್ಲಿ ಒಂದೊಂದು ಸ್ಫರ್ಧಿಯೂ ಒಂದೊಂದು ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಈ ಪೈಕಿ ಬೈಕರ್‌ ಐಶ್ವರ್ಯಾ ಪಿಸೆ ಎಲ್ಲರ ಗಮನ ಸೆಳೆದಿದ್ದರು. ಕಳೆದ ಸೀಸನ್‌ನಲ್ಲಿ ಅರವಿಂದ್ ಕೆ.ಪಿ ಬೈಕರ್‌ ಆಗಿದ್ದು, ಫೈನಲಿಸ್ಟ್‌ ಆಗಿದ್ದರು. ಹೀಗಾಗಿ ಈ ಬಾರಿ ಐಶ್ವರ್ಯಾ ಅವರ ಮೇಲೂ ಪ್ರೇಕ್ಷಕರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ದುರಾದೃಷ್ಟವಶಾತ್ ಮೊದಲ ವಾರವೇ ಹೊರಬಂದಿದ್ದಾರೆ.

  BB9: ಎರಡನೇ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಸದಸ್ಯರು ಇವರೇBB9: ಎರಡನೇ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಸದಸ್ಯರು ಇವರೇ

  ಬಿಗ್‌ ಬಾಸ್‌ ಹೊರತು ಪಡಿಸಿದರೆ ಐಶ್ವರ್ಯಾ ಪಿಸೆ ಸಾಧನೆ ಕನ್ನಡಿಗರು ಹೆಮ್ಮೆಪಡುವಂತದ್ದು, ತಮ್ಮ 18ನೇ ವಯಸ್ಸಿಗೆ ಬೈಕ್‌ ರೈಸಿಂಗ್‌ ಆಯ್ಕೆ ಮಾಡಿಕೊಂಡ ಐಶ್ವರ್ಯಾ, 9 ವರ್ಷಗಳ ಸತತ ಪರಿಶ್ರಮದಿಂದ ಇಂದು ವಿಶ್ವ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಹಿಳಾ ಮೋಟಾರ್ ಸೈಕಲ್ ರೇಸರ್ ಆಗಿದ್ದಾರೆ. ಬಿಗ್‌ ಬಾಸ್‌ನಿಂದ ಹೊರಬಂದ ಐಶ್ವರ್ಯಾ ಪಿಸೆ ತಮ್ಮ ಬೈಕ್‌ ರೇಸ್‌ ಪಯಣದ ಬಗ್ಗೆ ಫಿಲ್ಮಿಬೀಟ್‌ ಕನ್ನಡದ ಜೊತೆ ಮಾತನಾಡಿದ್ದಾರೆ.

  ನನ್ನ ಅಪ್ಪ-ಅಮ್ಮ ದೂರವಾದರು

  ನನ್ನ ಅಪ್ಪ-ಅಮ್ಮ ದೂರವಾದರು

  ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ಐಶ್ವರ್ಯಾ ಬೈಕ್‌ ರೇಸರ್‌ ಆಗಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಐಶ್ವರ್ಯಾ, ನಾನು ಸೆಕೆಂಡ್‌ ಪಿಯುಸಿ ಫೇಲ್‌ ಆದೆ, ನನ್ನ ಅಪ್ಪ-ಅಮ್ಮ ದೂರಾ ಆದ್ರು, ಅದರಿಂದ ನಾನು ಚಿಕ್ಕ ವಯಸ್ಸಿನಲ್ಲೇ ದುಡಿಯೋಕೆ ಶುರು ಮಾಡಿದೆ. ನನಗೆ 16-17 ವರ್ಷ ಇರಬೇಕಾದರೆ ಕೆಲಸ ಮಾಡಿಕೊಂಡು ಅದರಿಂದ ಬಂದ ಹಣವನ್ನು ಮನೆಗೆ ಕೊಡುತ್ತಿದ್ದೆ.ಅದರಿಂದ ಮನೆ ನಡಿಸೋಕೆ ಸಹಾಯ ಮಾಡುತ್ತಿದ್ದೆ ಎಂದರು.

  ಬೈಕ್‌ ಅಂದ್ರೆ ನನ್ನ ಪ್ರಕಾರ ಸ್ವಾತಂತ್ರ್ಯದ ಸಂಕೇತ

  ಬೈಕ್‌ ಅಂದ್ರೆ ನನ್ನ ಪ್ರಕಾರ ಸ್ವಾತಂತ್ರ್ಯದ ಸಂಕೇತ

  ವೀಕೆಂಡ್‌ನಲ್ಲಿ ನನ್ನ ಫ್ರೆಂಡ್‌ ಗಾಡಿ ತಗೊಂಡು ಪ್ರಾಕ್ಟೀಸ್‌ ಮಾಡೋಕೆ ಹೋಗುತ್ತಿದೆ. ಆಗ ಒಂದು ಟಿವಿ ಶೋ ಕೂಡ ಮಾಡಿದ್ದೆ. ಆಗ ನನಗೆ ಬೈಕ್ ಜೊತೆ ಏನನ್ನಾದರೂ ಮಾಡಬೇಕು ಅನಿಸಿತು. ಬೈಕ್‌ ಅಂದ್ರೆ ನನ್ನ ಪ್ರಕಾರ ಸ್ವಾತಂತ್ರ್ಯದ ಸಂಕೇತ ಅದು. ಯಾಕೆಂದರೆ ನಮ್ಮ ಸಮಾಜ ನಮ್ಮ ಮೇಲೆ ಹೇರುವ ಯಾವ ನಿಬಂಧನೆಗಳು ಕೂಡ ಅಲ್ಲಿರುವುದಿಲ್ಲ. ಅಲ್ಲಿ ಕೇವಲ, ನಾನು, ನನ್ನ ಆಲೋಚನೆ ನನ್ನ ಬೈಕ್‌ ಹಾಗೂ ಮುಂದೆ ರಸ್ತೆ ಮಾತ್ರ ನನ್ನ ಜೊತೆಗಿರುತ್ತದೆ ಎಂದರು.

  ಯಾರೋ ನನ್ನ ಎಂಟ್ರಿ ಫೀಸ್‌ ಕಟ್ಟುತ್ತಿದ್ದರು

  ಯಾರೋ ನನ್ನ ಎಂಟ್ರಿ ಫೀಸ್‌ ಕಟ್ಟುತ್ತಿದ್ದರು

  ನನ್ನ ಜೀವನದಲ್ಲಿ ನನಗೆ ಕಷ್ಟ ಎನಿಸಿದ ಸಮಯ ಅಂದ್ರೆ ನಾನು ಪಿಯುಸಿ ಫೈಲ್‌ ಆಗಿದ್ದು, ಆ ಸಮಯದಲ್ಲಿ ಬೈಕ್‌ ನನ್ನ ಜೀವನದ ಭರವಸೆ ತರ ಬಂತು. ಆಗ ನಿಧಾನಕ್ಕೆ ರೇಸ್‌ ಶುರು ಮಾಡದೆ. ಆದ್ರೆ ಆಗಲೂ ನನಗೆ ರೇಸ್‌ಗೆ ಹೋಗುವಂತಹ ಯಾವ ಅನುಕೂಲನೂ ಇರಲಿಲ್ಲ. ಯಾರ ಬಳಿಯೊ ಬೈಕ್‌, ಯಾರ ಬಳಿಯೊ ಹೆಲ್ಮೆಟ್‌ ತೆಗೆದುಕೊಳ್ಳುತ್ತಿದ್ದೆ. ಮತ್ಯಾರೋ ನನ್ನ ಎಂಟ್ರೀ ಪೀಸ್‌ ಕಟ್ಟುತ್ತಿದ್ದರು. ಇಂತಹ ಸಂದರ್ಭದಲ್ಲಿ ನಾನು ಬೈಕ್‌ ಓಡಿಸೋಕೆ ಶುರು ಮಾಡಿದೆ ಎಂದು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡರು.

  ಬೈಕ್‌ ರ್ಯಾಲಿ ವೃತ್ತಿ ಕೂಡ ಆಯ್ತು

  ಬೈಕ್‌ ರ್ಯಾಲಿ ವೃತ್ತಿ ಕೂಡ ಆಯ್ತು

  ಬಳಿಕ ನನ್ನ ರೇಸಿಂಗ್‌ ಪಯಣ ಶುರು ಆಯ್ತು. ಸೋಲು ಗೆಲುವು ಎಲ್ಲವೂ ಇರುತಿತ್ತು. ಹೀಗೆ ಮುಂದುವರಿಯುತ್ತಾ ರೋಡ್‌ ರೇಸಿಂಗ್‌ ಮತ್ತು ರ್ಯಾಲಿ ಎರಡರಲ್ಲೂ ನಾನು ನ್ಯಾಶನಲ್‌ ಚಾಪಿಯನ್‌ ಶಿಪ್‌ ಗೆದ್ದೆ. ಇದಾದ ಮೇಲೆ ಟಿವಿಎಸ್‌ ಟೀಂ ಸೇರಿಕೊಂಡೆ. ಆಗ ನನಗೆ ಬೈಕ್‌ ರ್ಯಾಲಿ ವೃತ್ತಿ ಕೂಡ ಆಯ್ತು. ಅಲ್ಲಿ ನನಗೆ ಎಲ್ಲರೂ ಎಲ್ಲದಕ್ಕೂ ಪ್ರೋತ್ಸಾಹ ಮಾಡುತ್ತಿದ್ದರು. ಹೀಗೆ ನಾನು ನನ್ನ ರೇಸಿಂಗ್‌ ಪ್ರಪಂಚಕ್ಕೆ ಪ್ರವೇಶ ಪಡೆದೆ ಎಂದು ತಮ್ಮ ಬೈಕ್‌ ರೇಸ್‌ ಪಯಣದ ಬಗ್ಗೆ ಐಶ್ವರ್ಯಾ ಪಿಸೆ ಫಿಲ್ಮಿಬೀಟ್‌ ಕನ್ನಡದ ಜೊತೆ ಹೇಳಿಕೊಂಡಿದ್ದಾರೆ.

  English summary
  Bigg Boss Kannada 9 Contestant Aishwarya Pisse open up on her struggle days with filmibeat.
  Tuesday, October 4, 2022, 18:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X