Bigg Boss: ಕಿಚ್ಚನ ಪಂಚಾಯಿತಿಯಲ್ಲಿ ದೂರುಗಳ ಸರಮಾಲೆ: ಮನೆಯಿಂದ ಹೊರಗೆ ಹೋಗೋದು ಯಾರು..?

By Shruthi Harishgowda

ಇನ್ನೊಂದು ವಾರದ ಕೊನೆಗೆ ಬಿಗ್ ಬಾಸ್ ಕಾರ್ಯಕ್ರಮ ಬಂದಿದೆ. ಸೀಸನ್ ಶುರುವಾದಾಗಿನಿಂದಲೂ ಕೂಡ ಬಿಗ್ ಬಾಸ್ ಮನೆ ಒಂದಲ್ಲ ಒಂದು ಗದ್ದಲ, ಗಲಾಟೆಯಿಂದ ಕೂಡಿದೆ. ಕಾರ್ತಿಕ್, ಸಂಗೀತಾ ಹಾಗೂ ವಿನಯ್ ಈ ಮೂವರು ಮೊದಲಿನಿಂದಲೂ ಕೂಡ ಒಬ್ಬರಿಗೆ ಒಬ್ಬರು ಪರಿಚಿತರೆ. ಇಲ್ಲಿ ಕೆಲವರು ವೈಯಕ್ತಿಕವಾಗಿ ಆಟ ಆಡುತ್ತಿದ್ದಾರೆ ಎಂದೇ ಹೇಳಬಹುದು.

ಈ ವಾರ ಗಂಧರ್ವರು ಹಾಗೂ ರಾಕ್ಷಸರು ಟಾಸ್ಕ್‌ನಲ್ಲಿ ವಿನಯ್ ಹಾಗೂ ಕಾರ್ತಿಕ್ ನಡುವೆ ವೈಯಕ್ತಿಕ ಟಾರ್ಗೆಟ್ ನಡೆಯಿತು. ಸಂಗೀತಾ ಹಾಗೂ ವಿನಯ್ ನಡುವೆಯೂ ಸಹ ವೈಯಕ್ತಿಕವಾಗಿ ಆಟ ನಡೆದಿದೆ. ವಿನಯ್ ಅಂತೂ ಕಾರ್ತಿಕ್ ಹಾಗೂ ಸಂಗೀತಾಳನ್ನು ನಾನಂತೂ ಸುಮ್ಮನೇ ಬಿಡುವುದಿಲ್ಲ ಎಂದೂ ಹೇಳಿದ್ದಾರೆ. ಈ ವಾರ ಕಿಚ್ಚ ಸುದೀಪ್ ಪಂಚಾಯಿತಿ ನಡೆಸಲಿದ್ದು ಯಾರಿಗೆ ಕಿಚ್ಚನ ಚಪ್ಪಾಳೆ ಸಿಗಲಿದೆ ಹಾಗೂ ಯಾರಿಗೆ ಸುದೀಪ್ ನ್ಯಾಯ ತೀರ್ಮಾನ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

bigg boss kannada: 9 Contestants in danger zone this week, see list

ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆ ಮಾಡುವ ವಿಷಯಗಳಿಗೆ ಏನು ಕೊರತೆ ಇಲ್ಲ. ಯಾಕೆಂದರೆ ಈ ವಾರ ಮನೆಯಲ್ಲಿ ಸ್ಪರ್ಧಿಗಳು ಅಷ್ಟು ರಂಪಾಟ ಮಾಡಿಕೊಂಡಿದ್ದಾರೆ. ವೈಯಕ್ತಿಕವಾಗಿ ತೇಜೋವಧೆ ಮಾಡಿಕೊಂಡಿದ್ದಾರೆ. ಪರಸ್ಪರ ಕೀಳು ಮಟ್ಟಕ್ಕೆ ಇಳಿದು ವಾಗ್ವಾದ ನಡೆಸಿದ್ದಾರೆ. ಇದೆಲ್ಲವನ್ನು ಕೂಡ ಕಿಚ್ಚ ಸುದೀಪ್ ಪಂಚಾಯಿತಿಯಲ್ಲಿ ಚರ್ಚೆ ನಡೆಸಲಿದ್ದಾರೆ.

ಕಿಚ್ಚನ ಪಂಚಾಯತಿ ಭಾರೀ ಚರ್ಚೆ!

ಕಾರ್ತಿಕ್, ವಿನಯ್ ಹಾಗೂ ಸಂಗೀತಾ ಈ ಮೂವರ ನಡುವೆಯೂ ಕೂಡ ಒಂದಲ್ಲ ಒಂದು ವಿಚಾರಕ್ಕೆ ಕಿರಿಕ್ ಆಗಿದೆ. ಇದು ಕೂಡ ಕಿಚ್ಚನ ಪಂಚಾಯಿತಿಯಲ್ಲಿ ಬಹಳಷ್ಟು ಚರ್ಚೆಗೆ ಬರಲಿದೆ. ಸ್ನೇಹಿತ್ ಸರಿಯಾದ ರೀತಿಯಲ್ಲಿ ಕ್ಯಾಪ್ಟನ್‌ ಜವಾಬ್ದಾರಿಯನ್ನು ನಿಭಾಯಿಸಿದರೆ ಇಲ್ಲವೇ ಎಂಬುದು ಕೂಡ ಕಿಚ್ಚ ಸುದೀಪ್ ಹೇಳಲಿದ್ದಾರೆ. ಇದೆಲ್ಲವನ್ನು ಹೊರತುಪಡಿಸಿದರೆ ವರ್ತೂರು ಸಂತೋಷ್ ಈಗ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಯ್ಕೆಯಾಗಿದ್ದಾರೆ. ಉತ್ತಮ ಹಾಗೂ ಕಳಪೆ ವಿಚಾರಕ್ಕೂ ಕೂಡ ಈ ಬಾರಿ ಚರ್ಚೆ ನಡೆಯಬಹುದು. ಇನ್ನೂ ಈ ಬಾರಿ ಕಳಪೆ ಪಟ್ಟವನ್ನು ಕಾರ್ತಿಕ್ ಹೊತ್ತುಕೊಂಡಿದ್ದು ಉತ್ತಮರಾಗಿ ಅವಿನಾಶ್ ಶೆಟ್ಟಿ, ಪವಿ ಪೂವಪ್ಪ ಇಬ್ಬರು ಹಂಚಿಕೊಂಡಿದ್ದಾರೆ.

bigg boss kannada: 9 Contestants in danger zone this week, see list

ಮನೆಯಿಂದ ಹೊರ ಹೋಗೋರು ಯಾರು..?

ಬಿಗ್ ಬಾಸ್ ಮನೆಯಲ್ಲಿರುವ 13 ಮಂದಿ ಪೈಕಿ 9 ಸದಸ್ಯರ ತಲೆಯ ಮೇಲೆ ನಾಮಿನೇಷನ್ ಕತ್ತಿ ತೂಗುತ್ತಿದೆ. ವಿನಯ್, ವರ್ತೂರು ಸಂತೋಷ್, ತುಕಾಲಿ ಸಂತೋಷ್ ಹಾಗೂ ನಮ್ರತಾ ಈ ನಾಲ್ಕು ಮಂದಿ ಮಾತ್ರ ಸೇವ್ ಆಗಿದ್ದಾರೆ. ಇನ್ನುಳಿದಿರುವ ಕಾರ್ತಿಕ್, ಸಂಗೀತಾ, ಪ್ರತಾಪ್, ಅವಿನಾಶ್ ಶೆಟ್ಟಿ, ಪವಿ, ತನಿಷಾ, ಸ್ನೇಹಿತ್, ಮೈಕಲ್, ಸಿರಿ ಇಷ್ಟು ಮಂದಿ ನ್ಯಾಮಿನೇಟ್ ಆಗಿದ್ದು ಈ ವಾರ ಮನೆಯಿಂದ ಹೊರಗೆ ಹೋಗೋರು ಯಾರು? ಎಂಬ ಕುತೂಹಲ ಎಲ್ಲರನ್ನೂ ‌ಕಾಡುತ್ತಿದೆ. ಕಳೆದ ವಾರ ಹೊಸಬರು ಮನೆಗೆ ವೈಲ್ಡ್‌ಕಾರ್ಟ್ ಎಂಟ್ರಿ ಕೊಟ್ಟಿದ್ದಕ್ಕೆ ಕಿಚ್ಚ ಸುದೀಪ್ ತಮ್ಮ ಸೂಪರ್ ಪವರ್ ಬಳಸಿ ಎಲಿಮಿನೇಷನ್ ರದ್ದು ಮಾಡಿದ್ದರು.

ಈ ಬಾರಿ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗಲಿದೆ?

ಈ ವಾರ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಬಂದ ಅವಿನಾಶ್ ಹಾಗೂ ಪವಿ ಇಬ್ಬರು ಕೂಡ ನಾಮಿನೇಟ್ ಆಗಿದ್ದು, ಮನೆಯಲ್ಲಿರುವ ಸದಸ್ಯರಲ್ಲಿ ಹೊರಗೆ ಹೋಗೋದು ಯಾರು ಎಂಬುದು ಕುತೂಹಲ ಮಾತ್ರ ಇನ್ನು ಇದೆ. ಯಾಕೆಂದರೆ ಇಲ್ಲಿ ವೀಕ್ಷಕರ ತೀರ್ಮಾನವೇ ಅಂತಿಮವಾಗಿದ್ದು ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಉಳಿಸಿಕೊಳ್ಳುತ್ತಾರಾ ನೋಡಬೇಕಿದೆ. ಕಳೆದ ವಾರ ನಮ್ರತಾ‌ಗೆ ಕಿಚ್ಚ ಸುದೀಪ್ ಚಪ್ಪಾಳೆ ಸಿಕ್ಕಿತ್ತು. ಆದರೆ ಈ ವಾರ ಯಾರಿಗೆ ಕಿಚ್ಚನ ಚಪ್ಪಾಳೆ ಸಿಗಲಿದೆ ಎಂಬುದೇ ಕುತೂಹಲವಾಗಿದೆ.

ವಿನಯ್- ಕಾರ್ತಿಕ್‌ಗೆ ಕಿಚ್ಚನ ಕ್ಲಾಸ್?

ಈ ಬಾರಿ ಟಾಸ್ಕ್‌ನಲ್ಲಿ ಅತಿ ಹೆಚ್ಚು ಹೈಲೈಟ್ ಆದವರು ಎಂದರೆ ಅದು ವಿನಯ್ ಹಾಗೂ ಕಾರ್ತಿಕ್. ಇವರಿಬ್ಬರಿಗೂ ಕೂಡ ಸುದೀಪ್ ಕ್ಲಾಸ್ ತೆಗೆದುಕೊಳ್ಳುವ ಅವಶ್ಯಕತೆ ಹೆಚ್ಚಾಗಿದೆ. ಈ ಹಿಂದೆ ಕೂಡ ವಿನಯ್ ಹಾಗೂ ಕಾರ್ತಿಕ್‌ಗೆ ಸುದೀಪ್ ವಾರ್ನಿಂಗ್ ಮಾಡಿದ್ದರು. ಆದರೆ ಕಾರ್ತಿಕ್ ವಿನಯ್ ಮೇಲೆ ಚಪ್ಪಲಿ ಎಸೆದರು ಎಂಬ ಆಪಾದನೆ ಕೂಡ ಮಾಡಿದ್ದಾರೆ. ಇಷ್ಟೇ ಅಲ್ಲದೆ ಅಮ್ಮ ಎಂದರು ಅಪ್ಪ ಎಂದರು ಎಂದು ಹೇಳಿದ್ದಾರೆ. ಇದೆಲ್ಲದಕ್ಕೂ ಕೂಡ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಸುದೀಪ್ ಕ್ಲಾರಿಟಿ ಕೊಡಬೇಕಾಗಿದೆ. ನಿಜವಾಗಿಯೂ ಚಪ್ಪಲಿ ಬೌನ್ಸ್‌ ಆಯ್ತಾ ಅಥವಾ ಕಾರ್ತಿಕ್ ಬೇಕು ಅಂತಲೇ ವಿನಯ್ ಮೇಲೆ ತೂರಿದರಾ? ಉತ್ತರ ಕೊಡಬೇಕಿದೆ.

ಸ್ನೇಹಿತ್ ಬಗ್ಗೆ ಕಿಚ್ಚ ಏನಂತಾರೆ?

ಸಂಗೀತಾ ಹಾಗೂ ತನಿಷಾ ಮೇಲೆ ವಿಜಯ್ ಜಗಳ ಮಾಡಿದ್ದಾರೆ. ಈ ಬಗ್ಗೆ ಸುದೀಪ್ ಏನು ಹೇಳ್ತಾರೆ?ನೋಡಬೇಕಾಗಿದೆ. ಸ್ನೇಹಿತ್ ತಮ್ಮ ಕ್ಯಾಪ್ಟನ್ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿಲ್ಲ ಎಂಬ ಮಾತುಗಳು ಕೂಡ ಕೇಳಿ ಬಂದಿವೆ. ಇದಕ್ಕೆ ಸುದೀಪ್ ಅವರ ನಿಲುವೇನು? ಎಂಬುದನ್ನು ನೋಡಲು ವೀಕ್ಷಕರು ಕಾಯುತ್ತಾ ಇದ್ದಾರೆ.

More from Filmibeat

English summary
Bigboss season 10: Here is the details about weekend with sudeep;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X