Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9 : ಆಟದ ನಿಯಮ ಪಾಲಿಸಲೇ ಇಲ್ಲ: ಅಮೂಲ್ಯಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್!
ಬಿಗ್ ಬಾಸ್ ಮನೆಯಲ್ಲಿ ವಾರಪೂರ್ತಿ ನಡೆದ ಘಟನಾವಳಿಗಳು ಕಿಚ್ಚನ ವೇದಿಕೆಯಲ್ಲಿ ಇಂದು ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಚರ್ಚೆಗೆ ಬರುತ್ತದೆ. ಈ ವಾರ ಅಮೂಲ್ಯ ಅವರ ಆರ್ಭಟ ಜೋರಾಗಿತ್ತು. ಹೀಗಾಗಿ ಕೆಲ ಕಾಲ ಕಿಚ್ಚ ಸುದೀಪ್ ಅದರ ಬಗ್ಗೆ ಚರ್ಚೆ ಮಾಡಿ, ಸರಿ-ತಪ್ಪುಗಳ ಬಗ್ಗೆ ವೇದಿಕೆಯಲ್ಲಿಯೇ ತಿಳಿಸಿದ್ದಾರೆ.
ಈ ವಾರ ರಾಜಣ್ಣ ಕ್ಯಾಪ್ಟನ್ ಆಗಿದ್ದರು. ಬಿಗ್ ಬಾಸ್ ಎರಡು ಟೀಂ ಮಾಡಿ, ವಿಭಿನ್ನ ಟಾಸ್ಕ್‌ಗಳನ್ನು ನೀಡಿದ್ದರು. ಈ ವೇಳೆ ಅಮೂಲ್ಯ ಸ್ವಲ್ಪ ಅಗ್ರೆಸ್ಸಿವ್ ಆಗಿಯೇ ಆಡಿದ್ದರು. ರಾಜಣ್ಣ ಹೇಳಿದ ಮಾತು ಕೂಡ ಕೇಳಿಸಿಕೊಳ್ಳುವುದಕ್ಕೆ ರೆಡಿ ಇರಲಿಲ್ಲ. ಹೀಗಾಗಿ ಮಾತಿಗಿಂತ ಜಗಳವೇ ಹೆಚ್ಚಾಗಿತ್ತು. ಇದು ಇಂದಿನ ವೇದಿಕೆಯಲ್ಲಿ ಚರ್ಚೆಯಾಗಿದೆ.

ಖಡಕ್ ಆಗಿಯೇ ಪ್ರಶ್ನಿಸಿದ ಕಿಚ್ಚ ಸುದೀಪ್
ಇವತ್ತು 'ವಾರದ ಕತೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಹಲವು ವಿಚಾರಗಳು ಚರ್ಚೆಯಾಗಿದೆ. ಕಿಚ್ಚ ಸುದೀಪ್ "ಕೆಂಪು ಬಣ್ಣದ ಟಾಸ್ಕ್ ನ ಬಿಗ್ ಬಾಸ್ ನೀಡಿತ್ತು. ಅದರ ನಿಯಮಗಳನ್ನು ನೀಡಿತ್ತು. ಆದರೆ ಅದನ್ನು ಓದಿದವರು ಸರಿ ಇಲ್ವೋ, ಆಡಿದವರು ಸರಿ ಇಲ್ವೋ. ದೀಪಿಕಾ ಅವರನ್ನು ತಳ್ಳಿ ಬೀಳಿಸುತ್ತಾರೆ. ನೀವೂ ಬಹಳ ಚೆನ್ನಾಗಿ ಹೇಳ್ತೀರಿ. ನಾನು ಕಂಟೆಸ್ಟೆಂಟ್ ಮಾತ್ರ ಅಲ್ಲ ಅಮೂಲ್ಯ ಅಂತ. ತಪ್ಪಿಗೆ ಇನ್ನಷ್ಟು ತಪ್ಪುಗಳು ಆ್ಯಡ್ ಆಗ್ತಾ ಹೋದ್ರೆ ಸರಿನೆ ಆಗಲ್ಲ ಯಾವತ್ತು" ಎಂದು ಸುದೀಪ್ ವೇದಿಕೆಯಲ್ಲಿ ಹೇಳಿದ್ದಾರೆ.

ಸಮರ್ಥನೆ ಮಾಡಿಕೊಂಡ ಅಮೂಲ್ಯ
ಬಣ್ಣ ಬಳಿಯುವ ಆಟದಲ್ಲಿ ಬಣ್ಣವನ್ನು ಕೈನಿಂದ ತೆಗೆದುಕೊಂಡು ಬಳಿಯಬೇಕಿತ್ತು. ಆದರೆ ಅವತ್ತು ದೀಪಿಕಾ ಮತ್ತು ಅಮೂಲ್ಯ ಆಡಿದ ಆಟವೇ ಬೇರೆ ರೀತಿಯಾಗಿತ್ತು. ಇಬ್ಬರು ಬೌಲ್‌ನಲ್ಲಿರುವ ಬಣ್ಣವನ್ನೇ ತೆಗೆದುಕೊಂಡು ಎರಚಾಡಿದ್ದರು. ಮೊದಲಿಗೆ ಅಮೂಲ್ಯ ಆ ತಪ್ಪು ಮಾಡಿದ್ದರು. ಬಳಿಕ ದೀಪಿಕಾ ಕೂಡ ಅದೇ ಹಾದಿ ತುಳಿದರು. ಇದು ಕಿಚ್ಚನ ವೇದಿಕೆಯಲ್ಲಿ ತಪ್ಪಿನ ಚರ್ಚೆಗಳಾಯ್ತು. ಇದಕ್ಕೆ ಉತ್ತರಿಸಿದ ಅಮೂಲ್ಯ "ಗೇಮ್ ನಲ್ಲಿ ಎರಚುವುದು ಇಲ್ಲ ಅಂತ ಇದೆ ತಾನೆ. ನೀವೂ ಕೈನಲ್ಲಿ ಎರಚುವುದಾದರೆ ನಾನು ಬೌಲ್‌ನಲ್ಲಿ ಎರಚುತ್ತೀನಿ ಅಂತ ಎರಚಿದೆ" ಎಂದರು

ಸ್ಪಷ್ಟನೆ ಕೊಟ್ಟ ದೀಪಿಕಾ
ಅವತ್ತು ಬಣ್ಣ ಎರಚಾಟದ ಆಟದಲ್ಲಿ ಇಬ್ಬರು ಕೂಡ ತಪ್ಪು ಮಾಡಿದ್ದರು. ಮೊದಲು ಅಮೂಲ್ಯ ಶುರು ಮಾಡಿಕೊಂಡರೆ ಬಳಿಕ ದೀಪಿಕಾ ಕೂಡ ಅದನ್ನು ಎರಚಿದ್ದರು. ಈಗ ಕಿಚ್ಚನ ಕಟಕಟೆಯಲ್ಲಿ ಈ ಬಗ್ಗೆ ಚರ್ಚೆಯಾದಾಗ ದೀಪಿಕಾ ದಾಸ್ ಕೂಡ ಉತ್ತರ ಕೊಟ್ಟಿದ್ದಾರೆ. "ಅವರಿಗೆ ಗೊತ್ತು ಅವರು ನನ್ನನ್ನು ತಳ್ಳುತ್ತಿದ್ದಾರೆ ಅಂತ. ಆದರೂ ತಳ್ಳಿದರು" ಎಂದು ಅಮೂಲ್ಯರನ್ನು ದೂರಿದ್ದಾರೆ.

ಆಟದಲ್ಲಿ ಆಗಿದ್ದೇನು..?
ಎರಡು ಟೀಂನಿಂದ ಒಬ್ಬಿಬ್ಬರು ಕ್ಯಾಪ್ಟನ್ ಆಗಿದ್ದರು. ಅದರಲ್ಲಿ ಆಟ ಆಡಲು ಹೋದ ಅಮೂಲ್ಯ ಕೂಡ ಒಬ್ಬ ಕ್ಯಾಪ್ಟನ್. ನಿಯಮಗಳನ್ನು ಅವರು ಕೂಡ ಸರಿಯಾಗಿಯೇ ಓದಿದ್ದರು. ಆದರೂ ಆ ನಿಯಮಗಳನ್ನು ಅಮೂಲ್ಯ ಪಾಲನೇ ಮಾಡಲೇ ಇಲ್ಲ. ಮೊದಲು ಬಣ್ಣ ಎರಚಿದರು. ಆದರೆ ಆಟ ಮುಗಿದ ಮೇಲೆ ಮನೆಯ ಕ್ಯಾಪ್ಟನ್ ಆದ ರಾಜಣ್ಣ ಎಷ್ಟೇ ಬುದ್ದಿ ಹೇಳುವುದಕ್ಕೆ ಹೋದರು ಕೂಡ ಅಮೂಲ್ಯ ಕೇಳುವ ತಾಳ್ಮೆ ವಹಿಸಲೇ ಇಲ್ಲ. ಹೀಗಾಗಿ ಅಲ್ಲಿ ದೊಡ್ಡ ಗಲಾಟೆಯೇ ನಡೆದುಹೋಯ್ತು.