Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9:ರಾಕೇಶ್ – ಅಮೂಲ್ಯ ಅದೇನು ಮಾತಾಡ್ತಾರೆ..? ಆರ್ಯವರ್ಧನ್ ತಲೆಯಲ್ಲಿ ಹುಳ ಓಡಾಡ್ತಿದೆ!
ರಾಕೇಶ್ ಅಡಿಗ ಬಿಗ್ ಬಾಸ್ ಓಟಿಟಿಯಿಂದ ಬಿಗ್ ಬಾಸ್ ಟಿವಿ ಸೀಸನ್‌ಗೆ ಎಂಟ್ರಿ ಪಡೆದಿದ್ದಾರೆ. ಕೊನೆಯಲ್ಲಿ ರಾಕೇಶ್ ಅವರೇ ಗೆಲ್ಲುತ್ತಾರೆ ಎಂಬ ಮಾತುಗಳು ಔಟ್ ಆದ ಮನೆ ಸದಸ್ಯರಿಂದಾನೇ ಬರುತ್ತಿದೆ. ಮನೆಯೊಳಗೂ ಎಲ್ಲರೊಟ್ಟಿಗೂ ತಾಳ್ಮೆಯಿಂದಾನೇ ನಡೆದುಕೊಳ್ಳುತ್ತಿದ್ದಾರೆ. ಆಟ ಆಡುವ ವಿಚಾರದಲ್ಲಿಯೂ ಅಷ್ಟೇ ಬೆಸ್ಟ್ ಪರ್ಫಾಮೆನ್ಸ್ ನೀಡುತ್ತಿದ್ದಾರೆ.
ಆದರೆ ಮನೆಯಲ್ಲಿ ಆರ್ಯವರ್ಧನ್ ಗುರೂಜಿಗೆ ರಾಕೇಶ್ ಹಾಗೂ ಅಮೂಲ್ಯ ಮೇಲೆ ಕಣ್ಣು ಬಿದ್ದಿದೆ. ಅದಕ್ಕೆ ಇಡೀ ಮನೆ ಮಾತಿನಿಂದ ಯುದ್ಧಕ್ಕೆ ತಿರುಗಿದೆ. ರಾಕೇಶ್ ಓಟಿಟಿಯಲ್ಲಿ ಸೋನು ಜೊತೆಗೆ ಕ್ಲೋಸ್ ಆಗಿದ್ದರು. ಟಿವಿ ಸೀಸನ್‌ನಲ್ಲಿ ಅಮೂಲ್ಯ ಜೊತೆಗೆ ಕ್ಲೋಸ್ ಆಗಿದ್ದಾರೆ. ಇದನ್ನು ಗುರೂಜಿಗೆ ಸಹಿಸಲು ಆಗುತ್ತಿಲ್ಲ.
BBK
9
:
ಬಿಗ್‌ಬಾಸ್
ಮನೆಯಿಂದ
ಪ್ರಶಾಂತ್
ಸಂಬರ್ಗಿ
ಹೊರಬೀಳಲು
ಕಾರಣಗಳೇನು?

ಆರ್ಯವರ್ಧನ್‌ಗೆ ಇರುವ ಅನುಮಾನವೇನು..?
ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಮತ್ತು ಅಮೂಲ್ಯ ತುಂಬಾನೇ ಆತ್ಮೀಯರಾಗಿ ಇರುತ್ತಾರೆ. ಎಲ್ಲಿಯೇ ಹೋದರೂ, ಎಲ್ಲಿಯೇ ಕೂತರು ಇಬ್ಬರು ಒಟ್ಟೊಟ್ಟಿಗೆನೇ ಇರುತ್ತಾರೆ. ಇದನ್ನು ಆರ್ಯವರ್ಧನ್ ಕಡೆಯಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ. ಸೋಫಾ ಮೇಲೆ ಕೂತಿದ್ದಾಗ ಆರ್ಯವರ್ಧನ್ ತಮ್ಮ ಅನುಮಾನವನ್ನು ಹೊರ ಹಾಕಿದ್ದಾರೆ. "77 ದಿನವಾಗಿದೆ. ನೀವಿಬ್ಬರು ಸಿಕ್ಕಾಪಟ್ಟೆ ಮಾತನಾಡುತ್ತಾ ಇರುತ್ತೀರಾ. ಏನು ಅಂಥದ್ದು ಬಿಟ್ಟಿದ್ದೀರಾ ಅಂತ ಮಾತನಾಡುತ್ತೀರಾ" ಎಂದು ಪ್ರಶ್ನಿಸಿದ್ದಾರೆ.

ಗುರೂಜಿ ಮೇಲೆ ರಾಕೇಶ್ ಕೂಡ ಬೇಸರ
ಆರ್ಯವರ್ಧನ್ ಮಾತಿಗೆ ರಾಕೇಶ್ ಬೇಸರ ಮಾಡಿಕೊಂಡಿದ್ದಾರೆ. "ಯಾರಾದ್ರೂ ಏನಾದರೂ ಅಂದರೆ ತಲೆಕೆಡಿಸಿಕೊಳ್ಳದೆ ಹೇಗೆ ಬದುಕುವುದು" ಎಂದಿದ್ದಾರೆ. ಅಮೂಲ್ಯ ಕೂಡ ಗರಂ ಆಗಿದ್ದು, "ನೀವೂ ನಾಳೆಯಿಂದ ಯಾಕೆ ನಮ್ಮ ಜೊತೆಗೆ ಬಂದು ಕುಳಿತುಕೊಳ್ಳಬಾರದು. ಈ ಥರದ್ದೆಲ್ಲಾ ಬೇಕಾದರೆ ರಾಕಿ ಹತ್ರ ಕೇಳಿ. ನನ್ನ ಮುಂದೆ ಮಾತ್ರ ಕೇಳಬೇಡಿ ಗುರುಗಳೇ. ಈ ಥರ ಆಲೋಚನೆ ಇರುವವರ ಬಳಿ ನಂಗೆ ಮಾತನಾಡೋದಕ್ಕೂ ಇಷ್ಟವಿಲ್ಲ" ಎಂದಿದ್ದಾರೆ.

ಪದೇ ಪದೆ ಅದೆ ಸಿನಿಮಾ ನೋಡೋದಕ್ಕೆ ಆಗುತ್ತಾ..?
ರಾಕೇಶ್ ಹಾಗೂ ಅಮೂಲ್ಯ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಜೋರು ಚರ್ಚೆಯಾಗುತ್ತಿದೆ. ಅಮೂಲ್ಯ ಕೊಟ್ಟ ಉತ್ತರಕ್ಕೆ ಗುರೂಜಿ ಕೂಡ ಟಾಂಗ್ ಕೊಟ್ಟಿದ್ದಾರೆ. "ಇವರೊಬ್ಬರ ಹತ್ರಾನೇ ಮೀಟಿಂಗ್ ನಡೆಯುತ್ತೆ. ಬೇರೆ ಯಾರ ಹತ್ರಾನು ಮೀಟಿಂಗ್ ಆಗಲ್ಲ. ಒಂದು ಪಿಕ್ಚರ್ ಬಗ್ಗೆ ಯಾರಾದರೂ ಸಖತ್ತಾಗಿದೆ, ಸೂಪರ್ ಆಗಿದೆ ಎಂದರೆ ಹೋಗಬಹುದು. ಅದೇ ಆ ಸಿನಿಮಾಗೆ ಯಾರಾದರೂ ಟಿಕೆಟ್ ತೆಗೆದುಕೊಂಡು ಕೂರುತ್ತಾರಾ..? ಇರುವ ವಿಚಾರವನ್ನು ನೇರವಾಗಿ ಕೇಳಿದೆ. ಇದು ನಿಮ್ಮ ಹುಟ್ಟುಗುಣ" ಎಂದಿದ್ದಾರೆ.

ರೂಪೇಶ್‌ಗೂ ಅವಾಜ್ ಹಾಕಿದ ಗುರೂಜಿ
ಗುರೂಜಿ ಮತ್ತು ಅಮೂಲ್ಯ ನಡುವೆ ಮಾತುಕತೆ ನಡೆಯುತ್ತಲೆ ಇತ್ತು. ಆ ಕಡೆ ಅಮೂಲ್ಯಾನು ಸೋಲುತ್ತಿಲ್ಲ ಈ ಕಡೆ ಗುರೂಜಿಯೂ ಸುಮ್ಮನೆ ಆಗುತ್ತಿಲ್ಲ. ಮನೆಯವರಿಗೆಲ್ಲಾ ಇದೊಂಥರ ಬೇಸರದ ಸಂಗತಿಯೂ ಆಗಿತ್ತು. ರೂಪೇಶ್ ನಡುವೆ ಸಮಾಧಾನ ಮಾಡಲು ಯತ್ನಿಸಿದರು. "ಅಲ್ಲ ಗುರುಗಳೇ ನಾವೂ ಮಾತನಾಡುತ್ತೀವಿ. ಅದನ್ನು ತಪ್ಪು ಅನ್ನೋದಕ್ಕೆ ಆಗುತ್ತಾ" ಎಂದು ರೂಪೇಶ್ ಶೆಟ್ಟಿ ಕೇಳಿದರೆ, ಗುರೂಜಿ "ನಿಮ್ಮನ್ನು ಮಧ್ಯದಲ್ಲಿ ಬನ್ನಿ ಎಂದ್ನಾ" ಎಂದು ಮುಖಕ್ಕೆ ಹೊಡೆದವರಂತೆ ಹೇಳಿದ್ದಾರೆ. ಆ ಕಡೆ ರೂಪೇಶ್ ರಾಜಣ್ಣ ಕೂಡ ಸಮಾಧಾನ ಮಾಡಲು ಯತ್ನಿಸಿದ್ದಾರೆ. ಆದರೂ ಸಮಾಧಾನವಾಗಲೇ ಇಲ್ಲ. ಕಡೆಗೆ ರಾಜಣ್ಣ ಅವರೇ ಸೋಫಾ ಬಳಿ ಬಂದು ಅವರನ್ನು ಕರೆದುಕೊಂಡು ಹೋಗಿದ್ದಾರೆ.