Don't Miss!
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- News
Assembly election 2023: ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ: ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ
- Sports
BGT 2023: ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಜಮ್ಮು-ಕಾಶ್ಮೀರದ ಸ್ಪಿನ್ನರ್ಗೆ ಆಹ್ವಾನ ನೀಡಿದ ಆಸ್ಟ್ರೇಲಿಯಾ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9:ರಾಕೇಶ್ ಮದುವೆಗೆ ತಯಾರಿ : ದಿವ್ಯಾ ಆದ್ರೂ ಓಕೆ.. ಅಮೂಲ್ಯ ಆದ್ರೂ ಓಕೆ!
ಬಿಗ್ ಬಾಸ್ ಆರಂಭವಾದ ಮೇಲೆ ಅದರೊಳಗಡೆ ಜೋಡಿಗಳು ಉದ್ಭವವಾಗುವುದು ಅನುಮಾನವಿಲ್ಲ. ಪ್ರತಿ ಸೀಸನ್ ನಡೆದಾಗಲೂ ಮನೆಯೊಳಗೆ ಲವ್ ಬರ್ಡ್ಸ್ ಥರ ಓಡಾಡುತ್ತಾರೆ, ಹೊರಗೆ ಬಂದ ಮೇಲೆ ಕೆಲವು ಜೋಡಿ ಹೇಳೋದಕ್ಕೆ ಹೆಸರಿಲ್ಲದಂತೆ ನಾಪತ್ತೆಯಾದರೆ, ಇನ್ನು ಹಲವು ಮದುವೆಯಾಗಿ ಆ ಪ್ರೀತಿಯನ್ನು ಸತ್ಯ ಮಾಡಿದ್ದಾರೆ.
ಈ ಬಾರಿಯ ಸೀಸನ್ ನಲ್ಲಿ ಅಮೂಲ್ಯ ಮತ್ತು ರಾಕೇಶ್ ಲವ್ ಬರ್ಡ್ಸ್ ರೀತಿಯೇ ಕಾಣುತ್ತಿದ್ದಾರೆ. ಆದರೂ ಇದನ್ನು ಅಮೂಲ್ಯ ಒಪ್ಪಿಕೊಳ್ಳುವುದಕ್ಕೆ ಸಿದ್ಧವಿಲ್ಲ. ಆದರೂ ಎಲ್ಲರಿಗೂ ಆ ಜೋಡಿಗಳ ಮೇಲೆ ಆಗಾಗ ಕಣ್ಣು ಬೀಳುತ್ತಲೆ ಇರುತ್ತದೆ. ಈಗ ರಾಕೇಶ್‌ಗಾಗಿ ವಧು-ವರಾನ್ವೇಷಣೆ ನಡೆಯುತ್ತಿದೆ.
ಶಮಂತ್
ಕಂಡು
ವೈಷ್ಣವಿಗೆ
ಶಾಕ್,
ಮುಂದೇನು
ಮಾಡುತ್ತಾಳೆ
ವೈಷ್ಣವಿ?

ಲವ್ ಬರ್ಡ್ಸ್ ಅಲ್ಲ.. ಅಮ್ಮ-ಮಗ
ಬಿಗ್ ಬಾಸ್‌ನಲ್ಲಿ ಅಮೂಲ್ಯಗೆ ಪಕ್ಕಾ ಮ್ಯಾಚ್ ಆಗುವುದು ಎಂದರೆ ಅದು ರಾಕೇಶ್. ಯಾರು ಏನಾದರೂ ಅಂದುಕೊಳ್ಳಲಿ ನಮ್ಮ ನಡುವೆ ಇರುವ ಸಂಬಂಧವೇನು ಎಂಬುದನ್ನಷ್ಟೇ ಅಮೂಲ್ಯ ನೋಡುತ್ತಾರೆ. ಇಬ್ಬರ ನಡುವಿನ ಸಲಿಗೆಯನ್ನು ಈಗಾಗಲೇ ಆರ್ಯವರ್ಧನ್, ಸಂಬರ್ಗಿ ತಪ್ಪಾಗಿ ಅರ್ಥೈಸಿದ್ದಾರೆ. ಆಗ ಅಮೂಲ್ಯ ಖಡಕ್ ವಾರ್ನಿಂಗ್ ಅನ್ನೇ ನೀಡಿದ್ದಾರೆ. ಈಗ ಮನೆಯಲ್ಲಿ ಲವ್ ಬರ್ಡ್ಸ್ ರೀತಿಯಿದ್ದ ಜೋಡಿಗಳು ತಾಯಿ ಮತ್ತು ಮಗುವಾಗಿ ಬದಲಾಗಿದ್ದಾರೆ. ಒಬ್ಬ ತಾಯಿಯಾದವಳು ಮಗನಿಗೆ ಹೇಗೆಲ್ಲಾ ಟ್ರೀಟ್ ಮಾಡುತ್ತಾಳೋ ಅಷ್ಟೇ ಕಾಳಜಿಯಿಂದ ಅಮೂಲ್ಯ ನೋಡಿಕೊಳ್ಳುತ್ತಿದ್ದಾರೆ.

ಮಗನಿಗೆ ಹೆಣ್ಣು ಹುಡುಕುತ್ತಿರುವ ಅಮೂಲ್ಯ
ತಾಯಿಯಾದವಳಿಗೆ ಮಗನ ಮೇಲಿನ ಕರ್ತವ್ಯವಿರುತ್ತಲ್ಲ, ಈಗ ಅಮೂಲ್ಯ ಅದನ್ನು ಪಾಲಿಸುತ್ತಿದ್ದಾರೆ. ಮಗನಿಗಾಗಿ ಹೆಣ್ಣು ಹುಡುಕುತ್ತಿದ್ದಾರೆ. ಆದರೆ ಮನೆಯಲ್ಲಿ ಇರುವುದೇ ಮೂರು ಹೆಣ್ಣು ಮಕ್ಕಳು. ಅದರಲ್ಲಿ ರಾಕೇಶ್‌ಗೆ ಗೊಂದಲವೋ ಗೊಂದಲ. ಯಾರನ್ನು ಆಯ್ಕೆ ಮಾಡಿಕೊಳ್ಳುವುದು ಅಂತ. "ಬೆಳೆಯೋದು ಬೆಳೆದು ಬಿಟ್ಟಿದ್ದೀಯಾ. ಒಂದು ಮದುವೆ ಮಾಡಿಕೊಳ್ಳೋಣಾ, ಮಕ್ಕಳನ್ನು ಮಾಡಿಕೊಳ್ಳೋಣಾ ಏನು ಕೇಳಬೇಡ. ಯಾವ ಗಳಿಗೆಯಲ್ಲಿ ನಾನಿನ್ನ ಹೆತ್ತಿಬಿಟ್ನೋ" ಅಂತ ಅಮೂಲ್ಯ ತಾಯಿ ಸ್ಟೈಲ್‌ನಲ್ಲಿ ರೇಗಿಸಿದ್ದಾರೆ.

ರಾಕಿಗೆ ಯಾರು ಸಿಕ್ಕಿದ್ರೂ ಓಕೆ..!
ಹೀಗೆ ಮನೆಯೊಳಗೆ ಮದುವೆ ಮಾತು ಕತೆ ನಡೆಯುತ್ತಿರುವಾಗ ದಿವ್ಯಾ, "ನಿಮಗೆ ಹುಡುಗಿ ಹೇಗಿರಬೇಕು. ದಿವ್ಯಾ ಉರುಡುಗ ಗೊತ್ತಿಲ್ವಾ" ಎಂದಿದ್ದಾರೆ. ಆಗ ರಾಕೇಶ್ ಯಾರು ಸಿಕ್ಕಿದರು ಓಕೆ. ದಿವ್ಯಾ ಸಖತ್ತಾಗವ್ಳೆ. ಇನ್ನು ಬಿಗ್ ಬಾಸ್‌ನಲ್ಲಿ ಒಬ್ಳು ಫ್ರೆಂಡ್ ಇದ್ದಾಳೆ. ಅವ್ಳು ತಕ್ಕಮಟ್ಟಿಗೆ ಇದ್ದಾಳೆ ಅಮೂಲ್ಯ ಅಂತ, ಅವಳಾದರೂ ಸಿಗುತ್ತಾಳಾ ನೋಡಬೇಕು" ಎಂದಿದ್ದಾರೆ ರಾಕಿ. ಈ ಕಾಮಿಡಿ ಮಾಡುವಾಗ ಅಮೂಲ್ಯ ಹಾಗೂ ದಿವ್ಯಾ ಬಿದ್ದು ಬಿದ್ದು ನಕ್ಕಿದ್ದಾರೆ.

ಅಮೂಲ್ಯ ಆದ್ರೂ ಓಕೆ ಎಂದ ರಾಕೇಶ್
ಇನ್ನು ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಜೋಡಿಯಂಥ ಗುರುತಿಸಿಕೊಂಡಿರುವ ರಾಕೇಶ್ ಅಂಡ್ ಅಮೂಲ್ಯ, ಈಗ ಅಮ್ಮ ಮಗನಂತೆ ನಟಿಸುತ್ತಿದ್ದಾರೆ. ಈ ವೇಳೆ ನಾಟಕದ ನಡುವೆ ರಾಕೇಶ್, "ಬಿಗ್ ಬಾಸ್ ಮನೆಯಲ್ಲಿ ಅಮೂಲ್ಯ ಅಂತ ಸುಮಾರಾಗಿದ್ದಾಳೆ. ಅವಳಾದರೂ ಓಕೆ ಎಂದಿದ್ದಾರೆ. ಇದಕ್ಕೆ ದಿವ್ಯಾ ಹಾಗೂ ಅಮೂಲ್ಯ ಪೊರಕೆ, ಮಾಪು ಹಿಡಿದುಕೊಂಡು ಬಂದು ರಾಕೇಶ್‌ಗೆ ಶಾಕ್ ನೀಡಿದ್ದಾರೆ. "ಏ ಯಾಕ್ರೋ ಇದು" ಅಂತ ಗಾಬರಿ ಬಿದ್ದವನಂತೆ ಕೇಳಿದ್ದಾರೆ. ಆದರೆ ಆ ಇಬ್ಬರು ಅದನ್ನು ಬಳಸಿಕೊಂಡು ಕಸ ಗುಡಿಸಿ, ನೆಲ ಸ್ವಚ್ಛ ಮಾಡಿದ್ದಾರೆ.