Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9:ನಿಮ್ಮದು ಬಚ್ಚಲು ವಾಸನೆಗಿಂತ ಕಡೆಯೆಂದ ಗುರೂಜಿ.. ಇನ್ಮುಂದೆ ಫ್ರೆಂಡ್ಸ್ ಅಲ್ಲ ಎಂದ ರೂಪೇಶ್!
ಮನದ ಮಾತನ್ನು ಪತ್ರದ ಮೂಲಕ ಹಂಚಿಕೊಳ್ಳಿ ಎಂದು ಬಿಗ್ ಬಾಸ್ ನೀಡಿದ ಟಾಸ್ಕ್ ನಲ್ಲಿ ರಾಜಣ್ಣನ ಮಾತುಗಳು ಇಡೀ ದಿನ ಚರ್ಚೆಗೆ ಗ್ರಾಸವಾಗಿದೆ. ಆರ್ಯವರ್ಧನ್ ಹಾಗೂ ರೂಪೇಶ್ ಶೆಟ್ಟಿಯ ಬಗ್ಗೆ ತೀರಾ ದೊಡ್ಡ ಮಾತುಗಳನ್ನು ಬರೆದಿದ್ದರು. ಆ ಪತ್ರ ಇಬ್ಬರ ಮನಸ್ಸನ್ನು ಹಾಳು ಮಾಡಿತ್ತು. ಅದೇ ಬೇಸರದಲ್ಲಿ ರೂಪೇಶ್ ಶೆಟ್ಟಿ ಹಾಗೂ ಆರ್ಯವರ್ಧನ್ ದಿನ ಕಳೆದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಒಂದಷ್ಟು ಟೀಂಗಳಾಗುವುದು ಸಹಜ. ಅದರಲ್ಲಿ ರೂಪೇಶ್ ಶೆಟ್ಟಿ, ರಾಜಣ್ಣ, ಆರ್ಯವರ್ಧನ್ ಒಂದು ಟೀಂನವರು. ಊಟ ಮಾಡುವಾಗ ಬೆಳದಿಂಗಳ ಬೆಳಕಲ್ಲಿ ಊಟವನ್ನು ಮಾಡುತ್ತಾರೆ. ಇಲ್ಲಿ ಮೂವರ ನಡುವೆ ಒಳ್ಳೆ ಬಾಂಧವ್ಯ ಬೆಳೆದಿದೆ ಎನ್ನಲಾಗಿತ್ತಾದರೂ, ಪತ್ರದಲ್ಲಿ ಮುದ್ರಣವಾದ ಪದಗಳು ಅದನ್ನು ಉಲ್ಟಾ ಮಾಡಿದೆ.
BBK9:
ಬಿಗ್
ಬಾಸ್
ಮನೆಯೊಳಗೆ
ಅರುಣ್
ಸಾಗರ್
ಕಾಣಿಸುತ್ತಿಲ್ಲ..
ಎಲ್ಲಿ
ಹೋದ್ರು?

ರೂಪೇಶ್ ಶೆಟ್ಟಿ ಬಳಿ ರಾಜಣ್ಣ ಹೇಳಿದ್ದೇನು..?
ನಿನ್ನೆ ಬರೆದ ಪತ್ರದಲ್ಲಿ ಮನಸ್ಸಿಗೆ ನೋವು ಮಾಡಿದ್ದ ರಾಜಣ್ಣ ಇಂದು ರೂಪೇಶ್ ಶೆಟ್ಟಿ ಬಳಿ ಬಂದು ಬೇಸರ ಆಯ್ತಾ ಎಂದು ಕೇಳುತ್ತಿದ್ದಾರೆ. "ನಾನು ಟ್ರೂ ಫ್ರೆಂಡ್ ಅನ್ನಿಸುತ್ತಾ ಅನ್ನಿಸಲ್ವಾ. ಒಳ್ಳೆಯದ್ದನ್ನು ಹೇಳಿದರೆ ಮಾತ್ರ ಫ್ರೆಂಡ್ ಆಗಬೇಕು ಅನ್ನೋದಾದ್ರೆ. ನಿಮ್ಮದು ನೂರು ಒಳ್ಳೆಯ ಗುಣವಿದೆ. ಅದನ್ನೇ ಹೇಳುತ್ತೇನೆ. ಈ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದೇನೋ ಇಲ್ಲವೋ. ನನ್ ಮಗನೆ, ಭಾಷೆಯ ವಿಚಾರ, ಶೂನಲ್ಲಿ ಹೊಡೆದುಕೊಂಡು ಬರುತ್ತೀರಲ್ಲ. ಅದೆಲ್ಲಾ ತಪ್ಪು" ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಒಬ್ಬ ಬೆಸ್ಟ್ ಫ್ರೆಂಡ್‌ನ ಕಳೆದುಕೊಂಡ್ರಿ
ಎಷ್ಟೇ ಸಲ ಹೇಳಿದರು ರಾಜಣ್ಣ ತನ್ನ ಸಮರ್ಥನೆಯನ್ನು ಮುಂದುವರೆಸಿದ್ದರು. ಆಗ ರೂಪೇಶ್ ಶೆಟ್ಟಿ, "ಫ್ರೆಂಡ್ ಅಂತ ತೆಗೆದುಕೊಂಡ ಮೇಲೆ ಸಲುಗೆ ಇರುತ್ತದೆ. ಈಗ ಗುರೂಜಿಯನ್ನೇ ತೆಗೆದುಕೊಳ್ಳಿ. ಅವರನ್ನು ಕಚ್ಚುತ್ತೀನಿ. ಅವರ ಮೈಮೇಲೆ ಬಿದ್ದು ಒರಳಾಡುತ್ತೀನಿ. ಇಷ್ಟು ಸಲಿಗೆ ಬೇರೆಯವರ ಬಳಿ ತೆಗೆದುಕೊಂಡಿದ್ದೀನಾ. ಗುರುಗಳು ನಮಗೆ ಕೊಟ್ಟಿದ್ದು ಅದು. ಎಲ್ಲಿ ಹೊರಗೆ ಅದು ಮ್ಯಾಟರ್ ಆಗುತ್ತೋ ಎಂಬ ಭಯ ನಿಮಗೆ. ಆದರೆ ಆ ಭಯ ನನಗೆ ಇಲ್ಲ. ಫ್ರೆಂಡ್ಶಿಪ್ ಅಂದ್ರೆ ಒಂದು ಬೆಲೆ ಇದೆ. ಅದನ್ನು ಕೆಳಮಟ್ಟಕ್ಕೆ ತಂದ್ರೆ ಇಷ್ಟವಾಗಲ್ಲ. ನಿಮ್ಮ ಮನಸ್ಥಿತಿ ನನಗೆ ಅರ್ಥ ಆಯ್ತು. ನಿಮಗೆ ಏನು ಬೇಕಾದರೂ ಮಾಡುವುದಕ್ಕೆ ರೆಡಿ ಇದ್ದವನಿಗೆ ನನ್ನ ಪ್ರಕಾರ ತಪ್ಪು. ಆ ಕಟುವಾದ ವಾಕ್ಯಗಳು ತಪ್ಪು. ಇಲ್ಲಿಗೆ ಬಿಟ್ಟು ಬಿಡಿ ಎಂದಿದ್ದಾರೆ.

ಗುರೂಜಿ ಕ್ಷಮಿಸುತ್ತಾರಾ..?
ನನಗೆ ಆಗಿಲ್ಲ. ನನ್ನ ಫಾಲೋವರ್ಸ್‌ಗೆ ದುಃಖ ಆಗಿದೆ. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತಾ..? ನನಗೆ ಅನಿಸಿದ್ದನ್ನು ಹೇಳಿದೆ. ಗುರುಗಳೇ ತಪ್ಪಾಗಿದ್ದರೆ ಕ್ಷಮಿಸಿ. ಆರಾಮವಾಗಿ ಇರಿ, ಕೋಪ ಮಾಡಿಕೊಳ್ಳಬೇಡಿ ಎಂದು ಕಂಟೆಸ್ಟೆಂಟ್ ನನಗೆ ಹೇಳಿದ್ದಾರೆ. ಮಾತಾಡಿಕೊಳ್ಳಿ ಸಾವಿರ ಮಾತನಾಡಿಕೊಳ್ಳಿ. ನಿಮ್ಮತ್ರ ದ್ವೇಷವನ್ನೇ ಮೆಂಟೈನ್ ಮಾಡಬೇಕು ಎಂದರೆ ನಾನು ಇಲ್ಲಿಗೆ ಬರುತ್ತಾ ಇರಲಿಲ್ಲ" ಎಂದಿದ್ದಾರೆ.

ಬಚ್ಚಲು ವಾಸನೆ ಬರುತ್ತಿದೆ
ರಾಜಣ್ಣ ಸಮರ್ಥನೆ ಮಾಡಿಕೊಳ್ಳುತ್ತಿದ್ದಾಗ ರೊಚ್ಚಿಗೆದ್ದ ಗುರೂಜಿ, "ಆಗ ಬಚ್ಚಲು ಮನೆಯಲ್ಲೆಲ್ಲಾ ಕ್ಯಾಕರಿಸಿ ಉಗೀತಾ ಇದ್ರು. ಬಚ್ಚಲು ಮನೆಯಲ್ಲಿ ಎಷ್ಟು ಸ್ಮೆಲ್ ಬರುತ್ತಾ ಇತ್ತೊ, ಅಷ್ಟು ಬೈಗುಳಾ ಬರ್ತಾ ಇತ್ತು. ಗೊತ್ತಿದ್ದು ಗೊತ್ತಿದ್ದು ಕೊಚ್ಚೆಗೆ ಯಾರಾದರೂ ಕಲ್ಲಾಕುತ್ತಾರಾ? ನಿಮ್ಮ ಮಾತು ನೋವಾಯಿತು. ಆದರೆ ಕಣ್ಣೀರು ಹಾಕಿಲ್ಲ. ಆ ಸಾಲು ತುಂಬಾ ನೋವಾಯಿತು" ಎಂದಿದ್ದಾರೆ.