BBK9: ರಾಜಣ್ಣನ ಮಾತಿಗೆ ರೂಪೇಶ್ ಶೆಟ್ಟಿ ನೊಂದುಕೊಂಡ್ರಾ..? ಬುದ್ಧಿ ಕಲಿತರಾ..?
ಎಲ್ಲರ ಜೀವನದಲ್ಲೂ ಆಗಾಗ ಕೆಲವೊಂದು ಅನಿರೀಕ್ಷಿತ ತಿರುವುಗಳು ಸಿಗುತ್ತವೆ. ಯಾರನ್ನು ನಂಬುವುದು, ಯಾರನ್ನು ಬಿಡುವುದು ಎಂಬ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ. ಜೊತೆಗೆ ಇರುವ ರೀತಿ, ತೋರುವ ನಡವಳಿಕೆ ಬೇರೆ ಬೇರೆಯಾದಾಗ ಅದೆಷ್ಟು ಸ್ವಾರ್ಥಿಗಳು ಎಂದೆನಿಸಿ ಬಿಡುತ್ತದೆ. ಈಗ ಬಿಗ್ ಬಾಸ್‌ನಲ್ಲೂ ರೂಪೇಶ್ ಶೆಟ್ಟಿಗೆ ಹಾಗೇ ಅನಿಸಿದೆ.
ಬಿಗ್ ಬಾಸ್ ಮನೆಯಲ್ಲಿ ಹಲವು ಮೂಲೆಗಳಿರಬಹುದು. ಹಲವು ಕೂತ ಮಾತನಾಡೋ ಜಾಗವಿರಬಹುದು. ಆದರೆ ಹೊರಗಿನ ಸಂಪರ್ಕವೇ ಇಲ್ಲದ ಅಷ್ಟು ಜನ ಒಟ್ಟಿಗೆ ಕೂತಿರುತ್ತಾರೆ. ನೇರವಾಗಿ ನೋಡಿದರೂ, ಮೂಲೆಯಲ್ಲಿ ಕೂತು ಅವರ ಬಗ್ಗೆಯೇ ನೆಗೆಟಿವ್ ಕಮೆಂಟ್ ಪಾಸ್ ಮಾಡುತ್ತಾರೆ. ಇಂಥವೆಲ್ಲಾ ಬಿಗ್ ಬಾಸ್ ನೀಡುವ ಹಲವು ಟಾಸ್ಕ್‌ಗಳಿಂದ ಬಯಲಿಗೆ ಬರುತ್ತೆ.

ಪತ್ರದ ಟಾಸ್ಕ್ ನೀಡಿದ ಬಿಗ್ ಬಾಸ್
ಎಷ್ಟೋ ಮಾತುಗಳು ಬಾಯಲ್ಲಿ ಹೇಳದೆ ಇರುವುದಕ್ಕಿಂತ ಬರವಣಿಗೆಯ ರೂಪದಲ್ಲಿ ಬಂದರೆ ಹೆಚ್ಚಿನ ಸ್ಟ್ರಾಂಗ್ ಆಗಿರುತ್ತದೆ. ಮಾತನಾಡುವಾಗ ಭಯಕ್ಕೋ, ಅಂಜಿಕೆಗೋ, ಮರೆವಿಗೋ ಮರೆತ ಮಾತೆಲ್ಲವೂ ಪತ್ರ ಬರೆಯಿರಿ ಎಂದಾಗ ಸಲೀಸಾಗಿ ಎಲ್ಲವೂ ಬಂದು ಬಿಡುತ್ತದೆ. ಈ ವಾರ ಬಿಗ್ ಬಾಸ್ ಮನೆ ಮಂದಿಗೆ ಅಂಥದ್ದೊಂದು ಟಾಸ್ಕ್ ನೀಡಿದೆ. ಹೇಳದೆ ಉಳಿದ ಮಾತನ್ನು ಪತ್ರದ ಮೂಲಕ ಬರೆಯಿರಿ ಎಂಬುದೇ ಆ ಟಾಸ್ಕ್.

ಪತ್ರದಲ್ಲಿ ಏನೆಲ್ಲಾ ಅಡಗಿತ್ತು..?
ಹೀಗೆ ಪತ್ರ ಬರೆಯಿರಿ ಎಂಬ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದೆ ತಡ, ಎಲ್ಲರೂ ಖುಷಿಯಾಗಿ ಯಾರಿಗೆ ಏನು ಹೇಳಬೇಕು ಎಂಬುದನ್ನು ಬರೆದರು. ಆ ಪತ್ರಗಳನ್ನು ಅವರವರಿಗೆ ಕೊಟ್ಟು, ತಮ್ಮ ಮನದೊಳಗಿನ ಬೇಸರ, ಖುಷಿಯನ್ನು ಹೊರ ಹಾಕಿದರು. ಆ ಪತ್ರಗಳನ್ನು ಓದುವಾಗ ಮನದಲ್ಲಿ ತುಂಬಾನೇ ಖುಷಿಯಾಗಿತ್ತು. ಅದರಲ್ಲಿ ರಾಕೇಶ್‌ಗೆ ಅಮೂಲ್ಯ ಪತ್ರ ಬರೆದಿದ್ದರು. ಆಗ ರಾಕೇಶ್ ಥ್ಯಾಂಕ್ಯೂ ಒಳ್ಳೆ ವಂಡರ್‌ಫುಲ್ ಫ್ರೆಂಡ್ ಆಗಿದ್ದಕ್ಕೆ ಎಂದಿದ್ದಾರೆ. ಅಮೂಲ್ಯಾಗೆ ದಿವ್ಯಾ ಬರೆದ ಪತ್ರದಲ್ಲಿ "ವಿಶ್ವಾಸ ಒಳ್ಳೆಯದ್ದೇ ಆದರೆ ಅತಿಯಾದರೆ ಕಷ್ಟವಾಗಬಹುದು" ಎಂದು ದಿವ್ಯಾ ಬುದ್ಧಿ ಮಾತು ಹೇಳಿದ್ದಾರೆ.

ರಾಜಣ್ಣ ಪತ್ರ ಬರೆದಿದ್ದು ಯಾರಿಗೆ..?
ಇನ್ನು ಈ ಟಾಸ್ಕ್‌ನಲ್ಲಿ ತಮಗೆ ಯಾರೆಲ್ಲಾ ಆತ್ಮೀಯರಾಗಿದ್ದಾರೋ ಅವರಿಗೇನೆ ಪತ್ರ ಬರೆಯಲಾಗಿದೆ. ಅದರಲ್ಲಿ ರೂಪೇಶ್ ರಾಜಣ್ಣ ರೂಪೇಶ್ ಶೆಟ್ಟಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ "ಹೃದಯದಿಂದ ನಿಮ್ಮ ನಂಬಿಕೆ ಬರಲಿ. ಬರೀ ಮಾತಿಂದ ಅಷ್ಟೇ ಕಾಣುವುದು ಬೇಡ. ಅನವಶ್ಯಕ ಶಬ್ದವನ್ನು ಬಳಕೆ ಮಾಡಿ, ಎಲ್ಲೆ ಮೀರಿ ಮಾತನಾಡುವುದು ಬೇಡ" ಎಂದು ರಾಜಣ್ಣ ಬರೆದಿದ್ದರು. ಈ ಮಾತು ರೂಪೇಶ್ ಶೆಟ್ಟಿಗೆ ತುಂಬಾ ಮನಸ್ಸಿಗೆ ನೋವುಂಟು ಮಾಡಿದೆ. ರೂಪೇಶ್ ಶೆಟ್ಟಿ ಇಲ್ಲಿತವರೆಗೂ ಯಾರ ಜೊತೆಗೂ ಫೇಕ್ ರೀತಿ ನಡೆದುಕೊಂಡವರಲ್ಲ.

ಇಷ್ಟು ದಿನ ಫ್ರೆಂಡ್ಸ್ ಅಂತ ಕರೆದಿದ್ದು ಫೇಕ್ ಹಾ..?
ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ, ರಾಜಣ್ಣ, ಆರ್ಯವರ್ಧನ್ ಯಾವಾಗಲೂ ಜೊತೆಯಾಗಿಯೇ ಇರುತ್ತಾರೆ. ರೂಪೇಶ್ ಶೆಟ್ಟಿಗೇನಾದರೂ ಅವರಿಬ್ಬರ ಮಾತು, ನಡವಳಿಕೆಯಲ್ಲಿ ತಪ್ಪು ಎನಿಸಿದರೆ ಅಲ್ಲಿಯೇ ಹೇಳುತ್ತಾರೆ. ಆದರೆ ರಾಜಣ್ಣ ಆ ರೀತಿ ಮಾಡಲೇ ಇಲ್ಲ. ಮನಸ್ಸೊಳಗೆ ಅಂದುಕೊಂಡಿದ್ದು, ಈಗ ಪತ್ರದ ಮೂಲಕ ಹೊರಗೆ ಬಂದಿದ್ದು ಕಂಡು ರೂಪೇಶ್ ಶೆಟ್ಟಿಯೇ ಶಾಕ್ ಆಗಿದ್ದಾರೆ. ಪತ್ರ ಓದಿದ ಬಳಿಕ "ರಾಜಣ್ಣ ಈ ಪತ್ರವನ್ನು ನೀವೂ ಬರೆದಿದ್ದು ಅಲ್ವಾ. ನೀವೂ ನನ್ನನ್ನ ಫ್ರೆಂಡ್ ಅಂತ ಸ್ವೀಕಾರ ಮಾಡಿದ ಬಳಿಕ ನನ್ನ ಕಿವಿಗೆ ನೀವೂ ಹಾಕಿರುತ್ತಾ ಇದ್ದರು, ಸರಿ ಮಾಡಿಕೊಳ್ಳುತ್ತಾ ಇದ್ದೆ" ಎಂದಿದ್ದಾರೆ. ಆಗ ರಾಜಣ್ಣ "ಒಂದೆರಡು ಮೂರು ಸಲ ಹೇಳಿದ್ದೀನಿ. ಆದರೆ ನೀವೂ ಅದನ್ನು ಪಾಲಿಸಿಲ್ಲ. ನೀವೂ ಮಾತನಾಡುವ ಮಾತುಗಳು ತಮಾಷೆಯ ಮಾತುಗಳಲ್ಲ" ಎಂದಿದ್ದಾರೆ. ಅದಕ್ಕೆ ರೂಪೇಶ್ ಶೆಟ್ಟಿ "ತಪ್ಪುಗಳನ್ನು ಹುಡುಕಿದ್ದೀರಾ ಅಂದ್ರೆ ನನ್ನ ಬದುಕಿನ ಬುದ್ಧಿ ಪಾಠ ಇದು" ಎಂದಿದ್ದಾರೆ.


Click it and Unblock the Notifications











