Don't Miss!
- Automobiles
ವಿಚಿತ್ರ ಆಫರ್ ಘೋಷಿಸಿದ ಫೋರ್ಡ್: ಈ ಕಾರಿನ ಬುಕಿಂಗ್ ರದ್ದು ಮಾಡಿಕೊಂಡರೆ 2 ಲಕ್ಷ ರೂ. ನಗದು
- News
50 ನಗರಗಳಲ್ಲಿ ಇಂದಿನಿಂದ ಜಿಯೊ 5ಜಿ ಸೇವೆ ಪ್ರಾರಂಭ: ಕರ್ನಾಟಕದ ಯಾವ ನಗರಗಳಿಗೆ ಕೊಡುಗೆ? ತಿಳಿಯಿರಿ
- Sports
IND vs NZ: 42ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ ರೋಹಿತ್ ಶರ್ಮಾ; ಸಕ್ರಿಯ ಆಟಗಾರರ ಪೈಕಿ ಜಂಟಿ 4ನೇ ಸ್ಥಾನ
- Technology
ಸ್ಪ್ಯಾಮ್ ಕರೆಗಳನ್ನು ನಿರ್ಬಂಧಿಸುವುದು ಹೇಗೆ ಗೊತ್ತಾ?..ಈ ಕ್ರಮಗಳನ್ನು ಅನುಸರಿಸಿ!
- Lifestyle
ಬೆಂಗಳೂರಿಗರಲ್ಲಿ ಹೆಚ್ಚಾಗುತ್ತಿದೆ ವಿಟಮಿನ್ ಡಿ ಕೊರತೆ, ಕಾರಣವೇನು?
- Finance
10 ಗ್ರಾಂ ಚಿನ್ನದ ಬೆಲೆ 113 ರೂ, ಅಚ್ಚರಿ ಆಯ್ತ, ವೈರಲ್ ಸುದ್ದಿ ಓದಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: "ಎಷ್ಟು ತಾಳ್ಮೆಯಿಂದ ಇದ್ದಿ ಮಗಳೇ" ಎಂದ ತಂದೆ: ಅಮೂಲ್ಯಾ ಕಂಡು ಮನೆ ಮಂದಿಗೆ ಶಾಕ್!
ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳನ್ನು ನೋಡುತ್ತಿದ್ದರೆ ಇತ್ತೀಚೆಗೆ ತುಂಬಾ ಬದಲಾವಣೆ ಕಾಣುತ್ತಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 68 ದಿನಗಳ ಕಾಲ ಜೊತೆಯಾಗಿದ್ದವರು. ಹೀಗಾಗಿ ಎಲ್ಲರೂ ಎಲ್ಲರನ್ನು ಆತ್ಮೀಯವಾಗಿ ಕಾಣುವುದಕ್ಕೆ ಆರಂಭಿಸಿದ್ದಾರೆ. ಯಾರ ಮನೆಯವರೇ ಬರಲಿ ಅವರನ್ನು ತಮ್ಮ ಮನೆಯವರಂತೆ ಆಹ್ವಾನಿಸುತ್ತಿದ್ದಾರೆ. ಅವರ ಮಕ್ಕಳ ಬಗ್ಗೆ ತಮ್ಮನೋ-ತಂಗಿಯ ಬಗ್ಗೆಯೋ ಹೇಳುವಂತೆ ದೂರುಗಳನ್ನು ಹೇಳುತ್ತಿದ್ದಾರೆ.
ರಾತ್ರಿ ಅಮೂಲ್ಯ ತಂದೆಯ ಆಗಮನವಾಗಿದೆ. ಅಮೂಲ್ಯಾ ತಂದೆಗಾಗಿ ಕಾಯುತ್ತಾ ಕುಳಿತಿದ್ದರು. ಜೊತೆಗೆ ಅವರ ಮನಸ್ಸಲ್ಲಿ ಸಣ್ಣ ಭಯವೊಂದು ಕಾಡುತ್ತಿತ್ತು. ಬರುತ್ತೀನಿ ಎಂದು ಹೇಳಿದವರು ಬಾರದೆ ಇದ್ದಾಗ, ಮಕ್ಕಳಲ್ಲಿ ಆತಂಕ ಸಹಜವಾಗಿರುತ್ತೆ. ಅಮೂಲ್ಯ ಕೂಡ ಆತಂಕಗೊಂಡಿದ್ದಾಗಲೇ ತಂದೆಯ ಆಗಮನವಾಗಿದೆ.
BBK9:
31
ವರ್ಷಕ್ಕೆ
ರೂಪೇಶ್
ಶೆಟ್ಟಿ
ತಂದೆಯನ್ನು
ಅಪ್ಪಿಕೊಂಡಿದ್ದು
ಇದೇ
ಮೊದಲು!

ಅಡಿಗ ಹೋಗಿ ಶೆಟ್ಟಿ ಆಗಿದ್ದೇಕೆ..?
ಸದ್ಯ ಬಿಗ್ ಬಾಸ್ ಮನೆಯಲ್ಲಿ ಟಾಕ್ ಆಪ್ ದಿ ಟೌನ್ ಆಗಿರುವುದು ಅಮೂಲ್ಯ ಅಂಡ್ ರಾಕೇಶ್. ಇಬ್ಬರು ತುಂಬಾ ಅಂದ್ರೆ ತುಂಬಾನೇ ಕ್ಲೋಸ್ ಆಗಿದ್ದಾರೆ. ಹಾಗಂತ ಅವರಿಬ್ಬರ ನಡುವೆ ಬೇರೆ ಏನೋ ಇದೆ ಎಂಬುದನ್ನು ಅಮೂಲ್ಯ ಒಪ್ಪುವುದಿಲ್ಲ. ಅದನ್ನು ಸಂಬರ್ಗಿ ಕಾಲೆಳೆದಾಗಲೂ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ ಅಮೂಲ್ಯ. ಇದೀಗ ಅಮೂಲ್ಯ ತಂದೆ ಬಿಗ್ ಬಾಸ್ ಮನೆಗೆ ಬಂದಿದ್ದು, ರಾಕೇಶ್ ಅಡಿಗ ಅವರನ್ನು ಕಂಡು ರಾಕೇಶ್ ಶೆಟ್ಟಿ ಹೇಗಿದ್ದೀಯಪ್ಪ ಎಂದು ಮಾತನಾಡಿಸಿದ್ದಾರೆ. ಆಗ ಅಲ್ಲಿಯೇ ಅಮೂಲ್ಯ, ಅದು ಶೆಟ್ಟಿ ಅಲ್ಲ ಅಡಿಗ ಎಂದು ಸ್ಪಷ್ಟನೆ ನೀಡಿದ್ದಾರೆ.

ತನ್ನ ಹೆಂಡತಿಯನ್ನು ಹೊಗಳಿದ ಅಮೂಲ್ಯ ತಂದೆ
ಬಿಗ್ ಬಾಸ್ ಮನೆಯಲ್ಲಿ ತಾಯಿಯ ಬಗ್ಗೆ ಮಾತನಾಡುವ ವಿಚಾರ ಬಂದಾಗ ಎಲ್ಲರೂ ತಾಯಿ ಬಗ್ಗೆ ಹೇಳಿ ಭಾವುಕರಾಗಿದ್ದರು. ಆ ವೇಳೆ ಅಮೂಲ್ಯ, ತನ್ನ ತಾಯಿಯ ಕಾಯಿಲೆ ದಿನಗಳನ್ನು ನೆನೆದಿದ್ದರು. ಈಗ ಅವರ ತಂದೆ ಬಂದಾಗ ಮನೆಯವರೆಲ್ಲಾ ಆ ಬಗ್ಗೆ ಮಾತನಾಡಿದ್ದಾರೆ. ಅದಕ್ಕೂ ಮೊದಲು ಅಮೂಲ್ಯ ಕೂಡ ಅಪ್ಪನ ಬಳಿ ಕೇಳಿದ್ದಾರೆ. ನಾನು ಬಿಗ್ ಬಾಸ್ ಮನೆಯಲ್ಲಿ ಅಮ್ಮನ ಬಗ್ಗೆ ಮಾತನಾಡಿದ್ದು ಬೇಜಾರಾಯ್ತಾ ಎಂದಾಗ, "ನಿಮ್ಮ ಅಮ್ಮನ ಬಗ್ಗೆ ನೀನು ಮಾತಾಡಿದ್ದೀಯಾ" ಎಂದು ರೇಗಿಸಿದ್ದಾರೆ. ಅದೇ ಸಮಯಕ್ಕೆ ಮನೆಯವರೆಲ್ಲಾ ಬಂದಿದ್ದಾರೆ. "ನಿಮ್ಮ ಲವ್ ಸ್ಟೋರಿಯನ್ನು ಕೇಳಿದ್ದೀವಿ. ಅಮ್ಮು ಮತ್ತು ನಿಮ್ಮ ಹೆಂಡತಿ ಅಂತ ಬಂದಾಗ ನಿಮ್ಮ ಹೆಂಡತಿಯೇ ಚೆಂದ ಅಂತ ಹೇಳ್ತಿರಂತೆ ನೀವೂ ಎಂದಾಗ ಅಮೂಲ್ಯ ತಂದೆ, ಆ ಥರದ ಹೆಂಡತಿ ಯಾರಿಗೂ ಸಿಗಲ್ಲ. ಒಂದು ಸಲವೂ ನಾವೂ ಜಗಳ ಆಡಿರಲಿಲ್ಲ" ಎಂದಿದ್ದಾರೆ.

ಮಗಳನ್ನು ಹಾಡಿ ಹೊಗಳಿದ ಓಂಕಾರೇಶ್ವರ್
ಟಾಯ್ಸ್ ಗೇಮ್ ಆಡುವಾಗ ಅಮೂಲ್ಯಾ ಅದೆಷ್ಟು ಅಗ್ರೆಸ್ಸಿವ್ ಎಂಬುದನ್ನು ಎಲ್ಲರೂ ನೋಡಿದ್ದಾರೆ. ನಾಳೆಯಿಂದ ಏನಾಗುತ್ತೆ ನೋಡಿಯೇ ಬಿಡೋಣಾ ಎಂದಿದ್ದ ಅಮೂಲ್ಯಾ ಬಗ್ಗೆ ಅವರ ತಂದೆ ಓಂಕಾರೇಶ್ವರ್ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಮನೆಯವರೆಲ್ಲ ಒಟ್ಟಿಗೆ ಕೂತು ಮಾತನಾಡುತ್ತಿದ್ದಾಗ, ಎಲ್ಲರ ಆಟವನ್ನು ಮೆಚ್ಚಿದ್ದರು. ಆಗ ಅರುಣ್ ಸಾಗರ್, "ನಿಮ್ಮ ಮಗಳು ಸ್ವಲ್ಪ ಜೋರೇ ಬಿಡಿ" ಎಂದಿದ್ದೆ ತಡ, "ನನಗೆ ಇವಳನ್ನು ನೋಡಿ ಆಶ್ಚರ್ಯ ಆಗೋಯ್ತು. ಬಿಗ್ ಬಾಸ್ ಮನೆಯಲ್ಲಿ ತುಂಬಾ ತಾಳ್ಮೆಯಿಂದ ಇದ್ದಾಳೆ. ಏನು ಮಾಡುತ್ತಾಳೋ ಎಂಬ ಭಯವಿತ್ತು" ಎಂದಿದ್ದಾರೆ. "ಅವತ್ತು ಮರದ ದಿಂಬಿಯನ್ನು ಎತ್ತೆತ್ತಿ ಇಡುತ್ತಾ ಇದ್ದಳಲ್ಲ, ಹೆಣ್ಣು ಮಕ್ಕಳೆಲ್ಲಾ ಸ್ಟ್ರಾಂಗ್ ಎಂದು ಆಗ ಗೊತ್ತಾಯ್ತು" ಎಂದಿದ್ದಾರೆ.

ಅಮೂಲ್ಯ ತಂದೆ ಮಾತು ಕೇಳಿ ಮನೆಯವರು ಶಾಕ್
ಓಂಕಾರೇಶ್ವರ್ ಅವರು ಮಗಳನ್ನು ಜೊತೆಗೆ ಮನೆಯವರನ್ನು ಮಾತನಾಡಿಸಿಕೊಂಡು ವಾಪಾಸ್ ಆದಾಗ, ರಾಕಿ ಅಮೂಲ್ಯ ಬಳಿ ನಿಂತು ಮಾತನಾಡುತ್ತಿದ್ದರು. ನಿಮ್ಮ ಅಪ್ಪ ನೀನು ತಾಳ್ಮೆಯಿಂದ ಇದ್ದೀಯಾ ಅಂತಿದ್ದಾರೆ ಎಂದು ರೇಗಿಸಿದ್ದಾರೆ. ಆದರೂ ಆ ಮಾತಿಗೆ ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ತಂದೆ ಬಂದು ಹೋದ ಖುಷಿಯಲ್ಲಿ ಅಮೂಲ್ಯ ಇದ್ದರು.