Don't Miss!
- News
ಡಿಕೆಶಿ ಪತ್ನಿ ನನಗೆ ಕಾಂಗ್ರೆಸ್ ತೊರೆಯದಂತೆ ಕೋರಿದ್ದರು: ರಮೇಶ್ ಜಾರಕಿಹೊಳಿ
- Technology
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Automobiles
ಬಹುನೀರಿಕ್ಷಿತ 'ಅಲ್ಟ್ರಾವೈಲೆಟ್ F77' ಬೈಕ್ ಹೇಗಿದೆ ಗೋತ್ತಾ.. ಇಲ್ಲಿದೆ ವಿಮರ್ಶೆ
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: 31 ವರ್ಷಕ್ಕೆ ರೂಪೇಶ್ ಶೆಟ್ಟಿ ತಂದೆಯನ್ನು ಅಪ್ಪಿಕೊಂಡಿದ್ದು ಇದೇ ಮೊದಲು!
ಬಿಗ್ ಬಾಸ್‌ನಲ್ಲಿ ಈ ವಾರ ಫ್ಯಾಮಿಲಿ ರೌಂಡ್ ನಡೆಯುತ್ತಿದೆ. ಬ್ಯಾಟರಿ ರೀಚಾರ್ಜ್ ಮಾಡುತ್ತಾ ಮನೆಯವರ ಜೊತೆಗೆ ಎಷ್ಟು ಸಮಯ ಬೇಕು ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಅದರಂತೆ ಕಳೆದ ಮೂರು ದಿನದಿಂದ ಬಿಗ್ ಬಾಸ್ ಮನೆಯೊಳಗಿನ ಎಲ್ಲಾ ಸದಸ್ಯರ ಫ್ಯಾಮಿಲಿ ಸದಸ್ಯರು ಎಂಟ್ರಿ ಕೊಡುತ್ತಿದ್ದಾರೆ.
ಇಂದು ಮನೆಯೊಳಕ್ಕೆ ರೂಪೇಶ್ ಶೆಟ್ಟಿ ಅವರ ತಂದೆಯ ಆಗಮನವಾಗಿದೆ. ಇದು ನಿಜಕ್ಕೂ ರೂಪೇಶ್ ಶೆಟ್ಟಿಗೆ ಇದೊಂದು ಮರೆಯಲಾಗದ ದಿನವಂತೆ. ಅದನ್ನು ರೂಪೇಶ್ ಶೆಟ್ಟಿ ಅದೆಷ್ಟು ಎಕ್ಸೈಟ್‌ಮೆಂಟ್‌ನಿಂದ ಹೇಳಿಕೊಂಡಿದ್ದಾರೆ ಎಂದರೆ ಎಲ್ಲರ ಮುಖದಲ್ಲೂ ಆ ಸಂತೋಷ ಎದ್ದು ಕಾಣುತ್ತಿತ್ತು. ಅವರ ತಂದೆಯ ಒಂದು ಹಗ್‌ನಿಂದಾಗಿ ಫುಲ್ ಖುಷಿಯಾಗಿದ್ದಾರೆ.

ರೂಪೇಶ್ ಶೆಟ್ಟಿ ತಂದೆಯ ಆಗಮನ
ಬಿಗ್ ಬಾಸ್ ರೂಪೇಶ್ ಶೆಟ್ಟಿ ಅವರ ತಂದೆಯನ್ನು ಮನೆಗೆ ಕಳುಹಿಸಿತ್ತು. ಮನೆಯವರೆಲ್ಲಾ ಈಗ ಅಡ್ಜೆಸ್ಟ್ ಆಗಿ ಹೋಗಿದ್ದಾರೆ. ಯಾರೇ ಬಂದರೂ ಅವರೂ ಕೂಡ ತಮ್ಮ ಮನೆಯವರಂತೆ ಫೀಲ್ ಮಾಡುತ್ತಿದ್ದಾರೆ. ಅದರಂತೆ ರೂಪೇಶ್ ಶೆಟ್ಟಿ ಅವರ ತಂದೆ ಕ್ಯಾಂಪಣ್ಣ ಮನೆಯೊಳಗೆ ಎಂಟ್ರಿ ಕೊಡುತ್ತಿದ್ದಂತೆ, ಕಾವ್ಯಶ್ರೀ ಮೊದಲು ನೋಡಿದ್ದಾರೆ. ತಕ್ಷಣ ಓಡಿ ಹೋಗಿ ಎಲ್ಲರಿಗೂ ಹೇಳಿದ್ದಾರೆ. ಬಳಿಕ ಒಳಗಿದ್ದವರು ಆಚೆಗೆ ಓಡಿ ಬಂದಿದ್ದಾರೆ ಅಷ್ಟರೊಳಗೆ ರೂಪೇಶ್ ಶೆಟ್ಟಿ ತನ್ನ ತಂದೆಯ ಕಾಲಿಗೆ ನಮಸ್ಕರಿಸಿ, ಸ್ವಾಗತ ಕೂಡ ಮಾಡಿದ್ದರು.

ತಂದೆಯ ಸ್ಥಾನ ನೀಡಿದ್ದಕ್ಕೆ ಖುಷಿ
ಆರ್ಯವರ್ಧನ್ ಮತ್ತು ರೂಪೇಶ್ ಶೆಟ್ಟಿ ಓಟಿಟಿಯಿಂದಾನು ಬಂದಿರುವ ಸ್ಪರ್ಧಿಗಳು. ಓಟಿಟಿಯಲ್ಲಿದ್ದಾಗಲೇ ಆರ್ಯವರ್ಧನ್, ರೂಪೇಶ್ ಶೆಟ್ಟಿ ಅವರನ್ನು ನನ್ನ ಮಗ ಎಂದೇ ಭಾವಿಸಿದ್ದರು. ರೂಪೇಶ್ ಶೆಟ್ಟಿ ಕೂಡ ನಿಮ್ಮಲ್ಲಿ ನನ್ನ ತಂದೆಯನ್ನು ಕಾಣುತ್ತಿದ್ದೇನೆ ಎಂದಿದ್ದರು. ಆ ಬಾಂಧವ್ಯ ಟಿವಿ ಸೀಸನ್ ನಲ್ಲಿಯೂ ಮುಂದುವರೆದಿತ್ತು. ಇತ್ತೀಚೆಗಂತು ಇಬ್ಬರು ಸಿಕ್ಕಾಪಟ್ಟೆ ಕ್ಲೋಸ್ ಆಗಿ ಬಿಟ್ಟಿದ್ದಾರೆ. ಇದನ್ನು ಕಂಡಿರುವ ಮನೆಯವರಿಗೆ ತುಂಬಾನೇ ಇಷ್ಟವಾಗಿ ಬಿಟ್ಟಿದೆ. ಅದಕ್ಕೆ ರೂಪೇಶ್ ಶೆಟ್ಟಿ ಅವರ ತಂದೆ, ಆರ್ಯವರ್ಧನ್ ಅವರಿಗೆ ಖುಷಿಯಲ್ಲಿ ಧನ್ಯವಾದ ತಿಳಿಸಿದ್ದಾರೆ. ಅಷ್ಟೆ ಅಲ್ಲ ಮುಂದಿನ ಕ್ಯಾಪ್ಟನ್ ಯಾರಾಗಬೇಕು ಎಂದು ಕೇಳಿದಾಗಲೂ, ಬಿಗ್ ಬಾಸ್ ಮುಂದೆ ಆರ್ಯವರ್ಧನ್ ಆಗಲಿ ಎಂದೇ ಆಸೆ ಪಟ್ಟಿದ್ದಾರೆ.

ತಂದೆ ಮಾತನಾಡಿದ ಸ್ಟೈಲ್‌ಗೆ ಶೆಟ್ಟಿ ಶಾಕ್
ರೂಪೇಶ್ ಶೆಟ್ಟಿ ಫುಲ್ ಖುಷಿಯಾಗಿದ್ದು, ನಾನು ಯೋಚನೆ ಮಾಡಿಯೇ ಇರಲಿಲ್ಲ. ನಾನು ಯಾರಿದು ಪಂಚೆ ಹಾಕಿಕೊಂಡು ಬಂದಿದ್ದು ಎಂದು ನೋಡಿದಾಗ ಅಪ್ಪ. ಫುಲ್ ಖುಷಿಯಾಯ್ತು. 31 ವರ್ಷದಲ್ಲಿ ಇಷ್ಟು ಚೆನ್ನಾಗಿ, ಈ ರೀತಿ ಮಾತನಾಡಿದ್ದು ಇದು ಮೊದಲ ಬಾರಿಗೆ. ಅದಕ್ಕೆ ಕ್ಯಾಮೆರಾದಲ್ಲಿ ಹೇಳಿದ್ದೆ. ಅಪ್ಪ ಬರಲಿಲ್ಲ ಅಂದ್ರೆ ಬಲವಂತ ಮಾಡಬೇಡಿ. ಅಕ್ಕ ಅಥವಾ ದೊಡ್ಡಮ್ಮನನ್ನು ಕರೆಸಿ ಅಂತ. ಆದ್ರೆ ಇದು ಔಟ್ ಆಫ್ ದ ಬಾಕ್ಸ್. ಇಲ್ಲಿ ದೊಡ್ಡ ಕಂಟೆಸ್ಟೆಂಟ್ ಥರ ಮಾತನಾಡಿದ್ದಾರೆ. ಇಲ್ಲಿ ಅವರಿಗೂ ಏನು ಹೇಳಬೇಕು ಗೊತ್ತಾಗುತ್ತಿಲ್ಲ. ಲೈಫ್ ಟೈಮ್‌ನಲ್ಲಿ ಇದು ಹೊಸತರ. ಒಂದು ಹಗ್ ಕೂಡ ಕಂಫರ್ಟ್ ಇರಲಿಲ್ಲ. ಆದ್ರೆ ಅದನ್ನು ಹೇಳಿದ್ದಕ್ಕೆ ಈಗ ಹಗ್ ಕೊಟ್ಟಿದ್ದಾರೆ ಎಂದಿದ್ದಾರೆ.

ಮಗನ ಬಗ್ಗೆ ಎಲ್ಲರಲ್ಲೂ ಮನವಿ ಮಾಡಿದ ಕ್ಯಾಂಪಣ್ಣ
ಬಿಗ್ ಬಾಸ್ ಮನೆಯಲ್ಲಿ ಎಲ್ಲರೊಟ್ಟಿಗೆ ಕ್ಯಾಂಪಣ್ಣ ಚೆನ್ನಾಗಿ ಮಾತನಾಡಿದ್ದಾರೆ. ಅವನು ತಪ್ಪು ಮಾಡಿದರೆ ಅದೆಲ್ಲವನ್ನು ಹೊಟ್ಟೆಗೆ ಹಾಕಿಕೊಳ್ಳಿ. ನಿಮ್ಮೆಲ್ಲರನ್ನು ಟಿವಿಯಲ್ಲಿ ನೋಡಿ ಪರಿಚಯ. ಆಟವನ್ನು ಚೆನ್ನಾಗಿ ಆಡುತ್ತಿದ್ದೀರಿ. ಜಗಳವನ್ನು ಆಡುತ್ತೀರಿ. ಮನೆಯೆಂದರೆ ಹಾಗೇ ಇರಬೇಕು ಅಲ್ಲವಾ. ಈಗ ರಾಜ ರಾಜನಂತೆ ಕಾಣುತ್ತಿದ್ದಾನೆ. ಎರಡು ವಾರದಿಂದ ಚೆನ್ನಾಗಿ ಆಡುತ್ತಿದ್ದಾನೆ. ಅವನು ಬಾಳ ಒಳ್ಳೆ ಜನ. ನೀವೆಲ್ಲಾ ಏನೇನೋ ಸಾಧಿಸಿ ಬಂದಿದ್ದೀರಿ. ದೊಡ್ಡ ಕಲಾವಿದರು. ಅವನನ್ನು ನಿಮ್ಮ ಜೊತೆಗೆ ಕರೆದುಕೊಂಡು ಹೋಗಿ. ನನಗೆ ಮೂರು ಮಕ್ಕಳು, ಮೂರು ಮುತ್ತುಗಳು, ಅವರೇ ನನ್ನ ಸ್ವತ್ತುಗಳು ಎನ್ನುತ್ತಿದ್ದಾಗಲೇ ಸಂಬರ್ಗಿ ಟೀ ಮಾಡಿ ತಂದುಕೊಟ್ಟರು. ಆಗ ಹಳೆಯದ್ದನ್ನು ಕ್ಯಾಂಪಣ್ಣ ನೆನೆದಿದ್ದಾರೆ. ರಾಜಣ್ಣನವರು ಹಾಗೆ. ಜೋರು ಮಾತನಾಡುತ್ತಾರೆ. ಆದ್ರೆ ಆಮೇಲೆ ಸರಿಯಾಗುತ್ತೆ. ಮೊನ್ನೆ ಇವನಿಗೂ ಅವರಿಗೂ ಜೋರು ಜಗಳವಾದಾಗ ಹೆದರಿ ಬಿಟ್ಟಿದ್ದೆ. ಆಮೇಲೆ ಎಲ್ಲರೂ ಸರಿಯಾಗಿದ್ದೀರಿ. ಮನೆಯೆಂದ ಮೇಲೆ ಇದೆಲ್ಲವೂ ಇದ್ದದ್ದೆ ಅಲ್ಲವೆ ಎಂದು ಮಾತನಾಡುವಾಗಲೇ ಬಿಗ್ ಬಾಸ್‌ನಿಂದ ಬಜ್ಹರ್ ಸದ್ದು ಕೇಳಿದೆ.