Don't Miss!
- Sports
Ind vs NZ 3rd T20: ಸರಣಿ ಗೆಲ್ಲುವ ಉತ್ಸಾಹದಲ್ಲಿ ಟೀಂ ಇಂಡಿಯಾ: ಪಿಚ್ ವರದಿ ನೋಡಿ ತಂಡದಲ್ಲಿ ಬದಲಾವಣೆ
- News
ತ್ರಿಪುರಾ ಚುನಾವಣೆ: ಟಿಎಂಸಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: ಬ್ಯಾಟರಿ ಚಾರ್ಜ್ ಮಾಡಲು ರೂಪೇಶ್ ಶೆಟ್ಟಿಯಿಂದ ಹರಸಾಹಸ.. ಮುಂದೇನಾಯ್ತು?
ಟಾಸ್ಕ್ ಜೊತೆ ಜೊತೆಗೆ ಬ್ಯಾಟರಿ ನೋಡಿಕೊಳ್ಳುವುದು ಮನೆಯವರಿಗೆ ದೊಡ್ಡ ಕೆಲಸವಾಗಿ ಬಿಟ್ಟಿದೆ. ಆ ಬ್ಯಾಟರಿ ಡೌನ್ ಆಯ್ತು ಎಂದರೆ ಮನೆಯವರೆಲ್ಲಾ ಫುಲ್ ಶಾಕ್ ಆಗುತ್ತಿದ್ದಾರೆ. ಬ್ಯಾಟರಿ ರಿಚಾರ್ಜ್ ಮಾಡಿಕೊಳ್ಳುವುದಕ್ಕೆ ಬಿಗ್ ಬಾಸ್ ಆಗಾಗ ಗೇಮ್ ಸಹ ನೀಡಿ ಮನೆಯವರಿಗೆ ಬೂಸ್ಟ್ ಮಾಡುತ್ತಿದೆ. ಆದ್ರೆ ಈ ಬಾರಿ ರೂಪೇಶ್ ಶೆಟ್ಟಿ ಎಡವಿದ್ದು, ಬ್ಯಾಟರಿ ರಿಚಾರ್ಜ್ ಆಗಲಿಲ್ಲ.
ಈ ವಾರ ಮನೆಯಲ್ಲಿ ಫ್ಯಾಮಿಲಿ ರೌಂಡ್ ನಡೆಯುತ್ತಿದೆ. ದಿನಕ್ಕೆ ಮೂವರು ಫ್ಯಾಮಿಲಿ ಮನೆಯೊಳಗೆ ಬಂದು ಹೋಗುತ್ತಿದ್ದಾರೆ. ಆದ್ರೆ ಮನೆಯವರು ಒಳಗೆ ಬರಬೇಕು ಎಂದರೆ ಪ್ರತಿಯೊಬ್ಬರು ಸಪೋರ್ಟಿವ್ ಆಗಿರಬೇಕಾಗುತ್ತದೆ. ಯಾರೇ ಒಬ್ಬರು ಸೋತರು, ಫ್ಯಾಮಿಲಿ ಸದಸ್ಯರು ಮನೆಯೊಳಗೆ ಬರುವುದಕ್ಕೆ ಬಹಳ ಕಷ್ಟವಾಗುತ್ತದೆ. ಇದು ಮನೆಯವರಿಗೆ ಕಷ್ಟದ ಸಂಗತಿ.
BBK9:
ಆರ್ಯವರ್ಧನ್
ಮಾತಿಗೆ
ಮರುಳಾದ
ಅನುಪಮಾ
ತಾಯಿ!

ಟಾಸ್ಕ್‌ನಲ್ಲಿ ಸೋತ ರೂಪೇಶ್ ಶೆಟ್ಟಿ
ಬಿಗ್ ಬಾಸ್ ಮನೆಯಲ್ಲಿ ಇರುವ ಬ್ಯಾಟರಿ ಮಷಿನ್‌ನಲ್ಲಿ ಬ್ಯಾಟರಿ ಯಾವಾಗಲೂ ತುಂಬಿರಬೇಕಾಗುತ್ತದೆ. ಏನಾದರೂ ನಿಯಮ ಮೀರಿದರೂ ಬ್ಯಾಟರಿ ತನ್ನಿಂದಾನೇ ಕಡಿಮೆಯಾಗುತ್ತಾ ಹೋಗುತ್ತದೆ. ಆ ರೀತಿ ಇಂದು ಬೆಳಗ್ಗೆಯೇ ಬ್ಯಾಟರಿ 40%ಗೆ ಬಂದು ನಿಂತಿತ್ತು. ಬ್ಯಾಟರಿ ರೀಚಾರ್ಜ್ ಮಾಡುವುದಕ್ಕೆ ಮಾಮೂಲಿಯಂತೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿತ್ತು. ಆ ಟಾಸ್ಕ್ ಆಡುವುದಕ್ಕೆ ಮನೆ ಮಂದಿಯೆಲ್ಲಾ ಸೇರಿಕೊಂಡು ರೂಪೇಶ್ ಶೆಟ್ಟಿಯನ್ನು ಆಯ್ಕೆ ಮಾಡಿಕೊಂಡರು. ಆದ್ರೆ ಬಿಗ್ ಬಾಸ್ ಕೊಟ್ಟ ಗೇಮ್ ಅನ್ನು ರೂಪೇಶ್ ಶೆಟ್ಟಿ ಸೋತಿದ್ದಾರೆ.

ರೂಪೇಶ್ ಶೆಟ್ಟಿಗೆ ಸಮಾಧಾನ ಮಾಡಿದ ಮನೆ ಮಂದಿ
ಇದು ನೆಕ್ ಮೂಮೆಂಟ್ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಎಲ್ಲರೂ ತಾಳ್ಮೆಯಿಂದ ನಡೆದುಕೊಳ್ಳುತ್ತಿದ್ದಾರೆ. ಹತ್ತು ಸೆಕೆಂಡುಗಳಲ್ಲಿ ಕೆಂಪು ಬಣ್ಣದ ತ್ರಿಕೋನಗಳನ್ನು ಜೋಡಿಸಬೇಕಿತ್ತು. ಇದಕ್ಕೆ ಮೂರು ಲೈಫ್ ಲೈನ್ ಕೂಡ ನೀಡಿದ್ದರು. ಆದರೆ, ರೂಪೇಶ್ ಶೆಟ್ಟಿ ಎಷ್ಟೇ ಪ್ರಯತ್ನ ಪಟ್ಟರು ಆ ಆಟವನ್ನು ಗೆಲ್ಲುವುದಕ್ಕೆ ಆಡಲಿಲ್ಲ. ಇದಕ್ಕೆ ರೂಪೇಶ್ ಶೆಟ್ಟಿ ಬಹಳ ಸಂಕಟ ಪಟ್ಟರು. ಆದ್ರೆ ಮನೆಯವರೆಲ್ಲ ಸಮಾಧಾನ ಮಾಡಿ, ಮತ್ತೆ ಆಟ ಆಡೋಣಾ ಎಂದು ಹುರಿದುಂಬಿಸಿದರು.

ಮತ್ತೆ ಟಾಸ್ಕ್ ಕೇಳಲು ಸಿದ್ಧರಾದ ಮನೆಯವರು
ಇನ್ನು ಉಳಿದಿರುವುದು ಕೇವಲ 40% ಬ್ಯಾಟರಿ. ಈ ಬ್ಯಾಟರಿಯನ್ನು ಮೊದಲು ರಿಚಾರ್ಜ್ ಮಾಡಲೇಬೇಕು. ಇಲ್ಲವಾದಲ್ಲಿ ಮನೆ ಮಂದಿಗೆ ಮನೆಯವರನ್ನು ನೋಡುವುದಕ್ಕೆ ಆಗುವುದಿಲ್ಲ. ಯಾರಾದರೂ ಒಬ್ಬರು 30% ಆಯ್ಕೆ ಮಾಡಿಕೊಂಡರು, 10% ಉಳಿದರೆ ಇನ್ನು ಕಷ್ಟ ಅನುಭವಿಸಬೇಕಾಗುತ್ತೆ. ಹೀಗಾಗಿ ಎಲ್ಲಾ ಗೊಂದಲದಲ್ಲಿದ್ದು, ಮನೆಯವರನ್ನು ಭೇಟಿ ಮಾಡುವುದು ಆಮೇಲೆ ಮೊದಲು ಟಾಸ್ಕ್ ಆಡೋಣಾ ಎಂದೇ ಎಲ್ಲರೂ ನಿರ್ಧಾರ ಮಾಡಿದರು.

ಮನೆಯವರೆಲ್ಲಾ ಸಲಹೆ ಏನು..?
ಮನೆಗೆ ಬರುವ ಫ್ಯಾಮಿಲಿ ಇನ್ನು ತುಂಬಾ ಇದೆ. ಆದ್ರೆ ಬ್ಯಾಟರಿ ಡೌನ್ ಆಗುತ್ತಿದೆ. ಈ ಬಗ್ಗೆ ಎಲ್ಲರಿಗೂ ಚಿಂತೆ ಎದ್ದಿದೆ. ಇದಕ್ಕಾಗಿ ಎಲ್ಲರೂ ಕೂತು ಮಾತನಾಡುವಾಗ, 40 ಪರ್ಸೆಂಟ್ ಅಷ್ಟೆ ಇದೆ. ಮೂರು ಜನ ಇದ್ದಾರೆ. ಇನ್ನು ಒಂದು ರೀಚಾರ್ಜ್ ಮಾಡಬಹುದು. ಈಗ ರಿಸ್ಕ್ ತೆಗದುಕೊಳ್ಳೋಣಾ ಒಬ್ಬರನ್ನು ಕಳುಹಿಸೋಣಾ, ಅವರು ಅಟ್ಲೀಸ್ಟ್ 10% ಉಳಿಯುವಂತೆ ಆಯ್ಕೆ ಮಾಡಿಕೊಳ್ಳಲಿ. ತಕ್ಷಣ ಗೇಮ್ ಅನೌನ್ಸ್ ಮಾಡ್ತೀನಿ. ಅದುವರೆಗೂ ನಾವ್ಯಾರು ರೂಲ್ಸ್ ಬ್ರೇಕ್ ಮಾಡುವಂಗಿಲ್ಲ. ಒಬ್ಬರು ಗೆದ್ದರು 100% ಆಗುತ್ತೆ. ಆಗ ಮೂರು ಜನ 30 ಅಂಡ್ 30 ತೆಗೆದುಕೊಳ್ಳಬಹುದು ಎಂದು ರಾಕಿ ಸಲಹೆ ನೀಡಿದಾಗ, ರೂಪೇಶ್ ಶೆಟ್ಟಿ ಮತ್ತೊಂದು ಸಲಹೆ ನೀಡಿದ್ದಾರೆ. ಗೇಮ್ ಈಗಲೇ ಆಡಿದರೆ ಬೆಟರ್ ಅಂತ. ಆಗ ಅರುಣ್ ಸಾಗರ್ ಕೂಡ, ಟಾಸ್ಕ್ ಆಡಿ 100 ಪರ್ಸೆಂಟ್ ತುಂಬಿಸುವುದು ಬೆಸ್ಟ್. ಇಲ್ಲವಾದರೆ ಯಾರಾದರೂ ತ್ಯಾಗ ಮಾಡುವುದು ಬೆಸ್ಟ್ ಅಂದಿದ್ದಾರೆ. ಎಲ್ಲರೂ ಮೊದಲು ಆಟ ಆಡುವುದಕ್ಕೆ ಎಸ್ ಎಂದಿದ್ದಾರೆ.