Don't Miss!
- News
ಕಿಚ್ಚ ಸುದೀಪ್ ಭೇಟಿಯ ಹಿಂದಿನ ಕಾರಣ ಬಹಿರಂಗಪಡಿಸಿದ ಡಿಕೆಶಿ: ಏನದು ಕುತೂಹಲಕರ ಸಂಗತಿ?
- Finance
Infographics: ಬಜೆಟ್ 2023ನಲ್ಲಿ ಕೇಂದ್ರದ ಯೋಜನೆಗಳಿಗೆ ಸಿಕ್ಕ ಅನುದಾನ ಎಷ್ಟು? ವಿವಿರ ಇಲ್ಲಿದೆ
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: ಬಿಗ್ ಬಾಸ್ ಮನೆಯೊಳಗೆ ಅರುಣ್ ಸಾಗರ್ ಕಾಣಿಸುತ್ತಿಲ್ಲ.. ಎಲ್ಲಿ ಹೋದ್ರು?
ಬಿಗ್ ಬಾಸ್ ದಿನಗಳು ಒಂದೊಂದಾಗಿ ಉರುಳುತ್ತಾ ಇದೆ. ಇನ್ನೊಂದು ವಾರವಷ್ಟೇ ಮನೆಯವರಿಗೆ ಬಿಗ್ ಬಾಸ್ ಜರ್ನಿ ಮಾಮೂಲಿಯಂತೆ ನಡೆಯಲಿದೆ. ಈಗಾಗಲೇ ಮನೆಯಲ್ಲಿ ಎಂಟು ಜನ ಇದ್ದು, ಫೈನಲ್‌ಗೆ ಬರುವಾಗ ಐದು ಜನ ಮಾತ್ರ ವೇದಿಕೆಯಲ್ಲಿ ಇರಲಿದ್ದಾರೆ. ಆದರೆ ಬಿಗ್ ಬಾಸ್ ಮನೆಯಿಂದ ಹೊರಗೆ ಬರುವುದು ಇನ್ನು ಮೂರು ಜನ ಯಾರು ಎಂಬ ಚರ್ಚೆಗಳು ಜೋರಾಗಿ ಕೇಳಿ ಬರುತ್ತಿದೆ.
ಇನ್ನು ಈ ವಾರ ಅನಿರೀಕ್ಷಿತವಾಗಿ ಅನುಪಮಾ ಅವರನ್ನು ಎಲಿಮಿನೇಟ್ ಮಾಡಲಾಗಿದೆ. ಕಳೆದ ವಾರವಷ್ಟೇ ಕಿಚ್ಚ ಸುದೀಪ್ ಮುಂದಿನ ವಾರದಿಂದ ಡಬಲ್ ನಾಮಿನೇಷನ್ ಎಂದು ಹೇಳಲಾಗಿತ್ತು. ಆದರೆ ಈ ವಾರದ ಸಿಂಗಲ್ ಎಲಿಮಿನೇಷನ್ ಆಗಿತ್ತು. ಈ ವಾರದ ನಡುವಲ್ಲಿಯೇ ಒಬ್ಬರನ್ನು ಎಲಿಮಿನೇಷನ್ ಮಾಡುತ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ಅರುಣ್ ಸಾಗರ್ ದಿಢೀರನೇ ನಾಪತ್ತೆಯಾಗಿದ್ದಾರೆ.
BBK9:ರಾಕೇಶ್
ಮದುವೆಗೆ
ತಯಾರಿ
:
ದಿವ್ಯಾ
ಆದ್ರೂ
ಓಕೆ..
ಅಮೂಲ್ಯ
ಆದ್ರೂ
ಓಕೆ!

ಅರುಣ್ ಸಾಗರ್ ಇಲ್ಲದ ಮನೆ
ಬಿಗ್ ಬಾಸ್ ಮನೆಯಲ್ಲಿ ಅನುಪಮಾ ಆದ ಮೇಲೆ ಉಳಿದದ್ದು ಎಂಟು ಜನ ಮಾತ್ರ. ಅದರಲ್ಲೂ ಈ ವಾರದ ಡಬ್ಬಲ್ ಎಲಿಮಿನೇಷನ್‌ನಲ್ಲಿ ಅಮೂಲ್ಯ ಹೋಗುತ್ತಾರೆ ಎಂಬ ಚರ್ಚೆಗಳು ಶುರುವಾಗಿತ್ತು. ಆದರೆ ಇದ್ದಕ್ಕಿದ್ದ ಹಾಗೇ ಅರುಣ್ ಸಾಗರ್ ಮನೆಯೊಳಗೆ ಕಾಣಿಸುತ್ತಿಲ್ಲ. ಹೀಗಾಗಿ ಎಲ್ಲರ ಕಣ್ಣು ಮನೆಯನ್ನೆಲ್ಲಾ ಹುಡುಕಿದೆ. ಇವತ್ತು ನಡೆದ ಟಾಸ್ಕ್ ಗಳಲ್ಲೂ ಅರುಣ್ ಸಾಗರ್ ನಾಪತ್ತೆಯಾಗಿದ್ದಾರೆ.
BBK9:
ರಾಜಣ್ಣನ
ಮಾತಿಗೆ
ರೂಪೇಶ್
ಶೆಟ್ಟಿ
ನೊಂದುಕೊಂಡ್ರಾ..?
ಬುದ್ಧಿ
ಕಲಿತರಾ..?

ಬಿಗ್ ಬಾಸ್‌ನಿಂದ ಕೂಡ ಉತ್ತರವಿಲ್ಲ
ಮನೆಯಲ್ಲಿ ಯಾರಿಗಾದರೂ ಆರೋಗ್ಯ ಕೈಕೊಟ್ಟರೆ ಬಿಗ್ ಬಾಸ್ ಅವರನ್ನು ಕನ್ಫೇಷನ್ ರೂಮಿಗೆ ಕರೆದು ಮಾತನಾಡುತ್ತಾರೆ. ಅಥವಾ ಚಿಕಿತ್ಸೆಗಾಗಿ ಎಷ್ಟು ದಿನಗಳ ಕಾಲ ಬೇಕಾಗಬಹುದು ಎಂಬುದೆಲ್ಲವನ್ನು ಮನೆಯವರಿಗೆ ಹಾಗೂ ನೋಡುಗರಿಗೆ ತಿಳಿಸುವಂತೆ ಕೂಗಿ ಹೇಳುತ್ತಾರೆ. ಆದರೆ ಇವತ್ತು ಅರುಣ್ ಸಾಗರ್ ಇಲ್ಲದೆ ಮನೆ ಬಣಗುಡುತ್ತಿತ್ತು. ಬಿಗ್ ಬಾಸ್ ಕೂಡ ಯಾವುದೇ ಮಾಹಿತಿ ನೀಡಿಲ್ಲ. ಅಷ್ಟೇ ಯಾಕೆ ಬಿಗ್ ಬಾಸ್ ಸ್ಪರ್ಧಿಗಳು ಕೂಡ ಆ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇದು ನೋಡುಗರಿಗೆ ಹಲವು ಅನುಮಾನಕ್ಕೆ ಕಾರಣವಾಗಿದೆ.

ಅರುಣ್ ಸಾಗರ್ ಮತ್ತೆ ಬರುತ್ತಾರಾ..?
ಬಿಗ್ ಬಾಸ್ ಮನೆಯಲ್ಲಿ ಅರುಣ್ ಸಾಗರ್ ಇಲ್ಲದೆ ಏನೋ ಒಂದನ್ನು ಕಳೆದುಕೊಂಡ ಭಾವ ನೋಡುಗರದ್ದು. ಅವರು ಮಾಡುತ್ತಿದ್ದ ಕಾಮಿಡಿಗಳು, ಎಲ್ಲರನ್ನು ನಗಿಸುತ್ತಿದ್ದ ರೀತಿ ಎದ್ದು ಕಾಣಿಸುತ್ತಿತ್ತು. ಮನೆಯನ್ನು ಇಷ್ಟು ಸೈಲೆಂಟ್ ಆಗಿ ಇರುವುದಕ್ಕೆ ಬಿಡುತ್ತಿರಲಿಲ್ಲ. ಆದರೆ ಇವತ್ತು ಮನೆಯಲ್ಲಿ ಎಲ್ಲಿಯೂ ಅರುಣ್ ಸಾಗರ್ ಕಾಣದೆ ಇರುವುದು ಎದ್ದು ಕಾಣಿಸುತ್ತಾ ಇತ್ತು. ಆದ್ರೆ ಅರುಣ್ ಸಾಗರ್ ಇನ್ನು ಎಲಿಮಿನೇಷನ್ ಆಗಿಲ್ಲ. ಮತ್ತೆ ಎಲ್ಲಿಗೆ ಹೋದರು ಅನ್ನೋ ಪ್ರಶ್ನೆ ಕಾಡುತ್ತಿದೆ.

ಅರುಣ್ ಸಾಗರ್ ಹೊರಬರಲು ಕಾರಣವೇನು?
ಅರುಣ್ ಸಾಗರ್ ಪುತ್ರಿಯ ಆರೋಗ್ಯ ಸಮಸ್ಯೆ ಎದುರಾಗಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಅವರನ್ನು ನೋಡಲೆಂದು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಮಗಳು ಹುಷಾರಾದ ಮೇಲೆ ವಾಪಾಸ್ ಹೋಗಬಹುದು. ಇಲ್ಲಿನ ಪರಿಸ್ಥಿತಿ ಅರಿತ ಬಳಿಕ ಅವರು ಮತ್ತೆ ಹೋಗುತ್ತಾರಾ ಇಲ್ಲವ ಎಂಬುದನ್ನು ಅಂದಾಜಿಸಬಹುದಾಗಿದೆ ಎಂಬ ಸುದ್ದಿ ಆಪ್ತವಲಯದಲ್ಲಿ ಹರಿದಾಡುತ್ತಿದೆ. ಅಸಲಿಗೆ ಮ್ಯಾಟರ್ ಏನು? ಅನ್ನೋದು ಇನ್ನೂ ಹೊರಬಿದ್ದಿಲ್ಲ.