Don't Miss!
- Sports
Ind Vs Aus Test: ಟೆಸ್ಟ್ ಸರಣಿಗೆ ಈ ರೀತಿ ಪಿಚ್ ಬೇಕು ಎಂದು ಕ್ಯುರೇಟರ್ಗಳಿಗೆ ಮನವಿ ಮಾಡಿದ ದ್ರಾವಿಡ್ ಮತ್ತು ರೋಹಿತ್ ಶರ್ಮಾ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: ಬಿಗ್ ಬಾಸ್ ಮನೆಗೆ ವಾಪಾಸ್ ಬಂದ ಅರುಣ್ ಸಾಗರ್ : ಅಷ್ಟಕ್ಕೂ ಏನಾಗಿತ್ತು..?
ಬಿಗ್ ಬಾಸ್ ಮನೆಯಲ್ಲಿ ನಿನ್ನೆಯ ಎಪಿಸೋಡ್‌ನಲ್ಲಿ ಟಾಸ್ಕ್ ನೋಡುವುದಕ್ಕಿಂತ ಹೆಚ್ಚಾಗಿ ಅರುಣ್ ಸಾಗರ್ ಅವರನ್ನು ಹುಡುಕಿದ್ದೆ ಹೆಚ್ಚಾಗಿತ್ತು. ಯಾಕೆ ಅರುಣ್ ಸಾಗರ್ ಕಾಣಿಸುತ್ತಿಲ್ಲ ಅಂತ ನೋಡಿದವರೆಲ್ಲಾ ತಲೆ ಕೆಡಿಸಿಕೊಂಡಿದ್ದರು. ಸೀಕ್ರೇಟ್ ಆಗಿ ಎಲಿಮಿನೇಷನ್ ಆಗಿ ಬಿಟ್ಟರಾ ಎಂದೆಲ್ಲಾ ಅನುಮಾನಗಳಿಗೆ ಶುರುವಾಗಿತ್ತು. ಆದರೆ ಇಂದು ಅದಕ್ಕೆಲ್ಲಾ ತೆರೆಬಿದ್ದಿದೆ.
ಬಿಗ್ ಬಾಸ್ ಜರ್ನಿ ಎಲ್ಲರಿಗೂ ಇನ್ನು ಸ್ವಲ್ಪ ದಿನಗಳು ಬಾಕಿ ಇದೆ. ಮನೆಯಲ್ಲಿ ಎಂಟು ಮಂದಿ ತಮ್ಮ ಆಟಗಳನ್ನು ತೋರಿಸುತ್ತಿದ್ದಾರೆ. ಅಷ್ಟೆ ಅಲ್ಲ ಆಟಕ್ಕಿಂತ ಹೆಚ್ಚಾಗಿ ತಮ್ಮವರು ಎಂಬ ಬಾಂಧವ್ಯ ಬೆಳೆದಿದೆ. ಏನನ್ನೇ ಹೇಳಬೇಕಾದರೂ ಮಾಡಬೇಕಾದರೂ ತುಂಬಾನೇ ಯೋಚಿಸುತ್ತಿದ್ದಾರೆ. 86 ದಿನಗಳು ಒಟ್ಟಾಗಿ ಜೀವಿಸಿದಾಗ ಆ ಬಾಂಧವ್ಯ ಬೆಳೆಯದೆ ಇರೋದಿಲ್ಲ.
BBK9:
ಬಿಗ್
ಬಾಸ್
ಮನೆಯೊಳಗೆ
ಅರುಣ್
ಸಾಗರ್
ಕಾಣಿಸುತ್ತಿಲ್ಲ..
ಎಲ್ಲಿ
ಹೋದ್ರು?

ಬಿಗ್ ಬಾಸ್ ಮನೆಗೆ ಅರುಣ್ ಸಾಗರ್ ಎಂಟ್ರಿ
ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಫುಲ್ ಎಂಟರ್ಟೈನಿಂಗ್ ಆಗಿ ಎಲ್ಲರನ್ನು ನೋಡಿಕೊಳ್ಳುತ್ತಿದ್ದರು ಅರುಣ್ ಸಾಗರ್. ಬಹಳಷ್ಟು ಬಾರಿ ವಾರದ ಕಥೆಯಲ್ಲೂ ಈ ಬಗ್ಗೆ ಮನೆ ಮಂದಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅರುಣ್ ಸಾಗರ್ ಅವರು ತಮ್ಮ ವಯಸ್ಸಿಗೂ ಮೀರಿ, ಮನರಂಜನೆ ನೀಡುತ್ತಾರೆ ಎಂದು ಹೇಳುತ್ತಿದ್ದರು. ಯಾರೇ ಸೈಲೆಂಟ್ ಆದರೂ ಅರುಣ್ ಸಾಗರ್ ಎಲ್ಲರನ್ನು ತುಂಬಾನೇ ಖುಷಿಯಾಗಿಟ್ಟುಕೊಳ್ಳುವುದಕ್ಕೆ ಯತ್ನಿಸುತ್ತಾರೆ. ಆದರೆ ನಿನ್ನೆ ಮನೆಯಿಂದ ಹೊರಗೆ ಹೋದ ಮೇಲೆ ಎಲ್ಲರಿಗೂ ಶಾಕ್ ಆಗಿತ್ತು. ಮನೆ ಅವರಿಲ್ಲದೆ ಖಾಲಿ ಖಾಲಿಯಯಾಗಿದ್ದಿದ್ದು ಕಾಣಿಸುತ್ತಿತ್ತು. ಆದರೆ ಇಂದು ಭೇಟಿ ನೀಡಿದ್ದು ಎಲ್ಲರಿಗೂ ಖುಷಿ ಕೊಟ್ಟಿದೆ.

ಅರುಣ್ ಸಾಗರ್ ಆಟಕ್ಕೆ ದೀಪಿಕಾ ಶಾಕ್
ನಿನ್ನೆಯಿಂದ ಮನೆಯಲ್ಲಿ ಕಾಣೆಯಾಗಿದ್ದ ಅರುಣ್ ಸಾಗರ್ ಇಂದು ದಿಢೀರನೆ ಮನೆಗೆ ಭೇಟಿ ನೀಡಿದ್ದಾರೆ. ಬಾತ್ ರೂಮ್ ಏರಿಯಾಗೆ ವಿಸಿಟ್ ಮಾಡಿದ್ದು, ಅಲ್ಲಿಯೇ ಇದ್ದ ದೀಪಿಕಾರನ್ನು ಹೆದರಿಸಿದ್ದಾರೆ. ಅರುಣ್ ಸಾಗರ್ ಬಂದ ರೀತಿಗೆ ದೀಪಿಕಾ ಬೆಚ್ಚಿ ಬಿದ್ದಿದ್ದಾರೆ. ಬಳಿಕ ಇವರು ಅರುಣ್ ಸಾಗರ್ ಎಂದು ಗೊತ್ತಾದ ಕೂಡಲೆ ಫುಲ್ ಖುಷಿಯಾಗಿದ್ದಾರೆ. ಒಂದು ಗಟ್ಟಿ ಅಪ್ಪುಗೆ ನೀಡಿ ಮತ್ತೊಮ್ಮೆ ಬರಮಾಡಿಕೊಂಡಿದ್ದಾರೆ.

ಅರುಣ್ ಸಾಗರ್ ಮುಖಕ್ಕೆ ಏನಾಯಿತು..?
ನಿನ್ನೆಯಿಂದ ಮೊದಲೇ ಮನೆಯಲ್ಲಿ ಅರುಣ್ ಸಾಗರ್ ನಾಪತ್ತೆಯಾಗಿದ್ದರು. ಆದರೆ ಇವತ್ತು ದಿಢೀರನೆ ಮನೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ. ಆದರೆ ಯಾವ ರೀತಿಯಾಗಿ ಫುಲ್ ಮುಖಕ್ಕೆಲ್ಲಾ ಬ್ಯಾಂಡೇಜ್ ಸುತ್ತಿಕೊಂಡು, ಗಾಬರಿಯಾಗುವಂತೆ ಬಂದಿದ್ದಾರೆ. ಬರುವಾಗಲೇ ಮುಖಕ್ಕೆ ಫುಲ್ ಬ್ಯಾಂಡೇಜ್ ಸುತ್ತಿಕೊಂಡಿದ್ದಾರೆ. ಅದರ ಜೊತೆಗೆ ಬಾತ್ ರೂಮಿಗೆ ಹೋಗಿ ಆಚೆ ಬಂದಾಗ ದೀಪಿಕಾಗೆ ಭಯ ಹುಟ್ಟಿಸಿದ್ದಾರೆ. ಬಿಳಿ ಬಣ್ಣದ, ಉದ್ದನೆಯ ಬಟ್ಟೆ ಹಾಕಿ ದೆವ್ವದಂತೆ ಕಾಣಿಸಿಕೊಂಡಿದ್ದಾರೆ. ಇದನ್ನು ಕಂಡು ದೀಪಿಕಾ ಜೋರಾಗಿ ಕಿರುಚಿದ್ದಾರೆ. ಬಳಿಕ ಅರುಣ್ ಸಾಗರ್ ಎಂದು ಗೊತ್ತಾದ ಕೂಡಲೇ ಟಿಶ್ಯೂ ಬಂಡಲ್‌ಗಳನ್ನು ಎಸೆದಿದ್ದಾರೆ.

ಅರುಣ್ ಸಾಗರ್ ಹೋಗಿದ್ದಾದರೂ ಎಲ್ಲಿಗೆ..?
ಇವತ್ತು ಅರುಣ್ ಸಾಗರ್ ಎಂಟ್ರಿಯ ವಿಡಿಯೋವೊಂದನ್ನು ಅಧಿಕೃತ ಅಕೌಂಟ್‌ನಲ್ಲಿ ಚಾನೆಲ್ ಹಂಚಿಕೊಂಡಿತ್ತು. ಇದಕ್ಕೆ ಪಾಸಿಟಿವ್ ಕಮೆಂಟ್‌ಗಳ ಜೊತೆಗೆ ಅರುಣ್ ಸಾಗರ್ ಬಗೆಗೂ ಒಂದಷ್ಟು ಕಮೆಂಟ್‌ಗಳು ಬಂದಿದೆ. ಮಗಳ ಅನಾರೋಗ್ಯವನ್ನು ನೋಡಿಯೂ ಅರುಣ್ ಸಾಗರ್ ಬಿಗ್ ಬಾಸ್ ಮನೆಗೆ ಬಂದು ವೃತ್ತಿ ನಿಷ್ಠೆ ಮೆರೆದಿದ್ದಾರೆ ಅಂತ ಒಬ್ಬರು ಮೆಸೇಜ್ ಮಾಡಿದರೆ, ಅರುಣ್ ಸಾಗರ್ ಹೊರ ಹೋಗಿದ್ದು ಯಾಕೆ ಎಂಬುದು ವೀಕೆಂಡ್ ಶೋನಲ್ಲಿ ಗೊತ್ತಾಗಲಿದೆ ಎಂದು ಇನ್ನೊಂದಷ್ಟು ಜನ ಕಮೆಂಟ್ ಹಾಕಿದ್ದಾರೆ.