BBK9 : ಅಪ್ಪ - ಮಗನ ಬಾಂಧವ್ಯಕ್ಕೊಂದು ಟಾಸ್ಕ್ : ಗುರೂಜಿ ಕಣ್ಣಲ್ಲಿ ಬಂತುನೀರು!

By ಎಸ್ ಸುಮಂತ್

ಬಿಗ್ ಬಾಸ್ ಮನೆ ಆಗಾಗ ಹಲವು ಬಾಂಧವ್ಯಕ್ಕೂ ಕಾರಣವಾಗುತ್ತೆ. ಬಿಗ್ ಬಾಸ್ ಮನೆಯಿಂದ ಹೊರಗೆ ಬಮನದ ಮೇಲೆ ನಮ್ಮ ದಾರಿ ಹೇಗೆ ಎಂದು ಗೊತ್ತಿದ್ದರು ಎಷ್ಟೋ ಸಂಬಂಧ ಬಂಧ ಅಲ್ಲಿ ಬೆಳೆದು ಬಿಡುತ್ತದೆ. ಇಷ್ಟೆಲ್ಲ ಹೇಳೋದಕ್ಕೆ ಕಾರಣ ಅಂದ್ರೆ ಆರ್ಯವರ್ಧನ್ ಗುರೂಜಿ ಹಾಗೂ ರೂಪೇಶ್ ಶೆಟ್ಟಿ.

ಆರ್ಯವರ್ಧನ್ ಗುರೂಜಿ ಒಟಿಟಿ ಸೀಸನ್ ನಿಂದಾನು ಬಿಗ್ ಬಾಸ್ ಮನೆ ನೋಡಿದವರು. ಅದರಲ್ಲಿ ರೂಪೇಶ್ ಶೆಟ್ಟಿಯನ್ನು ತಮ್ಮ ಮಗನೆಂದೆ ಭಾವಿಸಿದ್ದಾರೆ. ಆ ಪ್ರೇಮಕ್ಕೆ ಇಂದು ಕಣ್ಣೀರು ಹಾಕಿದ್ದಾರೆ. ಮನೆ ಮಂದಿಯೆಲ್ಲಾ ಅವರ ಕಣ್ಣೀರು ಕಂಡು ಸೋ ಕ್ಯೂಟ್ ಎಂದಿದ್ದಾರೆ.

ಅಡುಗೆ ಮನೆಯಲ್ಲಿಯೇ ಬ್ಯುಸಿ ಗುರೂಜಿ

ಅಡುಗೆ ಮನೆಯಲ್ಲಿಯೇ ಬ್ಯುಸಿ ಗುರೂಜಿ

ಗುರೂಜಿಗೆ ಶಕ್ತಿಗಿಂತ ಯುಕ್ತಿಯೂ ಜಾಸ್ತಿಯೇ ಇದೆ. ಅದರಲ್ಲೂ ಮಗಳ ಹೆಸರೆತ್ತಿದರೆ ಸಾಕು ದೇಹದಲ್ಲಿ ಇಲ್ಕದೆ ಇರುವ ಶಕ್ತಿಯೆಲ್ಲಾ ಒಟ್ಟೊಟ್ಟಿಗೆ ಬರುತ್ರೆ. ಒಟಿಟಿ ಸೀಸನ್ ನಿಂದ ಬಂದಿರುವ ಗುರೂಜಿ ಹೆಚ್ಚು ಕಾಣಿಸಿಕೊಳ್ಳುವುದು ಅಡುಗೆ ಮನೆಯಲ್ಲಿಯೇ. ರುಚಿಕಟ್ಟಾದ ಊಟ ಬಡಿಸಿ, ಅದರಿಂದ ಸುಗುವ ಕಮೆಂಟ್ ಗಳಿಗೆ ಖುಷಿ ಪಡುತ್ತಾರೆ. ಆದರೆ ಅವರ ಟಾಸ್ಕ್ ಅಡುಗೆಯಷ್ಟೇ ಸ್ಟ್ರಾಂಗ್ ಆಗಿಯೂ ಇರುತ್ತದೆ.

ಯಾವಾಗಲೂ ಸಪೋರ್ಟ್

ಯಾವಾಗಲೂ ಸಪೋರ್ಟ್

ರೂಪೇಶ್ ಶೆಟ್ಟಿ ಫೇಕ್ ಮನುಷ್ಯ ಅಲ್ಲ ಅನ್ನೋದು ಈಗಾಗಲೇ ಹಲವು ಬಾರಿ ಪ್ರೂವ್ ಆಗಿದೆ. ರಿಯಲ್ ಕ್ಯಾರೆಕ್ಟರ್ ಅನ್ನೇ ಪ್ಲೇ ಮಾಡುತ್ತಿದ್ದಾರೆ ಎಂಬ ಫೀಲ್ ಎಲ್ಲರದ್ದು. ಒಟಿಟಿ ಸೀಸನ್‌ನಿಂದ ರೂಪೇಶ್ ಶೆಟ್ಟಿ ಹಾಗೂ ಗುರೂಜಿ ಅಪ್ಪ‌ಮಗನ ಬಾಂಧವ್ಯ ಶುರುವಾಗಿದ್ದು. ಪತ್ರ ಬರೆಯುವುದಾಗಲಿ, ಎಮೋಷನಲಿ ವಿಚಾರದ ಆಯ್ಕೆಗಾಗಲಿ ಇಬ್ಬರು ಒಬ್ವರನ್ನೊಬ್ವರು ಬಿಟ್ಟುಕಿಟ್ಟ ದಿನವೇ ಇಲ್ಲ.

ಟಾಸ್ಕ್ ನಲ್ಲೂ ಗೆದ್ದ ಗುರೂಜಿ

ಟಾಸ್ಕ್ ನಲ್ಲೂ ಗೆದ್ದ ಗುರೂಜಿ

ಇವತ್ತು ಹೊಸ ಟಾಸ್ಕ್ ನೀಡಲಾಗಿತ್ತು. ಒಂದು ವೃತ್ತಾಕಾರದಲ್ಲಿ ಬಟ್ಟೆಯ ಪೀಸುಗಳನ್ನು ಇಡಲಾಗಿತ್ತು. ಐದು ಜನ ಕಂಟೆಸ್ಟೆಂಟ್ ಗಳಿದ್ದರೆ ನಾಲ್ಕು ಬಟ್ಟೆಗಳನ್ನು ಇಡಲಾಗಿತ್ತು. ಹೀಗೆ ಆಡುವಾಗ ಒಮ್ಮೆ ರೂಪೇಶ್ ಶೆಟ್ಟಿ ಹಾಗೂ ಆರ್ಯವರ್ಧನ್ ಗುರೂಜಿ ಎದುರು ಬದುರಾದರು. ಮೊದಲು ಬಟ್ಟೆಯನ್ನು ರೂಪೇಶ್ ಶೆಟ್ಟಿಯೇ ತೆಗೆದುಕೊಂಡರು ಗುರೂಜಿಗೆ ಆ ಬಟ್ಟೆಯನ್ನು ಬಿಟ್ಟುಕೊಟ್ಟಿದ್ದಾರೆ. ಟಾಸ್ಕ್ ನಡುವೆಯೇ ಗುರೂಜಿ ಕಣ್ಣೀರು ಹಾಕಿದ್ದಾರೆ. ಎಲ್ಲರು ಅವರಿಗೆ ಸಮಾಧಾನ ಮಾಡಲು ನೋಡಿದಾಗಲೂ "ರೂಪೇಶ್ ಶೆಟ್ಟಿ ಗೆಲ್ಲಬೇಕಿತ್ತು, ಆದರೆ ನಾನು ಗೆದ್ದು ಬಿಟ್ಟೆ ಆಟ ಆಗಬಹುದು ಏನೇ ಆಗಬಹುದು. ನೀನು ನನ್ನ ಮಗನೆ. ನೀನು ಯಾವಾಗಲೂ ಬಿಟ್ಟು ಕೊಡ್ತೀಯಾ. ಅದು ನಿನಗೆ ರೂಢಿ" ಎಂದು ಗುರೂಜಿ ಎಮೋಷನಲ್ ಆಗಿದ್ದಾರೆ. ಮತ್ತೆ ರೂಪೇಶ್ ಶೆಟ್ಟಿ ಸಮಾಧಾನ ಪಡಿಸಿದ್ದು, ಹಾಗೆಲ್ಲಾ ಏನು ಇಲ್ಲ. ಇದು ಆಟ ಅಷ್ಟೇ. ನೀವೆ ಮೊದಲು ಹಿಡಿದುಕೊಂಡಿರಿ ಅಂತ ನಾನು ಭಾವಿಸಿದ್ದೆ. ಅದಕ್ಕೆ ಬಿಟ್ಟೆ ಎಂದು ಸಮಾಧಾನ ಮಾಡಿದ್ದಾರೆ.

ಗುರೂಜಿ ಕಣ್ಣೀರಿಗೆ ಫಿದಾ

ಗುರೂಜಿ ಕಣ್ಣೀರಿಗೆ ಫಿದಾ

ಇನ್ನು ಈ ರೀತಿಯಾಗಿ ಗುರೂಜಿ ಅಳುತ್ತಿದ್ದನ್ನು ಕಂಡ ಹೆಣ್ಣು ಮಕ್ಕಳು ಸೋ ಕ್ಯೂಟ್ ಎಂದಿದ್ದಾರೆ. "ಸೋ ಸೋ ಕ್ಯೂಟ್ ಅಲ್ವಾ ಎಂದು ದಿವ್ಯಾ ಹೇಳಿದರೆ. ನಿಜ ಅವರನ್ನು ಮಗನ ಥರ ಫೀಲ್ ಮಾಡುತ್ತಾರೆ ಫೈಟ್ ಮಾಡೋದು ಮಾಡಿಬಿಟ್ಟು, ಛೇ ಇವನತ್ರ ಆಡಿಬಿಟ್ಟೆನಲ್ಲ ಅಂತ ಫೀಲ್ ಮಾಡಿಕೊಂಡು ಬಿಟ್ಟರು. ಅವನು ಅಷ್ಟೇ ಗುರುಗಳು ಎಂದಾಕ್ಷಣಾ ಬಿಟ್ಟುಕೊಟ್ಟು ಬಿಟ್ಟ" ಎಂದು ಅಮೂಲ್ಯ ಹೇಳಿದ್ದಾರೆ.

More from Filmibeat

English summary
Bigg Boss Kannada December 20th Episode Written Update. Here is the details about Aryavardhan crying.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X