BBK9: ಬಿಗ್ ಬಾಸ್ ಕೊನೆವಾರದಲ್ಲಿ ಕಳಪೆ ಹೊತ್ತ ರಾಕೇಶ್ ಅಡಿಗ!
ಬಿಗ್ ಬಾಸ್ ಜರ್ನಿ ಕೇವಲ ಇನ್ನೊಂದು ವಾರವಷ್ಟೆ. ನಾಳೆಯ ವಾರದ ಕಥೆ ಹಾಗೂ ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮ ಮುಗಿದರೆ ಮುಂದಿನ ಶನಿವಾರ ಮತ್ತು ಭಾನುವಾರ ಎಲ್ಲರು ಫಿನಾಲೆ ವೇದಿಕೆಯಲ್ಲಿಯೇ ಭೇಟಿ ಮಾಡುತ್ತಾರೆ.
ಬಿಗ್ ಬಾಸ್ ಮನೆಯೊಳಗೆ ಇರುವವರು ಕೂಡ ದಿನಗಳನ್ನು ಏಣಿಕೆ ಮಾಡುತ್ತಿದ್ದಾರೆ. ಇದ್ದರೆ ಅಮ್ಮಮ್ಮ ಎಂದರೂ ಇನ್ನೊಂದು ಮೂರ್ನಾಲ್ಕು ದಿನಗಳ ಕಾಲ ಟಾಸ್ಕ್ ಗಳು ಸಿಗುತ್ತೆ. ಆಮೇಲೆ ಗ್ರ್ಯಾಂಡ್ ಫಿನಾಲೆಗೆ ರೆಡಿಯಾಗುತ್ತಾರೆ. ಯಾರು ಸೀಸನ್ 9ರ ಟ್ರೋಪಿ ತೆಗೆದುಕೊಂಡು ಹೋಗುತ್ತಾರೆ ಎಂಬ ಕುತೂಹಲಕ್ಕೂ ತೆರೆ ಬೀಳುತ್ತದೆ.

ಇಂದು ಉತ್ತಮ & ಕಳಪೆ ರೌಂಡ್
ಬಿಗ್ ಬಾಸ್ ನಲ್ಲಿ ಶುಕ್ರವಾರ ಬಂತು ಅಂದ್ರೆ ಸಾಕು ವಾರವಿಡೀ ಕಾಯುತ್ತಿದ್ದ ಜನರಿಗೂ ಕುತೂಹಲ, ಮನೆಯವರಿಗೂ ಸಂಕಟ. ಯಾರಿಗೆ..? ಯಾವ ಕಾರಣವನ್ನು ತಿಳಿಸಿ ಕಳಪೆ ಕೊಡುವುದು ಅಂತ. ಹಾಗೋ ಹೀಗೋ.. ಅಲ್ಲೊಂದು ಇಲ್ಲೊಂದು ಎಂಬ ಸಣ್ಣ ಸಣ್ಣ ವಿಚಾರವನ್ನು ನೋಟೀಸ್ ಮಾಡಿ, ಕಳಪೆಗೆ ಹೆಸರನ್ನು ಸೂಚಿಸುತ್ತಾರೆ. ಆದರೆ ಇರುವುದೇ ಎಂಟು ಜನ. ಆ ಎಂಟು ಜನರಲ್ಲಿ ಬೇಕು ಬೇಡಗಳನ್ನು ಗಮನಿಸಿ ಕಳಪೆ ಸೂಚಿಸುತ್ತಾರೆ.

ಕಡೆಗೂ ಸಿಕ್ಕಿದ್ದು ರಾಕಿಗೆ ಕಳಪೆ
ಕಳಪೆ ಅವಾರ್ಡ್ ಕೊಡುವಾಗ ಸಣ್ಣ ಸಣ್ಣ ಕಾರಣವನ್ನು ಹುಡುಕುವ ಮನೆಯವರು, ಒಂದೇ ಸಲಕ್ಕೆ ಒಬ್ಬರನ್ನು ಆಯ್ಕೆ ಮಾಡುವುದಿಲ್ಲ. ಬದಲಿಗೆೊಬ್ಬೊಬ್ಬರು ಒಬ್ಬೊಬ್ಬರ ಹೆಸರನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಅದರಲ್ಲಿ ಹೆಚ್ಚು ನಾಮಿನೇಟ್ ಆದವರನ್ನು ಬಟ್ಟೆ ಕೊಟ್ಟು, ಜೈಲಿಗೆ ಹಾಕಿ ಕೂಡಿ ಹಾಕುತ್ತಾರೆ. ಈ ವಾರ ರಾಕೇಶ್ ಹಾಗೂ ರಾಜಣ್ಣ ನಡುವೆ ಅಂಥದ್ದೊಂದು ಕಾಂಪಿಟೇಷನ್ ಏರ್ಪಟ್ಟಿತ್ತು. ಎಲ್ಲರೂ ಇಬ್ಬರಿಗೂ ಸಮನಾಗಿ ಕಳಪೆ ಕೊಟ್ಟಿದ್ದರು. ಬಳಿಕ ಅಮೂಲ್ಯ ತಮ್ಮ ವೋಟ್ ಬದಲಾಯಿಸಿ, ರಾಜಣ್ಣನಿಗೆ ಕೊಟ್ಟರು. ಪಕ್ಕದಲ್ಲಿಯೇ ಇದ್ದ ದಿವ್ಯಾ, ತನ್ನ ವೋಟ್ ಅನ್ನು ರಾಕಿಗೆ ಕೊಟ್ಟರು. ಮತ್ತೆ ಟೈ ಆಯ್ತು. ನೋಡ ನೋಡುತ್ತಿದ್ದಂತೆ ಆರ್ಯವರ್ಧನ್ ವೋಟ್ ಬದಲಾಯಿಸಿ ರಾಕಿಗೆ ಕೊಟ್ಟರು. ಸೋ ಇಲ್ಲಿ ರಾಕಿಗೆ ಅತೀ ಹೆಚ್ಚು ವೋಟು ಬಂದಿದ್ದರಿಂದ ರಾಕಿಯೇ ಕಳಪೆ ಹೊತ್ತರು.

ಈ ಸಲ ಡಲ್ ಆದರಾ ರಾಕಿ?
ರಾಕೇಶ್ ಯಾವ ವಾರವೂ ತನಗೆ ಹೇಳಿದ ಕೆಲಸವನ್ನು ಪೆಂಡಿಂಗ್ ಉಳಿಸುತ್ತಾ ಇರಲಿಲ್ಲ. ಬದಲಿಗೆ ಎಲ್ಲವನ್ನು ಯಾರ ಬಳಿಯೂ ಹೇಳಿಸಿಕೊಳ್ಳುವುದಕ್ಕೂ ಮುನ್ನವೇ ಮಾಡುತ್ತಾ ಇದ್ದರು. ಆದರೆ ಅದ್ಯಾಕೋ ಈ ವಾರ ತಾವೂ ವಹಿಸಿಕೊಂಡಿದ್ದ ಜವಬ್ದಾರಿಯನ್ನೇ ಸರಿಯಾಗಿ ನಿಭಾಯಿಸಿಲ್ಲ. ಬಾತ್ ರೂಮನ್ನು ಸರಿಯಾಗಿ ಸ್ವಚ್ಛ ಮಾಡಿಲ್ಲ ಎಂಬುದನ್ನೇ ಕಾರಣವಾಗಿಟ್ಟುಕೊಂಡು ರಾಕೇಶ್‌ಗೆ ಕಳಪೆ ಕೊಡಲಾಗಿದೆ.

ಆರ್ಯವರ್ಧನ್ ಈ ವಾರ ಬೆಸ್ಟ್
ಆರ್ಯವರ್ಧನ್ ಗುರೂಜಿ ಈ ವಾರ ಫುಲ್ ಆಕ್ಟೀವ್ ಆಗಿದ್ದಾರೆ. ಪಾಯಿಂಟ್ ವಿಚಾರದಲ್ಲಂತು ಮೊದಲ ಸ್ಥಾನದಲ್ಲಿದ್ದಾರೆ. ಈ ವಾರ ಕೊಟ್ಟ ಟಾಸ್ಕ್ ಗಳನ್ನು ಅಷ್ಟೇ ಸಲೀಸಾಗಿ ಆಡಿದ್ದಾರೆ. ಮನೆಯವರೆಲ್ಲರೂ ಈಗಾಗಲೇ ಮಾತನಾಡಿಕೊಂಡಿದ್ದಾರೆ. ಕಿಚ್ಚನ ಚಪ್ಪಾಳೆ ಗುರೂಜಿಗೆ ಸಿಗುವುದು ಅಂತ ಅರುಣ್ ಸಾಗರ್, ದೀಪಿಕಾ, ಅಮೂಲ್ಯ, ರಾಕೇಶ್ ಮಾತನಾಡಿಕೊಂಡಿದ್ದಾರೆ. ಜೊತೆಗೆ ಈ ವಾರ ಉತ್ತಮ ಕೂಡ ತೆಗೆದುಕೊಂಡಿದ್ದಾರೆ. ಇನ್ನೊಂದೆ ವಾರ ಫಿನಾಲೆಗೆ ಇರುವಾಗಲೇ ಗುರೂಜಿ ಫುಲ್ ಆಕ್ಟೀವ್ ಆಗಿದ್ದಾರೆ.


Click it and Unblock the Notifications











