For Quick Alerts
  ALLOW NOTIFICATIONS  
  For Daily Alerts

  BBK9:ಮನೆಯಿಂದ ಹೊರಹೋಗುವ ಭಯದಲ್ಲಿದ್ದಾರಾ ರಾಜಣ್ಣ..?

  By ಎಸ್ ಸುಮಂತ್
  |

  ವಾರದ ಕಥೆ ಕಿಚ್ಚನ ಜೊತೆ, ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮವನ್ನು ಸೇಫ್ ಆಗಿ ಯಾರು ದಾಟುತ್ತೀವೋ ಎಂಬ ಭಯ ಎಲ್ಲರಲ್ಲೂ ಇದೆ. ಯಾಕಂದ್ರೆ ಈ ಎರಡು ವಾರ ಗೆದ್ದವರು ಫಿನಾಲೆಗೆ ರೀಚ್ ಆಗುತ್ತಾರೆ. ಯಾರು ಹೋಗುತ್ತಾರೆ..? ಯಾರು ಉಳಿಯುತ್ತಾರೆ ಎಂಬುದನ್ನು ಯಾರಿಗೂ ಅಂದಾಜಿಸುವುದಕ್ಕೂ ಆಗುತ್ತಿಲ್ಲ.

  ಮನೆಯಲ್ಲಿರುವ ಮಂದಿಗೆ ಅದಾಗಲೇ ತಿಳಿದಿದೆ. ಈ ವಾರವಷ್ಟೆ. ಆದ್ರೆ ಈ ವಾರ ಯಾರು ಇರುತ್ತೀವಿ..? ಯಾರು ಇರಲ್ಲ ಎಂಬುದು ಗೊತ್ತಿಲ್ಲ. ಅದಕ್ಕಾಗಿಯೇ ರಾಜಣ್ಣ ಎಲ್ಲರನ್ನು ನಗಿಸುವುದಕ್ಕೂ ಶುರು ಮಾಡಿದ್ದಾರೆ. ಅರ್ಥ ಗರ್ಭಿತವಾದಂತ ಹಾಡನ್ನು ಹಾಡಿದ್ದಾರೆ.

  ರಾಜಣ್ಣನ ಟೆನ್ಶನ್ ಏನು..?

  ರಾಜಣ್ಣನ ಟೆನ್ಶನ್ ಏನು..?

  ರಾಜಣ್ಣನಿಗೆ ಒಂದೊಂದೆ ದಿನ ಉರುಳುತ್ತಿರುವುದು ತಲೆ ನೋವಾಗಿ ಪರಿಣಮಿಸಿದೆ. ಈ ಶನಿವಾರ ಒಂದು ಕಳೆದರೆ ಸಾಕು. ಅದಕ್ಕೆ ಎಲ್ಲರ ಜೊತೆ ಈ ಬಗ್ಗೆ ಮಾತನಾಡಿದ್ದಾರೆ. "ಶನಿವಾರ ಯಾರು ಬೇಕಾದರೂ ಹೋಗಬಹುದು. ಯಾರು ಬೇಕಾದರೂ ಉಳಿಯಬಹುದು. ಆದ್ರೆ ನಮ್ಮ ಕಷ್ಟ ಸುಖ, ನೋವು, ಕಿರಚಾಟ ಎಲ್ಲವನ್ನು ಈ ಆಟದಲ್ಲಿಯೇ ಬಿಟ್ಟು ನಮ್ಮದೇ ಜೀವನವನ್ನು ಹೊರಗಡೆ ಕಟ್ಟಿಕೊಳ್ಳುತ್ತೇವೆ. ಬಿಗ್ ಬಾಸ್‌ನಲ್ಲಿ ನಡೆದೆದ್ದಲ್ಲೆಲ್ಲವನ್ನು ಇಲ್ಲಿಯೇ ಬಿಟ್ಟು ಹೋಗೋಣಾ. ಸ್ನೇಹವನ್ನು ಮಾತ್ರ ಕೊಂಡು ಹೋಗೋಣಾ. ತಪ್ಪಾಗಿದ್ದರೆ ಕ್ಷಮಿಸಿ" ಎಂದಿದ್ದಾರೆ.

  ಮನೆಯ ಬಗ್ಗೆ ರಾಜಣ್ಣ ಹಾಡು

  ಮನೆಯ ಬಗ್ಗೆ ರಾಜಣ್ಣ ಹಾಡು

  ಇನ್ನು ಹಾಡು ಬರೆಯುವುದರಲ್ಲಿ, ಹೇಳುವುದರಲ್ಲಿ ರಾಜಣ್ಣ ಸೂಪರ್ ಎಂಬುದು ಈಗಾಗಲೇ ಗೊತ್ತಾಗಿದೆ. ಅದನ್ನೇ ಎಲ್ಲರೂ ಮನರಂಜನೆಗಾಗಿ ಆಗಾಗ ಕೇಳುತ್ತಾ ಇರುತ್ತಾರೆ. ಆದ್ರೆ ಈಗ ರಾಜಣ್ಣ ಬಿಗ್ ಬಾಸ್ ಗಾಗಿ ಹಾಡಿದ್ದಾರೆ. "ನೂರು ದಿನದ ಆಟ ಮುಗಿಸೋ ಸಮಯ ಬಂದಿತೇ. ಕೂಡಿ ನಲಿದಿರ ನೆನಪು ಹೋಗಿ ಬರುವೆಯಾ ಅಂದಿತೆ.. ಇದ್ದಾಗ ಇಲ್ಲಿ ಅವರಿಗೆ ಇವರು ಇವರಿಗೆ ಅವರು, ಮುಗಿಯಿತೋ ಎಲ್ಲಾ, ಬೇರೆನೂ ಉಳಿದಿಲ್ಲ. ಓ ಗೆಳೆಯ, ಓ ಗೆಳೆತಿ ಇದೋ ನಿನಗೆ ಶುಭ ವಿದಾಯ. ಅವಕಾಶ ನೀಡಿ, ನಮ್ಮ ಒಂದು ಮಾಡಿ. ಬದುಕಲು ಕಲಿಸಿದ ನಮ್ಮ ಬಿಗ್ ಬಾಸ್. ವಂದನೆ.. ಅಭಿನಂದನೆ" ಎಂಬ ಹಾಡನ್ನು ಬರೆದಿದ್ದಾರೆ. ಜೊತೆಗೆ ಆ ಹಾಡಿನಲ್ಲಿ ಜನರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

  ರಾಜಣ್ಣನನ್ನು ಕ್ಷಮಿಸಿದರಾ ರೂಪೇಶ್..?

  ರಾಜಣ್ಣನನ್ನು ಕ್ಷಮಿಸಿದರಾ ರೂಪೇಶ್..?

  ಪತ್ರ ಬರೆದು ರೂಪೇಶ್ ಶೆಟ್ಟಿಗೆ ನೋವು ಕೊಟ್ಟಿದ್ದ ರಾಜಣ್ಣ ಇದೀಗ "ನನ್ನ ಸ್ನೇಹವನ್ನು ನೀನು 100% ನಂಬಬಹುದು. ಒಳಗೆ ಒಂದನ್ನು ಇಟ್ಟುಕೊಂಡು, ಮೇಲೊಂದು ಮಾತನಾಡುವುದಿಲ್ಲ. ಒಂದು ವರ್ಷ ನೀನು ನನ್ನ ಜೊತೆಗೆ ಇರು ನಿಂಗೆ ನಆನು ಅರ್ಥ ವಾಗುತ್ತೆ. ನಿನ್ನ ದೊಡ್ಡ ಸಕ್ಸಸ್ ಅನ್ನು ಆಸೆ ಪಡುತ್ತಿರುವುದರಲ್ಲಿ ನಾನು ಒಬ್ಬ. ಹಾರ್ಟ್ಲೀ ಹೇಳ್ತಾ ಇದ್ದೀನಿ, ದೊಡ್ಡ ಹೆಸರು ಮಾಡಬೇಕು ಎಂಬುದು ನನ್ನ ಆಸೆ. ನಮ್ಮ ಮನೆಯರಿಗೂ ಅದೆ ಆಸೆ" ಎಂದಿದ್ದಾರೆ.

  ರೂಪೇಶ್ ಶೆಟ್ಟಿ ಕ್ಷಮಿಸಿದ್ರಾ..?

  ರೂಪೇಶ್ ಶೆಟ್ಟಿ ಕ್ಷಮಿಸಿದ್ರಾ..?

  ರಾಜಣ್ಣ ಇಷ್ಟೆಲ್ಲಾ ನೈಸ್ ಮಾಡಿದಾಗ ರೂಪೇಶ್, "ಮನುಷ್ಯ ಅಲ್ವಾ ಅಣ್ಣ ಬೇಜಾರು ಆಗಿಯೇ ಆಗುತ್ತೆ. ಅದನ್ನು ಅಲ್ಲಿಗೆ ಬಿಟ್ಟು ಬಿಟ್ಟೆ. ಬಿಕಾಸ್ ಈ ವಾರ ನನಗೂ ಮುಖ್ಯ, ನಿಮಗೂ ಮುಖ್ಯ. ಅಂಡ್ ಈ ಮನೆಯಲ್ಲಿ ಅದು ಆಗುತ್ತೆ ಕೆಲವೊಂದು ಸಮಯ. ಕಂಟೆಸ್ಟೆಂಟ್ ಗಳಾಗಿ ನಾನಾಗಲೀ, ನೀವಾಗಲಿ ಯೋಚನೆ ಮಾಡುತ್ತೀವಿ. ಆದರೆ ನಾನು ಜೆನ್ಯೂನ್ ಆಗಿ ನಿಮಗೆ ಅಣ್ಣನ ಸ್ಥನ ಕೊಟ್ಟಿದ್ದೀನಿ" ಎಂದಿದ್ದಾರೆ.

  English summary
  Bigg Boss Kannada December 23rd Episode Written Update. Here is the details about Rajanna Singing Song.
  Friday, December 23, 2022, 23:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X