For Quick Alerts
  ALLOW NOTIFICATIONS  
  For Daily Alerts

  BBK9: ಪಾಪ ಅಮೂಲ್ಯ ಬಗ್ಗೆ ರಾಕಿ ಕಂಡ ಕನಸು ಕನಸಾಗಿಯೇ ಉಳಿದು ಬಿಡ್ತು..!

  By ಎಸ್ ಸುಮಂತ್
  |

  ಬಿಗ್ ಬಾಸ್ ಮನೆಯಲ್ಲಿ ಲವ್ ಬರ್ಡ್ಸ್‌ ಅಂತೆ ಇದ್ದ ರಾಕಿ ಮತ್ತು ಅಮೂಲ್ಯ ಕೊನೆ ಕೊನೆಯಲ್ಲಿ ಅದೇ ಆತ್ಮೀಯತೆ ಉಳಿಸಿಕೊಂಡಿದ್ದರು. ಇಷ್ಟು ಏನನ್ನು ಆಸೆ ಪಡದ ರಾಕಿ, ಇದ್ದಕ್ಕಿದ್ದ ಹಾಗೆ ಹೊರಗಡೆ, ಬೆಳದಿಂಗಳಲ್ಲಿ ಮಲಗಿದರೆ ಅದೆಷ್ಟು ಚಂದ ಅಲ್ವಾ ಎಂದುಕೊಂಡಿದ್ದ. ಅದಕ್ಕೆ ಅಮೂಲ್ಯ ಕೂಡ ಸಾಥ್ ನೀಡಿದ್ದರು. ಆದರೆ ಆ ಕನಸು ನನಸಾಗುವ ಮೊದಲೇ ಅಮೂಲ್ಯ ಮನೆಯಿಂದ ಹೊರ ಬಂದಿದ್ದರು.

  ಬೆಳದಿಂಗಳ ಕಗ್ಗತ್ತಲು.. ರಾತ್ರಿಯೆಲ್ಲಾ ಹೊರಗೆ ಮಲಗಿ ಮಾತನಾಡುವ ಖುಷಿಯೇ ಬೇರೆ. ಬಿಗ್ ಬಾಸ್ ಇಷ್ಟು ದೂರದ ಜರ್ನಿಯನ್ನು ಟಾಸ್ಕ್, ಅದು ಇದು ಎಂದುಕೊಂಡು ಬಂದುಬಿಟ್ಟರು. ಹೀಗಾಗಿ ಕೊನೆಯ ಆ ಮೂಮೆಂಟ್ ಅನ್ನು ಫೀಲ್ ಮಾಡಲು ರಾಕಿ ನಿರ್ಧರಿಸಿದ್ದರು.

  BBK9: ಬಿಗ್ ಬಾಸ್ ಕೊನೆವಾರದಲ್ಲಿ ಕಳಪೆ ಹೊತ್ತ ರಾಕೇಶ್ ಅಡಿಗ! BBK9: ಬಿಗ್ ಬಾಸ್ ಕೊನೆವಾರದಲ್ಲಿ ಕಳಪೆ ಹೊತ್ತ ರಾಕೇಶ್ ಅಡಿಗ!

  ರಾಕಿಯ ಆಸೆಗೆ ಅಮೂಲ್ಯ ಓಕೆ ಎಂದಿದ್ದರು

  ರಾಕಿಯ ಆಸೆಗೆ ಅಮೂಲ್ಯ ಓಕೆ ಎಂದಿದ್ದರು

  ಮಧ್ಯಾಹ್ನದ ವೇಳೆಯಾಗಿತ್ತು. ರಾಕೇಶ್ ಜೈಲಿನಲ್ಲಿ ಇದ್ದರು. ಆಗ ಅಮೂಲ್ಯ ಬಂದು ಕೂತು ಮಾತನಾಡುತ್ತಾ ಇದ್ದರು. ಆಗ ರಾಕಿ, "ಹೊರಗೆ ಮಲಗುವುದು ಎಷ್ಟು ಚೆಂದ ಇರುತ್ತೆ ಗೊತ್ತಾ. ಶನಿವಾರ ರಾತ್ರಿ ಮಲಗೋಣಾ" ಎಂದಾಗ ಅಮೂಲ್ಯ, "ಓಕೆ ಡನ್ ಬಟ್ ಎರಡು ಬೆಡ್ ಇಲ್ಲ ಬಾಬಾ" ಎಂದಿದ್ದಾರೆ. ಆಗ ರಾಕಿ, "ಬೆಡ್ ಸೆಟಪ್ ಮಾಡಿಕೊಳ್ಳೋಣಾ. ಅದೇನು ಅಷ್ಟೊಂದು ಕಷ್ಟವೇ ಅಲ್ಲ. ಎಷ್ಟೊಂದು ಪ್ರಾಪರ್ಟಿಸ್ ಇದೆ. ಅದೇನು ದೊಡ್ಡ ವಿಷ್ಯಾನಾ" ಎಂದಿದ್ದರು.

  ರಾಕಿಗೆ ಈಗೋ ಜಾಸ್ತಿ ಇದ್ಯಾ..?

  ರಾಕಿಗೆ ಈಗೋ ಜಾಸ್ತಿ ಇದ್ಯಾ..?

  ಹೀಗೆ ರಾಕೇಶ್ ಅಂಡ್ ಅಮೂಲ್ಯ ಮಾತನಾಡುತ್ತಾ ಕುಳಿತಿದ್ದಾಗ ರಾಕಿ, "ನಿಂಗೆ ಗೊತ್ತಿಲ್ಲ ನೀನು ನಂಗೆ ಎಷ್ಟು ಕಾಟ ಕೊಟ್ಟಿದ್ದೀಯಾ, ಎಷ್ಟು ನೋವು ಮಾಡಿದ್ದೀಯಾ ಅಂತ. ಆದರೂ ಎಲ್ಲವನ್ನು ಕ್ಷಮಿಸಿದ್ದೀನಿ" ಎಂದು ರಾಕಿ ಹೇಳಿದ್ದಾರೆ. ಆಗ ಅಮೂಲ್ಯ, "ಹೆಲೋ ಎಲ್ಲಾ ನನ್ ಡೈಲಾಗ್ ಹೇಳ್ತಾ ಇದ್ದೀಯಾ. ಯಾಕೆ ಹೇಳು ನಿಂಗೆ ಆ ರೀತಿ ಅನ್ನಿಸ್ತಾ ಇರೋದು. ನಿನ್ನ ಈಗೋ.. ನಿನ್ನ ಈಗೋವಿನ ಪರಾಮಾವಧಿ" ಎಂದಿದ್ದಾರೆ. ಆಗ ರಾಕಿ "ನಂಗೆ ಈಗೋ ಇಲ್ಲ ಅದಕ್ಕೆ ಎಲ್ಲವನ್ನು ಕ್ಷಮಿಸಿದ್ದೀನಿ "ಎಂದಿದ್ದಾರೆ. "ಎಲ್ಲವನ್ನು ಕ್ಷಮಿಸಿ ಫ್ರೆಂಡ್ ಆಗಿದ್ದೀಯಾ. ಯಾರು ಹೇಳಿದ್ದು, ಫ್ರೆಂಡ್ಸ್ ಆಗಿರು ಅಂತ ಫೋರ್ಸ್ ಮಾಡಿದ್ರಾ..? ಇವತ್ತಿಂದ ನಾವೂ ಫ್ರೆಂಡ್ಸ್ ಅಲ್ಲದೆ ಇರಬಹುದು. ಸುಮ್ನೆ ಯಾಕೆ ಕಾಟ ಕೊಟ್ಟಿರೋಳು, ನೋವು ಮಾಡಿರೋಳನ್ನ ಫ್ರೆಂಡ್ ಮಾಡಿಕೊಂಡಿದ್ದೀಯಾ" ಎಂದು ರೇಗಿಸಿದ್ದಾರೆ.

  ಆ ಮಾತಿಗೆ ಬೇಸರ ಮಾಡಿಕೊಂಡಿದ್ದ ದಿವ್ಯಾ

  ಆ ಮಾತಿಗೆ ಬೇಸರ ಮಾಡಿಕೊಂಡಿದ್ದ ದಿವ್ಯಾ

  ಇನ್ನು ವಾರದ ಕಥೆ ಕಿಚ್ಚನ ಜೊತೆಯಲ್ಲಿ ಯಾರು ಮನೆಯಿಂದ ಹೊರಗೆ ಹೋಗುತ್ತಾರೆ ಎಂಬ ಗೊಂದಲ ಇತ್ತು. ಆದ್ರೆ ಅಮೂಲ್ಯಗೆ ಪಕ್ಕ ಇತ್ತು. ಇವತ್ತು ನಾನೇ ಹೋಗ್ತೀನಿ ಅಂತ. ಅದಕ್ಕೆ ರಾಕೇಶ್ ಮತ್ತು ದಿವ್ಯಾ ಬಳಿ ಆ ಬಗ್ಗೆ ಹೇಳಿಕೊಂಡಿದ್ದರು. "ಇವತ್ತು ನಾನು ಹೋದ್ರೆ ಅಳಬೇಕು ಆಯ್ತಾ" ಎಂದಾಗ ದಿವ್ಯಾ, "ಹೇ ಸುಮ್ನೆ ಕೂತ್ಕೊಳೆ" ಎಂದಿದ್ದಾರೆ. ಆಗ ಅಮೂಲ್ಯ "ಇಲ್ವೆ ಅದು ಚೆನ್ನಾಗಿರುತ್ತೆ. ಮೂವರಲ್ಲಿ ಯಾರೇ ಹೋದರೂ ಅಳಬೇಕು. ಈ ನಾಟಕದಲ್ಲಿ ಅಳುತ್ತಾರಲ್ಲ ಹಂಗೆ. ನಾನಂತು ಗ್ಲಿಸರಿನ್ ಹಾಕಿ ಕೊಳ್ಳುವ ಬೇಡ" ಎಂದಿದ್ದಾರೆ.

  ಅಮೂಲ್ಯ ಕಲಿತರು ಕಷ್ಟದ ಪಾಠ

  ಅಮೂಲ್ಯ ಕಲಿತರು ಕಷ್ಟದ ಪಾಠ

  ಜೈಲಿನ ಬಳಿ ಕೂತು ಮಾತನಾಡುತ್ತಿದ್ದಾಗ ರಾಕಿ, ಚಿಂತೆಗೂ ಚಿತೆಗೂ ಒಂದು ಸೊನ್ನೆ ಮಾತ್ರ ವ್ಯತ್ಯಾಸ. ಚಿತೆ ನಿರ್ಜೀವವಾದುದನ್ನು ಸುಟ್ಟರೆ, ಚಿಂತೆ ಸಜೀವವಾದುದನ್ನೇ ಸುಡುತ್ತದೆ". ಈ ಅರ್ಥವನ್ನು ಕೇಳಿದ ಮೇಲೆ ಅಮೂಲ್ಯ ಫಿದಾ ಆಗಿದ್ದಾರೆ. ಇದನ್ನು ಕಲಿತುಕೊಂಡ ಬಳಿಕ ಅಡುಗೆ ಮನೆಯಲ್ಲಿದ್ದ ದಿವ್ಯಾ ಬಳಿ ಹೋಗಿ, ಅದೇ ಡೈಲಾಗ್ ಹೊಡೆದಿದ್ದಾರೆ. ಆಗ ದಿವ್ಯಾ ಶಾಕ್ ಆಗಿದ್ದಾರೆ. ಚಿಂತೆಗೂ ಚಿತೆಗೂ ಇರುವ ವ್ಯತ್ಯಾಸ ಹೇಳಿದಾಗ, ದಿವ್ಯಾ ಏನು ಅಮ್ಮು ಜೈಲ್ ಹತ್ರ ಹಿಂಗೆಲ್ಲ ಬದಲಾವಣೆ ಆಗಿ ಬಿಟ್ಟಿದೆ ಎಂದಿದ್ದಾರೆ.

  English summary
  Bigg Boss Kannada December 24th Episode Written Update. Here is the details about Rakesh Adiga dreams failure.
  Sunday, December 25, 2022, 17:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X