BBK9: ಆ ಕಾಲದಲ್ಲಿಯೇ ಸಿನಿಮಾ ಹೀರೊ ಇದ್ದಂಗ ಇದ್ದರಂತೆ ಆರ್ಯವರ್ಧನ್..!

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಎಂಟರ್ಟೈನ್ಮೆಂಟ್ ಅಂದ್ರೆ ಅದು ಆರ್ಯವರ್ಧನ್ ಅಂದ್ರೆ ತಪ್ಪಾಗಲಾರದು. 'ವಾರದ ಕಥೆ' ಹಾಗೂ 'ಸೂಪರ್ ಸಂಡೇ ವಿತ್ ಸುದೀಪ' ಈ ಎರಡು ದಿನದ ಕಾರ್ಯಕ್ರಮದಲ್ಲಿ ಸೆಂಟರ್ ಅಟ್ರಾಕ್ಷನ್ ಅಂದ್ರೆ ಅದು ಆರ್ಯವರ್ಧನ್ ಅವರೇ ಆಗಿರುತ್ತಾರೆ.

ಗೊತ್ತೋ ಗೊತ್ತಿಲ್ಲದೆಯೋ ವಾರವಿಡಿ ಮಾಡುವ ಗುರೂಜಿ ಕಿತಾಪತಿಯನ್ನು ವಾರದ ಕೊನೆಯಲ್ಲಿ ಚರ್ಚೆ ಮಾಡಲಾಗುತ್ತದೆ. ಅಷ್ಟೇ ಯಾಕೆ ಬೇರೆಯವರ ಟಾಪಿಕ್ ಬಗ್ಗೆಯೂ ಗುರೂಜಿಯನ್ನು ಕೇಳಿದರೆ ಅಲ್ಲೊಂದು ಕಾಮಿಡಿಯೇ ಏರ್ಪಡುತ್ತದೆ. ಹೀಗಾಗಿ ಗುರೂಜಿ ಅಂದ್ರೆ ಬಿಗ್ ಬಾಸ್ ಮನೆಯಲ್ಲಿ ಕಾಮಿಡಿಯೇ ಸರಿ.

ಸಿನಿಮಾ ಮಾಡಲು ಕಾಯುತ್ತಿರುವ ಗುರೂಜಿ

ಸಿನಿಮಾ ಮಾಡಲು ಕಾಯುತ್ತಿರುವ ಗುರೂಜಿ

ಆರ್ಯವರ್ಧನ್ ಈ ಹಿಂದೆಯೇ "ತಾನೊಂದು ಸಿನಿಮಾ ಮಾಡುತ್ತೀನಿ, ಆ ಸಿನಿಮಾದಲ್ಲಿ ನೀವೆ ಹೀರೊ ನೀವೇ ವಿಲನ್. ಆ ಸಿನಿಮಾ ಇಲ್ಲಿಯ ತನಕ ಯಾರು ಮಾಡಿಲ್ಲ. ಅದೊಂದು ದೆವ್ವದ ಕಥೆ. ಅದೇ ಒಳ್ಳೆ ದೆವ್ವ.. ಅದೇ ಕೆಟ್ಟ ದೆವ್ವ" ಹೀಗೆ ವಿಚಿತ್ರ ವಿಚಿತ್ರವಾಗಿ ಕಥೆಯನ್ನು ಹೇಳಿದ್ದರು. ಜೊತೆಗೆ ನೀವೇ ಪ್ರೊಡ್ಯೂಸರ್ ಆಗಿ ಬಿಡಿ ಎಂದು ಕೂಡ ಕೇಳಿದ್ದರು. ಇದೀಗ ಸಿನಿಮಾದ ವಿಚಾರ ಮತ್ತೆ ಬಂದಿದೆ.

ದೀಪಿಕಾ ಓಕೆ ಅಂತಾರಾ ಆರ್ಯವರ್ಧನ್ ಜೊತೆಗೆ

ದೀಪಿಕಾ ಓಕೆ ಅಂತಾರಾ ಆರ್ಯವರ್ಧನ್ ಜೊತೆಗೆ

'ಇವತ್ತು ಸೂಪರ್ ಸಂಡೇ ವಿತ್ ಸುದೀಪ' ಜೊತೆ ವೇದಿಕೆಯಲ್ಲಿ ಮತ್ತೆ ಆರ್ಯವರ್ಧನ್ ಜೊತೆಗೆ ಮಾತುಕತೆ ಮುಂದುವರೆದಿದೆ. ಇವತ್ತು ಸಿನಿಮಾದ ಬಗ್ಗೆ ಚರ್ಚೆಯಾಗುತ್ತಾ ಇದ್ದಾಗ, ಸುದೀಪ್ ಅವರು "ಹೀರೋ ಯಾರು ಹೀರೊಯಿನ್ ಯಾರು" ಎಂದು ಪ್ರಶ್ನಿಸಿದ್ದಾರೆ. ಆಗ ರಾಕಿ, "ಆರ್ಯವರ್ಧನ್ ಹೀರೋ, ದೀಪಿಕಾ ಹೀರೋಹಿನ್. ನಾನು, ರೂಪಿ ಏನೇ ಮಾಡಿದರು ಕಡೆಗೆ ಹೆಣ್ಣು ಮಕ್ಕಳೆಲ್ಲಾ ಸೋ ಕ್ಯೂಟ್ ಅನ್ನೋದು ಆರ್ಯವರ್ಧನ್" ಅವರಿಗೇನೆ ಎಂದು ರೇಗಿಸಿದ್ದಾರೆ. ಆಗ ಸುದೀಪ್ "ನೀವೂ ದೀಪಿಕಾ ಹೀರೊಯಿನ್ ಅಂದ್ರೆ, ರಾಜಣ್ಣ ಹಿಂಗೆ ನೋಡುತ್ತಿದ್ದಾರೆ" ಎಂದು ಮತ್ತಷ್ಟು ಕಾಲೆಳೆದಿದ್ದಾರೆ.

ರೂಪೇಶ್ ಶೆಟ್ಟಿಗಿಂತ ನನ್ನ ರೇಂಜ್ ಬೇರೆ..!

ರೂಪೇಶ್ ಶೆಟ್ಟಿಗಿಂತ ನನ್ನ ರೇಂಜ್ ಬೇರೆ..!

ಆರ್ಯವರ್ಧನ್ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಚಾರ. ಬೇಕರಿಯಲ್ಲಿ ಕೆಲಸ ಮಾಡಿದ್ದನ್ನೇ ಯಾವಾಗಲೂ ಹೇಳಿಕೊಳ್ಳುತ್ತಾ ಇರುತ್ತಾರೆ. ಅಷ್ಟೆ ಯಾಕೆ, ಇದೆಲ್ಲಾ ಯಾವ ಲೆಕ್ಕ. ನಾನು ಇಂಥವುದನ್ನೆಲ್ಲಾ ಎಷ್ಟು ನೋಡಿಲ್ಲ ಎಂಬಂತೆ ಮಾತನಾಡುತ್ತಾ ಇರುತ್ತಾರೆ. ಈಗ ಹೀರೊ ಎಂಬ ವಿಚಾರಕ್ಕೂ ಅದನ್ನೇ ಮಾತನಾಡಿದ್ದಾರೆ. ದೀಪಿಕಾ ದಾಸ್ ಅವರು, " ಆಗ ನಿಮ್ಮ ಪರ್ಸನಾಲಿಟಿ ಎಲ್ಲಾ ರೂಪೇಶ್ ಶೆಟ್ಟಿ ಥರ ಇತ್ತಾ" ಎಂದು ಕೇಳಿದರೆ, ಆರ್ಯವರ್ಧನ್, "ಹೇ ರೂಪೇಶ್ ಶೆಟ್ಟಿಯ, ಅವ್ನು ಏನು ಅಲ್ಲ ಸರ್" ಅನ್ನೋದಾ. ಈ ಉತ್ತರ ಕೇಳಿ ಕಿಚ್ಚ ಸುದೀಪ್ ಕೂಡ ಶಾಕ್ ಆಗಿದ್ದಾರೆ.

ಆರ್ಯವರ್ಧನ್ ಹೆಂಗೆ ಇದ್ರಂತೆ ಗೊತ್ತಾ..?

ಆರ್ಯವರ್ಧನ್ ಹೆಂಗೆ ಇದ್ರಂತೆ ಗೊತ್ತಾ..?

ಆರ್ಯವರ್ಧನ್ ಸಿನಿಮಾ ಮಾಡುವ ಕನಸ್ಸಷ್ಟೇ ಕಾಣುತ್ತಿಲ್ಲ. ಸಿನಿಮಾದ ಹೀರೋ ರೇಂಜಿಗೆ ಫೀಲ್ ಆಗುತ್ತಿದ್ದಾರೆ. ಬಟ್ಟೆ ಎಲ್ಲಾ ಯಾವ ಥರ ಹಾಕುತ್ತಾ ಇದ್ರಿ ಅಂತ ದೀಪಿಕಾ ಕೇಳಿದ್ರೆ, "ನಾನು ಇಂಗ್ಲಿಷ್ ಪಿಕ್ಚರ್ ಹೀರೋಗಳ ರೀತಿ ಜೀನ್ಸ್ ಪ್ಯಾಙಟ್ ಹಾಕುತ್ತಾ ಇದ್ದೆ. ಆಗ ನನ್ನನ್ನು ನೋಡಿದ್ರೆ ಕಳೆದು ಹೋಗುತ್ತಾ ಇದ್ರು. ನಾನು ಯಾವ ವರ್ಕೌಟ್ ಅನ್ನು ಮಾಡದೆ, ಈ ರೀತಿಯಾದ ಫಿಟ್ನೆಸ್ ಮೆಂಟೈನ್ ಮಾಡ್ತಾ ಇದ್ದೆ. ಆದರೆ ಬಾಯಿ ವರ್ಕೌಟ್ ಜಾಸ್ತಿಯಾಗಿ ಬಿಡ್ತು" ಎಂದಿದ್ದಾರೆ. ಇದೆಲ್ಲವನ್ನು ಕೇಳಿಸಿಕೊಂಡ ಸುದೀಪ್ ಗೆ ಶಾಕ್ ಆಗಿದೆ.

More from Filmibeat

English summary
Bigg Boss Kannada 9 December 25th Episode Written Update. Here is the details about Aryavardhan Hero And Deepika Heroin.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X