BBK9: ಆರ್ಯವರ್ಧನ್ ಬಳಿ ಇರುವ ಕಥೆ ಕೇಳಿದ್ರೆ ಪ್ರೊಡ್ಯೂಸರ್ ತಲೆ ಸುತ್ತೋದು ಗ್ಯಾರಂಟಿ..!

By ಎಸ್ ಸುಮಂತ್

ಆರ್ಯವರ್ಧನ್ ಗುರೂಜಿಗೆ ಬರೀ ಭವಿಷ್ಯ ಹೇಳೋದು ಅಷ್ಟೇ ಅಲ್ಲ, ಸಿನಿಮಾದ ಕಥೆಯನ್ನು ಬರೆಯುತ್ತಾರೆ. ಅವರ ಬತ್ತಳಿಕೆಯಲ್ಲಿ ಸಾಕಷ್ಟು ಕಥೆಗಳಿವೆ. ಆ ಕಥೆಗಳನ್ನೆಲ್ಲಾ ಸಿನಿಮಾ ಮಾಡಿ, ತೆರೆ ಮೇಲೆ ಬಂದ್ರೆ, ದೆವ್ವಗಳೆಲ್ಲಾ ಥಿಯೇಟರ್ ಒಳಗೆ ಬರುವುದು ಗ್ಯಾರಂಟಿ.

ಆಗಾಗ ಗುರೂಜಿ ಸ್ಟೋರಿಯನ್ನು ಹೇಳುತ್ತಾ ಇರುತ್ತಾರೆ. ಈಗಾಗಲೇ ಸುದೀಪ್ ಅವರಿಗೂ ತಮ್ಮ ಬತ್ತಳಿಕೆಯಲ್ಲಿರುವ ಸ್ಟೋರಿ ಹೇಳಿ, ಪ್ರೊಡ್ಯೂಸರ್ ಕೂಡ ಎಂದುಬಿಟ್ಟಿದ್ದರು. ಆದರೆ ಅವತ್ತು ಹೇಳಿದ್ದಿದ್ದು ಒಂದು ಕಥೆಯಾದರೆ, ಇವತ್ತು ರಾಕೇಶ್ ಬಳಿ ಹೇಳಿದ್ದು ಬೇರೆಯದ್ದೇ ಕಥೆ.

'ಜೋಗಿ' ಕಥೆ ಹೇಳಿ 'ಮಸಣದ ಹೂ 2' ಎಂದರಾ..?

'ಜೋಗಿ' ಕಥೆ ಹೇಳಿ 'ಮಸಣದ ಹೂ 2' ಎಂದರಾ..?

ಆರ್ಯವರ್ಧನ್ ಗುರೂಜಿ ಇವತ್ತು ದಿವ್ಯಾ ಮತ್ತು ರಾಕಿಗೆ ಅದ್ಭುತವಾದ ಕಥೆಯೊಂದನ್ನು ಹೇಳಿದ್ದಾರೆ. ಅದುವೆ "ತಾಯಿ ಸೆಂಟಿಮೆಂಟ್ ಹೋಗ್ತಾ ಇರುತ್ತೆ ಈ ಕಥೆಯಲ್ಲಿ. ಮಗನಿಗೆ ತಾಯಿ ಸೆಂಟಿಮೆಂಟ್ ಹೋಗ್ತಾ ಇರುತ್ತೆ. ಈ ಸ್ಟೋರಿಯ ತಿರುವು ಹೇಳುತ್ತೀನಿ. ಅವರ ತಾಯಿ ಒಂದು ಹೂ ಮುಡಿದು ಕೊಂಡ್ರೆ ಅವನಿಗೆ ಒಂಥರ ಸ್ಮೆಲ್ ಬರುತ್ತೆ. ಅಮ್ಮ ಏನಮ್ಮ ಇದು ಅಂತ ಸಣ್ಣ ಹುಡುಗನಲ್ಲಿ ಕೇಳುತ್ತಾ ಇರುತ್ತಾನೆ. ಇದೊಂದು ಹೂವಿನ ಕಥೆ. ಹೂವಲ್ಲಿ ಏನಪ್ಪ ಅಂದ್ರೆ ಮಸಣದ ಹೂವನ್ನು ತಂದು ಮಾರುವುದು. ಕೊನೆಯಲ್ಲಿ ನಾನು ಎಂಎಲ್ಎ ಆದ್ರೆ, ಈ ಮಸಣದ ಹೂವಿನಿಂದ ನಾನು ಬದುಕಿರುವುದು ಅಂತ ಹೇಳುತ್ತಾನೆ.

ಕಥೆಯಲ್ಲಿ ಅಮ್ಮನ ಸಾವು

ಕಥೆಯಲ್ಲಿ ಅಮ್ಮನ ಸಾವು

ಕಥೆ ಮುಂದುವರೆಸಿದ ಆರ್ಯವರ್ಧನ್, "ಅಲ್ಲಿ ಅವರಮ್ಮ ಸತ್ತು ಬಿದ್ದಿರುತ್ತಾಳೆ. ಇಲ್ಲಿ ಅವನು ಎಂಎಲ್ಎ ಆಗುತ್ತಾನೆ. ಅಲ್ಲಿ ಅವರಮ್ಮನನ್ನು ಅನಾಥರು ಮಣ್ಣು ಮಾಡಿರುತ್ತಾರೆ. ಇಲ್ಲಿ ಯಾರೋ ಹೂ ತಂದು ಕೊರಳಿಗೆ ಹಾಕಿ ಬಿಡುತ್ತಾರೆ. ಆಗ ಹೂವಿನ ಸ್ಮೆಲ್ ಬಂದು ಬಿಡುತ್ತೆ. ಎದುರುಗಡೆ ಇರುವವನನ್ನು ಕೇಳುತ್ತಾನೆ. ಯಾರೋ ಈ ಹೂ ತಂದಿದ್ದು ಅಂತಾನೆ. ಅಣ್ಣ ನಂಗೆ ಗೊತ್ತಿಲ್ಲ. ಬ್ಲೇಡ್ ತಂದಿರಬೇಕು ಎನ್ನುತ್ತಾನೆ. ಬ್ಲೇಡ್ ಕುಡಿದು, ನೀನು ಎಂಎಲ್ಎ ಆಗಿದು ಬಿಟ್ಟೆ ಕಣಣ್ಣ ಅಂತಾ ಇರುತ್ತಾನೆ. ಆಗ ಹೂ ಎಲ್ಲಿ ತಂದೆ ಅಂದಾಗ, ಮಸಣದಲ್ಲಿ ಅಣ್ಣ, ಯಾರೋ ಅನಾಥೆ ಸತ್ತು ಬಿದ್ದಿದ್ದರು ಎನ್ನುತ್ತಾನೆ. ಆಗ ಮಗ ಅಯ್ಯೋ ಎಂದು ಓಡುತ್ತಾನೆ."

ಎಂಎಲ್ಎ ಆದರೂ ಮಸಣದತ್ತ ಪಯಣ

ಎಂಎಲ್ಎ ಆದರೂ ಮಸಣದತ್ತ ಪಯಣ

"ಮಸಣದಲ್ಲಿ ಬಂದು ಬಗೆಯುತ್ತಾ ಇರುತ್ತಾನೆ. ಇರೋ ಬರೋ ರೌಡಿಗಳೆಲ್ಲಾ ಬಂದು ಅಟ್ಯಾಕ್ ಮಾಡುತ್ತಾರೆ. ಇಡೀ ರೌಡಿಗಳೆಲ್ಲಾ ಮಸಣಕ್ಕೆ ಬಂದು ಬಿಡುತ್ತಾರೆ. ಮಣ್ಣು ಬಗೆದು ಬಗೆದು, ಅಮ್ಮನನ್ನು ತಬ್ಬಿಕೊಂಡು, ಮಸಣದಿಂದ ಮಸಣಕ್ಕೆ ಎತ್ತಿಕೊಂಡು ಹೋಗುತ್ತಾನೆ. ಆಗ ಪೊಲೀಸರು ಬಂದು ಬಿಡುತ್ತಾರೆ. ಇವ್ನು ಎಂಎಲ್ಎ ಅಲ್ವಾ, ಎಲ್ಲಾ ರೌಡಿಗಳನ್ನು ಶೂಟೌಟ್ ಮಾಡಿ, ಎಂಎಲ್ಎನನ್ನು ಕಾಪಾಡುತ್ತಾನೆ. ಆಗ ಅದೇ ಗುಂಡಿಗೆ ಬಿದ್ದು ಬಿಡುತ್ತಾನೆ. ಅಮ್ಮನ ಜೊತೆಗೆ ಮಗನು..?".

ಕಥೆ ಕೇಳಿ ಶಾಕ್ ಆದ ದಿವ್ಯಾ

ಕಥೆ ಕೇಳಿ ಶಾಕ್ ಆದ ದಿವ್ಯಾ

ಈಗ ಈ ಕಥೆಯನ್ನೆಲ್ಲಾ ಕೇಳಿದ ದಿವ್ಯಾಗೆ ಶಾಕ್ ಆಗಿದೆ. ಈ ರೀತಿಯೆಲ್ಲಾ ಕಥೆ ಇರುತ್ತಾ ಎಂಬ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೆಲ್ಲಾ ಕೇಳಿಸಿಕೊಂಡ ಮೇಲೆ ರಾಕಿ ಅಲ್ಲಿಂದ ಎದ್ದು ಹೋಗುತ್ತಾ ಇದ್ದರು. ಆಗ ಮತ್ತೆ ಆರ್ಯವರ್ಧನ್ ವಾಪಾಸ್ ಕರೆದು. ಇನ್ನು ಹೀರೊ ಎಂಟ್ರಿ ಹೇಳಬೇಕಿದೆ ಬಾ ಎಂದು ಕರೆದರು. ಆಗ ಹೀರೊ ಏನೆಲ್ಲಾ ಮಾಡುತ್ತಾನೆ ಎಂಬುದೆಲ್ಲವನ್ನು ಹೇಳಿ ಮತ್ತಷ್ಟು ಶಾಕಿಂಗ್ ಕೊಟ್ಟಿದ್ದಾರೆ.

More from Filmibeat

English summary
Bigg Boss Kannada December 26th Episode Written Update. Here is the details about Aryavardhan New Film Story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X