Don't Miss!
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Automobiles
ಸಪ್ತ ಸಾಗರದಾಚೆಯೂ ಮಹೀಂದ್ರಾ ಕಾರಿಗೆ ಬೇಡಿಕೆ... ನೇಪಾಳದಲ್ಲಿ ಎಕ್ಸ್ಯುವಿ700 ಬಿಡುಗಡೆ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: ಆಸೆ ಹೇಳಪ್ಪ ಅಂದ್ರೆ "ನಾನೇ ಬಿಗ್ ಬಾಸ್ ಗೆಲ್ಲಬೇಕು" ಎಂದ ಆರ್ಯವರ್ಧನ್!
ಆಸೆಗಳೇ ಬದುಕನ್ನು ಬೆಳೆಸುವುದು. ಸಾಕಷ್ಡು ಆಸೆಗಳನ್ನು ಹೊತ್ತು ಈ ಮನೆಗೆ ಬಂದಿದ್ದೀರಿ. ಇಲ್ಲಿರುವ ಇಷ್ಟು ದಿನ ನಿಮ್ಮ ಕೆಲವೊಂದು ಆಸೆಗಳು ಈಡೇರಿರಬಹುದು. ಇನ್ನು ಕೆಲವು ಈಡೇರದೆ ಇರಬಹುದು. ಆದರೆ ಇಲ್ಲಿಂದ ಹೋದ ಮೇಲೆ ಆ ಆಸೆಗಳಿಂದ ಕಳೆದು ಹೋಗುತ್ತೀರಿ. ಅದಕ್ಕೂ ಮುನ್ನ ನಿಮ್ಮ ಈಡೇರದ ಆಸೆಯನ್ನು ಈಡೇರಿಸಲು ಬಿಗ್ ಬಾಸ್ ತೀರ್ಮಾನಿಸಿದೆ ಎಂದು ಆದೇಶಿಸಿತ್ತು.
ಉಳಿದಿರುವ ಆಸೆಗಳಲ್ಲಿ ಮೂರು ಆಸೆಗಳನ್ನು ಹೇಳಿ, ಕೊಟ್ಟಿರುವ ಕಾಯಿನ್ ಅನ್ನು ಬಾವಿ ಒಳಗೆ ಹಾಕಬೇಕು. ಬಿಗ್ ಬಾಸ್ ಅದರಲ್ಲಿ ಯಾವುದಾದರೂ ಒಂದು ಆಸೆಯನ್ನು ಈಡೇರಿಸಲು ತೀರ್ಮಾನ ಮಾಡಿದೆ. ಅದರಂತೆಯೇ ಮನೆ ಮಂದಿ ಒಬ್ಬೊಬ್ಬರೇ ಹೋಗಿ ತಮ್ಮ ಮೂರು ಆಸೆಗಳನ್ನು ಹೇಳಿದ್ದಾರೆ.

ಗೊಂದಲ ಮಾಡಿದ ಆರ್ಯವರ್ಧನ್
ಆರ್ಯವರ್ಧನ್ ಯಾವಾಗಲೂ ಗೊಂದಲವೇ. ಈ ಬಾರಿಯೂ ಗೊಂದಲ ಮಾಡಿಕೊಂಡಿದ್ದಾರೆ. ಆಸೆ ಹೇಳು ಅಂದ್ರೆ, ಬಾವಿ ಕಟ್ಟೆ ಬಳಿ ನಿಂತು "ನನಗೆ ರಾಹು-ಕೇತು ಅಂದ್ರೆ ಇಷ್ಟ. ನಮ್ಮಲ್ಲಿ ಆ ದೇವಸ್ಥಾನಗಳು ಇಲ್ಲ. ಆದರೆ ಇಲ್ಲಿ ಆ ದೇವಸ್ಥಾನಗಳನ್ನು ಕಟ್ಟಿಸಿಕೊಡಬೇಕು ಎಂದರೆ, ಬಿಗ್ ಬಾಸ್ ನಾನೇ ಗೆಲ್ಲಬೇಕು" ಎಂದಾಗ ಬಿಗ್ ಬಾಸ್ ಮಧ್ಯೆ ಪ್ರವೇಶಿಸಿ, ಅವರಿಗಿರುವ ಭಕ್ತಿಯ ಬಗ್ಗೆ ಗೌರವ ಸೂಚಿಸಿ, ನಿಮ್ಮ ಆಸೆಯನ್ನು ಹೇಳಿ ಎಂದಿದ್ದಾರೆ. ಆಗ ನನ್ನ ಮೊದಲ ಆಸೆ, ಸುದೀಪ್ ಅಂಡ್ ವೈಫ್ ಮನೆಗೆ ಬರಬೇಕು. ಎರಡನೆಯದ್ದು ಪುನೀತ್ ರಾಜ್ ಕುಮಾರ್ ವೈಫ್ ಬರಬೇಕು. ಮೂರನೆಯದ್ದು ಬಿಗ್ ಬಾಸ್ ಮನೆಯಲ್ಲಿ ವಿನ್ನರ್ ಆಗಬೇಕು ಎಂದಿದ್ದಾರೆ.

ರಾಜಣ್ಣನಿಗೆ ಹೇರ್ ಕಟ್ ಚಿಂತೆ
ರಾಜಣ್ಣನ ಸರದಿ ಬಂದಾಗ ಮೂರು ಆಸೆಗಳನ್ನು ಹೇಳಿದ್ದಾರೆ. "ನಂಗೆ ಹೇರ್ ಕಟ್ ಆಗಬೇಕು ಎಂಬುದು. ಎರಡನೆಯದ್ದು ನಮ್ಮ ಮನೆಯವರ ಒಂದು ನಿಮಿಷದ ಕರೆ ಬಂದರೆ ಚೆನ್ನಾಗಿರುತ್ತೆ. ಮೂರನೆಯದ್ದು, ಸುದೀಪ್ ಅಣ್ಣನ ಜೊತೆಗೆ ಒಂದು ಸಣ್ಣದಾಗಿ ನಮ್ಮ ಜೊತೆಗೆ ಕೂತು ಮಾತನಾಡುವಂತಹ ಆಸೆ" ಎಂದಿದ್ದಾರೆ. ದಿವ್ಯಾ ಕೂಡ ತನ್ನ ಆಸೆ ಹೇಳಿದ್ದು, "ಒಂದೇ ಸೀಸನ್‌ನಲ್ಲಿ ನಾನು ಅವಿ ಇದ್ವಿ. ಆದ್ರೆ ಈ ಸೀಸನ್‌ನಲ್ಲಿ ಅವರನ್ನು ಬಿಟ್ಟು ಇದ್ದೀನಿ. ಅವರು ಬಂದ್ರೆ ತುಂಬಾ ಖುಷಿ ಅನ್ಸುತ್ತೆ. ಎರಡನೇಯದ್ದು ಸುದೀಪ್ ಸರ್ ಮನೆಯೊಳಗೆ ಬರಬೇಕು" ಎಂದು ಕೇಳಿಕೊಂಡಿದ್ದಾರೆ.

ರಾಕಿಗೆ ಮತ್ತೆ ಹಳಬರ ಜೊತೆ ಊಟ ಮಾಡುವಾಸೆ
ರಾಕೇಶ್ ತನ್ನ ಆಸೆಯನ್ನು ಹೇಳಿದ್ದು, "ಇಲ್ಲಿ ಆಗಿರುವಂತ ಸಂಬಂಧಗಳು ಡಿಫ್ರೆಂಟ್ ಆಗಿತ್ತು. ಹೊರಗಡೆ ಫ್ರೆಂಡ್ಸ್ ಆಗುತ್ತಾರೆ ಹೋಗುತ್ತಾರೆ. ಆದ್ರೆ ಇಲ್ಲಿ ಫೋನಿಲ್ಲ ಏನಿಲ್ಲ. ಹೀಗಾಗಿ ಜೆನ್ಯೂನ್ ಆಗಿತ್ತು. ಹೊರಗಡೆ ಮಾಡುವಂತ ಡಿನ್ನರ್‌ಗೂ ಇಲ್ಲಿ ಮಾಡುವಂತ ಡಿನ್ನರ್‌ಗೂ ಬಹಳ ವ್ಯತ್ಯಾಸವಿದೆ. ಇಲ್ಲಿ ಒಂದಷ್ಟು ಸಂಬಂಧ ಬೆಳೆದಿತ್ತು. ಕಾವ್ಯಾ, ಅನುಪಮಾ, ಅಮ್ಮು ಜೊತೆಗೆ ಇಲ್ಲಿ ಕೂತು ಊಟ ಮಾಡಬೇಕು ಎಂಬುದು ಆಸೆ. ಯಾಕಂದ್ರೆ ಹೊರಗಡೆ ಈ ರೀತಿಯೆಲ್ಲಾ ಊಟ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಎರಡನೇಯದ್ದಾಗಿ, ಇಲ್ಲಿ ಬೆಳಗ್ಗೆ ಆದ್ರೆ ಒಂದು ಸಾಂಗ್ ಪ್ಲೇ ಮಾಡ್ತಾ ಇದ್ದಾರೆ. ನಾನು ಮನಿ ಅಂತ ಸಾಂಗ್ ಮಾಡಿದ್ದೆ. ಅದಿನ್ನು ರಿಲೀಸ್ ಮಾಡಿಲ್ಲ. ಇಲ್ಲಿಯೇ ಕೇಳಿದ್ರೆ ತುಂಬಾ ಚೆನ್ನಾಗಿರುತ್ತೆ ಎಂದಿದ್ದಾರೆ.

ಬಿಗ್ ಬಾಸ್ ಈಡೇರಿಸುತ್ತಾ ಆಸೆ..?
ದೀಪಿಕಾ ಕೂಡ ಪ್ರವೀಣರಾಗಿರುವ ಕಾರಣ ಹಳೆ ಸೀಸನ್ ನೆನಪಿಸಿಕೊಂಡಿದ್ದಾರೆ. ಅದಕ್ಕಾಗಿ "ಶೈನ್ ಶೆಟ್ಟಿ, ವಾಸುಕಿ, ಪ್ರಿಯಾಂಕಾ ಅವರಲ್ಲಿ ಯಾರಾದರೂ ಒಬ್ಬರು ಈ ಮನೆಗೆ ಬರಲಿ ಅಥವಾ ಎಲ್ಲರೂ ಬಂದರೂ ತುಂಬಾ ಖುಷಿಯಾಗುತ್ತೆ. ಯಾಕಂದ್ರೆ ಎಲ್ಲರೊಟ್ಟಿಗೆ ಬಿಗ್ ಬಾಸ್ ಮನೆಯ ಅನುಭವ ಕಳೆದ ರೀತಿ ಆಗುತ್ತೆ" ಎಂದಿದ್ದಾರೆ.