Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: ರೂಪೇಶ್ ಶೆಟ್ಟಿಯ ಪ್ರಾರ್ಥನೆ ದೇವರಿಗೆ ಕೇಳಿಸಲಿಲ್ಲ.. ಆರ್ಯವರ್ಧನ್ ಗುರೂಜಿ ಔಟ್..!
ಬಿಟ್ಟು ಹೋಗುವವರನ್ನು ತಬ್ಬಿ, ಕಣ್ಣೀರಿಟ್ಟು ಕಳುಹಿಸುವುದು ವಾಡಿಕೆ. ಆದರೆ ಪಕ್ಕನೆ ಮಿಸ್ ಆಗುವವರನ್ನು, ಅನಿರೀಕ್ಷಿತವಾಗಿ ಪಕ್ಕನೆ ಮಾಯವಾಗುವವರನ್ನು ಕಂಡಿದ್ದೇವೆ. ಏನೆ ಆಗಲಿ ಬಿಗ್ ಬಾಸ್ ಮನೆಯಿಂದ ಹೋಗುವುದು ಅನಿವಾರ್ಯ. ಫಿನಾಲೆಯಲ್ಲಿ ಐದೇ ಸದಸ್ಯರಿಗೆ ಜಾಗ ಇರುವುದರಿಂದ ಒಬ್ಬರು ಹೋಗಲೇಬೇಕಾಗಿದೆ.
ಈ ಎಲಿಮಿನೇಷನ್ ಪ್ರಕ್ರಿಯೆ ಇನ್ನೊಂದು ಅರ್ಧಗಂಟೆಯಲ್ಲಿ ಶುರುವಾಗಲಿದೆ. ಎಲ್ಲರೂ ತಮ್ಮ ತಮ್ಮ ವಸ್ತುಗಳನ್ನು ಪ್ಯಾಕ್ ಮಾಡಿ ಸ್ಟೋರ್ ರೂಮಿನಲ್ಲಿಡಿ ಎಂದಾಗ ಎಲ್ಲರೂ ಶಾಕ್ ಆಗಿದ್ದಾರೆ. ಎಲ್ಲರೂ ತಬ್ಬಿಕೊಂಡು, ಒಬ್ಬರಿಗೊಬ್ಬರು ಆಲ್ ದಿ ಬೆಸ್ಟ್ ಹೇಳಿದ್ದಾರೆ. ಬಿಗ್ ಬಾಸ್ ಹೇಳಿದಂತೆ ತಮ್ಮ ವಸ್ತುಗಳನ್ನೆಲ್ಲಾ ತಂದು ಸ್ಟೋರ್ ರೂಮಿನಲ್ಲಿಟ್ಟು, ಗಟ್ಟಿ ಮನಸ್ಸಲ್ಲಿ ಸಿದ್ದರಾಗಿದ್ದಾರೆ.
BBK9:
ಆಸೆ
ಹೇಳಪ್ಪ
ಅಂದ್ರೆ
"ನಾನೇ
ಬಿಗ್
ಬಾಸ್
ಗೆಲ್ಲಬೇಕು"
ಎಂದ
ಆರ್ಯವರ್ಧನ್!

ಗಾರ್ಡನ್ ಏರಿಯಾಗೆ ಬಂದ ಮೇಲೆ ಏನಾಯ್ತು..?
ಮನೆ ಮಂದಿಯೆಲ್ಲಾ ಗಾರ್ಡನ್ ಏರಿಯಾದ ಮಬ್ಬು ಬೆಳಕಲ್ಲಿ ಬಂದು ನಿಂತಿದ್ದಾರೆ. ಎಷ್ಟೆ ಸಮಾಧಾನ ಮಾಡಿಕೊಂಡರು ಎಲ್ಲರ ಮನಸ್ಸಲ್ಲೂ ಗಾಬರಿಯಿದ್ದದ್ದು ಕಂಡು ಬಂದಿತ್ತು. ತಮ್ಮ ವಸ್ತುಗಳು ಏನೇ ಮಿಸ್ಸಾದರೂ ವಾಪಾಸ್ ಕಳುಹಿಸಿಕೊಡಿ ಎಂದು ಎಲ್ಲರೂ ಅವರವರೇ ಸಮಾಧಾನ ಮಾಡಿಕೊಂಡರು. ಸೋಫಾ ಮೇಲೆ ಕೂತಿದ್ದಾಗ ಲೈಟ್ಸ್ ಆಫ್ ಆಯಿತು. ಮನೆಯ ಸದಸ್ಯರೆಲ್ಲಾ ಗಾರ್ಡನ್ ಏರಿಯಾಗೆ ಬಂದು ಸಾಲಾಗಿ ನಿಲ್ಲಿ ಎಂದು ಬಿಗ್ ಭಾಸ್ ಸೂಚನೆ ನೀಡಿತು. ಅದರಂತೆ ಎಲ್ಲರು ಬಂದು ನಿಂತರು. ಆಗ ಮತ್ತೆ ಬಿಗ್ ಬಾಸ್ ಸೂಚನೆ ನೀಡಿತು.

ಎಲಿಮಿನೇಷನ್ ನಡೆದದ್ದು ಹೇಗೆ..?
ಬಿಗ್ ಬಾಸ್ ಆಟದ ಸೂಚನೆಯನ್ನು ನೀಡಿತ್ತು. ಮಧ್ಯರಾತ್ರಿಯಾದ ಮೇಲೆ ಒಬ್ಬ ಸದಸ್ಯ ವೇದಿಕೆ ಮೇಲೆರಬೇಕು. ಮ್ಯೂಸಿಕ್ ಆನ್ ಆಗುತ್ತೆ. ಸಾಕಷ್ಟು ಸಲ ಸದಸ್ಯ ಮೇಲೆ ಬರುತ್ತಾನೆ. ಮ್ಯೂಸಿಕ್ ಮುಗಿದ ಮೇಲೆ ಆ ಸದಸ್ಯ ಕಾಣಿಸಿಕೊಂಡರೆ ಬಂದು ತಮ್ಮ ಸ್ಥಾನದಲ್ಲಿ ನಿಲ್ಲಬೇಕು ಹೀಗೆ ಒಬ್ಬರಾದ ಮೇಲೆ ಒಬ್ಬರು ಹೋಗಬೇಕು ಎಂದು ಬಿಗ್ ಬಾಸ್ ಸೂಚನೆ ನೀಡಿತು. ಮೊದಲಿಗೆ ರಾಕಿ ನಿಂತಾಗ, ರಾಕಿಗೂ ಭಯ ಶುರುವಾಗಿತ್ತು. ಮ್ಯೂಸಿಕ್ ಆನ್ ಆಯ್ತು. ಎಲ್ಲರ ಮನಸ್ಸಲ್ಲೂ ದಿಗಿಲು. ಎರಡು ಮೂರು ಸಲ ಮೇಲೆ ಬರುವುದು, ಕೆಳಗೆ ಹೋಗುವುದನ್ನು ಮಾಡಲಾಯ್ತು. ಮ್ಯೂಸಿಕ್ ಆಫ್ ಆದರೂ ರಾಕಿ ವೇದಿಕೆಯಲ್ಲಿಯೇ ಕಂಡಿದ್ದಕ್ಕೆ ಸೇಫ್.

ಟೆನ್ಶನ್ ಆದರೂ ಬೇಗ ಮುಗಿಯಲಿಲ್ಲ
ಈ ರೀತಿಯಾದ ಆಟ ಎರಡೂ ಬಾರಿ ನಡೆಯಿತು. ಆರ್ಯವರ್ಧನ್, ದಿವ್ಯಾ, ರಾಜಣ್ಣ, ದೀಪಿಕಾ ಹಾಗೂ ರೂಪೇಶ್ ಶೆಟ್ಟಿ ಎರಡು ಬಾರಿಯೂ ಹೊರಗೆ ಬಂದರು. ಮೂರನೇ ರೌಂಡ್ ಶುರುವಾಯ್ತು. ಆತಂಕವೇನು ಕಡಿಮೆಯಾಗಿರಲಿಲ್ಲ. ಬಿಗ್ ಬಾಸ್ ಕೂಡ ಅಷ್ಟೇ ಟೆನ್ಶನ್ ಕೊಡುತ್ತಾ ಆಟವಾಡಿಸುತ್ತಾ ಇದ್ದರು. ದಿವ್ಯಾ ಈ ಬಾರಿ ನಾನು ಹೋಗುತ್ತೀನಿ ಅಂತ ಹೇಳಿ ಎಲ್ಲರಿಗೂ ವೇದಿಕೆ ಮೇಲೆಯೇ ನಿಂತು ಆಲ್ ದಿ ಬೆಸ್ಟ್ ಹೇಳಿದರು. ಆದರೆ ದಿವ್ಯಾ ಸೇವ್ ಆದರು.

ರಾಕೇಶ್‌ಗೆ ಇತ್ತು ನಂಬಿಕೆ
ರೂಪೇಶ್ ಶೆಟ್ಟಿ ವೇದಿಕೆ ಮೇಲೆ ನಿಂತರು. ಅನ್ ಎಕ್ಸ್ಪೆಕ್ಟೆಡ್ ಟ್ವಿಸ್ಟ್ ಅಂತ ಹೇಳಿದ್ರಲ್ಲ ಅದು ಇದೆ ಆಗಿರಬೇಕು. ನಾನು ಹೋದರೆ ಎಲ್ಲರೂ ಮಿಸ್ ಮಾಡಿ. ನಾನು ಮತ್ತೆ ಬಾರದೆ ಇದ್ದರೆ ಲವ್ ಯೂ ಆಲ್ ಎಂದಿದ್ದಾರೆ. ಆಗ ರಾಕಿ, ಯಾವುದೇ ಕಾರಣಕ್ಕೂ ನೀನು ಹೋಗಲ್ಲ ಬಾರೋ ಕರ್ಮ ನೀನು ಎಂದಿದ್ದಾರೆ. ಎಷ್ಟೇ ಸಮಯ ಆದರೂ ಬರದೆ ಇದ್ದದ್ದನ್ನು ಕಂಡು ಆರ್ಯವರ್ಧನ್ ಕಣ್ಣೀರು ಹಾಕಿದ್ದಾರೆ. ಬಳಿಕ ರೂಪೇಶ್ ವಾಪಾಸ್ಸಾಗಿದ್ದಾರೆ.

ಆಯವರ್ಧನ್ ಔಟ್
ಮೂರನೇ ರೌಂಡ್‌ನಲ್ಲಿ ಆರ್ಯವರ್ಧನ್ ಗುರೂಜಿ ಔಟ್ ಆಗಿದ್ದಾರೆ. ನಂಬರ್ ಮಾತ್ರ ಮೇಲೆ ಬಂದಿದೆ. ರೂಪೇಶ್ ಶೆಟ್ಟಿ ಎಷ್ಟು ಜೋರಾಗಿ ಕೂಗಿದರು ಬರಲೇ ಇಲ್ಲ. ಅಪ್ಪಾಜಿ, ಗುರೂಜಿ ಅಂತ ಕಿರುಚಿದರೂ ಬರಲಿಲ್ಲ. ರೂಪೇಶ್ ಶೆಟ್ಟಿ ಅದಕ್ಕೂ ಮುನ್ನ ಸಾಕಷ್ಟು ಸಲ ದೇವರನ್ನು ಬೇಡಿಕೊಂಡಿದ್ದರು. ಕಣ್ಣೀರು ಹಾಕಿದ್ದರು.