BBK9:ಬಿಗ್ ಬಾಸ್ ಗೆಲ್ಲೋ ಆಟದಲ್ಲಿ ಯಾರ ಮಧ್ಯೆ ಹೇಗಿದೆ ಫೈಟ್?

By ಎಸ್ ಸುಮಂತ್

ಬಿಗ್ ಬಾಸ್ ಸೀಸನ್ 9.. ಇನ್ನು ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ. ಎಲ್ಲರೂ ಕಾಯುತ್ತಿದ್ದಂತ ಫಿನಾಲೆಗೆ ದಿನಗಣನೆ ಶುರುವಾಗಿದೆ. ಒಳಗಿರುವ ಐದು ಮಂದಿ ಫುಲ್ ಎಕ್ಸೈಟ್ ಆಗಿದ್ದಾರೆ. ಅವರವರ ಮನದೊಳಗೆ ನಾನೇ ವಿನ್ ಆಗಬಹುದು ಎಂಬ ಭಾವನೆ ಇದ್ದೆ ಇದೆ. ಮನೆಯ ಸದಸ್ಯರ ನಡುವೆ ಕಾಂಪಿಟೇಷನ್ ಇದ್ದರು, ಜನಾಭಿಪ್ರಾಯವೇ ಬೇರೆಯಾಗಿದೆ.

ಈ ಬಾರಿಯ ಬಿಗ್ ಬಾಸ್ ನವೀನರು ಮತ್ತು ಪ್ರವೀಣರ ಕಾನ್ಸೆಪ್ಟ್‌ನಲ್ಲಿ ಮೂಡಿ ಬಂದಿತ್ತು. ಇಷ್ಟು ದಿನದ ಜರ್ನಿಯಲ್ಲಿ ಮನೆಯೊಳಗಿದ್ದವರು ಸ್ಪರ್ಧಿಗಳಾಗಿದ್ದರು. ನಾವೇ ಮುಂಚೂಣಿಯಲ್ಲಿರಬೇಕೆಂದು ಟಫ್ ಟಾಸ್ಕ್‌ಗಳಲ್ಲೂ ಘರ್ಜಿಸುತ್ತಾ ಇದ್ದರು. ಆದರೆ ಸದ್ಯದ ಸ್ಥಿತಿಯಲ್ಲಿ ಎಲ್ಲರ ಮನಸ್ಸುಗಳು ಭಾರವಾಗಿದೆ. ಬಿಗ್ ಬಾಸ್ ಮುಗಿದು ಮನೆಗೆ ಹೋಗುತ್ತಿದ್ದೀವಿ ಎಂಬ ಖುಷಿಯ ಜೊತೆಗೆ ಹೆಚ್ಚು ಎಮೋಷನಲ್ ಆಗಿದ್ದಾರೆ.

ಮನೆಯೊಳಗೆ ಸೈಲೆಂಟ್ ಯಾರು..?

ಮನೆಯೊಳಗೆ ಸೈಲೆಂಟ್ ಯಾರು..?

ಬಿಗ್ ಬಾಸ್ ಮನೆಯಲ್ಲಿ ಗೆಲುವು ತಮ್ಮದಾಗಬೇಕು ಎಂದರೆ ತಾಳ್ಮೆ ಕೂಡ ಮುಖ್ಯವಾಗುತ್ತೆ. ಆಟದ ಸ್ಟಾಟರ್ಜಿ ಗೊತ್ತಿದ್ದರು ಸಹ, ರಿಯಾಲಿಟಿ ಕೂಡ ಉಪಯೋಗಕ್ಕೆ ಬರುತ್ತೆ. ಆಟವನ್ನರಿತು, ಮನೆಯನ್ನರಿತು ಎಷ್ಟು ದಿನ ಆಟದ ರೀತಿ ಆಡುವುದಕ್ಕೆ ಸಾಧ್ಯ. ಆ ಆಟ ಬಹಳ ಬೇಗ ಜನತೆಗೂ ಗೊತ್ತಾಗುತ್ತೆ. ಬಿಗ್ ಬಾಸ್ ಮನೆಯೊಳಗಿರುವ ಸಹ ಸ್ಪರ್ಧಿಗೂ ಗೊತ್ತಾಗುತ್ತೆ. ಅದರಲ್ಲಿ ರಾಕೇಶ್ ಬಗ್ಗೆ ಎಲ್ಲರಿಂದಾನೂ ಪಾಸಿಟಿವ್ ಒಪಿನಿಯನ್ ಕೇಳಿ ಬಂದಿದೆ.

ಮನೆಯಿಂದ ಹೊರ ಹೋದವರ ಅಭಿಪ್ರಾಯವೇನು..?

ಮನೆಯಿಂದ ಹೊರ ಹೋದವರ ಅಭಿಪ್ರಾಯವೇನು..?

ಬಿಗ್ ಬಾಸ್‌ನಲ್ಲಿ ಮೊದ ಮೊದಲಿಗೆ 18 ಮಂದಿ ಇದ್ದರು. ವಾರ ಕಳೆದಂತೆ ಒಬ್ಬೊಬ್ಬರಾಗಿಯೆ ಹೊರ ಬರುವುದಕ್ಕೆ ಶುರುವಾಯಿತು. ಮೊದ ಮೊದಲಿಗೆ ಅಷ್ಟೇನು ತಿಳಿಯದ ಆಟ, ಒಂದು ಹತ್ತು ಮಂದಿ ಉಳಿದಾಗ ರಿಯಲ್ ಆಟ ಶುರುವಾಗಿತ್ತು. ಟಾಸ್ಕ್‌ಗಳು, ಅಗ್ರೆಸ್ಸಿವ್ ಆಟಗಳು, ಗೆಲ್ಲಬೇಕೆಂಬ ಹಠ ಕಾಣಲು ಶುರುವಾಗಿತ್ತು. ಇದರ ನಡುವೆಯಿಂದ ಹೊರ ಹೋದವರಿಗೆ ಮನೆಯೊಳಗೆ ಇರುವವರಲ್ಲಿ ಯಾರು ಗೆಲ್ಲಬೇಕು ಎಂಬ ಪ್ರಶ್ನೆ ಇಟ್ಟರೆ, ಹೆಚ್ಚು ಉತ್ತರ ಬಂದಿದ್ದು, ರಾಕೇಶ್ ಅಡಿಗ. ರಿಯಲ್ಲಾಗಿ ಆಟ ಆಡುತ್ತಿದ್ದಾರೆ ಎಂಬ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ.

ಸೋಶಿಯಲ್ ಮೀಡಿಯಾದವರ ಅಭಿಪ್ರಾಯವೇನು..?

ಸೋಶಿಯಲ್ ಮೀಡಿಯಾದವರ ಅಭಿಪ್ರಾಯವೇನು..?

ಸಾಮಾನ್ಯವಾಗಿ ಬಿಗ್ ಬಾಸ್ ಶುರುವಾದಾಗ ಕಂಟೆಸ್ಟೆಂಟ್‌ಗಳನ್ನು ಉಳಿಸುವುದು ಅವರ ಬೆಂಬಲಿಗರು. ಪ್ರತಿವಾರ ನಾಮಿನೇಟ್ ಆದಾಗಲೂ ವೋಟ್ ಮಾಡುವ ಮೂಲಕ ಕಾಪಾಡುತ್ತಾರೆ. ಹಾಗೇ ಬಚಾವ್ ಮಾಡುವವರು ಬಿಗ್ ಬಾಸ್ ಪ್ರೋಮೋಗಳಿಗೆ ಕಮೆಂಟ್ ಕೂಡ ಪಾಸ್ ಮಾಡುತ್ತಾರೆ. ನಮ್ಮ ಕಂಟೆಸ್ಟೆಂಟ್ ಗೆಲ್ಲುತ್ತಾರೆ ಎಂಬುದಾಗಿ. ಅದರಂತೆ ಈ ಬಾರಿ ಹೆಚ್ಚು ಕಮೆಂಟ್ ಪಡೆಯುತ್ತಿರುವುದು ರೂಪೇಶ್ ರಾಜಣ್ಣ.

ರೂಪೇಶ್ ಶೆಟ್ಟಿ ವರ್ಸಸ್ ರಾಕೇಶ್ ಅಡಿಗ

ರೂಪೇಶ್ ಶೆಟ್ಟಿ ವರ್ಸಸ್ ರಾಕೇಶ್ ಅಡಿಗ

ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಅಡಿಗ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಆಟದಲ್ಲಿ ಆಟವನ್ನೇ ಆಡಿದರೂ ಫ್ರೆಂಡ್‌ಶಿಪ್ ಎಂಬ ಗೆರೆ ದಾಟಿಲ್ಲ. ಬಿಗ್ ಬಾಸ್ ಕಂಟೆಸ್ಟೆಂಟ್ ಎಂದು ಬಂದಾಗ ಟಾಸ್ಕ್, ಎಂಟರ್ಟೈನ್ಮೆಂಟ್ ಎಲ್ಲದರಲ್ಲೂ ಇಬ್ಬರೂ ಹಿಂದೆ ಬಿದ್ದಿಲ್ಲ. ಹೀಗಾಗಿ ಇಬ್ಬರಿಗೂ ಹೆಚ್ಚಿನ ಮಟ್ಟದಲ್ಲಿಯೇ ಫಾಲೋವರ್ಸ್ ಇದ್ದಾರೆ. ಅಷ್ಟೇ ಯಾಕೆ ಮನೆ ಮಂದಿಯನ್ನೇ ಕೇಳಿದರು ಅರ್ಧ ಜನ ರೂಪೇಶ್ ಶೆಟ್ಟಿ ಹೆಸರನ್ನು ಸೂಚಿಸಿದರೇ, ಇನ್ನು ಅರ್ಧ ಜನ ರಾಕೇಶ್ ಅಡಿಗ ಅವರ ಹೆಸರನ್ನು ಸೂಚಿಸುತ್ತಾರೆ. ಕೊನೆಯಲ್ಲಿ ಸುದೀಪ್ ಅವರು ಯಾರ ಕೈ ಮೇಲೆತ್ತುತ್ತಾರೆ ಎಂಬ ಕುತೂಹಲವಂತು ಇದ್ದೆ ಇದೆ.

More from Filmibeat

English summary
Bigg Boss Kannada 9 December 27th Episode Written Update. Here is the details about Bigg Boss winning contestent discussion.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X