BBK9: ಅರವಿಂದ್ ಬೆಡ್ ಅನ್ನೇ ಆಯ್ಕೆ ಮಾಡಿಕೊಂಡಿದ್ದ ದಿವ್ಯಾ ಕೊನೆಯಲ್ಲಿ ಸೀಕ್ರೆಟ್ ರಿವೀಲ್!
ಬಿಗ್ ಬಾಸ್ ಮನೆಯಲ್ಲಿ ಆಗಾಗ ಸಪ್ರೈಸ್‌ಗಳು ನಡೆಯುತ್ತಲೆ ಇರುತ್ತವೆ. ಮನೆ ಮಂದಿಯ ಆಸೆಯಂತೆ ಒಮ್ಮೆ ಎಲ್ಲಾ ಪೋಷಕರು ಬಂದು ಹೋಗಿದ್ದರು. ಈಗ ಕಂಟೆಸ್ಟೆಂಟ್‌ಗಳು ಇಷ್ಟ ಪಟ್ಟಂತೆ ಅವರು ಕೇಳಿದ ವರವನ್ನು ಬಿಗ್ ಬಾಸ್ ಕರುಣಿಸಿದೆ.
ಉಳಿದು ಹೋದ ಆಸೆ ಏನಿದೆ ಎಂಬುದನ್ನು ತಿಳಿಸಿದರೆ ಅದನ್ನು ಬಿಗ್ ಬಾಸ್ ಈಡೇರಿಸುತ್ತದೆ. ಮೂರು ಆಸೆಗಳನ್ನು ನೀವೂ ತಿಳಿಸಬೇಕು ಎಂದು ಹೇಳಿದ್ದರು. ಅದರಂತೆ ದಿವ್ಯಾ ಮೊದಲನೆಯದ್ದಾಗಿ ಅವಿ ಮನೆಯೊಳಗೆ ಬರಬೇಕು. ಯಾಕಂದ್ರೆ ಒಂದು ಸೀಸನ್‌ನಲ್ಲಿ ಇಬ್ಬರು ಒಟ್ಟಿಗೆ ಇದ್ದೆವು ಎಂದಿದ್ದರು. ಅದರಂತೆ ಇಂದು ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಪ್ರತ್ಯಕ್ಷರಾಗಿದ್ದಾರೆ.

ಅರವಿಂದ್ ಕಂಡು ದಿವ್ಯಾ ಖುಷಿ
ರಾಜಣ್ಣ, ರಾಕೇಶ್, ದಿವ್ಯಾ ಮಾತನಾಡುತ್ತಾ ಕೂತಿದ್ದರು. ಆಗ ಸಂಜೆ 4 ಗಂಟೆಯಾಗಿತ್ತು. ಮನೆಯೊಳಗೆ ನಿಧಾನವಾಗಿ ಅರವಿಂದ್ ಬಂದರು. ದಿವ್ಯಾಳಿಗೆ ಭಯ ಪಡಿಸಲೆಂದು ನಿಧಾನವಾಗಿ ಬರುತ್ತಿದ್ದ ಅರವಿಂದ್ ಅವರನ್ನು ಕಂಡು ರಾಜಣ್ಣ ಕಿರುಚಿದರು. ದಿವ್ಯಾ ಆ ಕಡೆ ತಿರುಗಿ ನೋಡಿದರೆ ಅರವಿಂದ್. ಫುಲ್ ಶಾಕ್ ಆಗಿದ್ದಾರೆ. ಖುಷಿಯನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಅಯ್ಯೋ ಅಂತ ಕಿರುಚಿ ತಮ್ಮ ಪ್ರೀತಿ, ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಅವಿಗಾಗಿ ಹಾಡು ಹಾಡಿದ ದಿವ್ಯಾ
ದಿವ್ಯಾ, ಅರವಿಂದ್ ಅವರನ್ನು ಎಷ್ಟು ಮಿಸ್ ಮಾಡಿಕೊಂಡರು ಎಂಬುದು ಎಲ್ಲರಿಗೂ ಗೊತ್ತು. ಮನೆಯೊಳಗಿರುವವರು "ಯಾವಾಗಲೂ ನಿಮ್ಮ ಬಗ್ಗೆಯೇ ಹೇಳುತ್ತಾ ಇರುತ್ತಾಳೆ. ತುಂಬಾ ಮಿಸ್ ಮಾಡಿಕೊಳ್ಳುತ್ತಾಳೆ" ಅಂತ ಆ ಫೀಲಿಂಗ್ಸ್ ಹಂಚಿಕೊಂಡರು. ಬಳಿಕ ದಿವ್ಯಾ ಹಾಡೊಂದನ್ನು ಬರೆದಿದ್ದರು. ಈ ಹಾಡು ನಿನಗಾಗಿಯೇ ಬರೆದಿರುವುದು ಅಂತ ಹೇಳಿ, "ನೀನೊಂಥರ ಚಂದಿರ.." ಅನ್ನೋ ಹಾಡನ್ನು ಬರೆದು ಹಾಡಿದ್ದಾರೆ.

ಸೈಲೆಂಟ್ ಎಂದುಕೊಂಡರೆ ಅರವಿಂದ್..?
ಅರವಿಂದ್ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಹೇಳಿದ್ದೆ ಆಯ್ತು. ದಿವ್ಯಾ ಹೇಳಿದ ಮಾತುಗಳನ್ನು ಕೇಳಿ ಕೇಳಿ ಮನೆಯವರ ಊಹೆಯೇ ಬೇರೆಯಾಗಿತ್ತು. ಅರವಿಂದ್ ಫನ್ ಮಾಡುವುದಿಲ್ಲ ಎಂಬುದಿತ್ತು. ಆದರೆ ಅರವಿಂದ್ ಮನೆಯೊಳಗೆ ಎಂಟ್ರಿಯಾದ ಕೂಡಲೇ ಎಲ್ಲರನ್ನು ನಕ್ಕು ನಲಿಸಿದ್ದರು. ಆತ್ಮೀಯವಾಗಿ ಮಾತನಾಡಿಸಿದರು, ಅದರ ಜೊತೆಗೆ ಡ್ಯಾನ್ಸ್ ಕೂಡ ಮಾಡಿದರು. ಬಳಿಕ ಎರಡೂವರೆ ಗಂಟೆಗಳ ಬಳಿಕ ವಾಪಾಸ್ ಆದರು. ಬಳಿಕ ಮನೆಯವರೆಲ್ಲಾ ದಿವ್ಯಾ ಬಳಿ ಹೊಗಳಿದರು. ಮಾತನಾಡುವುದೇ ಇಲ್ಲವೇನೋ, ಸೈಲೆಂಟ್ ಎಂದುಕೊಂಡಿದ್ದೆ. ಎಷ್ಟು ಫನ್ ಇದ್ದಾರೆ ಅಂತ ಹೊಗಳಿದ್ದಾರೆ.

ದಿವ್ಯಾ ಮಲಗುವುದು ಎಲ್ಲಿ ಗೊತ್ತಾ..?
ದಿವ್ಯಾ ಬಿಗ್ ಬಾಸ್ ಮನೆಗೆ ಬಂದಿರುವುದು ಪ್ರವೀಣರಾಗಿ. ಅದಾಗಲೇ ಒಂದು ಸೀಸನ್ ನಲ್ಲಿ ಬಂದು ಹೋದವರು. ಹೀಗಾಗಿ ಆ ಬೆಡ್ ರೂಮ್, ಬೆಡ್, ಸೋಫಾ ಹೀಗೆ ಎಲ್ಲಾ ಕಡೆ ಓಡಾಡಿದ ನೆನಪುಗಳು ಇದ್ದೆ ಇದೆ. ಹೀಗಾಗಿ ಸೀಸನ್ 9ಗೆ ಬಂದಾಗ ದಿವ್ಯಾ, ಮಲಗಿಕೊಳ್ಳುತ್ತಿರುವುದು ಅರವಿಂದ್ ಬಳಸಿದ ಬೆಡ್ ಮೇಲೆ. ಈ ವಿಚಾರ ಇಲ್ಲಿಯ ತನಕ ಯಾರಿಗೂ ಗೊತ್ತಿರಲಿಲ್ಲ. ದೀಪಿಕಾ ದಾಸ್ ಈ ಸೀಕ್ರೆಟ್ ಅನ್ನು ಅರವಿಂದ್ ಮುಂದೆಯೇ ರಿವೀಲ್ ಮಾಡಿದ್ದಾರೆ. ಅರವಿಂದ್ ಕೂಡ ಕನ್ಫರ್ಮ್ ಮಾಡಿದ್ದಾರೆ. ಹೌದು ನಾನು ಇದೆ ಬೆಡ್ ಮೇಲೆ ಮಲಗುತ್ತಾ ಇದ್ದೆ ಎಂದು ಹೇಳಿದ್ದಾರೆ.


Click it and Unblock the Notifications











