Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: ದಿವ್ಯಾರನ್ನು ದುರಂಕಾರಿ ಎಂದುಕೊಂಡಿದ್ದ ರಾಕಿ : ಮುಂದೇನಾಯ್ತು..?
ಬಿಗ್ ಬಾಸ್ ಫಿನಾಲೆಗೆ ಇನ್ನು ಒಂದೇ ಮೆಟ್ಟಿಲು ಬಾಕಿ ಇದೆ. ಶುಕ್ರವಾರ ಮತ್ತು ಶನಿವಾರ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಫಿನಾಲೆಗಾಗಿ ಐದು ಜನ ಸಿದ್ದರಾಗಿ ನಿಂತಿದ್ದಾರೆ. ರೂಪೇಶ ರಾಜಣ್ಣ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ದೀಪಿಕಾ ದಾಸ್, ದಿವ್ಯಾ ಉರುಡುಗ ಫಿನಾಲೆ ಹಂತಕ್ಕೆ ಬಂದು ನಿಂತಿದ್ದಾರೆ. ಆದರೆ ಕೊನೆಯಲ್ಲಿ ಸುದೀಪ್ ಕೈ ಎತ್ತುವ ಕೈ ಯಾರದ್ದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೆ ಇದೆ.
ಅದಕ್ಕೂ ಮುನ್ನ ಇವತ್ತು ಬಿಗ್ ಬಾಸ್ ಮನೆ ಸದಸ್ಯರಿಗೆ ಸ್ಪೆಷಲ್ ಮೂಮೆಂಟ್ ಕ್ರಿಯೇಟ್ ಮಾಡಿಕೊಟ್ಟಿದೆ. ನಿನ್ನೆಯೆಲ್ಲಾ ಮನೆ ಮಂದಿ ಇಷ್ಟಪಟ್ಟಿದ್ದನ್ನು ಬಿಗ್ ಬಾಸ್ ನೀಡಿದೆ. ಈಗ ಮನೆಯೊಳಗಿರುವವರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಲು ಹೇಳಿದ್ದಾರೆ. ಅದರಲ್ಲಿ ದಿವ್ಯಾ ಬಗ್ಗೆ ರಾಕೇಶ್ ಅಂಡ್ ರೂಪೇಶ್ ಮುದ್ದು ಮುದ್ದಾಗಿ ಮಾತನಾಡಿದ್ದಾರೆ.
BBK9:
ರೂಪೇಶ್
ಶೆಟ್ಟಿಯ
ಪ್ರಾರ್ಥನೆ
ದೇವರಿಗೆ
ಕೇಳಿಸಲಿಲ್ಲ..
ಆರ್ಯವರ್ಧನ್
ಗುರೂಜಿ
ಔಟ್..!

ದಿವ್ಯಾ ಬಗ್ಗೆ ಮಾತನಾಡಿದ ರಾಕಿ
ಮೊದಲ ಬಾರಿಗೆ ದಿವ್ಯಾ ಅವರನ್ನು ನೋಡಿದ್ದ ರಾಕಿ, "ದಿವ್ಯಾರನ್ನು ಮೊದಲು ನೋಡಿದಾಗ ಅವರು ಹಾಯ್ ಹೇಳಿದರು. ನಾನು ಹಾಯ್ ಹೇಳಿ ಸುಮ್ಮನಾದೆ ಯಾಕಂದ್ರೆ ಅವರಿಗೆ ನಾನು ಹೀರೋಯಿನ್ ಅನ್ನೋದು ತಲೆಗೆ ತುಂಬಿಕೊಂಡು ಬಿಟ್ಟಿದೆ ಅಂದುಕೊಂಡಿದ್ದೆ. ಒಂದು ವಾರವಾಯ್ತು ದಿವ್ಯಾ ಮಾತನಾಡುತ್ತಾ ಇದ್ದದ್ದು ತುಂಬಾ ಜೆನ್ಯೂನ್ ಎನಿಸುವುದಕ್ಕೆ ಶುರುವಾಯ್ತು. ಅವಳು ಕೊಡ್ತಾ ಇದ್ದಂತಹ ಸ್ಮೈಲ್ ಆಗಿರಬಹುದು, ಮಾತನಾಡಿಸುತ್ತಿದ್ದಂತ ರೀತಿಯಾಗಿರಬಹುದು. ಕಲ್ಮಶ ಇರಲಿಲ್ಲ. ನಂಗೆ ಎಷ್ಟು ಗಿಲ್ಟ್ ಫೀಲ್ ಆಯ್ತು ಅಂದ್ರೆ ಛೇ ಇಂಥ ಹುಡುಗಿ ಬಗ್ಗೆ ಹಿಂಗೆ ಮಾತನಾಡಿ ಬಿಟ್ಟೆನಾ ಅಂತ ಅನ್ನಿಸಿತು. ಬಳಿಕ ಅವರನ್ನು ಕರೆದು ನಾನೇ ಮಾತನಾಡಿದೆ" ಎಂದಿದ್ದಾರೆ.
BBK9:ಬಿಗ್
ಬಾಸ್
ಗೆಲ್ಲೋ
ಆಟದಲ್ಲಿ
ಯಾರ
ಮಧ್ಯೆ
ಹೇಗಿದೆ
ಫೈಟ್?

ರಾಕೇಶ್ ಮಾತು ಕೇಳಿ ದಿವ್ಯಾ ಶಾಕ್
ಮಾತು ಮುಂದುವರೆಸಿದ್ದ ರಾಕೇಶ್ "ದಿವ್ಯಾ ನಾನೇ ನಿನ್ನ ಬಗ್ಗೆ ಬ್ಯಾಡ್ ಒಪಿನಿಯನ್ ಇಟ್ಟುಕೊಂಡಿದ್ದೆ. ಆದರೆ ನೀವೂ ಆ ತರಹದ ವ್ಯಕ್ತಿ ಅಲ್ಲ. ನೀವೂ ರಿಯಲಿ ಗ್ರೇಟ್ ಅಂತ ಹೇಳಿದ್ದೆ. ನೀವೂ ಆಗ ಕೊಟ್ಟ ರಿಯಾಕ್ಷನ್ ಹೇಗಿತ್ತು ಅಂದ್ರೆ, ಜಗಳ ಆಡ್ತಾ ಇದ್ವಿ. ಕಿತ್ತಾಡ್ತಾ ಇದ್ವಿ. ಏನೇ ಆದರೂ ಒಂದು ಕೇರ್ ಅಂತೂ ಇತ್ತು. ಇಡೀ ಲೈಫ್ ನಲ್ಲಿ ಉಳಿದುಕೊಳ್ಳುವ ಫ್ರೆಂಡ್‌ಶಿಪ್ ಇದಾಗಿದೆ. ಜರ್ನಿಯಲ್ಲಿ ಅಪ್ ಅಂಡ್ ಡೌನ್ಸ್ ಇದ್ದೆ ಇದೆ. ಒಮ್ಮೆ ನಾನು ನಿನ್ನ ನಾಮಿನೇಟ್ ಮಾಡ್ತೀನಿ. ಅದು ನಿಂಗೆ ಬೇಸರ ಆಗಿ ಹೋಗುತ್ತೆ. ಆಗ ನೀನು ಅತ್ತಾಗ ತುಂಬಾ ಬೇಸರ ಆಗಿ ಹೋಯ್ತು. ಆದರೂ ಅದನ್ನು ನೀನು ಈಸಿಯಾಗಿ ತೆಗೆದುಕೊಂಡೆ" ಎಂದಿದ್ದಾರೆ.

ಆಗಲು ತಂಗಿ ಈಗಲೂ ತಂಗಿ ಎಂದ ರಾಜಣ್ಣ
ಇನ್ನು ರಾಜಣ್ಣ, ದಿವ್ಯಾ ಬಗ್ಗೆ ಹೇಳಲು ವೇದಿಕೆ ಹತ್ತಿದರು. "ದಿವ್ಯಾ.. ಇವತ್ತು ತಂಗಿಯೇ ಅವತ್ತು ತಂಗಿಯೇ. ಎಲ್ಲ ದಿನವೂ ತಂಗಿಯೇ ನಾನು ರೂಪಿ ಭೇಟಿ ಮಾಡಿದ ಮೇಲೆ ನಾನು ಭೇಟಿಯಾದ ಎರಡನೇ ವ್ಯಕ್ತಿ ದಿವ್ಯಾ ಅಂತ ಹೇಳುವುದಕ್ಕೆ ಇಷ್ಟಪಡುತ್ತೀನಿ. ಕಳೆದ ಸೀಸನ್ ನಲ್ಲಿ ಅತಿ ಹೆಚ್ಚು ಸಪೋರ್ಟ್ ಮಾಡಿದ್ದು ದಿವ್ಯಾನಿಗೆ. ಒಬ್ಬ ಅಭಿಮಾನಿಯಾಗಿ" ಎಂದಿದ್ದಾರೆ.

ಅಂದು ಅಭಿಮಾನಿ ಇಂದು ಕಂಟೆಸ್ಟೆಂಟ್
ಮಾತು ಮುಂದುವರೆಸಿದ ರಾಜಣ್ಣ "ನಿಮಗೆ ಅಭಿಮಾನಿಯಾಗಿದ್ದೆ. ಈ ಸೀಸನ್‌ನಲ್ಲಿ ಕಂಟೆಸ್ಟೆಂಟ್ ಆಗಿದ್ದೀನಿ. ತುಂಬಾ ಖುಷಿಯಾಯ್ತು. ನಮ್ಮ ನಡುವೆ ಏನೇ ಇರಬಹುದು ಅದೆಲ್ಲವನ್ನು ಪಕ್ಕಕ್ಕೆ ಇಟ್ಟು ನೋಡಿದಾಗ ನೀವೊಂದು ಪುಟಾಣಿ ಗುಬ್ಬಿಮರಿ. ಈ ಸೀಸನ್ ಪೂರ್ತಿ ಕನೆಕ್ಟ್ ಆಗಿದ್ದು ನಿಮ್ಮ ಜೊತೆಗೆ ಮಾತ್ರ. ಇಬ್ಬರು ಆಗಾಗ ಕೋಳಿ ಜಗಳ ಶುರು ಮಾಡುತ್ತೀವಿ. ಆದರೆ ಅದನ್ನು ಬಿಟ್ಟು ಮತ್ತೆ ಮಾತುಕತೆ ಶುರು ಮಾಡ್ತೀವಿ" ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.