Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9:ನನ್ನ ಕರ್ಮದ ಫ್ರೆಂಡ್ ರೂಪೇಶ್ ರಾಜಣ್ಣ : ರೂಪೇಶ್ ಶೆಟ್ಟಿ ನೊಂದುಕೊಂಡಿದ್ದೇಕೆ?
ಬಿಗ್ ಬಾಸ್ ಮನೆಯಲ್ಲಿ ಆಗಾಗ ಮನಸ್ಸಿನ ಮಾತುಗಳನ್ನು ಹೇಳಿಕೊಳ್ಳುವುದಕ್ಕೆ ಅವಕಾಶ ಸಿಗುತ್ತಾ ಇರುತ್ತದೆ. ಸದ್ಯ ಇರುವ ಐದು ಜನರಿಗೆ ಮತ್ತೆ ಮನದಾಳದ ಮಾತನ್ನು ಹೇಳಲು ಬಿಗ್ ಬಾಸ್ ಅವಕಾಶ ಮಾಡಿಕೊಟ್ಟಿದೆ. ಆದರೆ ಈ ಬಾರಿ ಅವರವರ ಆಸೆಗಳನ್ನು ಹೇಳುವುದಕ್ಕೆ
ಈ ಮನೆಯಲ್ಲಿ ಒಂದಷ್ಟು ಜನರ ನಡುವೆ ಭಾಂದವ್ಯ ಬೆಳೆದಿತ್ತು. ಅದರಲ್ಲಿ ರೂಪೇಶ್, ರಾಜಣ್ಣ, ಗುರೂಜಿ ಅವರದ್ದೂ ಕೂಡ ಹೌದು. ಈ ಮೂವರು ಯಾವಾಗಲೂ ಒಟ್ಟಾಗಿ ಬೆಳದಿಂಗಳ ಊಟ ಮಾಡುವುದಕ್ಕೂ ಹೋಗುತ್ತಿದ್ದರು. ಮನೆಯವರ ಜೊತೆಗೆ ಮಾತನಾಡುವುದಕ್ಕೂ ಶುರು ಮಾಡುತ್ತಿದ್ದರು. ಇದೀಗ ರಾಜಣ್ಣ ಬಗ್ಗೆ ರೂಪೇಶ್ ತಮ್ಮ ಮನದಾಳದ ಮಾತುಗಳನ್ನು ಹೇಳಿದ್ದಾರೆ.

ನನ್ನ ಕರ್ಮದ ಫ್ರೆಂಡು ರೂಪೇಶ್ ರಾಜಣ್ಣ
ರೂಪೇಶ್ ರಾಜಣ್ಣ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ ಹಂಚಿಕೊಂಡಿದ್ದು ಹೀಗೆ "ರೂಪೇಶ್ ರಾಜಣ್ಣ ಬಗ್ಗೆ ನಾನು ಹೇಳಬೇಕಾಗಿಲ್ಲ. ಬಹುಶಃ ಈ ಸೀಸನ್ ಜರ್ನಿಯಲ್ಲಿ ಎರಡು ಆಫ್ ಅಂತ ಮಾಡಿದರೆ ಅದರಲ್ಲಿ ಸೆಕೆಂಡ್ ಆಫ್ ನಲ್ಲಿ ಕಂಪ್ಲೀಟ್ ಆಗಿ ರಾಜಣ್ಣ ಅವರು ಆವರಿಸಿಕೊಂಡಿರುತ್ತಾರೆ" ಎಂದಿದ್ದಾರೆ.

ಸಾನ್ಯಾ ಸ್ಥಾನ ತುಂಬಿದ ರಾಜಣ್ಣ
ಮುಂದುವರೆದು ಮಾತನಾಡಿದ ರೂಪೇಶ್ "ಸಾನ್ಯಾ ಹೋದ ಮೇಲೆ, ಗುರೂಜಿ ಇಲ್ಲದೆ ನನ್ನ ಮಾತು ಕಂಪ್ಲೀಟ್ ಆಗುವುದಿಲ್ಲ. ಗುರೂಜಿ ಜೊತೆಗೆ ನೀವೂ ಸೇರಿಕೊಂಡು ನನ್ನ ಗೀವ್ ಅಪ್ ಮಾಡಿದ್ರಿ. ಇಲ್ಲೆ ಗಾರ್ಡನ್ ಏರಿಯಾದಲ್ಲಿ ನಂಗೆ ಕಂಫರ್ಟ್ ಝೋನ್ ಮಾಡಿಕೊಟ್ಟಿದ್ದೀರಿ. ಅದರಲ್ಲೂ ಗುರೂಜಿ ಇಟ್ಟುಕೊಂಡು ಕಾಲೆಳೆಯೋದು ಇದೆಯಲ್ಲ. ಅದಂತು ಸೂಪರ್ ಆಗಿ ಇರುತ್ತಿತ್ತು. ಸೆಕೆಂಡ್ ಇನ್ನಿಂಗ್ಸ್ ಅಂತ ಏನು ಹೇಳಿದೆ ಅದರಲ್ಲಿ ಇದ್ದಂತಹ ಫನ್‌ನಲ್ಲಿ ರಾಜಣ್ಣ ಅವರದ್ದು ಪಾತ್ರ ದೊಡ್ಡದಿದೆ." ಎಂದಿದ್ದಾರೆ.

ಅವರ ಹೆಂಡತಿ ಮೇಲಿನ ಪ್ರೀತಿಗೆ ಕ್ಲೀನ್ ಬೋಲ್ಡ್..!
"ನಂಗೆ ಕೊಟ್ಟ ಆ ಒಂದು ಲೆಟರ್ ಬಿಟ್ರೆ ಬೇರೆನೂ ಬೇಸರ ಇಲ್ಲ. ಬಹುಶಃ ಬೇರೆಯವರು ಆ ಲೆಟರ್ ನೀಡಿದ್ದರೆ ನಾನು ಬದಲಾಗ್ತಾ ಇರಲಿಲ್ಲ. ಆದರ ಬಳಿಕ ನೀವೂ ತೋರಿಸಿದ ಕೇರ್‌ನಿಂದಾಗಿ, ನಾನು ಮತ್ತೆ ಫ್ರೆಂಡ್‌ಶಿಪ್ ಮುಂದುವರೆಸಿದ್ದೀನಿ. ನೀವೂ ಮನಸ್ಸಲ್ಲಿ ಏನನ್ನು ಇಟ್ಟುಕೊಳ್ಳಬೇಡಿ. ನಾನು ಆ ಒಂದು ದಿನವನ್ನು ಈಗಾಗಲೇ ಡಿಲೀಟ್ ಮಾಡಿದ್ದೀನಿ. ಇನ್ನೊಂದು ವಿಚಾರ, ಬಿಗ್ ಬಾಸ್ ಮನೆಯಲ್ಲಿ ಫ್ರೆಂಡ್ಸ್ ಅಂದ್ರೆ ಏನು ಅಂತ ಗೊತ್ತಾಯ್ತು. ಲವ್ ಅಂದ್ರೆ ಏನು ಅಂತ ಗೊತ್ತಿತ್ತು. ಆದರೆ, ಮದುವೆಯಾದ್ಮೇಲೆ ಒಬ್ಬ ಗಂಡ ಹೇಗಿರಬೇಕು ಎಂಬ ಉದಾಹರಣೆ ಸಿಕ್ಕಿದೆ. ಅದು ರೂಪೇಶ್ ರಾಜಣ್ಣ. ನಂಗೆ ತುಂಬಾ ಖುಷಿಯಾಯ್ತು. ನಾನು ಫ್ಯೂಚರ್‌ನಲ್ಲಿ ಮದುವೆ ಆದ್ರೆ ನಾನು ಅದೇ ಥರ ಇರುತ್ತೀನಿ" ಎಂದು ಪ್ರಾಮೀಸ್ ಮಾಡಿದ್ದಾರೆ.

ದೀಪಿಕಾ ದಾಸ್ ಏನಂದ್ರು..?
ದೀಪಿಕಾ ಕೂಡ ರಾಜಣ್ಣ ಬಗ್ಗೆ ಮಾತನಾಡಿದ್ದು, "ಇವರ ಬಗ್ಗೆ ಮಾತನಾಡುವುದಕ್ಕೆ ಸಾಕಷ್ಟಿದೆ. ಅವರ ಬಗ್ಗೆ ಹೇಳುತ್ತಾ ಹೋದರೆ ಬುಕ್ ಬರೆಯಬಹುದು. ಆದರೂ ಕೆಲವೇ ಕೆಲವು ಮುಖ್ಯಾಂಶಗಳೊಂದಿಗೆ ಹೇಳುತ್ತೀನಿ. ನಾನು ನೋಡಿದಂತಹ ರಾಜಣ್ಣ ಎಷ್ಟು ಹೋರಾಟ ಮಾಡಿದರೋ ಅಷ್ಟೇ ಪ್ರೀತಿ ಮಾಡುತ್ತಾರೆ. ಅವರಲ್ಲಿರುವ ಇನೋಸೆಂಟ್‌ನಲ್ಲಿ ಎಲ್ಲರನ್ನು ಗೆಲ್ಲುತ್ತಾರೆ. ಇಲ್ಲಿವರೆಗೂ ರೂಪೇಶ್ ರಾಜಣ್ಣ ಏನು ಅಂತ ಕೇಳಿದರೆ, ನಾನು ಹೇಳುವುದು ಒಂದು ಚಿಕ್ಕ ಮಗು ಇಂಥದ್ದು ಬೇಕು ಅಂತ ಹಠ ಮಾಡುತ್ತಾರಲ್ಲ ಆ ಮಗು ಎಂದು ಹೇಳುತ್ತೇನೆ" ಎಂದಿದ್ದಾರೆ.