Don't Miss!
- Sports
ವಿಶ್ವದ ಮೊದಲ ಆನ್ಲೈನ್ ಕ್ರಿಕೆಟ್ ಕೋಚ್ ನೇಮಕಕ್ಕೆ ಮುಂದಾದ ಪಾಕಿಸ್ತಾನ ತಂಡ
- News
4 ಕಾರಿಡಾರ್, 6 ದಿಕ್ಕು, 57 ನಿಲ್ದಾಣ: ಮುಂಬರುವ ಬೆಂಗಳೂರು ಉಪನಗರ ರೈಲು ಯೋಜನೆ ಬಗ್ಗೆ ತಿಳಿಯಿರಿ
- Lifestyle
ಕಾರ್ಬೋಹೈಡ್ರೇಟ್ ಕಡಿಮೆ ತಿಂದರೆ ನಿಮ್ಮ ದೇಹಕ್ಕೆ ಏನಾಗುತ್ತೆ ಗೊತ್ತಾ?
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: ಅರುಣ್ ಸಾಗರ್, ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ ನಡುವೆ ಸಖತ್ ಫೈಟ್!
ಬಿಗ್ ಬಾಸ್ ಮನೆಯಲ್ಲಿ ಈಗ ಟಫ್ ಕಾಂಪಿಟೇಷನ್ ಶುರುವಾಗಿದೆ. ಇನ್ನೇನು ಒಂದು ತಿಂಗಳು ಮಾತ್ರ. ಈಗಾಗಲೇ 69 ದಿನಗಳಿಗೆ ಬಂದು ನಿಂತಿದೆ. ಇನ್ನೇನು ಬಿಗ್ ಬಾಸ್ ಸ್ಪರ್ಧಿಗಳು 30 ದಿನ ಕಳೆದರೆ ಫೈನಲ್ ವೇದಿಕೆಯಲ್ಲಿ ಬಂದು ನಿಂತಿರುತ್ತಾರೆ. ಸಿಗುವ ಮೂರೇ ವಾರದಲ್ಲಿ ಕ್ಯಾಪ್ಟನ್ ಆಗುವ ಆಸೆ ತೀರಿಸಿಕೊಳ್ಳಬೇಕು ಅಂತ ತುದಿಗಾಲಿನಲ್ಲಿ ನಿಂತಿದ್ದಾರೆ. ಅದಕ್ಕಾಗಿ ಸಾಕಷ್ಟು ಎಫರ್ಟ್ ಹಾಕುತ್ತಾರೆ. ಆದರೆ ಬಿಗ್ ಬಾಸ್ ಈ ವಾರದ ಕ್ಯಾಪ್ಟನ್ ಅನ್ನು ಸೆಲೆಕ್ಟ್ ಮಾಡಿದ್ದೆ ವಿಭಿನ್ನ.
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವುದು ಒಂದು ಲಕ್ ಅಂತಾನೇ ಹೇಳಬಹುದು. ಒಂದು ವಾರ ಕ್ಯಾಪ್ಟನ್ ಆದರೆ ಎರಡು ವಾರ ಸೇವ್ ಆಗಬಹುದು. ಈಗಂತು ಜನ ಅದೇ ಕುತೂಹಲದಿಂದ ಕಾಯುತ್ತಿದ್ದಾರೆ. ಈ ವಾರ ಮನೆಯಿಂದ ಯಾರನ್ನು ಹೊರ ಹೋಗಬಹುದೆಂದು ಎದುರು ನೋಡುತ್ತಿದ್ದಾರೆ. ಯಾಕಂದ್ರೆ ಎಲ್ಲರೂ ಒಬ್ಬರಿಗಿಂತ ಒಬ್ಬರು ಟಫ್ ಕಾಂಪಿಟೇಷನ್ ನೀಡುತ್ತಿದ್ದಾರೆ.

ಈ ವಾರದ ಕ್ಯಾಪ್ಟನ್ ವೀಕ್ ಫುಲ್ ಡಿಫ್ರೆಂಟ್
ಶುಕ್ರವಾರ ಬಂತು ಅಂದ್ರೆ ಮನೆಯ ಕ್ಯಾಪ್ಟನ್ ಯಾರಾಗ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೆ ಇರುತ್ತೆ. ಅದರ ಕ್ಯಾಪ್ಟನ್ ಆಗುವವರ ಆಕಾಂಕ್ಷಿಗಳ ಸಂಖ್ಯೆ ಕೂಡ ಹೆಚ್ಚಾಗಿರುತ್ತದೆ. ಅದಕ್ಕಾಗಿ ಟಾಸ್ಕ್ ಆಡುವುದಕ್ಕೆ ಕಾಂಪ್ರಮೈಸ್ ಆಗುವುದಿಲ್ಲ. ಒಮ್ಮೆ ಇದೆ ಕಾಂಪಿಟೇಷನ್ನಿಂದಾಗಿ, ಗೊಂದಲದಿಂದಾಗಿ ಕ್ಯಾಪ್ಟನ್ ಇಲ್ಲದೆಯೇ ಒಂದು ವಾರ ವೇಸ್ಟ್ ಆಗಿತ್ತು. ಆದರೆ, ಈ ವಾರ ಆ ರೀತಿ ಅಲ್ಲ. ಮನೆಗೆ ಬಂದ ಪೋಷಕರಿಂದಾನೇ ಮನೆಯ ಕ್ಯಾಪ್ಟನ್ ಆಯ್ಕೆಯಾಗಿದ್ದಾರೆ. ಅವರೇ ಕ್ಯಾಪ್ಟನ್ ಆಯ್ಕೆ ಮಾಡಿ ಹೋಗಿದ್ದಾರೆ.

ಮನೆಯೊಳಗಿರುವವರ ಆಯ್ಕೆ ಯಾರದ್ದು..?
ಬಿಗ್ ಬಾಸ್ ಮನೆ ಮಂದಿಗೆ ಕ್ಯಾಪ್ಟನ್ ಆಯ್ಕೆ ವಿಚಾರದಲ್ಲಿ ಹೊಸ ಟಾಸ್ಕ್ ಒಂದನ್ನು ನೀಡಿತ್ತು. ಅದುವೇ ನಿಮ್ಮ ಮನೆಯವರಿಗೂ ಹಾಗೂ ನಿಮಗೂ ಇರುವ ಸಾಮ್ಯತೆ ಬಗ್ಗೆ. ಮನೆಯವರು ಈಗಾಗಲೇ ಕ್ಯಾಪ್ಟನ್ ಅನ್ನು ಆಯ್ಕೆ ಮಾಡಿ ಆಗಿದೆ. ನೀವೂ ಆಯ್ಕೆ ಮಾಡುವವರು ಒಂದೇ ಆಗಿರುತ್ತದೆಯಾ ಎಂದು ನೋಡೋಣಾ ಎಂಬ ಟಾಸ್ಕ್ ನೀಡಿದರು. ಆಗ ರಾಕೇಶ್ ಕೆಲವು ಕಾರಣ ನೀಡಿ ನಮ್ಮ ಅಮ್ಮ ಅಮೂಲ್ಯ ಮತ್ತು ರೂಪೇಶ್ ಶೆಟ್ಟಿ ಹೆಸರು ಸೂಚಿಸಿರಬಹುದು ಎಂದು ಹೇಳಿದ್ದಾರೆ. ಪ್ರಶಾಂತ್ ಸಂಬರ್ಗಿ ನಮ್ಮ ಅಮ್ಮ ರೂಪೇಶ್ ರಾಜಣ್ಣ ಹಾಗೂ ಆರ್ಯವರ್ಧನ್ ಅವರನ್ನು ಆಯ್ಕೆ ಮಾಡಿದ್ದರು. ಆರ್ಯವರ್ಧನ್ ಅವರು ರೂಪೇಶ್ ಶೆಟ್ಟಿ ಮತ್ತು ರಾಜಣ್ಣ ಅವರನ್ನು ಆಯ್ಕೆ ಮಾಡಿರಬಹುದು ಎಂದರು. ಇನ್ನು ಅನುಪಮಾ ಅವರ ತಾಯಿ ಅರುಣ್ ಸಾಗರ್ ಹಾಗೂ ಅಮೂಲ್ಯ ಅವರನ್ನು ಆಯ್ಕೆ ಮಾಡಿರಬಹುದು. ರಾಜಣ್ಣ ಅವರು ದಿವ್ಯಾ ಮತ್ತು ರೂಪೇಶ್ ಶೆಟ್ಟಿ ಆಯ್ಕೆ ಇರಬಹುದು ಎಂದರು. ಅಮೂಲ್ಯ ಅವರು ರಾಜಣ್ಣ ಮತ್ತು ರಾಕೇಶ್ ಇರಬಹುದು. ರೂಪೇಶ್ ಶೆಟ್ಟಿ ಅವರು, ರಾಜಣ್ಣ ಮತ್ತು ಆರ್ಯವರ್ಧನ್ ಇರಬಹುದು. ದೀಪಿಕಾ ಅವರು ರೂಪೇಶ್ ರಾಜಣ್ಣ ಮತ್ತು ಆರ್ಯವರ್ಧನ್ ಇದರಬಹುದು. ಕಾವ್ಯಾ ಅವರು ಅನುಪಮಾ ಮತ್ತು ಅರುಣ್ ಆಯ್ಕೆ ಮಾಡಿರಬಹುದು ಎಂದರು.

ಮನೆಯವರ ಆಯ್ಕೆ ಏನಾಗಿತ್ತು..?
ಇನ್ನು ಮನೆ ಮಂದಿ ಒಬ್ಬೊಬ್ಬರೆ ಬಂದಾಗ ಕನ್ಫೇಷನ್ ರೂಮಿಗೆ ಹೋಗಿ ಮುಂದಿನ ಕ್ಯಾಪ್ಟನ್ ಯಾರಾಗಬೇಕು ಎಂಬ ಆಯ್ಕೆಯನ್ನು ಹೇಳಿ ಹೋಗಿದ್ದರು. ಅದರಂತೆ ಮೊದಲಿಗೆ ದಿವ್ಯಾ ಅವರ ತಾಯಿ ಆಯ್ಕೆ ಮಾಡಿದ್ದು ಅರುಣ್ ಸಾಗರ್ ಮತ್ತು ರೂಪೇಶ್ ಶೆಟ್ಟಿ ಅವರನ್ನು. ರಾಕೇಶ್ ಅವರ ತಾಯಿ ಅಮೂಲ್ಯ ಮತ್ತು ಅರುಣ್ ಸಾಗರ್, ಅರುಣ್ ಸಾಗರ್ ಅವರ ಹೆಂಡತಿ ರೂಪೇಶ್ ರಾಜಣ್ಣ ಮತ್ತು ಅನುಪಮಾ, ಸಂಬರ್ಗಿ ಅವರ ತಾಯಿ ಆರ್ಯವರ್ಧನ್ ಮತ್ತು ರೂಪೇಶ್ ರಾಜಣ್ಣ, ಅನುಪಮಾ ಅವರ ತಾಯಿ ಅಮೂಲ್ಯ ಮತ್ತು ದೀಪಿಕಾ ದಾಸ್. ಆರ್ಯವರ್ಧನ್ ಅವರ ಹೆಂಡತಿ ರೂಪೇಶ್ ಶೆಟ್ಟಿ ಮತ್ತು ರಾಜಣ್ಣ. ರೂಪೇಶ್ ಶೆಟ್ಟಿ ಅವರ ತಂದೆ ರಾಜಣ್ಣ ಮತ್ತು ಆರ್ಯವರ್ಧನ್, ಅಮೂಲ್ಯ ಅವರ ತಂದೆ ದಿವ್ಯಾ ಮತ್ತು ಅನುಪಮಾ. ದೀಪಿಕಾ ಅವರ ತಾಯಿ ರೂಪೇಶ್ ಶೆಟ್ಟಿ ಮತ್ತು ರಾಜಣ್ಣ, ಕಾವ್ಯಾ ಅವರ ತಾಯಿ ರೂಪೇಶ್ ರಾಜಣ್ಣ ಮತ್ತು ಅರುಣ್ ಸಾಗರ್ ಅವರನ್ನು ಆಯ್ಕೆ ಮಾಡಿದ್ದರು.

ಅರ್ಧದಷ್ಟು ಮ್ಯಾಚ್ ಮಾಡಿದ ಮನೆ ಮಂದಿ
ಇನ್ನು ಕಡಿಮೆ ಸಮಯದಲ್ಲಿ ಮನೆಯವರನ್ನು ಭೇಟಿ ಮಾಡಿದ್ದಾರೆ. ಈ ಸಮಯದಲ್ಲಿ ಅವರು ಯಾರು ಯಾರಿಗೆ ಇಷ್ಟ ಅನ್ನೋದನ್ನು ಕೇಳಿಲ್ಲ. ಎಲ್ಲರನ್ನು ಎಲ್ಲರ ಮನೆಯವರು ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಹೀಗಾಗಿ ಒಂದು ಅಂದಾಜಿನ ಮೇಲೆ ಮನೆಯವರು ಕ್ಯಾಪ್ಟನ್ ಆಯ್ಕೆ ಮಾಡಿದ್ದಾರೆ. ಆದರೆ, ಒಂದು ಹಂತಕ್ಕೆ ಓಕೆ ಆಗಿದ್ದು, ಒಬ್ಬರನ್ನಾದರೂ ಗೆಸ್ ಮಾಡಿದ್ದಾರೆ. ಬಿಗ್ ಬಾಸ್ ನಿಮ್ಮೆಲ್ಲರ ಕುಟುಂಬದ ಅನುಸಾರ ಮನೆಯ ಕ್ಯಾಪ್ಟನ್ ಅನ್ನು ಈ ವಾರ ಆಯ್ಕೆ ಮಾಡಿದ್ದಾರೆ.