Don't Miss!
- News
Kamal Haasan: ಕಾಂಗ್ರೆಸ್ನಿಂದ ಕಣಕ್ಕಿಳಿಯಲಿದ್ದಾರಾ ಕಮಲ್ ಹಾಸನ್? ಅವರ ಮಾತು ಇಲ್ಲಿದೆ
- Sports
U-19 Women's World Cup 2023: ಸೆಮಿಫೈನಲ್ ಪ್ರವೇಶಿಸಿದ ಭಾರತಕ್ಕೆ ನ್ಯೂಜಿಲೆಂಡ್ ಎದುರಾಳಿ
- Lifestyle
Horoscope Today 26 Jan 2023: ಗುರುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
WhatsApp: ವಾಟ್ಸಾಪ್ ಮ್ಯಾಕ್ಒಎಸ್ MacOS ಆ್ಯಪ್ ಬಿಡುಗಡೆ! ಇದನ್ನು ಬಳಸುವುದು ಹೇಗೆ?
- Finance
Budget 2023: ಹಲ್ವಾ ಸಮಾರಂಭ ಎಂದರೇನು, ಪ್ರಾಮುಖ್ಯತೆಯೇನು?
- Automobiles
ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್ ಕುರಿತ ಟಾಪ್ ವಿಷಯಗಳಿವು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: 'ನಮ್ಮುಂದೆ ಶೋ ಆಫ್.. ಹೆಂಡತಿ ಬಂದಾಗ ಮೀಟ್ರು ಆಫ್': ಆರ್ಯವರ್ಧನ್ ಕಾಲೆಳೆದ ಕಿಚ್ಚ..!
ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ತನ್ನನ್ನು ತಾನೂ ಹೊಗಳಿಕೊಳ್ಳುವುದು ಎಂದರೆ ಅದು ಒನ್ ಅಂಡ್ ಓನ್ಲಿ ಆರ್ಯವರ್ಧನ್. ಇದು ಇಡೀ ಕರ್ನಾಟಕಕ್ಕೆ ಜಗತ್‌ಜಾಹೀರಾಗಿರುವ ವಿಚಾರ. ಯಾಕಂದ್ರೆ, ಓಟಿಟಿಯಿಂದ ಹಿಡಿದು ಟಿವಿ ಸೀಸನ್ ತನಕ ಬೇಕರಿಯ ವಿಚಾರ ಹೇಳಿ ಹೇಳಿ ತಲೆಗೆ ತುಂಬಿದ್ದಾರೆ. ನಾನೆಷ್ಟು ಹಿಟ್ಟು ರುಬ್ಬಿಲ್ಲ, ನಾನೆಷ್ಟು ಕೆಲಸ ಮಾಡಿಲ್ಲ, ನಾನು ಮಾಡಿದ ಸ್ವೀಟ್ ಇಡೀ ಕರುನಾಡ ಮಂದಿಯೇ ತಿಂದಿದ್ದಾರೆ ಎಂದು ಹೇಳಿದ್ಧರು.
ಆದರೆ, ಈಗ ಬಿಗ್ ಬಾಸ್ ಮಂದಿಗೆ ಒಳಗೊಳಗೆ ಅನುಮಾನ ಶುರುವಾಗಿದೆ. ಗುರೂಜಿ ದೋಸೆ ತಬ್ಬಾಕುವುದನ್ನು ಚೆನ್ನಾಗಿಯೇ ಕಲಿತಿದ್ದಾರೆ. ಅದನ್ನು ಎಲ್ಲರೂ ನೋಡಿದ್ದೀವಿ. ಆದ್ರೆ ಈ ಬೇಕರಿ ವಿಚಾರ ಎಷ್ಟು ಸತ್ಯ ಎಷ್ಟು ಸುಳ್ಳು ಎಂಬ ಪ್ರಶ್ನೆ ಕಾಡಿದ್ದು, ತಲೆಗೆ ಹುಳಬಿಟ್ಟಂತಾಗಿದೆ. ಅದಕ್ಕೆಲ್ಲಾ ಕಾರಣ ಗುರೂಜಿ ಅವರ ಹೆಂಡತಿ ಬಂದು ಹೋಗಿದ್ದು.
BBK9:
ಅರುಣ್
ಸಾಗರ್,
ರೂಪೇಶ್
ಶೆಟ್ಟಿ,
ರೂಪೇಶ್
ರಾಜಣ್ಣ
ನಡುವೆ
ಸಖತ್
ಫೈಟ್!

ಕಿಚ್ಚನ ವೇದಿಕೆಯಲ್ಲಿ ಗುರೂಜಿ ಬಗ್ಗೆ ಚರ್ಚೆ
ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆಯಲ್ಲಿ ಸುಮಾರು ಸಲ ತಮ್ಮ ಹೆಂಡತಿ ಬಗ್ಗೆ ಹೇಳಿದ್ದಾರೆ. ತಾನು ಹೆಂಡತಿಯನ್ನು ಎಷ್ಟು ಪ್ರೀತಿಸುತ್ತೀನಿ ಎಂಬುದನ್ನು ತಿಳಿಸಿದ್ದಾರೆ. ಒಂದು ದಿನ ರಾಜಣ್ಣ ಮತ್ತು ರೂಪೇಶ್ ಶೆಟ್ಟಿಯನ್ನು ಕೂರಿಸಿಕೊಂಡು ಹೆಂಡತಿ ಮತ್ತು ಪ್ರೀತಿ ಬಗ್ಗೆ ಪಾಠವನ್ನೇ ಮಾಡಿದ್ದರು. ನನ್ನ ಹೆಂಡತಿಯನ್ನು ಇನ್ನು ಮುಂದೆ ತುಂಬಾ ಪ್ರೀತಿಸುತ್ತೀನಿ ಎಂದಿದ್ದರು. ಹೆಗಲ ಮೇಲೆ ಹೊತ್ತು ಮೆರೆಸುತ್ತೀನಿ ಎಂದಿದ್ದರು. ಆದ್ರೆ ಬಿಗ್ ಬಾಸ್ ಮನೆಯೊಳಗೆ ಅವರ ಹೆಂಡತಿ ಬಂದೊಡನೆ ಆಗಿದ್ದೇ ಬೇರೆ. ಅದರ ಬಗ್ಗೆ ಕಿಚ್ಚ ಸುದೀಪ್ ಪ್ರಶ್ನಿಸಿದ್ದಾರೆ.

ಮಗಳ ಬಗ್ಗೆ ಗುರೂಜಿಗೆ ತಿಳಿಸಿದ ಸುದೀಪ್
ಬಿಗ್ ಬಾಸ್ ಮನೆಯೊಳಕ್ಕೆ ಅಪ್ಪನನ್ನು ನೋಡುವುದಕ್ಕೆ ಗುರೂಜಿ ಮಗಳು ಅಹಲ್ಯಾ ಕೂಡ ಬಂದಿದ್ದಳು. ಆದ್ರೆ ಒಬ್ಬಳನ್ನೇ ಕಳುಹಿಸಿದ್ದಕ್ಕೆ ತುಂಬಾ ಭಯ ಪಟ್ಟಿದ್ದಳು ಎಂದು ಕಾಣಿಸುತ್ತದೆ. ಅದಕ್ಕೆ ಮನೆಯವರೆಲ್ಲಾ ಮಾತನಾಡಿಸಿದರು ಮಾತನಾಡಲಿಲ್ಲ. ಈ ಬಗ್ಗೆ ಕಿಚ್ಚ ಸುದೀಪ್ ಗುರೂಜಿಯನ್ನು ಕೇಳುತ್ತಾರೆ. ನಿಮ್ಮ ಮಗಳು ಯಾರ ಜೊತೆಗೆ ಹೆಚ್ಚು ಮಾತನಾಡಿದ್ದು ಎಂದಾಗ ಗುರೂಜಿ, ಅನುಪಮಾ ಎನ್ನುತ್ತಾರೆ. ಅದಕ್ಕೆ ಸುದೀಪ್, ಇಲ್ಲ ನಿಮ್ಮ ಮಗಳು ಹೆಚ್ಚು ಮಾತನಾಡಿದ್ದು ಬಿಗ್ ಬಾಸ್ ಜೊತೆಗೆ. ಎಸಿ ಜಾಸ್ತಿ ಆಗ್ತಿದೆ ಬಿಗ್ ಬಾಸ್ ಕಡಿಮೆ ಮಾಡಿ ಅಂದ್ರು. ಇದನ್ನು ಸುದೀಪ್ ಅವರು ಆರ್ಯವರ್ಧನ್ ಅವರ ಬಳಿ ಹೇಳಿದ್ದಾರೆ. ಇನ್ನು ಅಹಲ್ಯಾ ಮಾತನಾಡಿದ್ದ ಆ ಕ್ಯೂಟ್ ಕ್ಯೂಟ್ ಮಾತನ್ನು ಕ್ಯಾಪ್ಚರ್ ಮಾಡುವುದಕ್ಕಾಗಿ ಬಿಗ್ ಬಾಸ್ ಸೈಲೆಂಟ್ ಆಗಿದ್ದರು.

ಹೆಂಡತಿ ವಿಚಾರಕ್ಕೆ ಆರ್ಯವರ್ಧನ್ ಕಾಲೆಳೆದ ಕಿಚ್ಚ
ಮನೆಯವರೆಲ್ಲ ನೀವಿಬ್ಬರೂ ಪ್ರೈವೇಟ್ ಆಗಿ ಮಾತನಾಡಿಕೊಳ್ಳಿ ಎಂದರು ಕೂಡ, ಆರ್ಯವರ್ಧನ್ ಹಾಗೂ ಅವರ ಹೆಂಡತಿ ರಂಜಿತಾ ಅವರು ಮನೆಯಲ್ಲಿರುವ ಇನ್ನೊಬ್ಬರ ಕೈಯ್ಯನ್ನು ಹಿಡಿದು ಕರೆದುಕೊಂಡು ಹೋಗುತ್ತಾ ಇದ್ದರು. ಈ ಬಗ್ಗೆ ಮಾತನಾಡಿದ ಆರ್ಯವರ್ಧನ್, ನಂಗೆ ಇಲ್ಲಿ ತುಂಬಾ ದುಃಖ ಆಯ್ತು. ಮಗಳು ಬರಲಿಲ್ಲವಲ್ಲ ಅಂತ ತುಂಬಾ ದುಃಖ ಆಗಿತ್ತು. ನಾನು ಜನರಲ್ ಆಗಿ ಮನೆಯಲ್ಲೂ ಮುಟ್ಟಿ ಮಾತನಾಡಿಸುವುದು ಬಹಳ ಕಡಿಮೆ. ಆದ್ರೆ ಇವರೆಲ್ಲಾ ಹೆಗಲ ಮೇಲೆ ಕೈ ಹಾಕಿ ಅಂತೆಲ್ಲಾ ಹೇಳುತ್ತಾ ಇದ್ದರು. ನಂಗೆ ನಾಚಿಕೆ ಜಾಸ್ತಿ ಆಯ್ತು ಸರ್. ಅವರೇ ಮಾತನಾಡಲಿಲ್ಲ ಸರ್ ಎಂದಿದ್ದಾರೆ. ಆಗ ಸುದೀಪ್ ಕಾಲೆಳೆದಿದ್ದು, ಇಲ್ಲಿಯೂ ದೋಸೆ ತಿರುವಿ ಹಾಕಿದ್ದಾರಲ್ಲ ಅಂತ ಎಲ್ಲರೂ ಯೋಚನೆ ಮಾಡುತ್ತಿದ್ದಾರೆ.

ಕಿಚ್ಚನ ಮಾತಿಗೆ ನಕ್ಕ ಮನೆ ಮಂದಿ
ಆರ್ಯವರ್ಧನ್ ಮನೆಯವರ ಭೇಟಿಗೆ ತಗೊಂಡಿದ್ದು ಕಡಿಮೆ ಸಮಯವೇ. ಆ ಕಡಿಮೆ ಸಮಯದಲ್ಲೂ ಹೆಂಡತಿ ಬೇಗ ಹೋದರೆ ಸಾಕು ಎನ್ನುತ್ತಿದ್ದರು. ಈ ಬಗ್ಗೆ ಸುದೀಪ್ ಆರ್ಯವರ್ಧನ್ ಅವರಿಗೆ ಪ್ರಶ್ನೆ ಕೇಳಿದರು. "ಆರ್ಯವರ್ಧನ್ ಅವರೇ ನಿಮ್ಮ ಹೆಂಡತಿ ಬಂದ್ರೆ ಮನೆಯಲ್ಲೆಲ್ಲಾ ಎತ್ತಿಕೊಂಡು ತಿರುಗಾಡುತ್ತೀನಿ ಅಂತ ಹೇಳಿದ್ರಿ. ಆದ್ರೆ ಅಲ್ಲಿ ನಡೆದದ್ದೇ ಬೇರೆ. ರಾಜಣ್ಣ ಅವರು ಹೇಳಿದ ಥರ ನಮ್ಮುಂದೆ ಶೋ ಆಫ್.. ಹೆಂಡತಿ ಬಂದಾಗ ಮೀಟರ್ ಆಫ್ ಯಾಕೆ?" ಎಂದರು. ಗುರೂಜಿ ಕೊಟ್ಟ ಉತ್ತರವೂ ಅದೇ ಇದ್ದ ಕಾರಣ ಸುದೀಪ್ ಮತ್ತಷ್ಟು ಕಾಲೆಳೆದರು.