Don't Miss!
- News
ಫಿಲೀಪ್ಸ್ನಿಂದ 6000 ಉದ್ಯೋಗಿಗಳ ವಜಾ
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Technology
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: ದೀಪಿಕಾ ವಿಚಾರಕ್ಕೆ ಹೆಂಡತಿಯಿಂದ ಮಾತ್ರವಲ್ಲ ಕಿಚ್ಚನಿಂದಾನೂ ಪರ್ಮಿಷನ್.. ರಾಜಣ್ಣನೇ ಅದೃಷ್ಟವಂತ!
ಪುರುಷರ ದಿನಾಚರಣೆ ಅಂತ ಬಂದಾಗ ಅಲ್ಲಲ್ಲಿ ಕಾಮಿಡಿಗಳು ಹರಿದಾಡುತ್ತೆ. ಮೆನ್ ಈಸ್ ಆಲ್ ವೇಸ್ ಮೆನ್ ಅಂತ. ಆ ರೀತಿ ಇದ್ದಲ್ಲಿ ಬಂದಲ್ಲಿ ಸಣ್ಣ ತುಂಟಾಟ, ಬ್ಯೂಟಿ ಕಂಡಾಗ ರೇಗಿಸಿದರೇನೆ ಅದು ಚೆಂದ. ರೂಪೇಶ್ ರಾಜಣ್ಣನ ಈ ಗುಣ ಅದೇ ಕಾರಣಕ್ಕೆ ಎಲ್ಲರಿಗೂ ಇಷ್ಟವಾಗುತ್ತೆ.
ದೀಪಿಕಾ ದಾಸ್‌ರನ್ನು ಬಿಗ್ ಬಾಸ್ ಮನೆಯಲ್ಲಿ ರೇಗಿಸಿಕೊಂಡು ಓಡಾಡುತ್ತಾ ಇರುತ್ತಾರೆ. ಆದರೆ, ಅದ್ಯಾಕೋ ಅವರ ತಾಯಿ ಮನೆಗೆ ಎಂಟ್ರಿ ಕೊಟ್ಟ ಮೇಲೆ ರಾಜಣ್ಣನ ವರಸೆಯೇ ಬದಲಾಗಿ ಬಿಟ್ಟಿದೆ. ದೀಪಿಕಾ ದಾಸ್‌ಗಿಂತ ಅವರ ತಾಯಿಯೇ ಅಂದವಾಗಿ ಕಾಣಿಸುವುದಕ್ಕೆ ಶುರು ಮಾಡಿದ್ದಾರೆ.
BBK9:
ಅರುಣ್
ಸಾಗರ್,
ರೂಪೇಶ್
ಶೆಟ್ಟಿ,
ರೂಪೇಶ್
ರಾಜಣ್ಣ
ನಡುವೆ
ಸಖತ್
ಫೈಟ್!

ದೀಪಿಕಾ ತಾಯಿ ಸಖತ್ತಾಗಿದ್ದಾರಂತೆ
ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ರೌಂಡ್ ಇತ್ತು. ಈ ಬಗ್ಗೆ ಕಿಚ್ಚ ಸುದೀಪ್, ರಾಜಣ್ಣ ಅವರೇ ದೀಪಿಕಾ ಅವರ ತಾಯಿ ಬಿಗ್ ಬಾಸ್ ಮನೆಗೆ ಬರುತ್ತಾರೆ. ಅಷ್ಟೆ ಎಲ್ಲರಿಂದಾನೂ ಸಿಕ್ಕಾಪಟ್ಟೆ ನಗು. ಮುಂದೆ ನೀವೂ ಹೇಳುತ್ತೀರಾ ನಾನು ಹೇಳಲಾ ಎನ್ನುತ್ತಾರೆ ಸುದೀಪ್. ಆಗ ರಾಜಣ್ಣ, "ಸರ್ ಇಲ್ಲ ಅವರು ಬಂದು ಒಳಗಡೆ ಮಾತನಾಡಿಸಿಕೊಂಡು ಹೋಗುತ್ತಿದ್ದಾಗ ನನ್ನನ್ನು ನೋಡಿ, ಓ ರಾಜಣ್ಣ ನನ್ನ ಫೇವರಿಟ್ ಅಂತ ಹೇಳಿದ್ರು. ಹಂಗೆ ಹೇಳಿಬಿಟ್ಟು ಅವರು ಒಳಗಡೆ ಹೋದರಾ, ನಾನು ದಿವ್ಯಾ ಉರುಡುಗ ಎಲ್ಲಾ ಕೂತು ಮಾತಾಡ್ತಾ ಇದ್ವಿ. ಅಂದ್ರೆ ಲೈಟ್ ಬೆಳಕಿಗೆ ಅವರು ಸ್ವಲ್ಪ ಚೆನ್ನಾಗಿ ಕಾಣಿಸುತ್ತಾ ಇದ್ರು. ಚೆನ್ನಾಗಿದ್ದಾರೆ ಎನ್ನುವುದಕ್ಕೆ ಹೋಗಿ ಸಖತ್ತಾಗಿದ್ದಾರೆ ಎಂದು ಬಿಟ್ಟೆ ಸರ್." ಎಂದು ಕ್ಲಾರಿಟಿ ಕೊಟ್ಟಿದ್ದಾರೆ.

ದೀಪಿಕಾ ಕೋಪಿಸಿಕೊಂಡಿದ್ದು ಯಾಕೆ?
ಆಗ ಸುದೀಪ್ ನಿಮ್ಮ ತಾಯಿ ಬಗ್ಗೆ ಹೇಳಿದರು ಅಂತ ಕೋಪನಾ ಅಥವಾ ನಿಮಗಿಂತ ಜಾಸ್ತಿ ಅವರು ಚೆನ್ನಾಗಿದ್ದಾರೆ ಎಂದಿದ್ದಕ್ಕೆ ಕೋಪನಾ ಎಂದು ದೀಪಿಕಾ ಬಳಿ ಕೇಳಿದ್ದಾರೆ. "ಎರಡಕ್ಕೂ ಸರ್. ಆಲ್ ರೆಡಿ ನಾನು ಕ್ಲಾಸ್ ತೆಗೆದುಕೊಂಡು ಬಿಟ್ಟಿದ್ದೀನಿ ಸರ್. ಎಲ್ಲಾ ಕಡೆಯಲ್ಲೂ ನನಗೆ ಅದೊಂದು ಯಾವಾಗಲೂ ಪ್ರಾಬ್ಲಮ್ ಇದೆ. ನಾನು ಎದುರುಗಡೆ ಇರುವಾಗ ನನಗೆ ಒಂದು ದಿನವೂ ಹೇಳದೆ, ನಮ್ಮ ಅಮ್ಮ ಬಂದಾಗ ಹೇಳಿದರೆ ಸಿಕ್ಕಾಪಟ್ಟೆ...?" ಎಂದು ಅಲ್ಲಿಗೆ ಮಾತು ನಿಲ್ಲಿಸಿದ್ದಾರೆ.

ಹೆಂಡತಿ ಬೈತಾರೆ ಅಂದ್ರೆ ನೋ...
ಈ ವಿಚಾರದಲ್ಲಿ ರಾಜಣ್ಣ ಅವರ ಹೆಂಡತಿ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂದುಕೊಂಡಿದ್ದರು. ಈ ವಿಚಾರಕ್ಕೆ ಸುದೀಪ್, "ಈಗ ನಿಮ್ಮ ಹೆಂಡತಿ ಬೇರೆ ಪರ್ಮಿಷನ್ ಕೊಟ್ಟಿದ್ದಾರೆ. ದೀಪಿಕಾ ಅವರು ಓಕೆ ಎನ್ನುತ್ತಿದ್ದಾರೆ. ರಾಜಣ್ಣ ಅವರೇ ಮುಂದೇನು" ಎಂದಾಗ, ಸರ್ ಇಲ್ಲ ಅವರು ಏನು ತೊಂದರೆ ಇಲ್ಲ. ದೀಪಿಕಾಗೆ ಅವರು ಹೀಗೆಲ್ಲಾ ಮುದ್ದು ಮಾಡಿದ್ರು. ಸೋ ಅಲ್ಲಿಗೆ ಗ್ರಾಂಟೆಡ್ ಅಂದುಕೊಂಡೆ ಸರ್" ಎಂದಾಗ ಕಿಚ್ಚ ಮತ್ತೆ ಕಾಲೆಳೆದಿದ್ದಾರೆ.

ನಾಚಿ ನೀರಾದ ದೀಪಿಕಾ
ಈ ವೇಳೆ ದೀಪಿಕಾಗೆ ಕಿಚ್ಚ ಸುದೀಪ್ ಆಲ್ ದಿ ಬೆಸ್ಟ್ ಹೇಳಿದ್ದಾರೆ. "ಇಲ್ಲ ಸರ್ ಅವರ ವೈಫ್ ಬಂದಾಗ ತುಂಬಾ ದೂರು ಹೇಳಿದ್ವಿ. ಒಂದಷ್ಟು ಹೊಡೆಯುವುದಕ್ಕೆ ವಸ್ತುಗಳನ್ನು ತೆಗೆದಿಟ್ಟಿದ್ವಿ. ಏನಾದ್ರೂ ಕ್ಲಾಸ್ ತೆಗೆದುಕೊಳ್ಳುತ್ತೀರಾ. ಅದಕ್ಕೆಲ್ಲ ರೆಡಿ ಇದೆ ಅಂತ ಹೇಳಿದ್ವಿ. ಅವ್ರೇ ಸುಮ್ಮನಾಗಿಬಿಟ್ರು. ಅಲ್ಲಿಗೆ ಕರೆದುಕೊಂಡು ಹೋದಾಗಲೇ ನಾವೂ ಅಂದುಕೊಂಡ್ವಿ ಓ ಅಲ್ಲಿಗೆ ಕರೆದುಕೊಂಡು ಹೋಗಿ ಮಸ್ಕಾ ಮಾಡಿ ಕರೆದುಕೊಂಡು ಬಂದಿದ್ದಾರೆ ಅಂತ" ದೀಪಿಕಾ ಹೇಳಿದಾಗ ಸುದೀಪ್, "ರಾಜಣ್ಣ ಅವರು ಏನೇನು ಮಾಡಿಕೊಂಡು ಬಂದಿದ್ದಾರೆ ಅಂತ ಅವರ ಹೆಂಡತಿಗೆ ಗೊತ್ತಿದೆ. ಅದಕ್ಕೆ ಅವರು ಮೊದಲೇ ಕಾಲಿಗೆ ಬಿದ್ದು ಬಿಟ್ಟರು. ಅಲ್ಲಿಗೆ ಎಲ್ಲಾ ನ್ಯೂಟ್ರಲ್ ಆಗೋಯ್ತು. ಆಗ ಏನು ಬೈಯ್ಯುವಂಗಿಲ್ಲ. ಅಷ್ಟು ಕ್ಯಾಮೆರಾಗಳಿದ್ದಾವೆ. ಗಂಡ ಹೋಗಿ ಕಾಲಿಗೆ ಬಿದ್ದರೆ ಇನ್ನೇನು ಹೇಳುತ್ತಾರೆ. ಹೋಗು ಏನಾದರೂ ಮಾಡಿಕೊ ಹೋಗು. ಕೊನೆಗೆ ಇಲ್ಲಿಗೇ ಬರ್ತೀಯಾ ಅಂದಿದ್ದಾರೆ". ಎಂದು ರೂಪೇಶ್ ರಾಜಣ್ಣ ಹಾಗೂ ಅವರ ಪತ್ನಿಯ ನಡುವಿನ ಮಾತುಕತೆ ಬಗ್ಗೆ ಹೇಳಿದ್ದಾರೆ.