Don't Miss!
- News
Assembly elections: ಚುನಾವಣೆಯಲ್ಲಿ ಜೆಡಿಎಸ್ 20 ರಿಂದ 22 ಸ್ಥಾನ ಗೆಲ್ಲಬಹುದು; ಸಿದ್ದರಾಮಯ್ಯ ಭವಿಷ್ಯ
- Sports
Ind vs NZ 1st ODI: ಟೀಮ್ ಇಂಡಿಯಾಗೆ ಗೆಲ್ಲಲು ಸವಾಲಿನ ಗುರಿ ನೀಡಿದ ನ್ಯೂಜಿಲೆಂಡ್
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ? ಈ ಬಗೆಯ ಆಹಾರ ಸೇವನೆ ಒಳ್ಳೆಯದು
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: ದೀಪಿಕಾ ಕಣ್ಣು ಹೊಡೆದು ಮಾಡಿದ ಅವಾಂತರಕ್ಕೆ ರೂಪೇಶ್ ಕುಸಿದೇ ಬಿಟ್ಟಿದ್ದರು..!
ಬಿಗ್ ಬಾಸ್ ಮನೆಯಲ್ಲಿ ಇರುವುದು ಈಗ ಹತ್ತು ಮಂದಿ ಮಾತ್ರ. ಈ ಹತ್ತು ಮಂದಿಯೇ ತಮ್ಮನ್ನು ತಾವೂ ಬೇಸರವಾಗದಂತೆ, ಎಲ್ಲರೂ ಮನೆಯವರ ರೀತಿಯೇ ಇರಬೇಕಾಗುತ್ತದೆ. ಇರುವ ಹತ್ತು ಮಂದಿಯಲ್ಲಿಯೇ ಕಷ್ಟ-ಸುಖ ಹಂಚಿಕೊಳ್ಳಬೇಕಾಗುತ್ತದೆ. ಇಂಥಹ ಸಂದರ್ಭದಲ್ಲಿ ಮನರಂಜನೆಗಾಗಿ ಏನೆಲ್ಲಾ ಮಾಡಬಹುದು ಎಂದು ನೋಡುತ್ತಿರುತ್ತಾರೆ. ಅದರಲ್ಲೂ ಎಲ್ಲಾ ಎಪಿಸೋಡಿನಲ್ಲೂ ಫ್ರಾಂಕ್ ಮಾಡುವುದು ನೋಡುಗರಿಗೂ, ಅಲ್ಲಿ ಆಡುವವರಿಗೂ ಮಜಾ ಕೊಡುತ್ತಿದೆ.
ಇವತ್ತು ಬಿಗ್ ಬಾಸ್ ಮನೆಯಲ್ಲಿ ಅಂತದ್ದೇ ಒಂದು ಫ್ರಾಂಕ್ ನಡೆದಿದೆ. ರೂಪೇಶ್ ಶೆಟ್ಟಿಗೆ ಫ್ರಾಂಕ್ ಮಾಡೋಣಾ ಎಂದು ದೀಪಿಕಾ ಕೊಟ್ಟ ಸಣ್ಣ ಸೂಚನೆ ಅಬ್ಬಬ್ಬಾ.. ರೂಪೇಶ್ ಶೆಟ್ಟಿ ಅಳುವುದು ಒಂದು ಬಾಕಿ ಇತ್ತು. ಅಷ್ಟರಮಟ್ಟಿಗೆ ಹೋಗಿ ಬಿಟ್ಟಿತ್ತು.

ಸೀತಾಫಲಕ್ಕಾಗಿ ದೀಪಿಕಾ ಹುಡುಕಾಟ
ಬಿಗ್ ಬಾಸ್ ಮನೆಯಲ್ಲಿ ಎಷ್ಟು ಜನ ಇರುತ್ತಾರೋ, ಅಷ್ಟು ಜನಕ್ಕೆ ಆಗುವಷ್ಟು ಹಣ್ಣು, ತರಕಾರಿ ಎಲ್ಲವನ್ನು ಬಿಗ್ ಬಾಸ್ ನೀಡಿರುತ್ತಾರೆ. ಅದರಂತೆ ಸೀತಾಫಲ ಹಣ್ಣನ್ನು ಕಳುಹಿಸಲಾಗಿತ್ತು. ಆದರೆ ದೀಪಿಕಾ ಅವರ ಹಣ್ಣನ್ನು ರೂಪೇಶ್ ಶೆಟ್ಟಿ ಅವರೇ ತೆಗೆದಿಟ್ಟುಕೊಂಡಿದ್ದರು. ಆದರೆ ಹುಡುಕುವಾಗ ದೀಪಿಕಾ ಅವರೇ ಕಂಟೆಂಟ್ ಗೋಸ್ಕರ ಹೀಗೆಲ್ಲಾ ಮಾಡಬೇಡಿ ಎಂದರು. ನೀವೂ ತಿಂದಾಗಿದೆ ಅದಕ್ಕೆ ಈ ಥರ ಮಾಡ್ತಾ ಇದ್ದೀರಾ ಎಂದಿದ್ದಾರೆ.

ದೀಪಿಕಾ ನಾಟಕ ಶುರು
ರೂಪೇಶ್ ಶೆಟ್ಟಿ ಆ ಮಾತು ಹೇಳಿದ ಕೂಡಲೇ ದೀಪಿಕಾಗೆ ಇಲ್ಲೊಂದು ಜೋಕ್ ಮಾಡಬಹುದು ಎಂಬುದು ಗೊತ್ತಾಗಿ ಹೋಯ್ತು. ಎದುರಿಗಿದ್ದ ಅನುಪಮಾಗೆ ಕಣ್ಣು ಹೊಡೆದರು. ಬಳಿಕ ನಾಟಕ ಶುರು ಮಾಡಿದರು. "ನಂಗೆ ರಿಯಲ್ ಆಗಿರುವುದಕ್ಕೂ ಬರುತ್ತೆ. ಇದು ಜೋಕ್ ಅಲ್ಲ. ನೀವು ಕಂಟೆಂಟ್‌ಗೆ ಮಾಡಬಹುದು. ನಿಮ್ಮ ಲಿಮಿಟ್ಸ್ ಅನ್ನು ನೀವೂ ಕ್ರಾಸ್ ಮಾಡಿದ್ದೀರಾ. ನಂಗೆ ಯಾರು ಕೂಡ ಸೀತಾಫಲ ಕೊಡಬೇಡಿ. ನಾನು ಜೋರು ವಾಯ್ಸ್ ಮಾಡಲ್ಲ" ಎಂದಿದ್ದಾರೆ.

ಮನೆಯವರೆಲ್ಲಾ ಒಂದಾಗಿ ಬಿಟ್ಟರು
ಹೀಗೆ ಎಲ್ಲರಿಗೂ ಇದು ಫೇಕ್ ಎಂಬುದು ಗೊತ್ತಾಯಿತು. ಆಗ ರೂಪೇಶ್ ಶೆಟ್ಟಿಗೆ ರೇಗಿಸುವುದಕ್ಕೆ ಶುರು ಮಾಡಿದರು. ಮನೆಯ ಕ್ಯಾಪ್ಟನ್ ಕೂಡ ಜೊತೆಯಾದರು. ರಾಜಣ್ಣ "ಒಬ್ಬ ಕ್ಯಾಪ್ಟನ್ ಆಗಿ ಹೇಳುತ್ತಾ ಇದ್ದೀನಿ. ಹೀಗೆ ಇಂತಹ ಪದಗಳನ್ನು ತೆಗೆದುಕೊಳ್ಳುವುದಕ್ಕೆ ಆಗಲ್ಲ. ಆ ಥರದ ಪದ ಹೇಗೆ ಬಳಸುತ್ತೀರಾ. ಬಹಳ ತಪ್ಪು ಅದು. ನೀನು ಹೀಗೆಲ್ಲಾ ಮಾತನಾಡಬಾರದಿತ್ತು" ಎಂದು ಇಬ್ಬರ ನಡುವೆ ಇನ್ನಷ್ಟು ಬೆಂಕಿ ಹಚ್ಚಿದರು.

ಅಮೂಲ್ಯರಿಂದ ಬಚಾವ್ ಆದ ರೂಪೇಶ್
ದೀಪಿಕಾ ಕಂಪ್ಲೀಟ್ ಆಗಿ ನಾಟಕ ಶುರು ಮಾಡಿದರು. ಬಾತ್ ರೂಮಿಗೆಲ್ಲಾ ಹೋಗಿ ಅಳುವ ಡ್ರಾಮಾ ಮಾಡಿದರು. ಇದನ್ನು ಕಂಡ ರೂಪೇಶ್ ಶಾಕ್ ಆದರೂ. ಬಾತ್ ರೂಮಿನಿಂದ ದೀಪಿಕಾ ಬಂದ ಕೂಡಲೇ ಹಿಂದೆ ಹಿಂದೆ ಹೋಗಿ, "ನಾನೇ ನಿನ್ನ ಹಣ್ಣು ತೆಗದುಕೊಂಡಿರುವುದು. ರೇಗಿಸುವುದಕ್ಕೆ ಹೇಳಿದ್ದು. ಬೇಜಾರು ಮಾಡಿಕೊಳ್ಳಬೇಡಿ. ದೇವರಾಣೆ ನಾನು ಯಾವ ಅರ್ಥದಲ್ಲಿ ಹೇಳಿದ್ದು ಗೊತ್ತಾ..? ನಾನು ತಾಯಿ ಮೇಲೆ ಆಣೆ. ಆ ಪದ ಅಷ್ಟು ದೊಡ್ಡದಾ ಎಂದು ಗೊತ್ತಾಗುತ್ತಿಲ್ಲ. ದೀಪಿಕಾ ಮುಗಿಸಿ ದಯವಿಟ್ಟು. ತಮಾಷೆ ಮಾಡಬೇಡಿ. ನಂಗೆ ಟೆನ್ಶನ್ ಮಾಡಬೇಡಿ. ಅದನ್ನು ಬಿಟ್ಟು ಬಿಡಿ. ಅದು ಕೆಟ್ಟದಾಗಿ ಕಾಣುತ್ತೆ. ದೇವರಾಣೆ ಹೇಳ್ತಾ ಇದ್ದೀನಿ ದಯವಿಟ್ಟು ಈ ರೀತಿ ಇರಬೇಡಿ" ಎಂದ ಕೂಡಲೇ ದೀಪಿಕಾ ನಕ್ಕು ಬಿಟ್ಟರು. ಅಲ್ಲಿಗೆ ಸೀರಿಯಸ್ ಆಗಿದ್ದ ವಿಚಾರ ಹಾಗೇ ಸರಿಯಾಗಿ ಬಿಟ್ಟಿತು. ರೂಪೇಶ್‌ಗಂತು ಜೀವ ಕೈಗೆ ಬಂದಿತ್ತು. ಆಮೇಲೆ ಮನಸ್ಸಿನ ಭಾರವೆಲ್ಲ ಇಳಿದು ಹೋಯ್ತು.