Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: ಕಳಪೆಯನ್ನು ಖುಷಿ ಖುಷಿಯಾಗಿ ಸ್ವೀಕರಿಸಿ ಜೈಲು ಸೇರಿದ ಅಮೂಲ್ಯ..!
ಬಿಗ್ ಬಾಸ್ ಮನೆಯಲ್ಲಿ ಸೋಮವಾರದಿಂದ ಗುರುವಾರದ ತನಕ ಒಂದು ರೀತಿಯ ಆಟ ಶುರುವಾಗುತ್ತೆ. ಶುಕ್ರವಾರ ಮನೆಯವರೆಲ್ಲರ ಮನಸ್ಸು ಪುಕ ಪುಕ ಎನ್ನುತ್ತಿರುತ್ತೆ. ಯಾಕಂದ್ರೆ ಅಂದು ಕ್ಯಾಪ್ಟನ್ ಟಾಸ್ಕ್ ಹಾಗೂ ಕಳಪೆ ಪಟ್ಟ ಎರಡು ಮುಖ್ಯವಾದ ಘಟ್ಟ ಆಗಿರುತ್ತೆ. ಹೀಗಾಗಿ ಶುಕ್ರವಾರ ಬಹಳ ಮುಖ್ಯವಾಗುತ್ತದೆ.
ವಾರವಿಡಿ ಆಡಿದ ಆಟ, ಸಿಕ್ಕ ಪಟ್ಟ ಈ ಎಲ್ಲವೂ ಶನಿವಾರ ಮತ್ತು ಭಾನುವಾರ ಕಿಚ್ಚನ ಕಟಕಟೆಯಲ್ಲಿ ಬಂದು ನಿಲ್ಲುತ್ತವೆ. ತಪ್ಪು ಮಾಡಿದವರಿಗೆ ಬುದ್ದಿವಾದ, ಸಖತ್ತಾಗಿ ಆಟ ಆಡಿದವರಿಗೆ ಚಪ್ಪಾಳೆಯೂ ಕಿಚ್ಚನ ವೇದಿಕೆಯಲ್ಲಿ ಸಿಗುತ್ತದೆ. ಆದರೆ ಈ ವಾರ ಯಾರು ಹೆಚ್ಚಾಗಿ ತಪ್ಪು ಮಾಡಿಲ್ಲ. ಮನೆ ನಗು ನಗುತ್ತಲೇ ಇತ್ತು.

ಕಳಪೆಗೆ ಫಿಕ್ಸ್ ಆಗಿದ್ದ ಅಮೂಲ್ಯ
ಈ ವಾರ ಬಿಗ್ ಬಾಸ್ ಎರಡು ಟೀಂ ಮಾಡಿ ವಿಭಿನ್ನವಾದ ಟಾಸ್ಕ್‌ಗಳನ್ನು ನೀಡಿತ್ತು. ಅದರಲ್ಲಿ ಅಮೂಲ್ಯ ಆಟದ ಟೀಂನ ಕ್ಯಾಪ್ಟನ್ ಆಗಿದ್ದರು. ಆದರೆ ಆಟ ಅಂತ ಬಂದಾಗ ಅಮೂಲ್ಯ ಅಗ್ರೆಸ್ಸಿವ್ ಆಗಿಯೇ ಆಡುತ್ತಾರೆ. ಅದನ್ನು ಈಗಾಗಲೇ ಟಾಯ್ಸ್ ಗೇಮ್‌ನಲ್ಲಿ ಎಲ್ಲರೂ ನೋಡಿದ್ದಾರೆ. ಅದೇ ರೀತಿ ಈ ಬಾರಿ ಗೇಮ್‌ನಲ್ಲಿ ಅದೇ ಅಗ್ರೆಸ್ಸಿವ್ ತೋರಿಸಿದರು. ಆಟದಲ್ಲಿ ಮಾಡಿದ ಎಡವಟ್ಟಿನಿಂದಾಗಿ ಈಗ ಕಳಪೆ ಪಟ್ಟ ಪಡೆದುಕೊಂಡಿದ್ದಾರೆ. ಜೊತೆಗೆ ನಾನೇ ಕಳಪೆ ತೆಗೆದುಕೊಳ್ಳುತ್ತೇನೆ ಎಂದು ಅಮೂಲ್ಯ ಕೂಡ ಫಿಕ್ಸ್ ಆಗಿದ್ದರಂತೆ. ಈ ಬಗ್ಗೆ ದಿವ್ಯಾ ಬಳಿ ಚರ್ಚೆ ಮಾಡಿದ್ದಾರೆ.

ಬಣ್ಣ ಎರಚಿದ್ದೆ ಕಳಪೆಗೆ ಕಾರಣವಾಯ್ತಾ?
ಈ ಸಲ ಬಿಗ್ ಬಾಸ್ ವಿಭಿನ್ನವಾದ ಟಾಸ್ಕ್ ಒಂದನ್ನು ನೀಡಿತ್ತು. ಅದುವೇ ಕೈಯಿಂದ ಬಣ್ಣ ಹಚ್ಚುವ ಟಾಸ್ಕ್. ಆದ್ರೆ ಈ ಟಾಸ್ಕ್‌ನಲ್ಲಿ ಅಮೂಲ್ಯ ಮತ್ತು ದೀಪಿಕಾ ಬಣ್ಣವನ್ನು ಎರಚಾಡಿದರು. ಅದರಲ್ಲೂ ಮೊದಲು ಎರಚಿದ್ದು ಅಮೂಲ್ಯ ಅವರೇ ಆಗಿದ್ದರು. ಟೀಂನ ಕ್ಯಾಪ್ಟನ್ ಆಗಿಯೂ ಈ ರೀತಿ ಮಾಡಿದ್ದು ಅದ್ಯಾಕೋ ಮನೆಯವರಿಗೆ ಸರಿ ಕಾಣಲಿಲ್ಲ. ಅದು ನಿಯಮ ಉಲ್ಲಂಘನೆಯಾಗಿತ್ತು. ಹೀಗಾಗಿ ಕಳಪೆ ಪಟ್ಟ ನೀಡಿದ್ದಾರೆ.

ಸಂಗೀತ ವಾದ್ಯಗಳೊಂದಿಗೆ ಬಂದ ಅಮೂಲ್ಯ
ಕಳಪೆ ಕೊಟ್ಟಾಗ ಪ್ರತಿ ವಾರ ಒಂದು ಬೇಸರ ಕಾಣುತ್ತಾ ಇತ್ತು. ಕಳಪೆ ಕೊಟ್ಟವರ ಮೇಲೆ ಮುನಿಸು ಕೋಪ ವ್ಯಕ್ತವಾಗುತ್ತಾ ಇತ್ತು. ಆದ್ರೆ ಈ ಬಾರಿ ಅದು ಕಾಣಲಿಲ್ಲ. ಅಮೂಲ್ಯ ತನ್ನ ತಪ್ಪಿಗೆ ಸಿಕ್ಕ ಶಿಕ್ಷೆಯನ್ನು ಬಹಳ ಖುಷಿಯಿಂದ ಸ್ವೀಕರಿಸಿದ್ದಾರೆ. ನಗುತ್ತಲೇ ಕಳಪೆ ಬಟ್ಟೆಯನ್ನು ತೆಗೆದುಕೊಂಡಿದ್ದಾರೆ. ಜೈಲಿಗೆ ಹೋಗುವಾಗಲೂ ಡ್ಯಾನ್ಸ್ ಮಾಡಿಕೊಂಡು ಹೋಗಿದ್ದಾರೆ. ಎಲ್ಲರೂ ಡೈಲಾಗ್‌ಗಳನ್ನು ಕೂಗಿದ್ದಾರೆ. ಅಕ್ಕ ಬರ್ತಾವ್ಳೆ.. ಅಕ್ಕ ಹೋಯ್ತಾವ್ಳೆ.. ದೀಪಿಕಾಳ ಮೇಲೆ ಬಣ್ಣ ಚೆಲ್ಲಿ ಅಮ್ಮು ಒಳಗೆ ಹೋಗ್ತಾವ್ಳೆ ಅಂತೆಲ್ಲಾ ಹಾಡುತ್ತಾ ಜೈಲಿಗೆ ಹಾಕಿದ್ದಾರೆ.

ಜೈಲಿನ ಬಳಿ ಸಾಥ್ ಕೊಟ್ಟಿದ್ದು ಯಾರು..?
ಅಮೂಲ್ಯ ಈ ಬಾರಿ ಕಳಪೆ ಹೊತ್ತು ಜೈಲು ಸೇರಿದ್ದಾರೆ. ಅವರಿಗೆ ಬೇಜಾರಾಗದಂತೆ ನೋಡಿಕೊಳ್ಳುವುದಕ್ಕೆ ಅನುಪಮಾ, ರಾಕೇಶ್, ದಿವ್ಯಾ ಮಾತನಾಡುತ್ತಾ ಕೂತಿದ್ದಾರೆ. ಅದಕ್ಕೂ ಮುನ್ನ ರಾಕಿ, ಅಮೂಲ್ಯ ಬಳಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ''ನಾನು ಇಲ್ಲಿಯೇ ಮಲಗಿಕೊಳ್ತೀನಿ. ಜೈಲಿಗೆ ಬರ್ತಿದ್ದೀಯಾ ಅಂತ ಗೊತ್ತಾದಗಲೇ ನಾನು ತುಂಬಾ ಖುಷಿ ಪಟ್ಟೆ. ನಿನ್ನ ಜೊತೆಗೆ ಹೆಚ್ಚು ಸಮಯ ಕಳೆಯಬಹುದು ಎಂದುಕೊಂಡೆ" ಅಂತ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನು ಅಮೂಲ್ಯ ಟೀಂ ಅಲ್ಲಿಯೇ ಕೂತು ಊಟ ಮಾಡಿ, ಹರಟೆ ಹೊಡೆದಿದ್ದಾರೆ.