Don't Miss!
- Sports
BGT 2023: ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಜಮ್ಮು-ಕಾಶ್ಮೀರದ ಸ್ಪಿನ್ನರ್ಗೆ ಆಹ್ವಾನ ನೀಡಿದ ಆಸ್ಟ್ರೇಲಿಯಾ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- News
Union Budget 2023; ಅಮೃತ ಕಾಲಕ್ಕೆ ಎಲ್ಲಾ ಸೌಕರ್ಯ ಒದಗಿಸುವ ಬಜೆಟ್, ಜೋಶಿ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9 :ಹಸಿವಿನಿಂದ ಅನುಪಮಾ ಕಣ್ಣೀರು ಹಾಕಿದ್ರೂ ಸ್ಪೂನ್ ಕೊಡಲಿಲ್ಲ ರೂಪೇಶ್ ಶೆಟ್ಟಿ!
ಬಿಗ್ ಬಾಸ್ ಮನೆಯಲ್ಲಿ ಫಿನಾಲೆಗಾಗಿ ಎಲ್ಲಾ ಸದಸ್ಯರು ಎಫರ್ಟ್ ಹಾಕುತ್ತಿದ್ದಾರೆ. ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಆಡಬೇಕು. ಮನರಂಜನೆ ನೀಡಬೇಕೆಂದು ಪಣ ತೊಟ್ಟಿದ್ದಾರೆ. ಅದರಲ್ಲೂ ರೂಪೇಶ್ ಶೆಟ್ಟಿ ಮನರಂಜನೆಯಲ್ಲಿ ಮುಂದಿದ್ದರೆ, ಅನುಪಮಾ ಆಟದಲ್ಲಿ ಮುಂದಿದ್ದಾರೆ. ಇಬ್ಬರ ನಡುವೆ ಇವತ್ತು ಸ್ಪೂನ್ ವಿಚಾರಕ್ಕೆ ಕಣ್ಣೀರು ಬರುವ ಹಂತ ತಲುಪಿದೆ.
ಅನುಪಮಾಗೆ ಬಿಗ್ ಬಾಸ್ ಶಿಕ್ಷೆಯೊಂದನ್ನು ನೀಡಿತ್ತು. ಅದುವೇ ಸಣ್ಣ ಸ್ಪೂನ್‌ನಲ್ಲಿಯೇ ಊಟ, ತಿಂಡಿ, ಕಾಫಿ ಎಲ್ಲವನ್ನು ಮಾಡಬೇಕಿತ್ತು. ಆದ್ರೆ ಆ ಸ್ಪೂನ್ ಕಳೆದು ಹೋದಾಗ ಹಸಿವು ಹೆಚ್ಚಾಗಿ ಕಣ್ಣೀರು ಹಾಕಿದ್ದರು. ಸ್ನೇಹಿತೆಯರೆಲ್ಲಾ ಸೇರಿ ಸಹಾಯ ಮಾಡಿದರು ಸಿಗಲಿಲ್ಲ. ಕಡೆಗೆ ಸಿಕ್ಕಿದ್ದು ರೂಪೇಶ್ ಶೆಟ್ಟಿ ಬಳಿ.

ಸ್ಪೂನ್ ಕಳೆದುಕೊಂಡ ಅನುಪಮಾ
ಎಲ್ಲರು ಅಡುಗೆ ಮನೆಯಲ್ಲಿ ಬೆಳಗ್ಗೆ ಎದ್ದು ತಿಂಡಿ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆಗ ಅನುಪಮಾ ಅವರಿಗೆ ಅವರ ಸ್ಪೂನ್ ಕಾಣಿಸಿಲ್ಲ. ಅಲ್ಲೆ ಇದ್ದ ಎಲ್ಲರನ್ನು ನನ್ನ ಸ್ಪೂನ್ ನೋಡಿದ್ಯಾ ಎಂದು ಪ್ರಶ್ನಿಸಿದ್ದಾರೆ. ಆಗ ಅರುಣ್ ಸಾಗರ್ ಅವರನ್ನು ಕೇಳಿದ್ದಾರೆ. "ಸುಮ್ಮನೆ ಕೊಡಿ ಅರುಣ್ ಅಣ್ಣ. ನೀವಲ್ಲದೆ ಬೇರೆ ಯಾರು ಎತ್ತಿಕೊಳ್ಳುವುದಿಲ್ಲ" ಎಂದಿದ್ದಾರೆ. ಆಗ ಅರುಣ್ ಸಾಗರ್ ಅವರು, "ಯಾರಾದ್ರೂ ಬ್ಲೂ ಸ್ಪೂನ್ ಎತ್ತಿಕೊಂಡ್ರಾ. ಬ್ಲೂ ಕಲರ್ ಸ್ಪೂನ್. ಇಲ್ಲಮ್ಮ ನಾನು ತೆಗೆದುಕೊಂಡಿಲ್ಲ" ಅಂದಿದ್ದಾರೆ. ಆದ್ರೆ ಎಲ್ಲರಿಗೂ ಅರುಣ್ ಸಾಗರ್ ಅವರ ಮೇಲೆಯೇ ಅನುಮಾನ ಮೂಡಿದೆ.

ರೊಚ್ಚಿಗೆದ್ದ ರೂಪೇಶ್ ಶೆಟ್ಟಿ
ಇನ್ನು ಈ ವಿಚಾರಕ್ಕೆ ಸಹಾಯಕ್ಕೆ ಬಂದ ರೂಪೇಶ್ ಶೆಟ್ಟಿ, "ನನ್ನ ಶಾಂಪೂ ತೆಗೆದುಕೊಂಡು ಕೊಟ್ಟಿಲ್ಲ. ಡೈಲಿ ಇದೆಂಥಾ ತಮಾಷೆ. ಬಿಗ್ ಬಾಸ್‌ಗೆ ಹೇಳಿ ರಿಕ್ವೆಸ್ಟ್ ಮಾಡಿ. ಇಲ್ಲಿ ಭಾಷೆ ಊಟದ ವಿಚಾರಕ್ಕೆ ಹೀಗೆಲ್ಲಾ ಮಾಡಿದರೆ ಹೇಗೆ. ನನ್ನ ಪ್ರಕಾರ ಅರುಣ್ ಅಣ್ಣ ಅಥವಾ ರಾಜಣ್ಣ ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ ದಯವಿಟ್ಟು ಇನ್ನೊಂದು ಸ್ಪೂನ್ ಕಳುಹಿಸಿ. ಇನ್ನೊಮ್ಮೆ ಹೀಗೆಲ್ಲಾ ಆಗಲ್ಲ" ಎಂದು ರೂಪೇಶ್ ಮನವಿ ಮಾಡಿದ್ದಾರೆ.

ಶಾಪ ಹಾಕಿದ ಅನುಪಮಾ
"ನನ್ನ ಸ್ಪೂನ್ ಯಾರು ಕದ್ದಿದ್ದಾರೆ ಅವರು ಸಮ್ ಥಿಂಗ್ ಸಮ್ ಥಿಂಗ್. ರಾಜಣ್ಣ ನನ್ನ ಸ್ಪೂನ್ ತೆಗೆದುಕೊಂಡ್ರಾ. ನಿಜ ಹೇಳಿ. ಎಲ್ಲರನ್ನು ಕೇಳುತ್ತಾ ಇದ್ದೀವಿ. ಇನ್ನು ಈ ರೀತಿ ಮಾಡಲ್ಲ. ಒಂದೇ ಒಂದು ಸ್ಪೂನ್ ಕೊಡಿ. ನನ್ನ ಕೈನಲ್ಲಿಯೇ ಇಟ್ಟುಕೊಂಡು ಓಡಾಡುತ್ತೇನೆ. ದಯವಿಟ್ಟು ಕೊಡಿ ಬಿಗ್ ಬಾಸ್. ತುಂಬಾ ಹಸಿವು ಆಗ್ತಾ ಇದೆ." ಎಂದು ಅನುಪಮಾ ಕಣ್ಣೀರು ಹಾಕಿದರು

ಕದ್ದಿದ್ದ ರೂಪೇಶ್ ಶೆಟ್ಟಿಯೇ ನಾಟಕ
ಅನುಪಮಾ ಅತ್ತ ಕೂಡಲೇ ರೂಪೇಶ್ ಶೆಟ್ಟಿ "ನಾನೇ ತೆಗೆದುಕೊಂಡಿದ್ದು ಎಂದು ಸತ್ಯ ಒಪ್ಪಿಕೊಂಡಿದ್ದಾರೆ. ನನ್ನ ಆಕ್ಟಿಂಗ್ ಮೆಚ್ಚಬೇಕು ಅಲ್ವಾ ನೀನು. ನಿನ್ನ ಪಕ್ಕ ಬಂದು ನಿಂತು ನಕ್ಕಾಗಲೇ ನೀನು ಅರ್ಥ ಮಾಡಿಕೊಳ್ಳಬೇಕು" ಎಂದು ತಮಾಷೆ ಮಾಡಿದ್ದಾರೆ. ಮನೆಯವರೆಲ್ಲಾ ಅನುಪಮಾ ಊಟ ಮಾಡಲಿ ಎಂದು ಕಾಯುತ್ತಾ ಇದ್ದರು. ಆಗಲೂ ಸ್ಪೂನ್ ಸಿಗದೆ ಇದ್ದಿದ್ದಕ್ಕೆ ಟೆನ್ಶನ್ ಜಸ್ತಿಯಾಗಿತ್ತು. ಊಟ, ಹಸಿವು ಅಂದಾಗ ಒಂದು ಸ್ಪೂನ್ ಕೊಡಬೇಕು. ರೆಸ್ಪಾನ್ಸ್ ಮಾಡುತ್ತಿಲ್ಲ ಎಂದಾಗ ಮಿಸ್ ಆಗಿದೆ. ಹಸಿವು ಆಗುತ್ತಿದೆ ಎಂದಾಗ ಅರ್ಥ ಮಾಡಬೇಕು ತಾನೇ" ಎಂದು ಮೊದಲಿಗೆ ಬಿಗ್ ಬಾಸ್ ಮೇಲೆ ಬೇಸರ ಮಾಡಿಕೊಂಡಿದ್ದರು. ಆಮೇಲೆ ರೂಪೇಶ್ ಶೆಟ್ಟಿ ಎಂದು ಗೊತ್ತಾದ ಮೇಲೆ ಎಲ್ಲರೂ ಕ್ಲಾಸ್ ತೆಗೆದುಕೊಂಡರು.