For Quick Alerts
  ALLOW NOTIFICATIONS  
  For Daily Alerts

  BBK9 Grand Finale:ಬಿಗ್ ಬಾಸ್ ವೇದಿಕೆ ಮೇಲೆ ಭಾವುಕರಾದ ಕಿಚ್ಚ ಸುದೀಪ್!

  By ಎಸ್ ಸುಮಂತ್
  |

  ಬಿಗ್ ಮನೆ ಒಳಗಿರುವ ಕಂಟೆಸ್ಟೆಂಟ್ ಗೆ ಮಾತ್ರವಲ್ಲ ಅದನ್ನು ನಡೆಸಿ ಕೊಡುವ ಕಿಚ್ಚ ಸುದೀಪ್ ಅವರಿಗೂ ಒಂದು ಎಮೋಷನಲ್ ಮೂಮೆಂಟ್ ಅನ್ನೇ ಕ್ರಿಯೇಟ್ ಮಾಡಿಕೊಟ್ಟಿದೆ. ಮನೆಯೊಳಗಿರಯವವರು ಅಲ್ಲಿಯೇ ಫ್ರೆಂಡ್ಶಿಪ್, ಅಲ್ಲಿಯೇ ಬಾಂಧವ್ಯ, ಅಲ್ಲಿಯೇ ಜೀವನ ಹೀಗಾಗಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಈ ಗ್ಯಾಪ್‌ನಲ್ಲಿ ಎಲ್ಲರೊಟ್ಟಿಗೆ ಒಂದಷ್ಟು ಬಾಂಧವ್ಯ ಬೆಳೆದಿರುತ್ತೆ.

  ಕಿಚ್ಚ ಸುದೀಪ್ ಮನೆಯೊಳಗೆ ಇರುವುದಿಲ್ಲ ಎಂಬುದನ್ನು ಬಿಟ್ಟರೆ, ಮನೆಯ ಸದಸ್ಯರೊಟ್ಟಿಗೆ ಅವರಿಗೂ ಬಾಂಧವ್ಯ ಬೆಳೆದಿರುತ್ತೆ. ಪ್ರತಿ ವಾರ ಅವರು ನಡೆಸಿಕೊಡುವ ಪಂಚಾಯತಿಯಲ್ಲಿ ಎಲ್ಲರ ಮನಸ್ಸುಗಳು, ನಡವಳಿಕೆ ಅರ್ಥವಾಗುತ್ತೆ. ಹೀಗಾಗಿ ನೂರು ದಿನದ ಜರ್ನಿ ಮುಗಿಯುವಾಗ ಸಹಜವಾಗಿಯೇ ಸುದೀಪ್ ಅವರಿಗೂ ಮನಸ್ಸು ಭಾರವಾಗಿದೆ.

  ಪಂಚಾಯತಿಯಲ್ಲಿ ನಕ್ಕು ನಗಿಸುತ್ತಿದ್ದ ಕಿಚ್ಚ

  ಪಂಚಾಯತಿಯಲ್ಲಿ ನಕ್ಕು ನಗಿಸುತ್ತಿದ್ದ ಕಿಚ್ಚ

  ವಾರಪೂರ್ತಿ ನಡೆಯುವ ಮನೆಯ ಜರ್ನಿಯಲ್ಲಿ ಒಂದಷ್ಟು ಜಗಳಗಳು, ಒಂದಷ್ಟು ಬೇಸರ, ಒಂದಷ್ಟು ಕೋಪ ಹೀಗೆ ತರಹೇವಾರಿ ವಿಚಾರಗಳು ನಡೆಯುತ್ತವೆ. ಈ ಎಲ್ಲಾ ವಿಚಾರಗಳಲ್ಲಿ ಒಂದಷ್ಟು ಸಲಹೆಯೂ ಬೇಕಾಗುತ್ತದೆ. ಕಿಚ್ಚ ಸುದೀಪ್ ಶನಿವಾರ ಹಾಗೂ ಭಾನುವಾರ ವೇದಕೆಯಲ್ಲಿ ನಿಂತು ಬುದ್ದಿ ಹೇಳುವವರಿಗೆ ಹೇಳುತ್ತಾ, ಹೊಗಳುವವರಿಗೆ ಹೊಗಳುತ್ತಾ, ಚಪ್ಪಾಳೆಯನ್ನು ನೀಡುತ್ತಿದ್ದರು. ಇದು ಬಿಗ್ ಬಾಸ್ ಮನೆಯೊಳಗೆ ಇದ್ದ ಕಂಟೆಸ್ಟೆಂಟ್ ಗಳಿಗೆ ಒಂದೊಳ್ಳೆ ಮಾರ್ಗದರ್ಶಕರಾಗಿದ್ದರು.

  ಮನೆಯವರಂತೆ ಫೀಲ್ ಮಾಡುತ್ತಿದ್ದ ಸುದೀಪ್

  ಮನೆಯವರಂತೆ ಫೀಲ್ ಮಾಡುತ್ತಿದ್ದ ಸುದೀಪ್

  ಸುದೀಪ್ ಅವರು ಇದೊಂದು ಜಸ್ಟ್ ಶೋ ಎಂದುಕೊಂಡಿದ್ದರೆ ವಾರಕ್ಕೊಮ್ಮೆ ಬಂದು ಶೋ ನಿರೂಪಣೆ ಅಷ್ಟೇ ಮಾಡುತ್ತಿದ್ದರು. ಆದರೆ ಬಿಗ್ ಬಾಸ್ ಮನೆಯೊಳಗಿರುವವರನ್ನು ತಮ್ಮ ಸ್ನೇಹಿತರಂತೆ ಫೀಲ್ ಮಾಡಿದ್ದಾರೆ. ಎಷ್ಟೋ ಸಲ ಅಷ್ಟೇ ಸಲುಗೆಯಿಂದ ಮಾತನಾಡಿದ್ದಾರೆ, ನಕ್ಕು ನಲಿಸಿದ್ದಾರೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ರಾಕೇಶ್ ಅವರನ್ನು ಕಾಲೆಳೆಯುತ್ತಾ ಇದ್ದದ್ದು. ಅಷ್ಟೇ ಯಾಕೆ ಮನೆಯವರಿಗಾಗಿ ಕಿಚ್ಚ ಸುದೀಪ ಅವರೇ ಸ್ವತಃ ಅಡುಗೆ ಮಾಡಿ ಕಳುಹಿಸಿದ್ದಾರೆ. ಜೊತೆಗೆ ಹೊಸ ವರ್ಷದ ಗಿಫ್ಟ್ ಅನ್ನು ಎಲ್ಲರಿಗೂ ನೀಡಿದ್ದಾರೆ.

  ಕಣ್ಣೀರು ಹಾಕಿದ ಕಿಚ್ಚ

  ಕಣ್ಣೀರು ಹಾಕಿದ ಕಿಚ್ಚ

  ಬಿಗ್ ಬಾಸ್ ಮಬೆಯ ಜರ್ನಿ ನೂರು ದಿನ ಪೂರೈಸಿದೆ. ಎಲ್ಲರೊಟ್ಟಿಗಿದ್ದು ಸುದೀಪ್ ಕೂಡ ಜೀವಿಸಿದ್ದಾರೆ. ಇಂದಿಗೆ ಈ ಜರ್ನಿ ಮುಗಿದಿದೆ. ಸುದೀಪ್ ಎಲ್ಲವನ್ನು ನೆನೆದು ಕಣ್ಣೀರು ಹಾಕಿದ್ದಾರೆ. "ಚಿಕ್ಕ ಕನಸು ಇಟ್ಟುಕೊಂಡು ಬರುತ್ತೀರಾ. ಹೋಗುತ್ತ ಹೋಗುತ್ತಾ ಕನಸು ದೊಡ್ಡದಾಗುತ್ತೆ. ಯಾರ್ಯಾರು ಜರ್ನಿ ಶುರು ಮಾಡುತ್ತಾರೋ ಅವರಿಗೆಲ್ಲಾ ಜಾಗ ಇರಲ್ಲ. ಪೀಕ್ ಗೆ ಹೋದಾಗ ಎರಡು ಕಾಲಲ್ಲಿ ಒಂದು ಕಾಲಿಗೆ ಜಾಗ ಇರುತ್ತೆ. ಆ ಜಾಗಕ್ಕೆ ಹೋದಾಗ ಎಲ್ಲವೂ ಕರೆಕ್ಟ್ ಆಗಿ ಇರಬೇಕು. ನಾವೂ ಬೆಳಗ್ಗೆ ಎದ್ದೇಳಬೇಕು. ಒಬ್ಬ ಕಾಮನ್ ಸಿಂಪಲ್ ಮ್ಯಾನ್ ಆಗಿ ಎದ್ದೇಳಬೇಕು ಎನಿಸುತ್ತೆ" ಎಂದಿದ್ದಾರೆ.

  ಕಿಚ್ಚ ಎಮೋಷನಲ್ ಆಗಿದ್ದೇಕೆ..?

  ಕಿಚ್ಚ ಎಮೋಷನಲ್ ಆಗಿದ್ದೇಕೆ..?

  "ಪ್ರತಿ ಸಲ ನಾನು ಈ ವೇದಿಕೆಗೆ ಬಂದಾಗ ಗೌರವ ಕೊಟ್ಟಿದ್ದಕ್ಕೆ, ಹೇಳಿದ ಮಾತಿಗೆ ಗೌರವ ಕೊಟ್ಟಿದ್ದಕ್ಕೆ, ಹೊರಗಡೆ ಕೊಡುವ ಗೌರವಕ್ಕೆ ರಿಟರ್ನ್ ಕೊಡುವುದಕ್ಕೆ ನನ್ನ ಬಳಿ ಏನಿಲ್ಲ. ಕೈ ಕಾಲಿ ಇದೆ. ನಿಮ್ಮಿಂದ ನಾನು ತುಂಬಾ ಕಲಿತಿದ್ದೀನಿ. ಥ್ಯಾಂಕ್ಯೂ ಸೋ ಮಚ್" ಎಂದು ಭಾವುಕರಾಗಿದ್ದಾರೆ.

  English summary
  Bigg Boss Kannada 9 Grand Finale: Kichcha Sudeep Emotional, Here Is the details.
  Sunday, January 1, 2023, 5:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X