Don't Miss!
- Automobiles
ದ್ವಿಚಕ್ರ ವಾಹನ ಖರೀದಿಸುತ್ತಿದ್ದೀರಾ? ಇದೇ ತಿಂಗಳ ಪ್ರಮುಖ ಬಿಡುಗಡೆಗಳನ್ನು ಒಮ್ಮೆ ಪರಿಶೀಲಿಸಿ
- News
Budget 2023; ಮೋದಿ ಸರ್ಕಾರದಿಂದ ಸಾವಯವ ಕೃಷಿಗೆ ಒತ್ತು: ಸಂಸದ ಈರಣ್ಣ ಕಡಾಡಿ
- Sports
IND vs NZ 3rd T20: ಸರಣಿ ನಿರ್ಣಾಯಕ 3ನೇ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK 9 Grand Finale : ರನ್ನರ್ ಅಪ್ ಆಗಿದರೂ ಕಂಡಿದ್ದು ಅದೇ ಪಾಸಿಟಿವ್ ರಾಕೇಶ್!
ಬಿಗ್ ಬಾಸ್ ಸೀಸನ್ 9 ಮುಕ್ತಾಯವಾಗಿದೆ. ಓಟಿಟಿ ಸೀಸನ್‌ನಿಂದ ಇಲ್ಲಿಯ ತನಕ ಒಟ್ಟು 145 ದಿನಗಳ ಜರ್ನಿಯಲ್ಲಿ ರಾಕೇಶ್ ಅಡಿಗ ರಿಯಲ್ ಆಗಿಯೇ ಎಲ್ಲರೊಟ್ಟಿಗೂ ಕಾಣಿಸಿಕೊಂಡಿದ್ದರು. ಮನೆಯಲ್ಲಿ ಎಲ್ಲರನ್ನು ಒಂದುಗೂಡಿಸುವ ನಿಟ್ಟಿನಲ್ಲಿಯೇ ನಡೆದುಕೊಂಡರು. ಎಲ್ಲರೊಟ್ಟಿಗೂ ಆತ್ಮೀಯವಾಗಿದ್ದರು. ಒಂದೆರಡು ಬಾರಿ ಕಳಪೆ ತೆಗೆದುಕೊಂಡರು ಸಹ ಎಲ್ಲಿಯೂ ಕುಗ್ಗಲಿಲ್ಲ.
ಇಂದು ಕೊನೆ ಹಂತದ ಸರ್ಕಸ್. ದಿವ್ಯಾ ಉರುಡುಗ, ರೂಪೇಶ್ ರಾಜಣ್ಣ, ದೀಪಿಕಾ ದಾಸ್, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಫೈನಲಿಸ್ಟ್ ಕಂಟೆಸ್ಟೆಂಟ್ ಆಗಿ ನಿಂತಿದ್ದರು. ಇದೀಗ ದಿವ್ಯಾ ಮತ್ತು ರಾಜಣ್ಣ ಕೊನೆ ಹಂತದಲ್ಲಿ ಔಟ್ ಆಗಿದ್ದಾರೆ. ಇನ್ನುಳಿದ ದೀಪಿಕಾ ದಾಸ್ ಮೂರನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಒಂದು ಕಡೆ ರೂಪೇಶ್ ಶೆಟ್ಟಿ ಮತ್ತೊಂದು ಕಡೆ ರಾಕೇಶ್ ಅಡಿಗ ನಿಂತಾಗ ನೋಡುಗರಿಗೇನೆ ಸಾಕಷ್ಟು ಕುತೂಹಲ ಭರಿತವಾದ ಮೂಮೆಂಟ್ ಆಗಿತ್ತು.

ಎಲ್ಲಿಯೂ ಎಮೋಷನಲ್ ಆಗದ ರಾಕೇಶ್
ರಾಕೇಶ್ ಅಡಿಗ ಓಟಿಟಿಯಿಂದಾನು ಬಂದ ಕಂಟೆಸ್ಟೆಂಟ್ ಆಗಿದ್ದಾರೆ. ಅಲ್ಲಿಂದ ಟಿವಿ ಸೀಸನ್‌ಗೆ ಬಂದರು. ಮನೆಯೊಳಗಿದ್ದವರೆಲ್ಲಾ ಒಂದಲ್ಲ ಒಂದು ಟೈಮ್ ತುಂಬಾನೇ ಎಮೋಷನಲ್ ಆಗಿದ್ದಾರೆ. ಆದರೆ ರಾಕೇಶ್ ಎಲ್ಲಿಯೂ ಎಮೋಷನಲ್ ಆಗಿ ಕಾಣಿಸಿಕೊಳ್ಳಲಿಲ್ಲ. ತುಂಬಾ ಸ್ಟ್ರಾಂಗ್ ಆಗಿಯೇ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಮುಖದಲ್ಲಿ ಹೆಚ್ಚು ನಗುವನ್ನೇ ಕಂಡಿದ್ದೇವೆ. ಎಲ್ಲಾ ಕಡೆಯೂ ನಗು ಮುಖದಲ್ಲಿಯೇ ಕಾಣಿಸಿಕೊಂಡಿದ್ದರು.

ಪ್ಯಾಂಪರ್ ಗುಣವಿದ್ದ ರಾಕೇಶ್
ಒಂದು ಕಡೆ ಇದ್ದಾಗ ಎಲ್ಲರನ್ನು ಸಂಭಾಳಿಸುವ ಗುಣ ಇರಬೇಕು. ಅದರಲ್ಲೂ ಬಿಗ್ ಬಾಸ್ ಮನೆಯಲ್ಲಿ ಹೊರಗಿನ ಪ್ರಪಂಚವೇ ಗೊತ್ತಿರಲ್ಲ. ಹೀಗಾಗಿ ಒಳಗಡೆ ಇರುವವರು ಎಷ್ಟು ಹೊಂದಾಣಿಕೆ ಮಾಡಿಕೊಂಡು ಇರುತ್ತಾರೆ ಎಂಬುದು ಬಹಳ ಮುಖ್ಯವಾಗುತ್ತೆ. ರಾಕೇಶ್ ಆ ವಿಚಾರದಲ್ಲಿ ಒಂದೆರಡು ಹೆಜ್ಜೆ ಮುಂದಿದ್ದರು. ಓಟಿಟಿಯಲ್ಲಿ ಸೋನುಗೌಡ ಜೊತೆಗೆ ಕ್ಲೋಸ್ ಆಗಿದ್ದರು. ಸೋನು ಏನೇ ತಪ್ಪು ಮಾಡಿದರು, ತಿದ್ದಿ ಬುದ್ದಿ ಹೇಳಿದ್ದರು. ಬಳಿಕ ಟಿವಿ ಸೀಸನ್‌ನಲ್ಲಿ ಅಮೂಲ್ಯ ಜೊತೆಗೆ ಕ್ಲೋಸ್ ಆಗಿದ್ದರು. ಅಮೂಲ್ಯ ತಪ್ಪು ಮಾಡಿದಾಗಲೂ ತಿದ್ದಿ ಹೇಳಿದ್ದರು. ಜೊತೆಗೆ ಒಳ್ಳೆ ಬಾಂಡಿಂಗ್ ಬೆಳೆದಿತ್ತು.

ರಾಕಿಯಲ್ಲಿ ಯಾವುದೇ ಬದಲಾವಣೆ ಇಲ್ಲ
ಕಿಚ್ಚ ಸುದೀಪ್ ಬಿಗ್ ಬಾಸ್ ಮನೆಯೊಳಗೆ ಹೋಗಿ ರೂಪೇಶ್ ಶೆಟ್ಟಿ ಹಾಗೂ ರಾಕೇಶ್ ಗೆ ಆಲ್ ದಿ ಬೆಸ್ಟ್ ಹೇಳಿ ಕರೆದುಕೊಂಡು ಬಂದಿದ್ದಾರೆ. ಬಳಿಕ ವೇದಿಕೆ ಮುಂಭಾಗದಲ್ಲಿದ್ದ ಮನೆಯವರನ್ನು ಕಂಡು ಇಬ್ಬರು ಖುಷಿಯಾಗಿದ್ದರು. ಮನೆಯವರ ಆಶೀರ್ವಾದ ಪಡೆದು ಮತ್ತೆ ವೇದಿಕೆ ಮೇಲೆ ಬಂದರು. ಈ ವೇಳೆ ಸುದೀಪ್ ಅವರಿಗೂ ಕೂಡ ರಾಕೇಶ್‌ಗಿದ್ದ ತಾಳ್ಮೆ ಬಗ್ಗೆ ಕುತೂಹಲ ಮೂಡಿತ್ತು. ಆ ಬಗ್ಗೆ ವೇದಿಕೆ ಮೇಲೆಯೇ ಪ್ರಶ್ನೆ ಕೂಡ ಮಾಡಿದ್ದರು.

ಬಿಗ್ ಬಾಸ್ ಗೆದ್ದರೆ ಏನು ಮಾಡ್ತಾರೆ ರಾಕಿ..?
ಬಿಗ್ ಬಾಸ್ ಗೆಲುವು ಎಷ್ಟು ಮುಖ್ಯ ಎಂಬುದನ್ನು ಸುದೀಪ್ ರಾಕಿಗೆ ಕೇಳಿದಾಗ "ಲೈಫ್ ತುಂಬಾ ಚೇಂಜ್ ಆಗುತ್ತೆ. ಒಂದಷ್ಟು ಬದಲಾವಣೆ ಕೂಡ ಆಗುತ್ತೆ. ಇಷ್ಟು ಜನ ವೋಟ್ ಮಾಡಿದ್ದಕ್ಕೆ ಒಂದು ರೆಸ್ಪಾನ್ಸಿಬಲಿಟಿ ಜಾಸ್ತಿ ಆಗುತ್ತೆ. ಬಿಗ್ ಬಾಸ್ ವಿನ್ನರ್ ಎಂಬ ಟ್ಯಾಗ್ ಕೂಡ ಇರುತ್ತೆ ಎಂಬ ಖುಷಿ ಇರುತ್ತೆ" ಎಂದಿದ್ದರು.

ರೈಟ್ ರೂಪೇಶ್ ಲೆಫ್ಟ್ ರಾಕೇಶ್
ರಾಕೇಶ್ ಅಡಿಗ ಕೊನೆ ಮೂಮೆಂಟ್ ನಲ್ಲೂ ನಗುತ್ತಲೇ ಇದ್ದರು. ವೇದಿಕೆ ಮೇಲೆ ಕೂತವರಲ್ಲಿ ಟೆನ್ಶನ್‌ನಲ್ಲಿ ದೇವರನ್ನ ಪ್ರಾರ್ಥನೆ ಮಾಡಿಕೊಳ್ಳುತ್ತಾ ಇದ್ದರು. ರಾಕೇಶ್ ಮನೆಯವರ ಕಣ್ಣಲ್ಲೂ, ರೂಪೇಶ್ ಮನೆಯವರ ಕಣ್ಣಲ್ಲೂ ನೀರು. ಆ ಕಡೆ ಸುದೀಪ್ ಬೇರೆ ಬೇಗ ಅನೌನ್ಸ್ ಮಾಡುತ್ತಿಲ್ಲ. ಇದು ಎಲ್ಲರ ಟೆನ್ಶನ್‌ಗೂ ಕಾರಣವಾಗಿತ್ತು. ಆದರೆ ಕೊನೆಯಲ್ಲಿ ರೂಪೇಶ್ ಶೆಟ್ಟಿಯನ್ನೇ ವಿನ್ನರ್ ಆಗಿ ಅನೌನ್ಸ್ ಮಾಡಿದರು. ಆದರೆ ರಾಕೇಶ್ ಆಗಲೂ ನಗುತ್ತಲೇ ವಿಶ್ ಮಾಡಿದ್ದಾರೆ.