BBK9 Grand Finale: ಅಭಿಮಾನಿಗಳ ಆಸೆ ಈಡೇರಲಿಲ್ಲ: ರೂಪೇಶ್ ರಾಜಣ್ಣ ಎಮಿಲಿನೇಟ್

ಹೊಸ ವರ್ಷದ ಸ್ವಾಗತಕ್ಕೆ ಇಡೀ ಜಗತ್ತು ಕಾಯುತ್ತಿದೆ. ಮತ್ತೊಂದು ಕಡೆ ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್-9 ಗ್ರ್ಯಾಂಡ್‌ ಫಿನಾಲೆ ಕುತೂಹಲದ ಹಂತ ತಲುಪುತ್ತಿದೆ. ಫಿನಾಲೆ 5 ಜನ ಸ್ಪರ್ಧಿಗಳು ಬಂದಿದ್ದರು. ಅದರಲ್ಲಿ ಈಗ ರೂಪೇಶ್ ರಾಜಣ್ಣ ಕೂಡ ಎಲಿಮಿನೇಟ್ ಆಗಿದ್ದಾರೆ.

ದಿವ್ಯಾ ಉರುಡುಗ ನಿನ್ನೆ(ಡಿಸೆಂಬರ್ 30) 5ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ಹೊರ ಬಂದಿದ್ದರು. ಇಂದು ರೂಪೇಶ್ ರಾಜಣ್ಣ ಕೂಡ ಎಲಿಮಿನೇಟ್ ಆಗಿದ್ದಾರೆ. 100 ದಿನಗಳ ಕಾಲ ದೊಡ್ಮನೆಯಲ್ಲಿ ರಾಜಣ್ಣನ ಆಟ ವೀಕ್ಷಕರಿಗೆ ಇಷ್ಟವಾಗಿತ್ತು. ಆದರೆ ಟಾಸ್ಕ್‌ಗಳ ವಿಚಾರದಲ್ಲಿ ಕೊಂಚ ಡಲ್ ಆಗಿದ್ದರು ಎನ್ನುವುದು ಇತರೆ ಸ್ಪರ್ಧಿಗಳ ಅಭಿಪ್ರಾಯ. ಈ ಬಾರಿ ನವೀನರಾಗಿ ಬಿಗ್‌ ಬಾಸ್ ಮನೆ ಪ್ರವೇಶಿಸಿದವರಲ್ಲಿ ಫೈನಲ್‌ಗೆ ಬಂದಿದ್ದು ಇವರು ಒಬ್ಬರೇ. ಸಾಕಷ್ಟು ಜನ ಅಭಿಮಾನಿಗಳು ರೂಪೇಶ್ ರಾಜಣ್ಣ ಗೆಲ್ಲಬೇಕು ಎಂದು ಬಯಸಿದ್ದರು. ಆದರೆ ಅದು ಸಾಧ್ಯವಾಗಿಲ್ಲ.

ಫೈನಲ್‌ಗೆ ಎಂಟ್ರಿ ಕೊಟ್ಟಿರುವ ಎಲ್ಲರೂ ಲಕ್ಷ ಲಕ್ಷ ವೋಟ್‌ಗಳನ್ನು ಪಡೆದಿದ್ದಾರೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಆದರೆ ಕೆಲವೇ ವೋಟ್‌ಗಳ ಅಂತರದಲ್ಲಿ ಒಬ್ಬರು ಹೊರ ಬರುವಂತಾಗಿದೆ. ಗ್ರ್ಯಾಂಡ್‌ ಫಿನಾಲೆಯಲ್ಲಿ ದೀಪಿಕಾ ದಾಸ್ ಅಥವಾ ರೂಪೇಶ್ ರಾಜಣ್ಣ ಇಬ್ಬರಲ್ಲಿ ಒಬ್ಬರು ಎಲಿಮಿನೇಟ್ ಆಗುತ್ತಾರೆ ಎನ್ನಲಾಗಿತ್ತು.

100 ದಿನ ದೊಡ್ಮನೆಯಲ್ಲಿ ರಾಜಣ್ಣ

100 ದಿನ ದೊಡ್ಮನೆಯಲ್ಲಿ ರಾಜಣ್ಣ

ಕನ್ನಡ ಪರ ಹೋರಾಟಗಳ ಮೂಲಕ ಗುರ್ತಿಸಿಕೊಂಡಿದ್ದ ರೂಪೇಶ್ ರಾಜಣ್ಣ ಬಿಗ್‌ಬಾಸ್‌ ಕನ್ನಡ ಸೀಸನ್ 9ಕ್ಕೆ ಎಂಟ್ರಿ ಕೊಟ್ಟಿದ್ದರು. 100 ದಿನಗಳ ಕಾಲ ದೊಡ್ಮನೆಯಲ್ಲಿ ಆಟ ಆಡಿ ವೀಕ್ಷಕರನ್ನು ರಂಜಿಸಿದ್ದಾರೆ. ಆರಂಭದಲ್ಲಿ ರಾಜಣ್ಣ 2 ವಾರಕ್ಕಿಂತ ಹೆಚ್ಚು ಅಲ್ಲಿ ಇರುವುದಿಲ್ಲ ಎಂದು ಎಲ್ಲರೂ ಅಂದುಕೊಂಡಿದ್ದರು. ಸ್ವತಃ ರಾಜಣ್ಣ ಕೂಡ ಅಬ್ಬಬ್ಬಾ ಅಂದರೂ 4 ವಾರ ದೊಡ್ಮನೆಯಲ್ಲಿ ಇರುತ್ತೇನೆ ಎಂದುಕೊಂಡಿದ್ದರಂತೆ. ಆದರೆ ಅಚ್ಚರಿ ಎನ್ನುವಂತೆ ಶತಕ ಬಾರಿಸಿದ್ದಾರೆ.

ಕಾಮಿಡಿ ಟೈಮಿಂಗ್‌ನಿಂದ ಸಕ್ಸಸ್

ಕಾಮಿಡಿ ಟೈಮಿಂಗ್‌ನಿಂದ ಸಕ್ಸಸ್

ರೂಪೇಶ್ ರಾಜಣ್ಣ ಆರ್ಕೇಸ್ಟ್ರಾಗಳಲ್ಲೂ ಹಾಡುತ್ತಿದ್ದರು. ಜೊತೆಗೆ ಕಾಮಿಡಿ, ಮಿಮಿಕ್ರಿ ಕಲಿತಿದ್ದರು. ಬಿಗ್‌ಬಾಸ್ ಮನೆಯಲ್ಲಿ ಇದು ಸಹಾಯಕ್ಕೆ ಬಂತು. ಆರಂಭದಲ್ಲಿ ಬಹಳ ಗಂಭೀರ ವ್ಯಕ್ತಿ ಎಂದುಕೊಂಡಿದ್ದ ರೂಪೇಶ್ ರಾಜಣ್ಣ ದಿನಗಳು ಕಳೆದಂತೆ ತಮ್ಮ ಕಾಮಿಡಿ ಟೈಮಿಂಗ್‌ನಿಂದ ಎಲ್ಲರ ಗಮನ ಸೆಳೆದರು. ಅನ್ಯಾಯ ಅಂದರೆ ರಾಜಣ್ಣನ ಕೂಗು ಹೆಚ್ಚುತ್ತಿತ್ತು. ಒಮ್ಮೆ ಸುದೀಪ್ ಸರ್ ಒಂದು ಪತ್ರ ಕಳುಹಿದ್ದರು. ನೀವು ಗೆಲ್ಲಬೇಕು ಎಂದಿದ್ದರು. ಅಲ್ಲಿಂದ ನಾನು ಮತ್ತಷ್ಟು ಶ್ರಮ ಹಾಕಿ ಈ ಹಂತಕ್ಕೆ ಬಂದೆ ಎಂದು ರೂಪೇಶ್ ರಾಜಣ್ಣ ಹೇಳಿದ್ದಾರೆ.

ರೂಪೇಶ್ ರಾಜಣ್ಣಗೆ 3 ಲಕ್ಷ

ರೂಪೇಶ್ ರಾಜಣ್ಣಗೆ 3 ಲಕ್ಷ

ಬಿಗ್‌ಬಾಸ್ ಕನ್ನಡ ಸೀಸನ್ 9ರ ಮೂರನೇ ರನ್ನರ್ ಅಪ್ ಆಗಿರುವ ರೂಪೇಶ್ ರಾಜಣ್ಣ ಅವರಿಗೆ ಒಟ್ಟು 3 ಲಕ್ಷ ಬಹುಮಾನ ಸಿಕ್ಕಿದೆ. 2 ಲಕ್ಷ ಬಹುಮಾನವಾಗಿ ಸಿಕ್ಕಿದ್ದರೆ 1 ಲಕ್ಷ ವಿಶೇಷ ಟಾಸ್ಕ್‌ನಲ್ಲಿ ಗೆದ್ದಿದ್ದಕ್ಕೆ ಧಕ್ಕಿದೆ. ನವೀನರಲ್ಲಿ ಗ್ರ್ಯಾಂಡ್ ಫಿನಾಲೆಗೆ ಬಂದಿದ್ದ ಏಕೈಕ ಸ್ಪರ್ಧಿ ರೂಪೇಶ್ ರಾಜಣ್ಣ ತಮ್ಮ 100 ದಿನಗಳ ಜರ್ನಿ ಮುಗಿಸಿದ್ದಾರೆ.

ಅಭಿಮಾನಿಗಳ ಆಸೆ ಈಡೇರಲಿಲ್ಲ

ಅಭಿಮಾನಿಗಳ ಆಸೆ ಈಡೇರಲಿಲ್ಲ

ಕೆಲವೊಮ್ಮೆ ಟಾಸ್ಕ್‌ಗಳಲ್ಲಿ ಚೆನ್ನಾಗಿ ಪರ್ಫಾರ್ಮೆನ್ಸ್ ಇರಲಿಲ್ಲ ಎನ್ನುವುದು ಬಿಟ್ಟರೆ ಬಹಳ ಒಳ್ಳೆ ಸ್ಪರ್ಧಿ ರೂಪೇಶ್ ರಾಜಣ್ಣ. ಕನ್ನಡ ಹೋರಾಟಗಾರರಾದ ರೂಪೇಶ್ ರಾಜಣ್ಣ ಗೆಲ್ಲಲೇಬೇಕು ಎಂದು ಅಭಿಮಾನಿಗಳು ಆಸೆ ಪಟ್ಟಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ಆಗುತ್ತಿತ್ತು. ರಾಜಣ್ಣ ಗೆದ್ದೇ ಗೆಲ್ಲುತ್ತಾರೆ ಎಂದು ಸಾಕಷ್ಟು ಜನ ಅಂದುಕೊಂಡಿದ್ದರು. ಆದರೆ ಅಭಿಮಾನಿಗಳ ಆಸೆ ಈಡೇರಲಿಲ್ಲ.

More from Filmibeat

English summary
Bigg Boss Kannada 9 Grand Finale : Rupesh Rajanna Eliminated From Bigg Boss Kannada 9. viewers are eager to know which contestant will bag the trophy. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X