BBK9: ಬಿಗ್ ಬಾಸ್ ಫೈನಲ್‌ವರೆಗೂ ಇರ್ತಾರಂತೆ ಆರ್ಯವರ್ಧನ್: ಕಿಚ್ಚ ಹೇಳಿದ್ದೇನು?

By ಎಸ್ ಸುಮಂತ್

ಬಿಗ್ ಬಾಸ್ ಟಿವಿ ಸೀಸನ್ ಶುರುವಾಗಿ 50 ದಿನ. ಈ 50 ದಿನದಲ್ಲಿ ಮನೆಯಲ್ಲಿ ಏನೆಲ್ಲಾ ನಡೆದು ಹೋಯ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಒಂದಷ್ಟು ಜಗಳ, ಒಂದಷ್ಟು ಮನಸ್ತಾಪಗಳ ನಡುವೆ ಸಖತ್ ಕಾಮಿಡಿ ಕೂಡ ಎಲ್ಲರಿಗೂ ಸಿಕ್ಕಿದೆ. ಇಂದು 'ಸೂಪರ್ ಸಂಡೇ ವಿತ್ ಸುದೀಪ' ಕಾರ್ಯಕ್ರಮದಲ್ಲಿ ಒಂದಷ್ಟು ಹಾಸ್ಯಮಯ ವಿಚಾರಗಳು ನಡೆದಿವೆ. ಆರ್ಯವರ್ಧನ್ ಕಡೆಯಿಂದ ಕಿಚ್ಚನಿಗೆ ಮನಸಾರೆ ನಗುವು ಸಿಕ್ಕಿದೆ.

ಬಿಗ್ ಬಾಸ್ ಟ್ರೋಫಿಯನ್ನು ನಾವೇ ಗೆಲ್ಲಬೇಕು ಎಂಬುದೇ ಮನೆಯೊಳಗೆ ಎಂಟ್ರಿಕೊಟ್ಟವರ ಆಸೆಯಾಗಿರುತ್ತೆ. ಬಿಗ್ ಬಾಸ್‌ನಿಂದ ಕರೆ ಬಂದಾದ ಮೇಲೆಯೇ ಅಲ್ಲಿ ಹೇಗೆಲ್ಲಾ ಇರಬೇಕು ಎಂಬ ಪ್ಲ್ಯಾನ್ ಸದಸ್ಯರ ತಲೆಗೆ ಬಂದು ಬಿಡುತ್ತದೆ. ಅದರಂತೆ ಪ್ರಿಪೇರ್ ಆಗಿ ಹೋದರೂ, ಅಲ್ಲಿ ಉಲ್ಟಾ ಕೂಡ ಆಗುತ್ತದೆ.

ಬುದ್ಧಿವಂತ ಆರ್ಯವರ್ಧನ್

ಬುದ್ಧಿವಂತ ಆರ್ಯವರ್ಧನ್

ಆರ್ಯವರ್ಧನ್ ಟಿವಿಯಲ್ಲಿ ಜ್ಯೋತಿಷ್ಯ ಶಾಸ್ತ್ರ ಹೇಳಿಕೊಂಡು ಬಂದವರು. ಓಟಿಟಿ ಸೀಸನ್‌ನಿಂದ ಮನೆಗೆ ಎಂಟ್ರಿ ಕೊಟ್ಟವರು. ಮೊದಲಿಗೆ ಮುಗ್ಧರಂತೆ ಕಂಡವರು ಬಳಿಕ ಇದು ಕೂಡ ಒಂದು ಗೇಮ್ ಅಂತೆಯೇ ಕಂಡರು. ಮನೆಯವರಿಗೆಲ್ಲಾ ಅವರ ರಿಯಾಲಿಟಿ ಅರ್ಥವಾಗಿತ್ತು. ನಾಮಿನೇಷನ್ ಸಮಯ ಬಂದಾಗ ಎಲ್ಲರೊಟ್ಟಿಗೆ ಒಳ್ಳೆಯವರೇ ಆಗುವುದಕ್ಕೆ ಟ್ರೈ ಮಾಡುತ್ತಿದ್ದರು. ಇದೀಗ ಬಿಗ್ ಬಾಸ್ ಮನೆಯಲ್ಲಿ ಉಳಿಯುವ ಟ್ರಿಕ್ಸ್ ಅರಿತಿರುವ ಗುರೂಜಿ ಫೈನಲ್ ಪ್ರವೇಶ ಮಾಡುವ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ.

ಉತ್ತಮ & ಕಳಪೆ ಕ್ಷಣ ಯಾವುದು

ಉತ್ತಮ & ಕಳಪೆ ಕ್ಷಣ ಯಾವುದು


ವಾರದ ಕಥೆ ಕಿಚ್ಚನ ಜೊತೆ ಅಂಡ್ ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮ ಎಲ್ಲರಿಗೂ ಇಷ್ಟ. ಇಂದು ಕೂಡ ಆ ಶೋನಲ್ಲಿ ಹಲವು ವಿಚಾರಗಳು ಬಯಲಾಗಿದ್ದಾವೆ. ಕಿಚ್ಚ ಸುದೀಪ್, ವರ್ಸ್ಟ್ ಅಂಡ್ ಬೆಸ್ಟ್ ಮೂಮೆಂಟ್ ಯಾವುದು ಎಂದು ಮನೆಯವರಿಗೆ ಒಬ್ಬೊಬ್ಬರನ್ನೇ ಕೇಳುತ್ತಾ ಬಂದಿದ್ದಾರೆ. ಮೊದಲಿಗೆ ಇದಕ್ಕೆ ಉತ್ತರ ನೀಡಿದ, ಆರ್ಯವರ್ಧನ್, ನನ್ನ ಮಗಳು ನಿಮ್ಮ ಪಕ್ಕದಲ್ಲಿ ನಿಂತಿದ್ದು ಬೆಸ್ಟ್ ಮೂಮೆಂಟ್. ಆದ್ರೆ ಜಾಮೂನು ಮಾಡಿದಾಗ ಆದ ಯಡವಟ್ಟು ವರ್ಸ್ಟ್ ಮೂಮೆಂಟ್ ಎಂದಿದ್ದಾರೆ.

ಬಿಗ್ ಬಾಸ್‌ನಲ್ಲಿ ಪ್ರವಾಸ ಮಾಡುತ್ತಿದ್ದಾರಾ ಗುರೂಜಿ?

ಬಿಗ್ ಬಾಸ್‌ನಲ್ಲಿ ಪ್ರವಾಸ ಮಾಡುತ್ತಿದ್ದಾರಾ ಗುರೂಜಿ?

ಕಿಚ್ಚ ಸುದೀಪ್ ಸೂಪರ್ ಸಂಡೇಯಲ್ಲಿ ಮತ್ತೊಂದು ಪ್ರಶ್ನೆ ಕೇಳಿದ್ದಾರೆ. "ಬಿಗ್ ಬಾಸ್ ಮನೆ ವನವಾಸನಾ ಅಥವಾ ಪ್ರವಾಸನಾ?" ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಆರ್ಯವರ್ಧನ್ ಗುರೂಜಿ, "ನಂಗೆ ನನ್ನ ಮಗಳನ್ನು ಬಿಟ್ಟಿದ್ದೀನಿ ಎಂಬುದು ಬೇಜಾರಾದ್ರೆ ಈಗ ಖುಷಿಯಾಗಿದ್ದೀನಿ. ಮೊದ ಮೊದಲಿಗೆ ಹಾಗೆ ಅನ್ನಿಸ್ತಾ ಇತ್ತು. ಆದ್ರೆ ಈಗ ಬಿಗ್ ಬಾಸ್‌ಗೆ ಅಡ್ಜೆಸ್ಟ್ ಆಗಿ ಬಿಟ್ಟಿದ್ದೀನಿ." ಎಂದಿದ್ದಾರೆ.

ಗುರೂಜಿ ಕ್ಲಾರಿಟಿಗೆ ಕಿಚ್ಚ ಶಾಕ್

ಗುರೂಜಿ ಕ್ಲಾರಿಟಿಗೆ ಕಿಚ್ಚ ಶಾಕ್

ಇದೇ ಪ್ರಶ್ನೆ ಮುಂದುವರೆದು ಉತ್ತರ ನೀಡಿದ ಆರ್ಯವರ್ಧನ್ ಗುರೂಜಿ, "ಇನ್ನೊಂದು ಏಳೆಂಟು ವಾರ ಅಷ್ಟೇ ಬಿಗ್ ಬಾಸ್‌ನಲ್ಲಿ ಇರುವುದು. ಅದು ಮುಗಿದರೆ ಮನೆಗೆ ಹೋಗಿ ಬಿಡುತ್ತೀನಿ ಅಂತ ಸುಮ್ಮನೆ ಇದ್ದೀನಿ" ಎಂದಾಗ ಸುದೀಪ್ ಕಾಲೆಳೆದಿದ್ದಾರೆ. "ಏನಂದ್ರಿ ನೀವೂ, ಇನ್ನು ಏಳೆಂಟು ವಾರ ಇದೆ ಅಂದ್ರಿ. ಅಂದ್ರೆ, ಡಿಸೈಡ್ ಆಗಿ ಬಿಟ್ಟಿದ್ದೀರಾ ನೀವು" ಎಂದಾಗ ಗುರೂಜಿ, "ಹಾಗಲ್ಲ.. ಆಮೇಲೆ ನಾವು ಇಟ್ಟುಕೊಳ್ಳಿ ಎಂದರೂ ನೀವೂ ನಮ್ಮನ್ನು ಇಟ್ಟುಕೊಳ್ಳಲ್ಲ. ಇದ್ದರೆ ಅಲ್ಲಿವರೆಗೂ ಇರಬಹುದು. ಅದಾದ ಮೇಲೆ ಸುಮ್ಮನೆ ಮನೆಗೆ ಹೋಗಬಹುದು" ಎಂದಿದ್ದಾರೆ.

ಗೊಬ್ಬರಗಾಲ ಮಾತಿಗೆ ಕಿಚ್ಚನ ನಗು

ಗೊಬ್ಬರಗಾಲ ಮಾತಿಗೆ ಕಿಚ್ಚನ ನಗು

ಇನ್ನು ಗೊಬ್ಬರಗಾಲ ಅವರಿಗೂ ಇದೇ ಪ್ರಶ್ನೆ ಎದುರಾಗಿದ್ದು, ವನವಾಸನಾ..? ಪ್ರವಾಸನಾ ಎಂದಾಗ, "ಇದು ವನವಾಸ ಅಲ್ಲ. ಪ್ರವಾಸದ ರೀತಿ. ಪ್ರವಾಸದಲ್ಲಿಯೇ ಅಲ್ವಾ ನಮಗೆ ಒಳ್ಳೆಯದ್ದೆ ಆಗಲಿ ಕೆಟ್ಟದ್ದೆ ಆಗಲಿ ಗೊತ್ತಾಗೋದು. ಪ್ರಪಂಚ ಸುತ್ತಿ ನೋಡು ಅಂತಾರಲ್ಲ ಆ ರೀತಿ. ಎಲ್ಲಾ ಪ್ರಪಂಚವೂ ಇಲ್ಲಿಯೇ ಇದೆ. ಒಂದೊಂದೇ ಪ್ರಪಂಚ ಅರ್ಥ ಆಗ್ತಾ ಇದೆ ಸರ್" ಎಂದು ಹೇಳಿದಾಗ ಗೊಬ್ಬರಗಾಲ ಪ್ರಶಾಂತ್ ಸಂಬರ್ಗಿ ಮುಖ ನೋಡಿದ್ದಾರೆ. ಆಗ ಕಿಚ್ಚ ರೇಗಿಸಿದ್ದು, ಎಲ್ಲಾ ಪ್ರಪಂಚವೂ ಇಲ್ಲೆ ಇದೆ ಅಂತ ಪ್ರಶಾಂತ್ ಕಡೆ ನೋಡಿದಂಗೆ ಇತ್ತು ಎಂದು ರೇಗಿಸಿದ್ದಾರೆ. ನಿಮ್ಮ ಕಣ್ಣು ಪ್ರಶಾಂತ್ ಕಡೆಗೆ ಇತ್ತು. ಅವರಲ್ಲೇ ನೀವೂ ಪ್ರಪಂಚ ನೋಡುತ್ತಾ ಇದ್ದೀರೋ ಅಥವಾ ಅವರಲ್ಲಿಯೇ ಎಲ್ಲಾ ಪ್ರಪಂಚ ಇದೆಯೋ ಎಂದು ಕಾಲೆಳಿದಿದ್ದಾರೆ.

More from Filmibeat

English summary
Bigg Boss Kannada November 13th Episode Written Update. Here is the details about super sunday with sudeepa.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X